ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಈ ಮಧ್ಯೆ ಶುಕುಂತಲಾ ದೇವಿ ನಕ್ಷತ್ರಾಳನ್ನು ಕೀಳಾಗಿ ಕಾಣುತ್ತಿದ್ದಾಳೆ. ಇನ್ನು ನೀನು ಸೋತ್ರೆ ತವರು ಮನೆಗೆ ಬರಬೇಕಾಗುತ್ತೆ ಎಂದು ಆರತಿ ನಕ್ಷತ್ರಾಗೆ ಹೇಳಿದ್ದಾಳೆ. ಅದನ್ನು ಕೇಳಿ ನಕ್ಷತ್ರಾ ಕುಗ್ಗಿ ಹೋಗಿದ್ದಾಳೆ.
500 ರೂಪಾಯಿ ಸವಾಲಿನ ಗೆಲುವು ಯಾರಿಗೆ?
ನಾನು ನಿನಗೆ, ಶ್ವೇತಾಗೆ 500, 500 ರೂಪಾಯಿ ಕೊಡ್ತೀನಿ. ನಾಳೆ ಮನೆಯನ್ನು ನಿಮಗೆ ತಿಳದಿರುವ ರೀತಿಯಲ್ಲಿ ಈ ದುಡ್ಡಲ್ಲಿ ನಡೆಸಬೇಕು. ಮನೆಯ ಸಂಪೂರ್ಣ ಖರ್ಚು, ವೆಚ್ಚ ಈ ದುಡ್ಡಲ್ಲಿ ಮಾಡಬೇಕು.
ಮನೆಯ ಪ್ರತಿಯೊಬ್ಬರಿಗೂ ಊಟ, ತಿಂಡಿ ಕೊಟ್ಟು ದಿನದ ಕೊನೆಯಲ್ಲಿ ಯಾರ ಬಳಿ ಹೆಚ್ಚು ದುಡ್ಡು ಇರುತ್ತೋ ಅವರಿಗೆ ಗೆಲುವು ಎಂದು ಚಂದ್ರಶೇಖರ್ ಹೇಳಿದ್ದರು. ಯಾರ ಬಳಿಯೂ ಸಾಲ ಮಾಡಬಾರದು. ಸಾಲ ಮಾಡಿದ್ರೆ ಸೋತಂತೆ ಎಂದು ಆರತಿ ಹೇಳಿರುತ್ತಾಳೆ.
ಮಾರ್ಕೆಟ್ನಿಂದ ಮೊದಲು ಬಂದವರಿಗೆ ಅಡುಗೆ ಮನೆ
ಮಾರ್ಕೆಟ್ನಿಂದ ತರಕಾರಿ ಮನೆಗೆ ಬೇಗ ಬಂದವರಿಗೆ ಒಂದು ಲಾಭ ಇದೆ ಶಕುಂತಲಾ ದೇವಿ ಹೇಳಿದ್ದಳು. ನಕ್ಷತ್ರಾ ಮಾರ್ಕೆಟ್ ನಲ್ಲಿ ದುಡ್ಡು ಕಳೆದುಕೊಂಡು, ನಡೆದುಕೊಂಡು ಬಂದಿದ್ದಳು. ಶ್ವೇತಾ ಬೇಗ ಬಂದ ಕಾರಣ ಆಕೆಗೆ ಅಡುಗೆ ಮನೆ ನೀಡಲಾಯ್ತು. ಆದ್ರೆ ನಕ್ಷತ್ರಾ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಿದ್ದಾಳೆ.
ಮಣ್ಣು ಪಾಲಾದ ಊಟ
ನಕ್ಷತ್ರಾ ತಿಂಡಿ ಮಾಡಿ ಮನೆಯವರನ್ನು ಕರೆಯಲು ಹೋಗಿದ್ದಳು. ಅಷ್ಟರಲ್ಲಿ ಮಿಲ್ಲಿ ಬಂದ ಆ ಅನ್ನವನ್ನು ಚೆಲ್ಲಿ ಹೋಗಿದ್ದಾಳೆ. ಮಿಲ್ಲಿ ಭಾರ್ಗವಿಯ ಮಗಳು. ನಕ್ಷತ್ರಾ ಸೋಲಬೇಕು ಎಂದು ಈ ರೀತಿ ಮಾಡ್ತಾ ಇದ್ದಾಳೆ. ತಾನು ಮಾಡಿದ ಊಟ ಬಿದ್ದು ಹಾಳಾಗಿದ್ದನ್ನು ನೋಡಿ ನಕ್ಷತ್ರಾ ಅಳುತ್ತಾ ಕೂತಿದ್ದಾಳೆ.
ಇದನ್ನೂ ಓದಿ: Kannadathi: ಭುವಿ ಕೈಯಲ್ಲಿ ಸಾನಿಯಾ ಲಗಾಮು, ಸಿಕ್ಕಿರುವ ಇನ್ನೊಂದು ವಿಡಿಯೋದಲ್ಲಿ ಏನಿದೆ?
ಸ್ಪರ್ಧೆಯ ಸವಾಲು ಕೇಳಿ ಕುಗ್ಗಿ ಹೋದ ನಕ್ಷತ್ರಾ
ಅಡುಗೆ ಆಗಿತ್ತು ಅಮ್ಮ. ನನ್ನ ಹಣೆಬರಹ ಸರಿ ಇಲ್ಲ ಅನ್ನಿಸುತ್ತೆ. ನಾನು ಮಾಡಿದ್ದ ಅಡುಗೆ ಎಲ್ಲಾ ಮಣ್ಣು ಪಾಲಾಯ್ತು ಅಮ್ಮ ಎಂದು ಕಾಲ್ ಮಾಡಿ ಹೇಳುತ್ತಿದ್ದಾಳೆ. ನನಗೆ ಏನು ಮಾಡಬೇಕು ಅಂತ ತೋಚ್ತಾ ಇಲ್ಲ.
ನೀನು ಸೋಲಬಾರದು ಕಣೇ, ನೀನು ಇವತ್ತು ಸೋತ್ರೆ ನಿನ್ನ ಈಡೀ ಜೀವನವೇ ಸೋತ ಹಾಗೆ. ನಿನ್ನ ಮನೆ, ಗಂಡ, ಸಂಸಾರ ಎಲ್ಲ ಕನಸು ಬಿಟ್ಟು ಬದುಕ ಬೇಕಾಗುತ್ತೆ. ನೀನು ಸೋತ್ರೆ ತವರು ಮನೆಗೆ ಬರಬೇಕಾಗುತ್ತೆ ಎಂದು ಆರತಿ ನಕ್ಷತ್ರಾಗೆ ಹೇಳಿದ್ದಾಳೆ. ಅದನ್ನು ಕೇಳಿ ನಕ್ಷತ್ರಾ ಕುಗ್ಗಿ ಹೋಗಿದ್ದಾಳೆ.
ಶಕುಂತಲಾ ದೇವಿ ಹೇಳಿದ್ದೇನು?
ಚಂದ್ರಶೇಖರ್ ಕೊಟ್ಟ ಟಾಸ್ಕ್ ಕೇವಲ ನಕ್ಷತ್ರಾ, ಶ್ವೇತಾರಲ್ಲಿ ಯಾರು ಬೆಸ್ಟ್ ಅನ್ನುವುದು ಆಗಿತ್ತು. ಆದ್ರೆ ಶಕುಂತಲಾ ದೇವಿ ಗೇಮ್ ಪ್ಲ್ಯಾನ್ ಬದಲಾಯಿಸಿದ್ದಳು. ನೀವು ನಕ್ಷತ್ರಾ-ಶ್ವೇತಾಗೆ ಒಂದು ಟಾಸ್ಕ್ ನೀಡಿದ್ದೀರಿ. ನಕ್ಷತ್ರಾ ಗೆದ್ದರೆ, ನಾನು ಆಕೆಯನ್ನು ನಮ್ಮ ಮನೆ ಸೊಸೆ ಎಂದು ಒಪ್ಪಿಕೊಳ್ತೇನೆ. ಒಂದು ವೇಳೆ ಸೋತರೆ, ನೀವು ನಿಮ್ಮ ಮಗಳನ್ನು ಶಾಶ್ವತವಾಗಿ ನಿಮ್ಮ ಮನೆಗೆ ಕರೆದುಕೊಂಡು ಹೋಗಬೇಕು ಎಂದು ಹೇಳಿದ್ದಳು.
ಇದನ್ನೂ ಓದಿ: Manju Pavagada: ದುಬೈ ಪ್ರವಾಸದಲ್ಲಿ ಮಂಜು ಪಾವಗಡ, ಕೆಲಸದಿಂದ ಕೊಂಚ ಬ್ರೇಕ್!
ನಕ್ಷತ್ರಾ ಸೋತು ತವರು ಮನೆ ಸೇರ್ತಾಳಾ? ಗೆದ್ದು ಭೂಪತಿಯನ್ನು ಪಡೆಯುತ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ