ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ (Father) ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿ ಮದುವೆ ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗುತ್ತಿರಲಿಲ್ಲ. ಆದ್ರೆ ಈಗ ನಕ್ಷತ್ರಾಳನ್ನು ಸೊಸೆ ಎಂದು ಶಕುಂತಲಾ ದೇವಿ ಒಪ್ಪಿಕೊಂಡಿದ್ದಾರೆ. ನಕ್ಷತ್ರಾ ಮೌರ್ಯನ ಹುಟ್ಟುಹಬ್ಬಕ್ಕೆ (Birthday) ಸರ್ಪ್ರೈಸ್ ಕೊಡಲು ಮುಂದಾಗಿದ್ದಾಳೆ.
ನಕ್ಷತ್ರಾ ನನ್ನ ಸೊಸೆ
ನಕ್ಷತ್ರಾ ಮತ್ತು ಶ್ವೇತಾಗೆ ನೀಡಿದ್ದ ಟಾಸ್ಕ್ ನಲ್ಲಿ ನಕ್ಷತ್ರಾ ಗೆದ್ದಿದ್ದಾಳೆ. ಅದಕ್ಕೆ ಶಕುಂತಲಾ ದೇವಿ ನಕ್ಷತ್ರಾಳನ್ನು ಈ ಮನೆ ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ಅದಕ್ಕೆ ಚಂದ್ರಶೇಖರ್ ಶಾಸ್ತ್ರದ ಪ್ರಕಾರ ನಮ್ಮ ಮಗಳನ್ನು ನಿಮ್ಮ ಮನೆ ತುಂಬಿಸಿಕೊಳ್ಳಿ ಎಂದು ಹೇಳುತ್ತಾರೆ. ಅದಕ್ಕೆ ಶಕುಂತಲಾ ದೇವಿ ನಕ್ಷತ್ರಾಳನ್ನು ಮನೆ ತುಂಬಿಸಿಕೊಂಡಿದ್ದಾಳೆ. ಇದರಿಂದ ನಕ್ಷತ್ರಾಗೆ ತುಂಬಾ ಖುಷಿ ಆಗಿದೆ.
ಮನೆ ಅಷ್ಟೇ, ಮನಸ್ಸಿನಲ್ಲಿ ಜಾಗ ಇಲ್ಲ
ಶಕುಂತಲಾ ದೇವಿ ತನ್ನನ್ನು ಸೊಸೆ ಎಂದು ಒಪ್ಪಿಕೊಂಡಿದ್ದಕ್ಕೆ ನಕ್ಷತ್ರಾ ತುಂಬಾ ಸಂತೋಷವಾಗಿದ್ದಾಳೆ. ಅತ್ತೆಗೆ ಥ್ಯಾಂಕ್ಸ್ ಹೇಳಿದ್ದಾಳೆ. ಅದಕ್ಕೆ ಶಕುಂತಲಾ ದೇವಿ, ನೀನು ಈ ಮನೆ ಸೊಸೆ ಅಷ್ಟೇ. ಈ ಮನೆಯಲ್ಲಿ ಜಾಗ. ನನ್ನ ಮನಸ್ಸಿನಲ್ಲಿ ಅಲ್ಲ ಎನ್ನುತ್ತಾಳೆ. ನನ್ನ ಮಗನಿಗೆ ಬೇರೆ ಮದುವೆ ಮಾಡಬೇಕು ಎಂದುಕೊಂಡಿದ್ದೆ. ಅದನ್ನು ಬಿಟ್ಟಿದ್ದೇನೆ ಅಷ್ಟೇ ಎಂದು ಹೇಳಿದ್ದಾಳೆ.
ಮೌರ್ಯನಿಗೆ ಬರ್ತ್ಡೇ ವಿಶ್
ಮೌರ್ಯನ ಹುಟ್ಟುಹಬ್ಬ ಇದೆ. ಅದಕ್ಕೆ ನಕ್ಷತ್ರಾ ಕಾಲ್ ಮಾಡಿ ವಿಶ್ ಮಾಡಿದ್ದಾಳೆ. ನಿಮ್ಮ ಮನೆ ಹತ್ತಿರ ದೇವಸ್ಥಾನ ಇದ್ರೆ ಅಲ್ಲಿಗೆ ಹೋಗಿ ಬನ್ನಿ ಎನ್ನುತ್ತಾಳೆ. ಅದಕ್ಕೆ ಮೌರ್ಯ ನನ್ನ ತಾಯಿನೇ ದೇವರು. ಆಕೆನೇ ನನ್ನ ದೂರ ಇಟ್ಟಿದ್ದಾಳೆ.
ಇನ್ಯಾವ ದೇವರು ನನಗೆ ಎನ್ನುತ್ತಾನೆ. ಅಮ್ಮ ಮಾತನಾಡುತ್ತಿದ್ರೆ, ನನ್ನ ಹುಟ್ಟುಹಬ್ಬ ಗ್ರ್ಯಾಂಡ್ ಆಗಿ ಮಾಡ್ತಾ ಇದ್ಲು ಎಂದು ಕಣ್ಣೀರು ಹಾಕುತ್ತಿದ್ದಾನೆ. ಎಲ್ಲ ಸರಿ ಹೋಗೋ ದಿನ್ನ ಬಂದೇ ಬರುತ್ತೆ ಮೌರ್ಯ. ನೀವು ಕೊರಗಬೇಡಿ ಎಂದು ನಕ್ಷತ್ರಾ ಹೇಳಿದ್ದಾಳೆ.
ಭೂಪತಿ ಬಳಿ ಮೌರ್ಯನ ಬಗ್ಗೆ ಮಾತು
ನಕ್ಷತ್ರಾ ಭೂಪತಿ ಬಳಿ ಹೋಗಿ ಮೌರ್ಯನ ಹುಟ್ಟುಹಬ್ಬ ಹೇಗೆ ಆರಚಣೆ ಮಾಡ್ತಾ ಇದ್ರಿ ಎಂದು ಕೇಳ್ತಾಳೆ. ಅದಕ್ಕೆ ಭೂಪತಿ , ಈ ಮನೆಯಲ್ಲಿ ದೀಪಾವಳಿ ಬೇಕಾದ್ರೆ ಮಿಸ್ ಆಗ್ತಿತ್ತು. ಆದ್ರೆ ಮೌರ್ಯನ ಹುಟ್ಟುಹಬ್ಬ ಯಾವತ್ತೂ ಮಿಸ್ ಆಗಿಲ್ಲ. ಅಮ್ಮನಿಗೆ ತುಂಬಾ ಸಂಭ್ರಮ. ಅವಳೇ ಮುಂದೆ ನಿಂತು ಎಲ್ಲಾ ಕೆಲಸ ಮಾಡ್ತಾ ಇದ್ಲು ಎಂದು ಹೇಳಿದ್ದಾನೆ.
ಸರ್ಪ್ರೈಸ್ ನೀಡಲು ಹೋಗಿ ಬೈಸಿಕೊಳ್ತಾಳಾ?
ಭೂಪತಿ ಬಳಿ ಎಲ್ಲಾ ತಿಳಿದುಕೊಂಡಿರುವ ನಕ್ಷತ್ರಾ, ಮೌರ್ಯನ ಬರ್ತ್ಡೇ ಆಚರಿಸಲು ಮುಂದಾಗಿದ್ದಾಳೆ. ಅದಕ್ಕೆ ಮನೆಯಲ್ಲಿ ಎಲ್ಲಾ ತಯಾರಿ ಮಾಡ್ತಾ ಇದ್ದಾಳೆ. ಅದನ್ನು ನೋಡಿದ್ರೆ ಶಕುಂತಲಾ ದೇವಿ ಸುಮ್ನೆ ಇರ್ತಾಳಾ? ಮತ್ತೆ ನಕ್ಷತ್ರಾ ಆಕೆಯ ಕೋಪಕ್ಕೆ ಗುರಿ ಆಗ್ತಾಳಾ ನೋಡಬೇಕು.
ಇದನ್ನೂ ಓದಿ: Ramachari: ಚಾರುಗೆ ಶಾಶ್ವತವಾಗಿ ಕಣ್ಣು ಬರಲ್ವಾ? ಕಣ್ಣೀರಿಡುತ್ತಿದ್ದಾನೆ ರಾಮಾಚಾರಿ!
ಮೌರ್ಯನನ್ನು ಮನೆಯವರು ಒಪ್ಪಿಕೊಳ್ತಾರಾ? ನಕ್ಷತ್ರಾ ಎಲ್ಲವನ್ನೂ ಬದಲಾಯಿಸ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ