ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ನಕ್ಷತ್ರಾ, ಚಂದ್ರಶೇಖರ್ ಮೇಲೆ ಸೇಡು ತೀರಿಸಿಕೊಳ್ಳಲು ಮೌರ್ಯ ಕಾಯ್ತಾ ಇದ್ದ. ಈಗ ನಕ್ಷತ್ರಾ ಒಳ್ಳೆತನ ನೋಡಿ ಮೌರ್ಯ ಬದಲಾಗಿದ್ದಾನೆ (Change). ಮನೆಗೆ ಬಂದ ಮೌರ್ಯನಿಗೆ ಮನೆಯವರೆಲ್ಲಾ ಬೈದಿದ್ದಾರೆ.
ತನ್ನ ತಪ್ಪು ತಿದ್ದಿಕೊಂಡು ಬದಲಾದ ಮೌರ್ಯ
ಮೌರ್ಯ ಈ ಮೊದಲು ಭೂಪತಿಯನ್ನು ನಕ್ಷತ್ರಾ ಬೇಕು ಅಂತಾನೇ ಮದುವೆ ಆಗಿದ್ದಾಳೆ ಎಂದುಕೊಂಡು ಕೊಲ್ಲಲು ಪ್ರಯತ್ನ ಮಾಡ್ತಾ ಇದ್ದ, ಆದ್ರೆ ಈಗ ನಕ್ಷತ್ರಾಗೂ, ಈ ಮದುವೆಗೂ ಯಾವುದೇ ಸಂಬಂಧ ಇಲ್ಲ ಎಂದು ಗೊತ್ತಾಗಿದೆ.
ತನ್ನ ಸೇಡಿಗೆ ಏನು ಅರ್ಥ ಇಲ್ಲ. ನಾನು ಅವಳನ್ನು ಕೊಂದು ಸಾಧಿಸುವುದಾದ್ರೂ ಏನು ಎಂದು ಕೊಲ್ಲುವ ನಿರ್ಧಾರದಿಂದ ಹಿಂದೆ ಸರಿದಿದ್ದಾನೆ. ಅಲ್ಲದೇ ಡೆವಿಲ್ ಕಳಿಸಿದ ಹುಡುಗರಿಂದ ನಕ್ಷತ್ರಾಳನ್ನು ಕಾಪಾಡಿದ್ದಾನೆ.
ನಕ್ಷತ್ರಾ ಬಳಿ ಕ್ಷಮೆಯಾಚನೆ
ನಾನು ಮಾಡಿರೋ ತಪ್ಪಿಗೆ ಶಿಕ್ಷೆ ಅನುಭವಿಸಲು ರೆಡಿಯಾಗಿದ್ದೇನೆ. ಆದ್ರೆ ಅವು ನನ್ನ ಮನಸ್ಸಿಗೆ ನೆಮ್ಮದಿ ಕೊಡಲ್ಲ. ಕ್ಷಮೆ ಕೇಳೋಕೂ ಬಾಯಿ ಬರ್ತಾ ಇಲ್ಲ. ಯಾಕಂದ್ರೆ ಕ್ಷಮಿಸಲು ಆಗದಷ್ಟು ದೊಡ್ಡ ತಪ್ಪು ಮಾಡಿದ್ದೇನೆ. ನಿಮ್ಮ ಕಾಲಿಗೆ ಬೀಳ್ತೀನಿ, ದಯವಿಟ್ಟು ಈ ಪಾಪಿಯನ್ನು ಕ್ಷಮಿಸಿ ಬಿಡಿ ಅತ್ತಿಗೆ ಎಂದು ಮಂಡಿಯೂರಿ ನಕ್ಷತ್ರಾ ಬಳಿ ಮೌರ್ಯ ಕ್ಷಮೆ ಕೇಳಿದ್ದಾನೆ. ಅಲ್ಲದೇ ಮನೆಗೆ ಹೋಗಿ ಅಮ್ಮನನ್ನು ನೋಡಬೇಕು ಎನ್ನುತ್ತಿದ್ದಾನೆ.
ಇದನ್ನೂ ಓದಿ: Kannadathi: 15 ದಿನದಲ್ಲಿ ಕನ್ನಡತಿ ಮುಗಿಯುತ್ತಾ? ಹರ್ಷ ಕೊಟ್ಟ ಸುಳಿವಿನಿಂದ ಅಭಿಮಾನಿಗಳು ಶಾಕ್
ಮನೆಗೆ ಬಂದ ಮೌರ್ಯನನ್ನು ಗೇಟಿನಲ್ಲಿ ತಡೆದ ಶೌರ್ಯ
ಮೌರ್ಯ ಬದಲಾಗಿ ಮನೆ ಬಳಿ ಬಂದಿದ್ದಾನೆ. ಆಗ ಸೆಕ್ಯುರಿಟಿ ಗಾರ್ಡ್ ಮನೆ ಒಳಗೆ ಬಿಟ್ಟಿಲ್ಲ ಆಗ ಆಚೆ ಬಂದ ಶೌರ್ಯ, ಪೃಥ್ವಿ ಮತ್ಯಾಕೆ ಬಂದೆ? ಎಷ್ಟು ಧೈರ್ಯ ಇದ್ರೆ ಈ ಮನೆಗೆ ಮತ್ತೆ ಯಾಕೆ ಬಂದೆ ನೀನು. ಟೈ ಸರಿ ಇಲ್ಲ. ಪೊಲೀಸರಿಗೆ ಒಪ್ಪಿಸುತ್ತೇವೆ ಎನ್ನುತ್ತಾರೆ. ಅಣ್ಣ ಅಮ್ಮನ ಒಂದು ಸಲ ಮಾತನಾಡಿಸಿ ಹೋಗುತ್ತೇನೆ. ಒಳಗೆ ಬಿಡಿ. ಆಮೇಲೆ ಏನು ಬೇಕಾದ್ರೂ ಮಾಡಿ ಎಂತ ಮೌರ್ಯ ಕೇಳಿಕೊಳ್ಳುತ್ತಾನೆ. ಅದ್ಕೆ ಒಳಗೆ ಬಿಡ್ತಾರೆ.
ನಿನ್ನ ಅಮ್ಮ ಯಾರು ಎಂದ ಶಕುಂತಲಾ ದೇವಿ
ಮಾಡೋದೆಲ್ಲಾ ಮಾಡಿ, ಇಲ್ಲಿವರೆಗೂ ಮತ್ತೆ ಯಾಕೆ ಬಂದೆ ನೀನು. ಅಮ್ಮ ಏಕೆ ನಿನ್ನನ್ನು ನೋಡಬೇಕು. ನಮ್ಮ ಅಮ್ಮ ನಿನ್ನ ಹತ್ತಿರ ಏನು ಮಾತನಾಡಬೇಕು ಎಂದು ಭೂಪತಿ ಕಾಲರ್ ಪಟ್ಟಿ ಹಿಡಿದು ಕೇಳ್ತಾನೆ. ಅಷ್ಟರಲ್ಲಿ ಬಂದ ಶಕುಂತಲಾ ದೇವಿ, ಯಾರು ನೀನು? ಯಾರು ನಿನ್ನ ಅಮ್ಮ? ಅಮ್ಮ ಎಂದು ನನ್ನ ಕರೆಯಬೇಡ. ನಿನ್ನ ಅಮ್ಮ ಯಾವತ್ತೋ ಸತ್ತು ಹೋದ್ಲು ಎಂದು ಹೇಳುತ್ತಾಳೆ.
ಅಮ್ಮನ ಕಾಲು ಹಿಡಿದ ಮೌರ್ಯ
ಭೂಪತಿ ಇವನ್ನು ಪೊಲೀಸ್ ಗೆ ಹ್ಯಾಂಡ್ ಓವರ್ ಮಾಡು ಎಂದು ಶಕುಂತಲಾ ದೇವಿ ಹೇಳ್ತಾಳೆ. ಅದಕ್ಕೆ ಮೌರ್ಯ ಶಕುಂತಲಾ ಕಾಲು ಹಿಡಿದು, ನನ್ನನ್ನು ಕ್ಷಮಿಸು ಅಮ್ಮ. ನಾನೇ ಪೊಲೀಸರಿಗೆ ಶರಣನಾಗುತ್ತೇನೆ ಒಳ್ಳೆಯವನಾಗಿ ಬದುಕುತ್ತೇನೆ ಎಂದು ಬೇಡಿಕೊಂಡಿದ್ದಾನೆ. ಆದ್ರೆ ತಪ್ಪು ಮಾಡಿದವ ನನ್ನ ಮಗ ಅಲ್ಲ ಎಂದು ಶಕುಂತಲಾ ದೇವಿ ಹೇಳಿದ್ದಾಳೆ.
ಇದನ್ನೂ ಓದಿ: BBK Deepika Das: ಹಲ್ಲು ಸ್ವಲ್ಪ ಉಬ್ಬು, ಕಣ್ಣಿಗೆ ಸೋಡಾ ಗ್ಲಾಸು! 'ಮಿಣ ಮಿಣ ಮೀನಾಕ್ಷಿ' ದೀಪಿಕಾಗೆ ಗಂಡು ಹುಡುಕ್ರಪ್ಪಾ!
ಮೌರ್ಯ ಬದಲಾಗಿದ್ದಾನೆ, ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ, ನಕ್ಷತ್ರಾ ನೆಮ್ಮದಿಯಾಗಿದ್ದಾಳೆ. ಇವರೆಲ್ಲಾ ನೆಮ್ಮದಿ ಮತ್ತೆ ಹಾಳಾಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ