ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಾಯಕಿ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ನಕ್ಷತ್ರಾಗೆ ಮೊದಲಿನಿಂದಲೂ ಭೂಪತಿ ಮೇಲೆ ಪ್ರೀತಿ ಇತ್ತು. ಈಗ ಭೂಪತಿಗೆ ನಕ್ಷತ್ರಾ ಮೇಲೆ ಪ್ರೀತಿ ಆಗಿದೆ. ಅದನ್ನು ಹೇಳಿಕೊಳ್ಳೋ ವೇಳೆಯಲ್ಲೇ, ನಕ್ಷತ್ರಾ ಡಿವೋರ್ಸ್ (Divorce) ಬೇಕು ಎಂದು ಕೇಳಿದ್ದಾಳೆ. ಅದಕ್ಕೆ ಭೂಪತಿ ಕಣ್ಣೀರಿಡುತ್ತಿದ್ದಾನೆ (Crying).
ಭೂಪತಿ ಬಗ್ಗೆ ನಕ್ಷತ್ರಾಗೆ ಚಿಂತೆ
ಭೂಪತಿ ಆಫೀಸ್ನಿಂದ ಮನೆಗೆ ಬರುವಾಗ ಚಿಕ್ಕದಾಗಿ ಅಪಘಾತವಾಗಿತ್ತು. ಅದನ್ನು ಡೆವಿಲ್ ಮಾಡಿಸಿದ್ದಳು. ಹಣೆ ಮೇಲೆ ಸಣ್ಣ ಗಾಯವಾಗಿದೆ. ಅದು ನಾನೇ ಮಾಡಿಸಿದ್ದು, ಮುಂದಿನ ಬಾರಿ ಲಾರಿಯಿಂದ ನಿನ್ನ ಗಂಡನಿಗೆ ಗುದ್ದಿಸುತ್ತೇನೆ ಎಂದು ಡೆವಿಲ್ ಹೇಳಿದ್ದಾಳೆ. ಅದನ್ನು ಕೇಳಿ ನಕ್ಷತ್ರಾ ಗಾಬರಿಯಾಗಿದ್ದಾಳೆ. ಭೂಪತಿಗೆ ತೊಂದ್ರೆ ಆಗುತ್ತೆ ಎಂದು ಭಯಪಟ್ಟುಕೊಂಡಿದ್ದಾಳೆ.
ಭೂಪತಿಗೆ ಡಿವೋರ್ಸ್ ಕೊಡು
ನಕ್ಷತ್ರಾಗೆ ಫೋನ್ ಮಾಡಿದ ಡೆವಿಲ್, ಡಿವೋರ್ಸ್ ಕೊಡಲು ಹೇಳಿದ್ದಾಳೆ. ನಿನ್ನ ಗಂಡ ಬದುಕಬೇಕಂದ್ರೆ, ನೀನು ಅವನಿಂದ ದೂರ ಆಗಬೇಕು. ಡಿವೋರ್ಸ್ ಕೊಡಬೇಕು. ಇಲ್ಲ ಅಂದ್ರೆ ಅವನನ್ನು ಕೊಲ್ಲುತ್ತೇನೆ ಎಂದು ಹೇಳಿದ್ದಾಳೆ. ಸಂಭ್ರಮದಿಂದ ಯುಗಾದಿ ಹಬ್ಬ ಮಾಡಬೇಕಾದ ಜೋಡಿ ಡಿವೋರ್ಸ್ ಬಗ್ಗೆ ಮಾತನಾಡಿದೆ.
ಡಿವೋರ್ಸ್ ಬೇಕು ನನಗೆ
ಭೂಪತಿ ತನ್ನ ಪ್ರೀತಿ ಹೇಳಿಕೊಳ್ಳೋಣ ಎಂದು ನಕ್ಷತ್ರಾಳನ್ನು ಆಚೆ ಕರೆದುಕೊಂಡು ಹೋಗಿರುತ್ತಾನೆ. ಆಗ ನಕ್ಷತ್ರಾ ತಾನು ಏನೋ ಹೇಳಬೇಕು ಅಂತಾಳೆ. ಅದಕ್ಕೆ ಭೂಪತಿ ಹೇಳು ಅಂತಾನೆ. ನೀನು ಇವತ್ತು ಏನೇ ಕೇಳಿದ್ರೂ ಓಕೆ ಎನ್ನುತ್ತೇನೆ ಎಂದು ಭೂಪತಿ ಹೇಳ್ತಾನೆ. ಅದಕ್ಕೆ ನಕ್ಷತ್ರಾ ನನಗೆ ಡಿವೋರ್ಸ್ ಬೇಕು ಎಂದು ಕೇಳ್ತಾಳೆ. ಅದನ್ನು ಕೇಳಿ ಭೂಪತಿ ಗಾಬರಿಯಾಗಿದ್ದಾನೆ.
ತಮಾಷೆ ಮಾಡಬೇಡ ಎಂದ ಭೂಪತಿ
ನಕ್ಷತ್ರಾ ಡಿವೋರ್ಸ್ ಬೇಕು ಎಂದಾಕ್ಷಣ ಭೂಪತಿ ಶಾಕ್ ಆಗ್ತಾನೆ. ನಂತರ ಬಂದು ಜೋರಾಗಿ ನಗ್ತಾನೆ. ಏನ್ ತಮಾಷೆ ಮಾಡ್ತಾ ಇದೀಯಾ, ನನಗೆ ಗಾಬರಿ ಆಯ್ತು ಎನ್ನುತ್ತಾನೆ. ಅದಕ್ಕೆ ನಕ್ಷತ್ರಾ, ನಾನು ತಮಾಷೆ ಮಾಡ್ತಿಲ್ಲ. ನಿಜವಾಗ್ಲೂ ಡಿವೋರ್ಸ್ ಬೇಕು. ನಾನು, ನೀನು ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದು ಹೇಳ್ತಾಳೆ.
ಕಣ್ಣೀರಿಟ್ಟ ಭೂಪತಿ
ಡಿವೋರ್ಸ್ ಅಂದ್ರೆ ಏನು ಅಂತ ಗೊತ್ತಾ ಖಾಲಿ ಡಬ್ಬಿ? ನಾನು, ನೀನು ದೂರ ಆಗುವುದು. ಪತ್ರದ ಮೇಲೆ ಸೈನ್ ಮಾಡುವುದು. ಕೋರ್ಟ್ ನಲ್ಲಿ ಹೋಗಿ ನಿಲ್ಲುವುದು ಎಂದು ಕಣ್ಣೀರಿಡುತ್ತಿದ್ದಾನೆ. ನನಗೆ ಎಲ್ಲಾ ಗೊತ್ತು. ನನಗೆ ಡಿವೋರ್ಸ್ ಬೇಕು ಅಷ್ಟೇ ಎಂದು ನಕ್ಷತ್ರಾ ಹೇಳಿದ್ದಾಳೆ. ಭೂಪತಿ ಕನಸಿನ ಕೋಟೆ ಛಿದ್ರವಾಗಿದೆ.
ಎಲ್ಲವನ್ನೂ ನೋಡಿ ಖುಷಿ ಪಟ್ಟ ಡೆವಿಲ್
ನಕ್ಷತ್ರಾ ಮತ್ತು ಭೂಪತಿ ಮಾತನಾಡುವುದನ್ನು ಡೆವಿಲ್ ನೋಡ್ತಾ ಇದ್ದಾಳೆ. ಅವಳು ಹೇಳಿದಂತೆ ನಕ್ಷತ್ರಾ ಡಿವೋರ್ಸ್ ಕೇಳಿದ್ದಾಳೆ. ಅದನ್ನು ನೋಡಿ ಡೆವಿಲ್ ಖುಷಿಯಾಗಿದ್ದಾಳೆ. ಇನ್ಮುಂದೆ ನಕ್ಷತ್ರಾ ಚಂದ್ರಶೇಖರ್ ಮನೆ ಸೇರ್ತಾಳೆ. ನಾನು ಅಂದುಕೊಂಡಿದ್ದು ಆಯ್ತು ಎಂದು ನಗುತ್ತಿದ್ದಾಳೆ.
ಇದನ್ನೂ ಓದಿ: Amrutha Ramamurthy: ಕಿರುತೆರೆ ಜೋಡಿಯ ಮುದ್ದಾದ ಗುದ್ದಾಟ ನೋಡಿ, ಅಮೃತಾ- ರಾಘವೇಂದ್ರ ಕ್ಯೂಟ್ ಫೋಟೋಸ್!
ನಕ್ಷತ್ರಾ ಸುಳ್ಳಿನ ಹಿಂದಿನ ಸತ್ಯ ಗೊತ್ತಾಗುತ್ತಾ? ಇಬ್ಬರಿಗೂ ಡಿವೋರ್ಸ್ ಆಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ