ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿ ಮದುವೆ ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ (Marriage) ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗುತ್ತಿರಲಿಲ್ಲ. ಆದ್ರೆ ಈಗ ನಕ್ಷತ್ರಾಳನ್ನು ಸೊಸೆ ಎಂದು ಶಕುಂತಲಾ ದೇವಿ ಒಪ್ಪಿಕೊಂಡಿದ್ದಾರೆ. ಭೂಪತಿಗೆ ಆರ್‍ಜೆ ಸಖಿ ಶೋ ಇಷ್ಟ. RJ ಸಖಿ ನಕ್ಷತ್ರಾ ಎಂದು ತಿಳಿದು ಭೂಪತಿ (Bhupathi) ಖುಷಿ ಆಗಿದ್ದಾರೆ.
RJಜೆ ಶ್ವೇತಾ ಎಂದು ತಿಳಿದುಕೊಂಡಿದ್ದ ಭೂಪತಿ
RJ ಸಖಿ ಶೋ ನಡೆಸಿಕೊಡ್ತಾ ಇದ್ದದ್ದು ಶ್ವೇತಾ ಎಂದು ತಿಳಿದು ಭೂಪತಿ, ಆಕೆಯನ್ನು FM ಸ್ಟೇಶನ್‍ಗೆ ಕರೆದುಕೊಂಡು ಬಂದಿದ್ದ. ಜೊತೆಗೆ ನಕ್ಷತ್ರಾ ಸಹ ಇದ್ಲು. ಶ್ವೇತಾಗೆ ಶೋ ನಡೆಸಿಕೊಡು ಎಂದು ಭೂಪತಿ ಹೇಳ್ತಾನೆ. ಆಗ ಶ್ವೇತಾ ತನಗೆ ಆರೋಗ್ಯ ಸರಿ ಇಲ್ಲ ಎಂದು ನಾಟಕವಾಡ್ತಾಳೆ. ಆಕೆಯನ್ನು ಭೂಪತಿ ಮನೆಗೆ ಕಳಿಸಿಕೊಡುತ್ತಾನೆ.
ನಕ್ಷತ್ರಾಗೆ ಖುಷಿ
RJ ಸಖಿ ಶೋ ಕಾರ್ಯಕ್ರಮ ಶುರುವಾಗ್ತಿದೆ. ಅದನ್ನು ಮತ್ತೆ ಸ್ಟಾರ್ಟ್ ಮಾಡಿಸಿದ್ದಾನೆ ಎಂದು ಕೇಳಿ ನಕ್ಷತ್ರಾ ತುಂಬಾ ಖುಷಿಯಾಗಿದ್ದಾಳೆ. ಭೂಪತಿಗೆ ತಾನೇ RJ ಸಖಿ ಎನ್ನುವುದು ಗೊತ್ತಾಯ್ತಾ ಎಂದು ಸಂತೋಷವಾಗಿದ್ದಾಳೆ. ಓಡೋಡಿ ಬಂದು ಭೂಪತಿಗೆ ಥ್ಯಾಂಕ್ಸ್ ಹೇಳಿ ಹೋಗಿದ್ದಾಳೆ. ಆದ್ರೆ ಆಗ ಭೂಪತಿಗೆ ಅವಳೇ RJ ಎನ್ನುವುದು ತಿಳಿಸಿದಿರಲ್ಲ.
ಮಿಲ್ಲಿ-ಶ್ವೇತಾ ನಾಟಕ
ಶ್ವೇತಾ ತಾನು RJ ಅಲ್ಲ ಎಂಬುದು ಭೂಪತಿಗೆ ಗೊತ್ತಾಗಬಾರದು ಎಂದು ಒದ್ದಾಡುತ್ತಿದ್ದಾಳೆ. ಅದಕ್ಕೆ ಮಿಲ್ಲಿ ಸಹಾಯ ಪಡೆದಿದ್ದಾಳೆ. ಮಿಲ್ಲಿ ಯಾವುದೇ ಕಾರಣಕ್ಕೂ ನಕ್ಷತ್ರಾ RJ ಸಖಿ ಅಂತ ಗೊತ್ತಾಗಬಾರದು. ನೀನು ಆ ರೀತಿ ನೋಡಿಕೋ ಎಂದು ಹೇಳಿದ್ದಾಳೆ. ಮಿಲ್ಲಿ ಬಂದು ಭೂಪತಿ ಬಳಿ ಮಾತನಾಡುವಷ್ಟರಲ್ಲಿ ಆರ್ ಜೆ ಶೋ ಶುರುವಾಗಿದೆ.
ನಕ್ಷತ್ರಾ RJ ಸಖಿ
ಭೂಪತಿ ನಕ್ಷತ್ರಾಗೆ RJ ಸಖಿ ಕಾರ್ಯಕ್ರಮವನ್ನು ಲೈವ್ ಆಗಿ ತೋರಿಸಿ ಸರ್ಪ್ರೈಸ್ ಕೊಡೋಣ ಎಂದು ಕರೆದುಕೊಂಡು ಬಂದಿರುತ್ತಾನೆ. ಆದ್ರೆ ಅಷ್ಟರಲ್ಲಿ ಅವನಿಗೆ ಸರ್ಪ್ರೈಸ್ ಆಗಿದೆ. ಯಾಕಂದ್ರೆ ಆರ್ ಜೆ ಸಖಿ ನಕ್ಷತ್ರಾ ಎಂದು ಗೊತ್ತಾಗಿ. ನಕ್ಷತ್ರಾ RJ ಸಖಿಯಾಗಿ ತನ್ನ ಮಾತು ಆರಂಭಿಸಿದ್ದಾಳೆ. ಇದು ಈ ಧಾರಾವಾಹಿಯಲ್ಲಿ ಹಿಟ್ ಆದ ಕಾರ್ಯಕ್ರಮ ಆಗಿತ್ತು.
ಭೂಪತಿಗೆ ಖುಷಿಯೋ ಖುಷಿ
ನಕ್ಷತ್ರಾ RJ ಸಖಿಯಾಗಿ ಕಾರ್ಯಕ್ರಮ ನಡೆಸಿ ಕೊಡ್ತಾ ಇರುವುದನ್ನು ನೋಡಿ ಭೂಪತಿಗೆ ತುಂಬಾ ಖುಷಿ ಆಗಿದೆ. ತನ್ನ ಹೆಂಡ್ತಿಯೇ ಆರ್ ಜೆ , ಈ ಮೊದಲು ಇಷ್ಟ ಪಡ್ತಾ ಇದ್ದದ್ದು ಇವಳನ್ನೇ ಎಂದು ಗೊತ್ತಾಗಿ ಖುಷಿ ಆಗಿದೆ. ನಕ್ಷತ್ರಾ ಬಳಿ ತನ್ನ ಖುಷಿ ಹಂಚಿಕೊಂಡಿದ್ದಾನೆ. ಇಬ್ಬರು ಖುಷಿ ಆಗಿದ್ದಾರೆ.
ಶ್ವೇತಾ ಡ್ರಾಮಾ ಭೂಪತಿ ಮುಂದೆ ಮತ್ತೊಮ್ಮೆ ಬಯಲಾಗಿದೆ. ನಕ್ಷತ್ರಾ ಮೇಲೆ ಭೂಪತಿ ಗೌರವ ಇನ್ನೂ ಹೆಚ್ಚಾಗಿದೆ. ಇದರ ಮೂಲಕ ಭೂಪತಿಗೆ ನಕ್ಷತ್ರಾ ಮೇಲೆ ಪ್ರೀತಿಯಾಗುತ್ತಾ ನೋಡಬೇಕು. ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ