ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ ಧಾರಾವಾಹಿ (Lakshana Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಈ ಧಾರಾವಾಹಿಯ ನಾಯಕಿ ನಕ್ಷತ್ರಾ. ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್? ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ನಕ್ಷತ್ರಾ, ಚಂದ್ರಶೇಖರ್ ಮೇಲೆ ಸೇಡು ತೀರಸಿಕೊಳ್ಳಲು ಹೋಗಿ ಮೌರ್ಯನೇ ಬಲಿಯಾಗಿದ್ದಾನೆ. ಸಿಎಸ್ ಮೌರ್ಯನನ್ನು ಕೊಂದಿದ್ದಾನೆ. ನಕ್ಷತ್ರಾ ಅಪ್ಪನ (Father) ವಿರುದ್ಧ ದೂರು (Complaint) ನೀಡಿದ್ದಾಳೆ. ಆದ್ರೂ ಭೂಪತಿ ಮನೆಯಲ್ಲಿ ಒಂಟಿಯಾಗಿದ್ದಾಳೆ.
ಮೌರ್ಯನ ಕೊಂದ ಚಂದ್ರಶೇಖರ್
ಚಂದ್ರಶೇಖರ್ ಮತ್ತು ನಕ್ಷತ್ರಾಗೆ ಮೌರ್ಯ ತುಂಬಾ ಕಾಟ ಕೊಟ್ಟಿದ್ದಾನೆ. ಎಷ್ಟೋ ಬಾರಿ ಕೊಲ್ಲಲು ಹೋಗಿದ್ದಾನೆ. ಸಿಎಸ್ ಮೊದಲೇ ಪ್ರಭಾವಿ ವ್ಯಕ್ತಿ. ಮೊದಲು ಇವನ್ನೆಲ್ಲಾ ಸಹಿಸಿಕೊಂಡಿದ್ದ. ಆದ್ರೆ ಈಗ ಆಗುತ್ತಿಲ್ಲ. ಇವನನ್ನು ಬಿಟ್ರೆ, ನನ್ನ ಮಗಳಿಗೆ ತೊಂದ್ರೆ ಎಂದು ಮೌರ್ಯನನ್ನು ಕೊಂದು ಬಿಟ್ಟಿದ್ದಾಳೆ.
ಅಪ್ಪನ ವಿರುದ್ಧವೇ ದೂರು
ಚಂದ್ರಶೇಖರ್, ಇದನ್ನೆಲ್ಲಾ ನಿನಗಾಗಿ ಮಾಡಿದೆ ಮಗಳೇ ಎನ್ನುತ್ತಾನೆ. ಅದಕ್ಕೆ ನಕ್ಷತ್ರಾ ಈ ರೀತಿ ಪ್ರೀತಿ ನನಗೆ ಬೇಡಪ್ಪ. ನನ್ನನ್ನು ನೀವು ಪ್ರೀತಿಸಲೇಬೇಡಿ. ಮೌರ್ಯ ಮಾಡೋಕೆ ಹೊರಟಿದ್ದು ತಪ್ಪು ಅಂದ ಮೇಲೆ ನೀವು ಮಾಡಿದ್ದು ತಪ್ಪೇ ಎನ್ನುತ್ತಾಳೆ. ನಿಮಗೆ ಶಿಕ್ಷೆ ಆಗಲೇ ಬೇಕು ಅಪ್ಪ. ನೀವು ಈ ರೀತಿ ಮಾಡಬಾರದಿತ್ತು ಇದು ಮಹಾ ಅಪರಾಧ ಎಂದು ಹೇಳ್ತಾಳೆ. ಅಲ್ಲದೇ ಪೊಲೀಸರಿಗೆ ಹಿಡಿದು ಕೊಟ್ಟಿದ್ದಾಳೆ. ತಾನೇ ಸಾಕ್ಷಿ ಹೇಳುವುದಾಗಿ ಹೇಳಿದ್ದಾಳೆ.
ಇದನ್ನೂ ಓದಿ: Kannadathi: ಭುವಿ-ಹರ್ಷನನ್ನು ದೂರ ಮಾಡಲು ವರು ಸರ್ಕಸ್! ಕನ್ನಡ ಟೀಚರ್ ಹೋಗಿದ್ದೆಲ್ಲಿಗೆ?
ಭೂಪತಿ, ಶಕುಂತಲಾ ಕಣ್ಣೀರು
ಮೌರ್ಯನನ್ನು ಕಳೆದುಕೊಂಡು ಶಕುಂತಲಾ ದೇವಿ ಕುಸಿದು ಹೋಗಿದ್ದಾಳೆ. ಇನ್ನೆಂದು ನನ್ನ ಮಗ ಬರಲ್ಲ ಎಂದು ಗೋತ್ತಾಗಿ ಕಣ್ಣೀರಿಡುತ್ತಿದ್ದಾಳೆ. ಅವನ್ನಿಲ್ಲದೇ ಹೇಗೆ ಇರುವುದ ಭೂಪತಿ ಎಂದು ಕೇಳ್ತಾ ಇದ್ದಾಳೆ. ಭೂಪತಿಗೂ ಸಹ ತಮ್ಮನ ಸಾವು ಆಘಾತ ತಂದಿದೆ. ಅಮ್ಮ ಎಲ್ಲಾ ಕಡೆ ಮೌರ್ಯ ಕಾಣ್ತಾ ಇದ್ದಾನೆ ಎಂದು ಹೇಳುತ್ತಿದ್ದಾನೆ.
ಒಬ್ಬಂಟಿಯಾದ ನಕ್ಷತ್ರಾ
ಅಪ್ಪನ ವಿರುದ್ಧ ದೂರು ಕೊಟ್ಟಿದ್ದಕ್ಕೆ ತವರು ಮನೆಯಲ್ಲೂ ನಕ್ಷತ್ರಾಗೆ ಜಾಗ ಇಲ್ಲ. ಭೂಪತಿ ಮನೆಗೆ ಬಂದಿದ್ದಾಳೆ. ಆದ್ರೆ ಎಲ್ಲಾ ಇದ್ದು ಅವಳು ಒಂಟಿಯಾಗಿದ್ದಾಳೆ. ಭೂಪತಿ ಅತ್ತಿಗೆ ನಕ್ಷತ್ರಾಳನ್ನು ಮಾತನಾಡಿಸುತ್ತಿದ್ದಿದ್ದನ್ನು ನೋಡಿ, ಶೌರ್ಯ, ಪೃಥ್ವಿ ಕೋಪಗೊಂಡಿದ್ದಾರೆ. ಆಕೆಯನ್ನು ಮಾತನಾಡಿಸಬೇಡಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಅಪ್ಪ ಮಾಡಿದ ತಪ್ಪಿಗೆ ನಕ್ಷತ್ರಾ ಶಿಕ್ಷೆ ಅನುಭವಿಸುತ್ತಿದ್ದಾಳೆ.
ನಕ್ಷತ್ರಾಳಿಂದಲೇ ಎಲ್ಲಾ ನಡೆದಿದ್ದು ಎನ್ನೋ ಆರೋಪ
ಚಂದ್ರಶೇಖರ್ ಮಗಳು ನಕ್ಷತ್ರಾಗಾಗಿಯೇ ಇದನ್ನೆಲ್ಲಾ ಮಾಡಿದ್ದು. ನಕ್ಷತ್ರಾ-ಭೂಪತಿ ಮದುವೆಯನ್ನು ಬಲವಂತವಾಗಿ ಮಾಡಿಸಿದ್ದು. ಅದರಿಂದ ಅವರ ಮನೆಯವರೆಲ್ಲಾ ದ್ವೇಷ ಮಾಡ್ತಾ ಇದ್ದಾರೆ. ಈಗ ಮಗಳ ಜೀವಕ್ಕೆ ಅಪಾಯ ಆಗುತ್ತೆ ಎಂದು ಮೌರ್ಯನನ್ನೇ ಕೊಂದು ಮುಗಿಸಿದ್ದಾನೆ. ಅದಕ್ಕೆ ಎಲ್ಲಾ ನಕ್ಷತ್ರಾ ಮೇಲೆ ಬಂದಿದೆ.
ಇದನ್ನೂ ಓದಿ: Puttakkana Makkalu: ಕೊನೆಗೂ ಗೆದ್ದ ಪುಟ್ಟಕ್ಕನ ತಂಡ, ಅಸಡ್ಡೆ ತೋರಿದವರಿಗೆ ಕಿವಿಮಾತು!
ಅಪ್ಪನ ವಿರುದ್ಧವೇ ನಕ್ಷತ್ರಾ ನಿಂತಿದ್ದಾಳೆ. ಭೂಪತಿ ಮನೆಯಲ್ಲೂ ಒಂಟಿಯಾಗಿದ್ದಾಳೆ. ಧಾರಾವಾಹಿ ಕುತೂಹಲ ಮೂಡಿಸಿದ್ದು, ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ