ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಈ ಮಧ್ಯೆ ಶುಕುಂತಲಾ ದೇವಿ ನಕ್ಷತ್ರಾಳನ್ನು (Nakshatra) ಕೀಳಾಗಿ ಕಾಣುತ್ತಿದ್ದಳು. ಈಗ ಟಾಸ್ಕ್ (Task) ನಲ್ಲಿ ಸೋತಿದ್ದಕ್ಕೆ ನಕ್ಷತ್ರಾಳನ್ನು ಮನೆಯಿಂದ ಆಚೆ ಕಳಿಸಿದ್ದಾಳೆ.
500 ರೂಪಾಯಿ ಟಾಸ್ಕ್ ಸೋತ ನಕ್ಷತ್ರಾ!
ಚಂದ್ರಶೇಖರ್ ನಕ್ಷತ್ರಾ ಮತ್ತು ಶ್ವೇತಾಗೆ 500, 500 ರೂಪಾಯಿ ಕೊಟ್ಟು ಇದೇ ದುಡ್ಡಿನಲ್ಲಿ ಮನೆ ನಿಭಾಯಿಸಬೇಕು ಎಂದು ಹೇಳಿರುತ್ತಾನೆ. ಆಗ ಶಕುಂತಲಾ ದೇವಿ, ಈ ಸವಾಲನ್ನು ನಕ್ಷತ್ರಾ ಸೋತ್ರೆ, ನಿಮ್ಮ ಮನಗೆ ಶಾಶ್ವತವಾಗಿ ಕರೆದುಕೊಂಡು ಹೋಗಬೇಕು ಎಂದು ಸಿಎಸ್ ಗೆ ಹೇಳಿರುತ್ತಾಳೆ. ಮಿಲ್ಲಿ ಕುತಂತ್ರದಿಂದ ನಕ್ಷತ್ರಾ ಸೋತಿದ್ದಾಳೆ. ಶ್ವೇತಾ ಮೋಸದಿಂದ ಗೆದ್ದಿದ್ದಾಳೆ.
ಮನೆ ಬಿಟ್ಟು ಹೋಗು
ನಕ್ಷತ್ರಾ ಟಾಸ್ಕ್ ಸೋತ ಕಾರಣ ಮನೆ ಬಿಟ್ಟು ಹೋಗುವ ಪರಿಸ್ಥಿತಿ ಬಂದಿದೆ. ನನ್ನನ್ನು ಯಾರು, ಏನೂ ಬೇಕಾದ್ರೂ ತಿಳಿದುಕೊಳ್ಳಿ ನನಗೆ ಅದು ಮುಖ್ಯ ಅಲ್ಲ. ನನ್ನ ಮಗನ ಬದುಕಿನಿಂದ ನಕ್ಷತ್ರಾ ದೂರ ಹೋಗಬೇಕು.
ನಿಮ್ಮ ಮಗಳನ್ನು ಕರೆದುಕೊಂಡು ಹೋಗ್ತಾ ಇರಿ ಎಂದು ಶಕುಂತಲಾ ದೇವಿ ಚಂದ್ರಶೇಖರ್ ಗೆ ಹೇಳಿದ್ದಾರೆ. ಭೂಪತಿ ಬೇಡ ಎಂದ್ರೂ ಶಕುಂತಲಾ ದೇವಿ ಕೇಳ್ತಾ ಇಲ್ಲ. ಮಧ್ಯೆ ಮಾತನಾಡಿದ್ರೆ, ನೀನು ನನ್ನ ಮನಸ್ಸಿಂದ ದೂರ ಹೋಗ್ತಿಯಾ ಎಂದು ಹೇಳಿದ್ದಾಳೆ.
ಇದನ್ನೂ ಓದಿ: Rashmika Mandanna: ಕನ್ನಡಿಗರ ಮನಸ್ಸು ಬದಲಾಗಲ್ವಾ? ರಶ್ಮಿಕಾ ಮಂದಣ್ಣ ಮೇಲೆ ಕಮ್ಮಿಯಾಗಿಲ್ಲ ಕೋಪ!
ಕಾಲು ಹಿಡಿದು, ಕಣ್ಣೀರು ಹಾಕಿದ ನಕ್ಷತ್ರಾ
ನಕ್ಷತ್ರಾ ತನ್ನ ಅತ್ತೆ ಶಕುಂತಲಾ ದೇವಿ ಕಾಲು, ಹಿಡಿದು ಅಳುತ್ತಿದ್ದಾಳೆ. ಅತ್ತೆ ನಿಮ್ಮನ್ನು ಬೇಡಿ ಕೊಳ್ತೇನೆ ನನ್ನನ್ನು ಕಳಿಸಬೇಡಿ. ಬದುಕುದ್ರೂ ಇಲ್ಲೇ, ಸತ್ರು ಇಲ್ಲೇ ಎಂದು ಈ ಮನೆಗೆ ಕಾಲಿಟ್ಟಿದ್ದೇನೆ. ನನ್ನನ್ನು ಮನೆಯಿಂದ ಹೊರಗೆ ಕಳಿಸಬೇಡಿ ಅತ್ತೆ ಎಂದು ಬೇಡಿಕೊಳ್ಳುತ್ತಿದ್ದಾರೆ. ಆದ್ರೆ ಶಕುಂತಲಾ ದೇವಿ, ಈ ನಾಟಕ ಎಲ್ಲಾ ನಿಮ್ಮ ಮನೆಯಲ್ಲಿ ಮಾಡಿಕೋ ಎಂದು ನಕ್ಷತ್ರಾಳನ್ನು ತಳ್ಳಿದ್ದಾಳೆ.
ಮನೆಯಿಂದ ಆಚೆ ದಬ್ಬಿದ ಶಕುಂತಲಾ ದೇವಿ
ನಿನ್ನ ನೋಡೋ ಕರ್ಮ ಇವತ್ತಿಗೆ ಮುಗಿಯಿತು ಎಂದುಕೊಳ್ತೇನೆ, ಜಸ್ಟ್ ಗೆಟ್ ಔಟ್ ಎಂದು ಮನೆಯಿಂದ ಆಚೆ ದಬ್ಬಿದ್ದಾಳೆ ಶಕುಂತಲಾ ದೇವಿ. ಬಾಗಿಲು ಹಾಕಿಕೊಂಡಿದ್ದಾಳೆ. ಭೂಪತಿ ತಡೆದ್ರೂ ಕೇಳಲಿಲ್ಲ. ನಿನ್ನ ಒಳ್ಳೆಯದಕ್ಕೆ ಮಾಡ್ತಾ ಇದೀನಿ. ನೆಮ್ಮದಿಯಾಗಿ ಬದುಕೋ ಕಡೆ ಗಮನ ಕೊಡು. ಮೊನ್ನೆ ಬಂದವಳಿಗಾಗಿ ,ಇಷ್ಟು ದಿನ ಪ್ರೀತಿಯಿಂದ ಸಾಕಿದ ಈ ತಾಯಿ ಕಳೆದುಕೊಳ್ಳಬೇಡ ಎಂದಿದ್ದಾಳೆ.
ಎಲ್ಲಾ ಡೆವಿಲ್ ಭಾರ್ಗವಿ ಪ್ಲ್ಯಾನ್
ಶಕುಂತಲಾ ದೇವಿ ನಕ್ಷತ್ರಾಳನ್ನು ಆಚೆ ಕಳಿಸಿರಬಹುದು. ಆದ್ರೆ ಇರದ ಹಿಂದೆ ಡೆವಿಲ್ ಭಾರ್ಗವಿ ಇದ್ದಾಳೆ. ತನ್ನ ಅಣ್ಣ, ಅಣ್ಣನ ಮಗಳು ನಕ್ಷತ್ರಾ ನೆಮ್ಮದಿಯಾಗಿ ಇರಬಾರದು ಎಂದು ಈ ರೀತಿ ಮಾಡಿದ್ದಾಳೆ. ತನ್ನ ಮಗಳು ಮಿಲ್ಲಿ ಸಹಾಯದಿಂದ ನಕ್ಷತ್ರಾ ಸೋಲುವಂತೆ ಮಾಡಿ, ಈಗ ಖುಷಿ ಪಟ್ಟಿದ್ದಾಳೆ.
ಇದನ್ನೂ ಓದಿ: Bhoomige Banda Bhagavantha: ಭಕ್ತನಿಗಾಗಿ 'ಭೂಮಿಗೆ ಬಂದ ಭಗವಂತ', ಜೀ ಕನ್ನಡದಲ್ಲಿ ಹೊಸ ಧಾರಾವಾಹಿ
ನಕ್ಷತ್ರಾಗೆ ಶಾಶ್ವತವಾಗಿ ಭೂಪತಿ ಮನೆ ಬಾಗಿಲು ಮುಚ್ಚಿತಾ? ನಕ್ಷತ್ರಾ ಈಗ ಏನ್ ಮಾಡ್ತಾಳೆ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ