• Home
  • »
  • News
  • »
  • entertainment
  • »
  • Lakshana: ಶ್ವೇತಾಗೆ ಪಾಠ ಕಲಿಸಿದ ನಕ್ಷತ್ರಾ, ತಿರುಗುಬಾಣವಾಯ್ತು ಶ್ವೇತಾ ಕುತಂತ್ರ

Lakshana: ಶ್ವೇತಾಗೆ ಪಾಠ ಕಲಿಸಿದ ನಕ್ಷತ್ರಾ, ತಿರುಗುಬಾಣವಾಯ್ತು ಶ್ವೇತಾ ಕುತಂತ್ರ

ಶ್ವೇತಾಗೆ ಪಾಠ ಕಲಿಸಲು ನಕ್ಷತ್ರಾ ಪ್ರತಿತಂತ್ರ

ಶ್ವೇತಾಗೆ ಪಾಠ ಕಲಿಸಲು ನಕ್ಷತ್ರಾ ಪ್ರತಿತಂತ್ರ

ಶ್ವೇತಾ ಹೇಗಾದ್ರೂ ಭೂಪತಿ ಮನೆ ಸೇರಬೇಕು ಎಂದುಕೊಂಡಿದ್ದಾಳೆ. ಅದಕ್ಕೆ ಶಕುಂತಲಾ ದೇವಿ ಮುಂದೆ ಹೈಡ್ರಾಮಾ ಮಾಡಿದ್ದಾಳೆ. ಅದಕ್ಕೆ ನಕ್ಷತ್ರಾ ಸಹ ಪ್ರತಿತಂತ್ರ ಮಾಡಿದ್ದಾಳೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿಯೂ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಈ ಧಾರಾವಾಹಿಯ ನಾಯಕಿ ನಕ್ಷತ್ರಾ (Nakshatra). ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ (Girl). ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಶ್ವೇತಾ (Shwetha) ಹೇಗಾದ್ರೂ ಭೂಪತಿ ಮನೆ ಸೇರಬೇಕು ಎಂದುಕೊಂಡಿದ್ದಾಳೆ. ಅದಕ್ಕೆ ಶಕುಂತಲಾ ದೇವಿ ಮುಂದೆ ಹೈಡ್ರಾಮಾ ಮಾಡಿದ್ದಾಳೆ. ಅದಕ್ಕೆ ನಕ್ಷತ್ರಾ ಸಹ ಪ್ರತಿತಂತ್ರ ಮಾಡಿದ್ದಾಳೆ.


    ಶಕುಂತಲಾ ದೇವಿ ಮುಂದೆ ಶ್ವೇತಾ ಡ್ರಾಮಾ
    ಶಕುಂತಲಾ ದೇವಿ ನಂಬಿಸಲು ಶ್ವೇತಾ ಹೈಡ್ರಾಮಾ ಮಾಡಿದ್ದಾಳೆ. ದೇವಸ್ಥಾನದಲ್ಲಿ ತನ್ನ ಅಕ್ಕನ ಕೆನ್ನೆಗೆ ಹೊಡೆದು, ತನ್ನ ಅಕ್ಕ ಹೊಡೆಯುವಂತೆ ಮಾಡ್ತಾಳೆ. ಅದೇ ವೇಳೆ ಶಕುಂತಲಾ ದೇವಿ ಅಲ್ಲಿಗೆ ಬರ್ತಾಳೆ. ಶ್ವೇತಾ ಕೆನ್ನೆಗೆ ಯಾಕೆ ಹೊಡೆದೆ. ಸದಾ ಅವಳಿಗೆ ತೊಂದ್ರೆ ಕೊಡ್ತೀರಾ ಎಂದು ಹೇಳಿದ್ದಾಳೆ.


    ನನ್ನ ಮನೆಗೆ ಬಾ ಶ್ವೇತಾ ಎಂದ ಶಕುಂತಲಾ ದೇವಿ
    ಶಕುಂತಲಾ ದೇವಿ ಶ್ವೇತಾ ಮಾಡುತ್ತಿರುವ ನಾಟಕ ನಂಬಿ, ಶ್ವೇತಾ ನೀನು ಇವರು ಜೊತೆ ಇರಬೇಡ. ತಕ್ಷಣ ಹೊರಡು, ನನ್ನ ಮನೆಗೆ ಬಾ ಎನ್ನುತ್ತಾಳೆ. ಶ್ವೇತಾ ಸಹ ಅದನ್ನೇ ಕಾಯ್ತಾ ಇದ್ಲು. ಆದ್ರೂ ಯಾಕೋ ಒಪ್ಪದೇ, ಇಲ್ಲ ಅತ್ತೆ ನಾನು ನನ್ನ ಅಪ್ಪ-ಅಮ್ಮನ ಜೊತೆಯೇ ಇರುತ್ತೇನೆ ಎನ್ನುತ್ತಾಳೆ. ನಕ್ಷತ್ರಾಗೆ ಈಕೆಯ ಡ್ರಾಮಾ ಗೊತ್ತಾಗುತ್ತೆ.


    ಇದನ್ನೂ ಓದಿ: Kendasampige: ಸುಮನಾ ನಿಜವಾಗಿಯೂ ಸೊಸೆ ಎಂದು ಒಪ್ಪಿಕೊಂಡ ತೀರ್ಥ ಅಮ್ಮ, ನಾಟಕ ಸೂಪರ್ ಎಂದ ಮಗ!


    ಹರಕೆ ತೀರಿಸು ಶ್ವೇತಾ ಎಂದ ನಕ್ಷತ್ರಾ
    ಶ್ವೇತಾ ಮಾಡೋ ತಂತ್ರಕ್ಕೆ, ಏನಾದ್ರೂ ಮಾಡಬೇಕು ಎಂದು ನಕ್ಷತ್ರಾ ಅಂದುಕೊಳ್ತಾಳೆ. ಶಕುಂತಲಾ ದೇವಿ, ಶ್ವೇತಾ ಇರೋ ಕಡೆ ಹೋಗಿ, ಅತ್ತೆ ಇವಳು ಅಮ್ಮ ಬೇಗ ಹುಷಾರಾದ್ರೆ ಉರುಳು ಸೇವೆ ಮಾಡ್ತೀನಿ ಎಂದಿದ್ಲು. ಅದಕ್ಕೆ ಇವಳು ಮಡಿಯಾಗಲು ತಲೆ ಮೇಲೆ ನೀರು ಹಾಕಬೇಕು ಎನ್ನುತ್ತಾಳೆ. ಅದಕ್ಕೆ ನಾನು ಸಹಾಯ ಮಾಡ್ತೀನಿ ಎಂದು ನಕ್ಷತ್ರಾ ಹೇಳ್ತಾಳೆ. ಆದ್ರೆ ಶಕುಂತಲಾ ದೇವಿ ನಾನೇ ಸಹಾಯ ಮಾಡ್ತೀನಿ ಅಂತಾಳೆ.


    Colors Kannada serial, Kannada serial, Lakshana Serial, serial today episode, Shwetha plan success, ಲಕ್ಷಣ ಧಾರಾವಾಹಿ, ಶಕುಂತಲಾ ಮುಂದೆ ಶ್ವೇತಾ ತಂತ್ರ, ಶ್ವೇತಾಗೆ ಪಾಠ ಕಲಿಸಲು ನಕ್ಷತ್ರಾ ಪ್ರತಿತಂತ್ರ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಶ್ವೇತಾ


    ಶ್ವೇತಾ ಉರುಳುಸೇವೆ
    ಶ್ವೇತಾಳಿಗೆ ಮಡಿ ಮಾಡ್ತೀನಿ ಎಂದು ನಕ್ಷತ್ರಾ 3 ಬಿಂದಿಗೆ ತಣ್ಣೀರನ್ನು ಆಕೆಯ ಮೇಲೆ ಸುರಿಯುತ್ತಾರೆ. ಆಕೆ ನಕ್ಷತ್ರಾಳಿಗೆ ಮನಸ್ಸಿನಲ್ಲೇ ಬೈದುಕೊಳ್ತಾಳೆ. ನಕ್ಷತ್ರಾ ಆಕೆಯನ್ನು ಕರಡದುಕೊಂಡು ಹೋಗಿ ದೇವರ ಮುಂದೆ ಉರುಳು ಸೇವೆ ಮಾಡಿಸ್ತಾಳೆ.


    Colors Kannada serial, Kannada serial, Lakshana Serial, serial today episode, Shwetha plan success, ಲಕ್ಷಣ ಧಾರಾವಾಹಿ, ಶಕುಂತಲಾ ಮುಂದೆ ಶ್ವೇತಾ ತಂತ್ರ, ಶ್ವೇತಾಗೆ ಪಾಠ ಕಲಿಸಲು ನಕ್ಷತ್ರಾ ಪ್ರತಿತಂತ್ರ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಶ್ವೇತಾ ಉರುಳುಸೇವೆ


    ನಕ್ಷತ್ರಾ ಜೀವನಕ್ಕೆ ಶ್ವೇತಾ ತರುವುದು ಭಾರ್ಗವಿ ಪ್ಲ್ಯಾನ್
    ನಕ್ಷತ್ರಾ ತನ್ನ ಅಪ್ಪ-ಅಮ್ಮನ ಕಡೆ ಗಮನ ಕೊಡಬಾರದು ಎಂದು, ಭಾರ್ಗವಿ ಶ್ವೇತಾಳನ್ನು ನಕ್ಷತ್ರಾ ಜೀವನಕ್ಕೆ ಎಂಟ್ರಿ ಕೊಡಿಸುತ್ತಿದ್ದಾಳೆ. ಶ್ವೇತಾ, ಭೂಪತಿ ಮನೆಗೆ ಬಂದು, ಭೂಪತಿಯನ್ನು ತನ್ನೆಡೆ ಒಲಿಸಿಕೊಳ್ಳುವಂತೆ ಮಾಡ್ತಾಳಂತೆ. ಆಗ ನಕ್ಷತ್ರಾ ತನ್ನ ಗಂಡನನ್ನು ಉಳಿಸಿಕೊಳ್ಳುವ ಯೋಚನೆಯಲ್ಲಿ ಅಪ್ಪ-ಅಮ್ಮನನ್ನು ಮರೆಯುತ್ತಾಳೆ ಎನ್ನುವುದೇ ಭಾರ್ಗವಿ ಉದ್ದೇಶ.


    ಇದನ್ನೂ ಓದಿ: Jothe Jotheyali: ಆರ್ಯವರ್ಧನ್ ರೀತಿ ಕೆಲಸ ಮಾಡ್ತಿರೋ ಸಂಜು, ಅನುಗೆ ಹೆಚ್ಚಾದ ಅನುಮಾನ!


    ಶ್ವೇತಾ ನಾಟಕ ನಕ್ಷತ್ರಾ ಮುಂದೆ ನಡೆಯಲ್ವಾ? ಶ್ವೇತಾ ಭೂಪತಿ ಮನೆ ಸೇರ್ತಾಳಾ? ವಿಲನ್ ಭಾರ್ಗವಿ ಮುಂದಿನ ಪ್ಲ್ಯಾನ್ ಏನು? ಎಲ್ಲವನ್ನೂ ನೋಡಲು ಲಕ್ಷಣ ಧಾರಾವಾಹಿ ನೋಡಬೇಕು.

    Published by:Savitha Savitha
    First published: