ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ ಧಾರಾವಾಹಿ (Lakshana Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಈ ಧಾರಾವಾಹಿಯ ನಾಯಕಿ ನಕ್ಷತ್ರಾ. ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ನಕ್ಷತ್ರಾ, ಚಂದ್ರಶೇಖರ್ ಮೇಲೆ ಸೇಡು ತೀರಿಸಿಕೊಳ್ಳಲು ಬಂದ ಮೌರ್ಯ ಚಂದ್ರಶೇಖರ್ ಬಳಿ ಬಂಧಿಯಾಗಿದ್ದಾನೆ. ಡೆವಿಲ್ ಹಿಡಿಯಲು ಮೌರ್ಯನ ಕೊಲೆ (Murder) ಮಾಡೋ ನಾಟಕ (Drama) ಮಾಡಿದ್ದಾರೆ.
ಮೌರ್ಯನ ಕೊಲ್ಲುವ ನಾಟಕ
ಚಂದ್ರಶೇಖರ್ ಮತ್ತು ನಕ್ಷತ್ರಾಗೆ ಮೌರ್ಯ ತುಂಬಾ ಕಾಟ ಕೊಟ್ಟಿದ್ದಾನೆ. ಎಷ್ಟೋ ಬಾರಿ ಕೊಲ್ಲಲು ಹೋಗಿದ್ದಾನೆ. ಸಿಎಸ್ ಮೊದಲೇ ಪ್ರಭಾವಿ ವ್ಯಕ್ತಿ. ಮೊದಲು ಇವನ್ನೆಲ್ಲಾ ಸಹಿಸಿಕೊಂಡಿದ್ದ. ಆದ್ರೆ ಈಗ ಆಗುತ್ತಿಲ್ಲ. ಇವನನ್ನು ಬಿಟ್ರೆ, ನನ್ನ ಮಗಳಿಗೆ ತೊಂದ್ರೆ ಎಂದು ಮೌರ್ಯನನ್ನು ಕೊಂದು ಬಿಟ್ಟಿದ್ದಾನೆ. ಈ ರೀತಿ ಎಲ್ಲಾ ಕಡೆ ಸುದ್ದಿ ಆಗಿದೆ. ಆದ್ರೆ ಅವನು ಸತ್ತಿಲ್ಲ. ಕೊಂದಿರುವುದಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.
ನಕ್ಷತ್ರಾ ಮತ್ತು ಚಂದ್ರಶೇಖರ್ ಪ್ಲ್ಯಾನ್
ಚಂದ್ರಶೇಖರ್ ಮತ್ತು ನಕ್ಷತ್ರಾ ಸೇರಿ ಈ ಪ್ಲ್ಯಾನ್ ಮಾಡಿದ್ದಾರೆ. ಮೌರ್ಯನನ್ನು ಕೊಲ್ಲುವ ನಾಟಕ ಮಾಡಿದ್ದಾರೆ. ಆಗ ಡೆವಿಲ್ ಯಾರು ಅಂತ ಗೊತ್ತಾಗುತ್ತೆ ಎಂಬುದು ಅವರ ಐಡಿಯಾ. ಅದೇ ರೀತಿ ಮೌರ್ಯನನ್ನು ಬೇರೆ ಕಡೆ ಇಟ್ಟು, ಅವನು ಸತ್ತಿದ್ದಾನೆ ಎಂದು ಎಲ್ಲಾ ಕಡೆ ಹಬ್ಬಿಸಿದ್ದಾರೆ. ಅಲ್ಲದೇ ಚಂದ್ರಶೇಖರ್ ನನ್ನು ಅರೆಸ್ಟ್ ಬೇರೆ ಮಾಡಲಾಗಿದೆ.
ಇದನ್ನೂ ಓದಿ: Bigg Boss Kannada: ಒಡೆದ ಹಾಲಾಯ್ತಾ ಬಿಗ್ ಬಾಸ್ ಮನೆ? ಇದಕ್ಕೆಲ್ಲಾ ಕಾರಣ ಅಮೂಲ್ಯ ಅಂತೆ!
ಡೆವಿಲ್ ಭಾರ್ಗವಿ ಪ್ಲ್ಯಾನ್ ವರ್ಕ್ ಆಗಲಿಲ್ಲ
ಚಂದ್ರಶೇಖರ್ ಹುಡುಗರ ಜೊತೆ ಭಾರ್ಗವಿ ಹುಡುಗನು ಇರುತ್ತಾನೆ. ಅವನೇ ಮೌರ್ಯನನ್ನು ಕೊಲ್ಲುತ್ತಾನೆ. ಆ ಕೇಸ್ ಸಿಎಸ್ ಮೇಲೆ ಬರುತ್ತೆ ಎಂದು ಪ್ಲ್ಯಾನ್ ಮಾಡಿದ್ರು. ಅಂತೆಯೇ ಭಾರ್ಗವಿ ಹುಡುಗ ಮೌರ್ಯನನ್ನು ಕೊಲ್ಲಲು ಹೋಗಿರುತ್ತಾನೆ. ಆಗ ನಕ್ಷತ್ರಾ ಅದನ್ನು ತಡೆಯುತ್ತಾಳೆ. ಭಾರ್ಗವಿ ಸಹ ಮೌರ್ಯ ಸತ್ತಿದ್ದಾನೆ ಎಂದು ಕೊಂಡಿದ್ದಾಳೆ.
ಭೂಪತಿ ಬಳಿ ಸತ್ಯ ಹೇಳಿದ ನಕ್ಷತ್ರಾ
ತಮ್ಮ ಮೌರ್ಯ ಸತ್ತಿದ್ದಾನೆ ಎಂದು ಭೂಪತಿ ಮತ್ತು ಮನೆಯವರ ತುಂಬಾ ಬೇಸರದಲ್ಲಿ ಇದ್ದಾರೆ. ನಕ್ಷತ್ರಾ ಮಾತನಾಡಲು ಹೋದ್ರೂ ಭೂಪತಿ ಮಾತನಾಡುತ್ತಿಲ್ಲ. ಅದಕ್ಕೆ ನಕ್ಷತ್ರಾ ಭೂಪತಿ ಬಳಿ ಸತ್ಯ ಹೇಳಿದ್ದಾಳೆ. ನಿಮ್ಮ ತಮ್ಮ ಮೌರ್ಯ ಸತ್ತಿಲ್ಲ. ಬದುಕಿದ್ದಾನೆ. ಆ ಡೆವಿಲ್ ಹಿಡಿಯಲು ನಾವು ಮಾಡಿರುವ ಪ್ಲ್ಯಾನ್ ಎಂದು ಹೇಳಿದ್ದಾಳೆ. ಅದನ್ನು ಕೇಳಿ ಭೂಪತಿ ಖುಷಿಯಾಗಿದ್ದಾನೆ.
ನಕ್ಷತ್ರಾ ಬಲೆಯಲ್ಲಿ ಬೀಳ್ತಾಳಾ ಡೆವಿಲ್ ಭಾರ್ಗವಿ
ನಕ್ಷತ್ರಾ ಅಂದುಕೊಂಡಂತೆ ಎಲ್ಲವೂ ಆಗಿದೆ. ಒಂದು ಪೇಪರ್ ನಲ್ಲಿ ಮಾತ್ರ ಮೌರ್ಯ ಸತ್ತಿರುವ ಸುದ್ದಿ ಬಂದಿದೆ. ಅದನ್ನು ಕೊಟ್ಟಿರೋದು ಡೆವಿಲ್. ಅದಕ್ಕೆ ಡೆವಿಲ್ ಈ ಪತ್ರಿಕೆಯ ಸಂಪಾದಕರ ಜೊತೆ ಸಂಪರ್ಕದಲ್ಲಿ ಇದ್ದಾರೆ. ಇದರ ಮೂಲಕ ನಾವು ಅವಳನ್ನು ಹಿಡಿಯೋಣ ಎಂದು ಭೂಪತಿ ಬಳಿ ನಕ್ಷತ್ರಾ ಹೇಳಿದ್ದಾಳೆ.
ಇದನ್ನೂ ಓದಿ: Saanya Iyer: ಬಿಗ್ ಬಾಸ್ ಮೇಲೆ ಸಾನ್ಯಾ ಕೋಪ! ರೂಪೇಶ್ಗೆ ತಲುಪುತ್ತಿಲ್ವಂತೆ ಪುಟ್ಟಗೌರಿ ಕಳಿಸಿದ ಗಿಫ್ಟ್!
ತಮ್ಮ ಬದುಕಿರುವ ಸುದ್ದಿ ಕೇಳಿ ಭೂಪತಿ ಖುಷಿಯಾಗಿದ್ದಾನೆ. ನಕ್ಷತ್ರಾ ಬಲೆಯಲ್ಲಿ ಬೀಳ್ತಾಳಾ ಡೆವಿಲ್ ಭಾರ್ಗವಿ, ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ