ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗುತ್ತಿರಲಿಲ್ಲ. ಈಗ ನಕ್ಷತ್ರಾಳನ್ನು ಸೊಸೆ (Daughter In Law) ಎಂದು ಶಕುಂತಲಾ ದೇವಿ ಒಪ್ಪಿಕೊಂಡಿದ್ದಾರೆ. ಚಂದ್ರಶೇಖರ್ ಗೆ ತುಂಬಾ ಖುಷಿ ಆಗಿದೆ. ಶ್ವೇತಾ ಕುತಂತ್ರ ಎಲ್ಲರ ಮುಂದೆ ಬಯಲಾಗಿದೆ.
ಶ್ವೇತಾ ಕುತಂತ್ರದಿಂದ ಸೋತಿದ್ದ ನಕ್ಷತ್ರಾ!
ಚಂದ್ರಶೇಖರ್ ನಕ್ಷತ್ರಾ ಮತ್ತು ಶ್ವೇತಾಗೆ 500, 500 ಕೊಟ್ಟು ಇದೇ ದುಡ್ಡಿನಲ್ಲಿ ಮನೆ ನಿಭಾಯಿಸಬೇಕು ಎಂದು ಹೇಳಿರುತ್ತಾನೆ. ಆಗ ಶಕುಂತಲಾ ದೇವಿ, ಈ ಸವಾಲನ್ನು ನಕ್ಷತ್ರಾ ಸೋತ್ರೆ, ನಿಮ್ಮ ಮನೆಗೆ ಶಾಶ್ವತವಾಗಿ ಕರೆದುಕೊಂಡು ಹೋಗಬೇಕು ಎಂದು ಸಿಎಸ್ ಹೇಳಿರುತ್ತಾರೆ. ಮಿಲ್ಲಿ ಕುತಂತ್ರದಿಂದ ನಕ್ಷತ್ರಾ ಸೋತಿದ್ದಾಳೆ. ಶ್ವೇತಾ ಮೋಸದಿಂದ ಗೆದ್ದಿದ್ದಳು.
ನಕ್ಷತ್ರಾಳನ್ನು ಆಚೆ ಕಳಿಸಿದ್ದ ಶಕುಂತಲಾ ದೇವಿ
ಟಾಸ್ಕ್ ಸೋತ ಕಾರಣ, ಒಪ್ಪಂದದಂತೆ ನಕ್ಷತ್ರಾ ಮನೆ ಬಿಟ್ಟು ಹೋಗ ಬೇಕಿತ್ತು. ಅಂತೆಯೇ ಶಕುಂತಲಾ ದೇವಿ ನಕ್ಷತ್ರಾಳ ಬಟ್ಟೆ ಪ್ಯಾಕ್ ಮಾಡಿಸಿ, ಮನೆಯಿಂದ ಆಚೆ ದಬ್ಬಿದ್ದಳು. ನಕ್ಷತ್ರಾ ಎಷ್ಟೇ ಕೇಳಿಕೊಂಡ್ರು ಶಕುಂತಲಾ ದೇವಿ ಮನಸ್ಸು ಕರಗಿರಲಿಲ್ಲ. ನಕ್ಷತ್ರಾ ಆಗ ಮನೆಯ ಹೊರಗೆ ನಿಂತು ಅಳುತ್ತಾ ಇದ್ದಾಳು.
ಹೋಟೆಲ್ ಊಟ ಆರ್ಡರ್ ಮಾಡಿದ್ದ ಶ್ವೇತಾ
ಶ್ವೇತಾಗೆ ಅಡುಗೆ ಮಾಡಲು ಬರಲ್ಲ. ಅದಕ್ಕೆ ಹೋಟೆಲ್ ನಿಂದ ಊಟ ತರಿಸಿ ಶಕುಂತಲಾ ದೇವಿಗೆ ಬಡಿಸಿರುತ್ತಾಳೆ. ಅದನ್ನು ಶ್ವೇತಾಳೇ ಮಾಡಿದ್ದು ಎಂದುಕೊಂಡು, ಈ ಟಾಸ್ಕ್ ಶ್ವೇತಾ ವಿನ್ ಆಗಿದ್ದಾಳೆ ಎಂದು ಹೇಳಿರುತ್ತಾಳೆ. ಶ್ವೇತಾ ಸಹ ಖುಷಿ ಆಗಿರುತ್ತಾಳೆ. ಈ ಮನೆಯಿಂದ ನಕ್ಷತ್ರಾ ಆಚೆ ಹೋಗ್ತಾಳೆ. ನಾನು ಭೂಪತಿಯನ್ನು ಮದುವೆ ಆಗಬಹುದು ಎಂದು ಕನಸು ಕಾಣ್ತಾ ಇರ್ತಾಳೆ.
ಇದನ್ನೂ ಓದಿ: Rashmika Mandanna: ವಿಜಯ್ ಜೊತೆಗಿನ ಮಾಲ್ಡೀವ್ಸ್ ದಿನಗಳು! ಮತ್ತೆ ಹೋಗಬೇಕು ಎಂದ ರಶ್ಮಿಕಾ
ಶ್ವೇತಾ ನಾಟಕ ಬಯಲು
ಶ್ವೇತಾ ಊಟ ಆರ್ಡರ್ ಮಾಡಿದ್ದ ಹೋಟೆಲ್ ಹುಡುಗ ವೆಜ್ ಬಿರಿಯಾನಿಗೆ ರಾಯ್ತಾ ಕೊಡಲು ಬಂದಿರುತ್ತಾನೆ. ಆಗ ಚಂದ್ರಶೇಖರ್ ಶಕುಂತಲಾ ದೇವಿಗೆ ನಿಮ್ಮ ಬೆನ್ನ ಹಿಂದೆ ಮೋಸ ನಡೆದಿದೆ. ನೀವು ಬೆಳಗ್ಗೆಯಿಂದ ತಿಂದಿದ್ದು ಶ್ವೇತಾ ಮಾಡಿದ ಅಡುಗೆ ಅಲ್ಲ. ಹೋಟೆಲ್ದು. ಹಾಗಾದ್ರೆ ನಮ್ಮ ಮಗಳು ನಕ್ಷತ್ರಾ ಗೆದ್ದಂತೆ ಎನ್ನುತ್ತಾನೆ.
ನಕ್ಷತ್ರಾ ಈ ಮನೆ ಸೊಸೆ
ಇನ್ನು ನಕ್ಷತ್ರಾ ಟಾಸ್ಕ್ ನಕ್ಷತ್ರಾ ಗೆದ್ದಂತೆ ಆಯ್ತು. ಅದಕ್ಕೆ ಶಕುಂತಲಾ ದೇವಿ ನಕ್ಷತ್ರಾಳನ್ನು ಈ ಮನೆ ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ಅದಕ್ಕೆ ಚಂದ್ರಶೇಖರ್ ಶಾಸ್ತ್ರದ ಪ್ರಕಾರ ನಮ್ಮ ಮಗಳನ್ನು ನಿಮ್ಮ ಮನೆ ತುಂಬಿಸಿಕೊಳ್ಳಿ ಎಂದು ಹೇಳ್ತಾನೆ. ಅದಕ್ಕೆ ಶಕುಂತಲಾ ದೇವಿ ನಕ್ಷತ್ರಾಳನ್ನು ಮನೆ ತುಂಬಿಸಿಕೊಳ್ತಾ ಇದ್ದಾಳೆ. ಇದರಿಂದ ನಕ್ಷತ್ರಾಗೆ ತುಂಬಾ ಖುಷಿ ಆಗಿದೆ.
ಇದನ್ನೂ ಓದಿ: Hitler Kalyana: ಮನೆ ಬಿಟ್ಟು ಬಂದ ಲೀಲಾ, ಮಗಳಿಗಾಗಿ ಹುಡುಕಾಟ ನಡೆಸುತ್ತಿರುವ ಚಂದ್ರಶೇಖರ್!
ಕೊನೆಗೂ ನಕ್ಷತ್ರಾ ಕನಸು ನನಸಾಗಿದೆ. ಭೂಪತಿ ನಕ್ಷತ್ರಾ ಪ್ರೀತಿ ಒಪ್ಪಿಕೊಳ್ತಾನಾ? ಡೆವಿಲ್ ಭಾರ್ಗವಿ ಮತ್ತೆನಾದ್ರೂ ಸಂಚು ಮಾಡ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ