ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ (Nakshatra) ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಡಿದ ಅವಾಂತರದಿಂದ ನಾಯಕಿ ನಕ್ಷತ್ರಾ, ಭೂಪತಿಯನ್ನು ಮದುವೆ (Maariage) ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ನಕ್ಷತ್ರಾ ಏನೇ ಮಾಡಿದ್ರೂ ಅದರಲ್ಲಿ ಶಕುಂತಲಾ ದೇವಿ ತಪ್ಪು ಹುಡುಕುತ್ತಾಳೆ. ಆಕೆಗೆ ನಕ್ಷತ್ರಾ ಕಂಡ್ರೆ ಆಗಲ್ಲ.
ಶಕುಂತಲಾ ದೇವಿಗೆ ಕೋಪ
ಚಂದ್ರಶೇಖರ್ ಬಲವಂತವಾಗಿ ಮಗಳನ್ನು ಈ ಮನೆ ಸೊಸೆ ಮಾಡಿದ ಎಂದು ಶಕುಂತಲಾ ದೇವಿ ಕೋಪಗೊಂಡಿದ್ದಾಳೆ. ನಕ್ಷತ್ರಾಳನ್ನು ಸೊಸೆ ಎಂದು ಒಪ್ಪಿಕೊಂಡಿಲ್ಲ. ಆಕೆ ತನ್ನ ಮನೆಗೆ, ತನ್ನ ಮಗ ಭೂಪತಿಗೆ ತಕ್ಕ ಹೆಂಡತಿ ಅಲ್ಲ ಎಂದು ಬೈಯ್ತಾ ಇರ್ತಾಳೆ. ನಕ್ಷತ್ರಾಗೆ ಮಧ್ಯಾಹ್ನದ ಊಟ ತಯಾರಿಸಲು ಹೇಳಿದ್ದಳು.
ಯಾರಿಗೆ ಯಾವ ಊಟ ಗೊತ್ತಿಲ್ವಾ?
ನಕ್ಷತ್ರಾ ಯಾರಿಗೋಸ್ಕರ ಅಡುಗೆ ಮಾಡು ಅಂದಿದ್ದು ನಾನು. ಗೆಸ್ಟ್ ಅಂದ್ರೆ ನಿಮ್ಮ ನೆಂಟರೂ ಅಂದುಕೊಡ್ಯಾ? ಇದನ್ನೇಲ್ಲಾ ತಿನ್ನೋಕೆ? ಬರ್ತಿರೋದು ವಿದೇಶದವರು. ಅವರು ಈ ಅನ್ನ, ಸಾರು, ಕೊಸಂಬರಿ ತಿನ್ನುತ್ತಾರಾ ಅವರು. ಇದನ್ನು ಬಡಿಸಬೇಕಾ ಅವರಿಗೆ ಎನ್ನುತ್ತಾಳೆ. ಅದಕ್ಕೆ ನಕ್ಷತ್ರಾ ನಾನು ಈ ಹಿಂದೆ ಹೋಟೆಲ್ ನಲ್ಲಿ ಕೆಲಸ ಮಾಡುವಾಗ ವಿದೇಶಿಗರು ಇದನ್ನೇ ಕೇಳ್ತಾ ಇದ್ರು ಎಂದು ಹೇಳಿದ್ದಾಳೆ.
ಇದನ್ನೂ ಓದಿ: Bigg Boss Kannada: ಬಿಗ್ ಬಾಸ್ ಮನೆಯಲ್ಲಿ ವಾಸುಕಿ ವೈಭವ್, ಈಡೇರಿತು ದೀಪಿಕಾ ದಾಸ್ ಆಸೆ!
ನಮಗೆ ಒಂದು ಲೆವೆಲ್ ಇದೆ
ಮನೆಗೆ ಬರುವವರಿಗೆ ಏನ್ ಇಷ್ಟ ಅಂತ ಕೇಳಿ ಅಡುಗೆ ಮಾಡಬೇಕು. ಆ ಸಣ್ಣ ಕಾಮನ್ ಸೆನ್ಸ್ ಸಹ ನಿನಗೆ ಇಲ್ವಾ? ಇದರಲ್ಲೇ ಗೊತ್ತಾಗುತ್ತೆ ನಿನ್ನ ಯೋಗ್ಯತೆ ಏನು ಅಂತ. ಈ ಸಿಂಪಲ್ ವಿಷ್ಯ ಗೊತ್ತಿಲ್ಲದೇ ನೀನು ಶಕುಂತಲಾ ದೇವಿ ಸೊಸೆ ಆದ್ಯಾ ಎಂದು ಕೇಳುತ್ತಿದ್ದಾಳೆ. ನಮಗೆ ಒಂದು ಲೆವೆಲ್ ಇದೆ. ಯಾರಿಗೆ ಏನು ಸರ್ವ ಮಾಡಬೇಕು ಎನ್ನುವುದು ಗೊತ್ತಿಲ್ಲ ನಿನಗೆ ಎಂದು ಶಕುಂತಲಾ ನಕ್ಷತ್ರಾಗೆ ಬೈತಿದ್ದಾಳೆ. ಭೂಪತಿ ತಡೆದ್ರೂ ಶಕುಂತಲಾ ಕೇಳಲಿಲ್ಲ.
ಯೋಗ್ಯತೆ ಮೀರಿದ ಆಸೆ
ಜನಕ್ಕೆ ಅವರ ಸ್ಥಾನ ಏನು ಯೋಗ್ಯತೆ ಏನು ಅನ್ನುವುದು ಮರೆತು ಹೋಗುತ್ತೆ. ಅಂಥವರು ಅವರ ಯೋಗ್ಯತೆ ಮೀರಿ ಆಸೆ ಪಡೋಕೆ ಶುರು ಮಾಡ್ತಾರೆ. ಅವರಿಗೆ ರಿಯಾಲಿಟಿ ತೋರಿಸದೇ ಹೋದ್ರೆ ಕಷ್ಟ. ನಾನು ನನ್ನ ಸೊಸೆ ವೆರೈಟಿ ಅಡುಗೆ ಮಾಡಬೇಕು. ಬಂದವರಿಗೆ ತೋರಿಸಬೇಕು ಎನ್ನುವುದು ಇಲ್ಲ. ನನಗೆ ಅದರ ಅಗತ್ಯ ಇಲ್ಲ. ಈ ರೀತಿ ಬೆಸಿಕ್ ನಾಲೆಡ್ಜ್ ಇಲ್ಲದೇ ಇರುವ ಹುಡುಗಿಯನ್ನು ಸೊಸೆಯಾಗಿ ಸ್ವೀಕರಿಸಲು ಆಗಲ್ಲಎಂದು ಶಕುಂತಲಾ ದೇವಿ ಹೇಳಿದ್ದಾಳೆ.
ನೀನು ಲೆಕ್ಕಕ್ಕೆ ಇಲ್ಲ
ನೀನು ನಿಮ್ಮ ಅಪ್ಪ ಅದು ಹೇಗೆ ಅಂದುಕೊಂಡ್ರಿ. ನೀನು ಭೂಪತಿಗೆ ಸರಿಯಾದ ಜೋಡಿ ಅಂತ. ಈ ಮನೆಯಲ್ಲಿ ನೀನು ಲೆಕ್ಕಕ್ಕಷ್ಟೇ ಆಟಕ್ಕೆ ಇಲ್ಲ. ಏನೋ ನಿಮ್ಮ ಅಪ್ಪ ಮೋಸ ಮಾಡಿ ತಾಳಿ ಕಟ್ಟಿಸಿದ್ದು ಬಿಟ್ರೆ, ಈ ಮನೆಯಲ್ಲಿ ನಿನಗೆ ಯಾವ ಸ್ಥಾನವೂ ಇಲ್ಲ ಎಂದು ಶಕುಂತಲಾ ದೇವಿ ಹೇಳಿದ್ದಾಳೆ.
ಇದನ್ನೂ ಓದಿ: Olavina Nildana: ತಾರಿಣಿ ಪ್ರೀತಿ ಪಡೆಯಲು ಹೋಗಿ, ಅಮ್ಮನ ನಂಬಿಕೆಯನ್ನೂ ಕಳೆದುಕೊಂಡ ಸಿದ್ಧಾಂತ್!
ಅತ್ತೆ ಮಾತು ಕೇಳಿ ನಕ್ಷತ್ರಾ ಮನಸ್ಸಿಗೆ ನೋವಾಗಿದೆ. ಇಬ್ಬರ ಸಂಬಂದ ಸರಿ ಹೋಗಲ್ವಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ