ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಈ ಮಧ್ಯೆ ಶ್ವೇತಾ ಭೂಪತಿಗೆ ಹತ್ತಿರ ಆಗಬೇಕು ಎಂದು ಪ್ಲ್ಯಾನ್ (Plan) ಮಾಡಿದ್ದಾಳೆ. ಅದು ಸಕ್ಸಸ್ (Success) ಆಗಿದೆ.
ಭೂಪತಿ ಮನೆಯಲ್ಲಿ ತುಕಾರಾಂ ಹೈಡ್ರಾಮಾ!
ಶ್ವೇತಾ ತನ್ನ ತಂದೆ ತುಕಾರಾಂಗೆ ಕಾಲ್ ಮಾಡಿ ಮನೆಗೆ ಬಂದು ನನ್ನನ್ನು ಕರೆದುಕೊಂಡು ಹೋಗುವಂತೆ ಡ್ರಾಮಾ ಮಾಡು ಎಂದಿರುತ್ತಾಳೆ. ಅದರಂತೆ ತುಕಾರಾಂ ಮನೆಗೆ ಬಂದು ಹೈಡ್ರಾಮಾ ಮಾಡಿದ್ದಾನೆ. ನನ್ನ ಮಗಳನ್ನು ನಮ್ಮ ಮನೆಗೆ ಕಳಿಸಿ, ಅವಳು ಇಲ್ಲಿ ಮನೆಯಲ್ಲಿ ಕೂತು ಏನು ಮಾಡಬೇಕು ಎಂದು ಹೇಳುತ್ತಾನೆ.
ಶ್ವೇತಾ ಭೂಪತಿ ಜೊತೆ ಕೆಲಸ ಮಾಡಲಿ
ಶ್ವೇತಾ ತಂದೆ ಗಲಾಟೆ ಮಾಡಿದ್ದಕ್ಕೆ. ಶಕುಂತಲಾ ದೇವಿ, ಶ್ವೇತಾ ಇನ್ಮುಂದೆ ಭೂಪತಿ ಜೊತೆ ಕೆಲಸ ಮಾಡಲಿ ಎಂದು ಹೇಳ್ತಾಳೆ. ನಕ್ಷತ್ರಾ ಅವಳು ಕೆಲಸ ಮಾಡಬೇಕಾ ಎನ್ನುತ್ತಾಳೆ. ಅವಳು ಇಲ್ಲ ಅಂದ್ರೆ ನೀನು ಮಾಡ್ತೀಯಾ ಎಂದು ನಕ್ಷತ್ರಾಳನ್ನು ಪ್ರಶ್ನೆ ಮಾಡಿದ್ದಾಳೆ. ಶ್ವೇತಾ ಚೆನ್ನಾಗಿ ಓದಿಕೊಂಡಿದ್ದಾಳೆ. ಬುದ್ಧಿವಂತೆ. ಕಂಪನಿ ನಡೆಸೋ ಅನುಭವ ಇದೆ. ಅಷ್ಟು ಸಾಕು ನಮಗೆ ಎಂದು ಶಕುಂತಲಾ ದೇವಿ ಹೇಳುತ್ತಾಳೆ.
ಇದನ್ನೂ ಓದಿ: Kannadathi: ಭುವಿಯನ್ನು ಕಾಪಾಡಿದ ಹರ್ಷ, ಮದುವೆಗೆ ಒಪ್ಪಿದ ವರು: ಮುಂದೇನು?
ನಮ್ಮ ಕುಟುಂಬದಲ್ಲಿ ಒಬ್ಬಳು
ಕೆಲಸ ಕೊಟ್ಟು ನನ್ನ ಮಗಳ ಬಳಿ ಚಾಕರಿ ಮಾಡಿಸಿಕೊಳ್ತೀರಾ ಎಂದು ತುಕಾರಾಂ ಪ್ರಶ್ನೆ ಮಾಡ್ತಾನೆ. ಅದಕ್ಕೆ ಚಾಕರಿ ಅಲ್ಲ. ಕೆಲಸ ಕೊಡ್ತಾ ಇರೋದು ನಮ್ಮ ಕುಟುಂಬದಲ್ಲಿ ಒಬ್ಬಳು ಅಂತ ಹೇಳೋಕೆ. ಅವಳಿಗೂ ಬ್ಯುಸಿನೆಸ್ ನಲ್ಲಿ ಹಕ್ಕಿದೆ ಅಂತ ಹೇಳೋಕೆ. ಶ್ವೇತಾ ಇದೆಲ್ಲಾ ಯಾಕತ್ತೆ ಎಂದು ಶ್ವೇತಾ ನಾಟಕ ಮಾಡ್ತಾಳೆ. ನಿನಗೆ ಇದೆಲ್ಲಾ ಗೊತ್ತಾಗಲ್ಲ ಶ್ವೇತಾ ಸುಮ್ಮನಿರು ಎಂದು ಶಕುಂತಲಾ ದೇವಿ ಹೇಳ್ತಾಳೆ.
ಶ್ವೇತಾ ಕೇರ್ ಆಫ್ ಶಕುಂತಲಾ ದೇವಿ
ಇವತ್ತಿಂದ ಶ್ವೇತಾ ಡಾಟರ್ ಆಫ್ ತುಕಾರಾಂ ಅಲ್ಲ. ಶ್ವೇತಾ ಕೇರ್ ಆಫ್ ಶಕುಂತಲಾ ದೇವಿ. ಇವತ್ತಿಂದ ಶ್ವೇತಾಳ ಸಂಪೂಣ್ ಜವಾಬ್ದಾರಿ ನನ್ನದು. ಇವತ್ತು ಕೆಲಸ ಕೊಟ್ಟಿದ್ದೀನಿ. ನಾಳೆ ನಾನೇ ಮುಂದೆ ನಿಂತು ಮದುವೆ ಮಾಡ್ತೇನೆ. ನಾನು ಒಂದು ಸಲ ಮಾತು ಕೊಟ್ಟ ಮೇಲೆ ಮುಗೀತು ಎಂದು ಶಕುಂತಲಾ ದೇವಿ ಹೇಳಿದ್ದಾಳೆ.
ಶ್ವೇತಾ ಪ್ಲ್ಯಾನ್ ಸಕ್ಸಸ್
ಶ್ವೇತಾ ಅಂದುಕೊಂಡಿದ್ದ ರೀತಿ ಎಲ್ಲವೂ ಆಗಿದೆ. ಭೂಪತಿಗೆ ಹತ್ತಿರ ಆಗಲು ಕಂಪನಿ ಸೇರಿಕೊಳ್ತಾ ಇದ್ದಾಳೆ. ಅಬ್ಬಾ ಎಲ್ಲಾ ನಾನು ಅಂದುಕೊಂಡಂತೆ ಆಯ್ತು ಎಂದು ಶ್ವೇತಾ ಖುಷಿ ಆಗಿದ್ದಾಳೆ.
ಇದನ್ನೂ ಓದಿ: Kendasampige: ಸುಮನಾಳನ್ನು ಮನೆಯಿಂದ ಆಚೆ ಕಳಿಸಿದ ಮಾವ, ಸಾಧನಾ ಪ್ಲ್ಯಾನ್ ಸಕ್ಸಸ್!
ನಕ್ಷತ್ರಾಗೆ ಬೇಸರ
ಶ್ವೇತಾ ನಾನು ಭೂಪತಿಯನ್ನು ಪಡೆಯುತ್ತೇನೆ ಎಂದು ಮನೆಗೆ ಬಂದಿದ್ದಾಳೆ. ಮನೆಯಲ್ಲೇ ಇದ್ರೆ ಶ್ವೇತಾಳನ್ನು ಹೇಗೋ ಕಂಟ್ರೋಲ್ ಮಾಡಬಹುದಿತ್ತು. ಆದ್ರೆ ಈಗ ಕಂಪನಿಗೆ ಹೋದ್ರೆ ಏನ್ ಮಾಡೋದು ಎಂದು ನಕ್ಷತ್ರಾ ಬೇಜಾರು ಮಾಡಿಕೊಂಡಿದ್ದಾಳೆ.
ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ