ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿ ಮದುವೆ (Marriage) ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗುತ್ತಿರಲಿಲ್ಲ. ಆದ್ರೆ ಈಗ ನಕ್ಷತ್ರಾಳನ್ನು ಸೊಸೆ ಎಂದು ಶಕುಂತಲಾ ದೇವಿ ಒಪ್ಪಿಕೊಂಡಿದ್ದಾರೆ. ಇನ್ನು ಕೊನೆ ಮಗ (Son) ಮೌರ್ಯನಿಗೆ ಶಕುಂತಲಾ ದೇವಿ ಬಳಿ ಕ್ಷಮೆಯೇ ಇಲ್ಲ.
ಮೌರ್ಯನಿಗೆ ಬರ್ತ್ಡೇ ವಿಶ್
ಮೌರ್ಯನ ಹುಟ್ಟುಹಬ್ಬ ಇದೆ. ಅದಕ್ಕೆ ನಕ್ಷತ್ರಾ ಕಾಲ್ ಮಾಡಿ ವಿಶ್ ಮಾಡಿದ್ದಾಳೆ. ನಿಮ್ಮ ಮನೆ ಹತ್ತಿರ ದೇವಸ್ಥಾನ ಇದ್ರೆ ಅಲ್ಲಿಗೆ ಹೋಗಿ ಬನ್ನಿ ಎನ್ನುತ್ತಾಳೆ. ಅದಕ್ಕೆ ಮೌರ್ಯ ನನ್ನ ತಾಯಿನೇ ದೇವರು. ಆಕೆನೇ ನನ್ನ ದೂರ ಇಟ್ಟಿದ್ದಾಳೆ ಎಂದಿದ್ದಾನೆ. ಅದಕ್ಕೆ ಮೌರ್ಯನಿಗೆ ಸರ್ಪ್ರೈಸ್ ಕೊಡಲು ನಕ್ಷತ್ರಾ ರೆಡಿ ಮಾಡಿದ್ದಾಳೆ.
ಹುಟ್ಟುಹಬ್ಬಕ್ಕೆ ಎಲ್ಲಾ ತಯಾರಿ
ನಕ್ಷತ್ರಾ ಭೂಪತಿ ಬಳಿ ಕೇಳಿಕೊಂಡು, ಮನೆಯ ಟೇರಸ್ ಮೇಲೆ ಹುಟ್ಟುಹಬ್ಬಕ್ಕೆ ಎಲ್ಲಾ ತಯಾರಿ ಮಾಡಿದ್ದಾರೆ. ಬಲೂನ್ ಕಟ್ಟಿ, ಕೇಕ್ ತರಿಸಿ, ಮನೆಯವರನ್ನು ಕರೆದಿದ್ದಾಳೆ. ಮನೆಯವರೆಲ್ಲಾ ಅದನ್ನು ನೋಡಿ ಶಾಕ್ ಆಗಿದ್ದಾರೆ. ಭೂಪತಿ ಸಹ ಇದನ್ನು ಯಾಕೆ ಮಾಡಿದೆ. ಅಮ್ಮ ನೋಡಿದ್ರೆ ಬೈಯ್ತಾಳೆ ಎಂದು ಹೇಳಿದ್ದಾನೆ.
ಮೌರ್ಯನ ಮೇಲೆ ಶಕುಂತಲಾ ದೇವಿಗೆ ಕೋಪ
ಮೌರ್ಯ ಈ ಮೊದಲು ನಕ್ಷತ್ರಾ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂದು ಆಕೆಯನ್ನು ಕಿಡ್ನ್ಯಾಪ್ ಮಾಡಿ ಕೊಲ್ಲೋ ಪ್ರಯತ್ನ ಮಾಡಿದ್ದ. ಅದಕ್ಕೆ ಶಕುಂತಲಾ ದೇವಿಗೆ ಬೇಸರ ಇದೆ. ಮಗನನ್ನು ದೂರ ಇಟ್ಟಿದ್ದಾಳೆ. ಈಗ ಮೌರ್ಯ ಶಕುಂತಲಾ ದೇವಿ ಬಳಿ ಕ್ಷಮೆ ಕೇಳಿ, ನನ್ನನ್ನು ಮಗ ಎಂದು ಒಪ್ಪಿಕೋ ಎಂದು ಕೇಳುತ್ತಿದ್ದಾನೆ.
ಮೌರ್ಯನ ಬರ್ತ್ಡೇ ಹೇಗೆ ಆಗ್ತಿತ್ತು?
ನಾನು ಚಿಕ್ಕವನಿದ್ದಾಗ ನನ್ನ ಹುಟ್ಟುಹಬ್ಬ ಹೇಗೆ ಮಾಡ್ತಿದ್ದೆ, ನೀವು ನನ್ನ ಪ್ರೀತಿಸುತ್ತಿದ್ದ ರೀತಿಯನ್ನು ನಾನು ಮತ್ತೆ ಪಡೆಯಬೇಕಮ್ಮ. ಯಾವಾಗಲು ನೀನೇ ನನ್ನ ಪಕ್ಕ ನಿಂತು ಕೈ ಹಿಡಿದು ಕೇಕ್ ಮಾಡಿಸುತ್ತಿದ್ದೆ. ಈಗಲೂ ಹಾಗೇ ಮಾಡಮ್ಮ. ಪ್ಲೀಸ್ ಬಾ ಅಮ್ಮ ಎಂದು ಮೌರ್ಯ ಕರೆಯುತ್ತಿದ್ದಾನೆ.
ಕೇಕ್ ಬೀಸಾಕಿ ಶಕುಂತಲಾ ದೇವಿ ಕೋಪ
ಶಕುಂತಲಕಾ ದೇವಿಯನ್ನು ಮೌರ್ಯ ಎಷ್ಟೇ ಕೇಳಿಕೊಂಡ್ರೂ ಶಕುಂತಲಾ ದೇವಿ ಕ್ಷಮಿಸಿಲ್ಲ. ಬದಲಿಗೆ ತಂದ ಕೇಕ್ನ್ನು ಬೀಸಾಕಿದ್ದಾಳೆ. ನಕ್ಷತ್ರಾಗೆ ಬೈದಿದ್ದಾಳೆ. ನಿನ್ನ ನಾನು ಈ ಮನೆ ಸೊಸೆ ಎಂದು ಮಾತ್ರ ಒಪ್ಪಿಕೊಂಡಿದ್ದೇನೆ.
ಅದಕ್ಕೆ ನೀನು ನಮ್ಮ ಮನೆಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕಿಲ್ಲ. ನಿನ್ನ ಲಿಮಿಟ್ ನಲ್ಲಿ ನೀನು ಇರು. ಭೂಪತಿ ನಿನ್ನ ಹೆಂಡ್ತಿಗೆ ಸ್ವಲ್ಪ ಬುದ್ಧಿ ಹೇಳು. ಇದು ಎಲ್ಲಾ ಚೆನ್ನಾಗಿರಲ್ಲ ಎಂದು ಶಕುಂತಲಾ ದೇವಿ ಹೇಳಿದ್ದಾಳೆ.
ಇದನ್ನೂ ಓದಿ: Gichhi Giligili: ಮುದ್ದಾಗಿ ಎಲ್ಲರ ಕಾಲೆಳೆದ ಕೋಕಿಲ ಅಜ್ಜಿ; ಗಿಚ್ಚಿ ಗಿಲಿಗಿಲಿಯಲ್ಲಿ ಮೋಡಿ
ಮೌರ್ಯನಿಗೆ ಅಮ್ಮನ ಬಳಿ ಕ್ಷಮೆಯೇ ಇಲ್ವಾ? ನಕ್ಷತ್ರಾ ಈ ಸಮಸ್ಯೆಗೆ ಪರಿಹಾರ ಕೊಡ್ತಾಳಾ? ಶಕುಂತಲಾ ದೇವಿ ಕೋಪ ಕಮ್ಮಿ ಆಗಲ್ವಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ