ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ (Marriage) ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ನಕ್ಷತ್ರಾ, ಚಂದ್ರಶೇಖರ್ ಮೇಲೆ ಸೇಡು ತೀರಿಸಿಕೊಳ್ಳಲು ಮೌರ್ಯ ಕಾಯ್ತಾ ಇದ್ದ. ಈಗ ನಕ್ಷತ್ರಾ ಒಳ್ಳೆತನ ನೋಡಿ ಕೊಲ್ಲುವ ನಿರ್ಧಾರದಿಂದ ಮೌರ್ಯ ಹಿಂದೆ ಸರಿದಿದ್ದಾನೆ. ನಕ್ಷತ್ರಾ ಮುಂದೆ ಕ್ಷಮೆ (Sorry) ಕೇಳಿದ್ದಾನೆ.
ವಿಲನ್ ನಿಂದ ಹೀರೋ ಆದ ಮೌರ್ಯ
ಮೌರ್ಯ ಈ ಮೊದಲು ಭೂಪತಿಯನ್ನು ನಕ್ಷತ್ರಾ ಬೇಕು ಅಂತ ಮದುವೆ ಆಗಿದ್ದಾಳೆ ಎಂದುಕೊಂಡು ಕೊಲ್ಲಲು ಪ್ರಯತ್ನ ಮಾಡ್ತಾ ಇದ್ದ, ಆದ್ರೆ ಈಗ ನಕ್ಷತ್ರಾಗೂ ಈ ಮದುವೆಗೂ ಯಾವುದೇ ಸಂಬಂಧ ಇಲ್ಲ ಎಂದು ಗೊತ್ತಾಗಿದೆ. ತನ್ನ ಸೇಡಿಗೆ ಏನು ಅರ್ಥ ಇಲ್ಲ. ನಾನು ಅವಳನ್ನು ಕೊಂದು ಸಾಧಿಸುವುದಾದ್ರೂ ಏನು ಎಂದು ಕೊಲ್ಲುವ ನಿರ್ಧಾರದಿಂದ ಹಿಂದೆ ಸರಿದಿದ್ದಾನೆ. ವಿಲನ್ ಆಗಿದ್ದ ಮೌರ್ಯ ಹೀರೋ ಆಗಿದ್ದಾನೆ.
ನಕ್ಷತ್ರಾಳನ್ನು ಕಾಪಾಡಿದ ಮೌರ್ಯ
ಭಾರ್ಗವಿಯೇ ನಕ್ಷತ್ರಾಳನ್ನು ಕೊಂದು ಬಿಡೋಣ. ಅದನ್ನು ಮೌರ್ಯನ ಮೇಲೆ ಹಾಕೋಣ ಎಂದು ಕೊಂಡಿರುತ್ತಾಳೆ. ಅದೇ ರೀತಿ ನಕ್ಷತ್ರಾ ಕೊಲ್ಲಲು ರೌಡಿಗಳನ್ನು ಕಳಿಸಿದ್ದಾಳೆ. ಆಗ ನಕ್ಷತ್ರಾಳನ್ನು ಮೌರ್ಯನೇ ಕಾಪಾಡಿದ್ದಾನೆ. ಅದನ್ನು ನೋಡಿ ನಕ್ಷತ್ರಾ ಖುಷಿಯಾಗಿದ್ದಾಳೆ. ಅಲ್ಲದೇ ಮೌರ್ಯ ನಕ್ಷತ್ರಾಳನ್ನು ಅತ್ತಿಗೆ ಎಂದು ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ: Bigg Boss Kannada: ಬ್ಯಾಲೆನ್ಸ್ ಆಗದ ಚೆಂಡು, ಆರ್ಯವರ್ಧನ್ ಗುರೂಜಿ-ರಾಜಣ್ಣ ಕಿತ್ತಾಟ!
ತಪ್ಪಿನ ಅರಿವಾಗಿದೆ
ನಾನು ಒಬ್ಬ ಲೂಸರ್. ಓದುವುದರಲ್ಲಿ ಮಾತ್ರ ನಾನು ಬುದ್ಧಿವಂತ, ಸಂಬಂಧಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ದಡ್ಡ. ದ್ವೇಷ, ಸೇಡು ಎಂದು ತುಂಬಿಕೊಂಡು ಬ್ಲೈಂಡ್ ಆಗಿದ್ದೆ. ಅಮ್ಮ ಎಷ್ಟು ಅತ್ತರು. ಎಷ್ಟು ಬೇಡಿಕೊಂಡು, ಅಣ್ಣಂದಿರು ನಾನು ಒಳ್ಳೆ ದಾರಿ ಹಿಡಿಯಲಿ ಎಂದು ಎಷ್ಟು ಕಷ್ಟ ಪಟ್ಟರು. ನಿಮ್ಮಂಥ ಒಳ್ಳೆವರನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾನು ಸೋತೆ ಎಂದು ನಕ್ಷತ್ರಾ ಮುಂದೆ ಮೌರ್ಯ ಹೇಳ್ತಾನೆ. ನಿಮ್ಮ ತಾಯಿಗೆ, ಅಣ್ಣಂದಿರಿಗೆ ನೋಡಿಸದೇ ಬದುಕಿ ಎಂದು ನಕ್ಷತ್ರಾ ಹೇಳ್ತಾಳೆ.
ಮಂಡಿಯೂರಿ ಕ್ಷಮೆ ಕೇಳಿದ ಮೌರ್ಯ
ನಾನು ಮಾಡಿರೋ ತಪ್ಪಿಗೆ ಶಿಕ್ಷೆ ಅನುಭವಿಸಲು ರೆಡಿಯಾಗಿದ್ದೇನೆ. ಆದ್ರೆ ಅವು ನನ್ನ ಮನಸ್ಸಿಗೆ ನೆಮ್ಮದಿ ಕೊಡಲ್ಲ. ಕ್ಷಮೆ ಕೇಳೋಕೂ ಬಾಯಿ ಬರ್ತಾ ಇಲ್ಲ. ಯಾಕಂದ್ರೆ ಕ್ಷಮಿಸಲು ಆಗದಷ್ಟು ತಪ್ಪು ಮಾಡಿದ್ದೇನೆ. ನಿಮ್ಮ ಕಾಲಿಗೆ ಬೀಳ್ತೀನಿ, ದಯವಿಟ್ಟು ಈ ಪಾಪಿಯನ್ನು ಕ್ಷಮಿಸಿ ಬಿಡಿ ಅತ್ತಿಗೆ ಎಂದು ಮಂಡಿಯೂರಿ ನಕ್ಷತ್ರಾ ಬಳಿ ಮೌರ್ಯ ಕ್ಷಮೆ ಕೇಳಿದ್ದಾನೆ.
ಅತ್ತಿಗೆ ಎಂದಿದ್ದಕ್ಕೆ ಖುಷಿ
ನನ್ನನ್ನು ಅತ್ತಿಗೆ ಎಂದ್ರಾ ಎಂದು ನಕ್ಷತ್ರಾ ಖುಷಿ ಆಗ್ತಾಳೆ. ಹೌದು ನೀವು ನನ್ನ ಅಣ್ಣನ ಹೆಂಡ್ತಿ. ಹೇಳಿ ಅತ್ತಿಗೆ ನನ್ನ ಕ್ಷಮಿಸುತ್ತೀರಿ ಅಲ್ವಾ ಎಂದು ಮೌರ್ಯ ಕೇಳುತ್ತಿದ್ದಾನೆ. ತಮ್ಮ ಮೌರ್ಯನಲ್ಲಿ ಆದ ಈ ಬದಲಾವಣೆ ನೋಡಿದ್ರೆ ಭೂಪತಿ ಮತ್ತು ಅವರ ಮನೆಯವರು ಖುಷಿಯಾಗುವುದು ಗ್ಯಾರಂಟಿ. ತಮ್ಮ ಬದಲಾಗುವುದನ್ನೇ ಕಾಯ್ತಾ ಇದ್ರು.
ಇದನ್ನೂ ಓದಿ: Kannadathi: ಇತ್ತ ಸಾನಿಯಾ ಅಧಿಕಾರ ಹಸ್ತಾಂತರ, ಅತ್ತ ವರು ಡಿವೋರ್ಸ್ ಪ್ಲ್ಯಾನ್ ಬಯಲು!
ವಿಲನ್ ಆಗಿದ್ದ ಮೌರ್ಯ ಬದಲಾದ, ಮನೆಯವರಿಗೂ ಖುಷಿ ಆಯ್ತು. ಆದ್ರೆ ಈಗ ಡೆವಿಲ್ ಸುಮ್ನೆ ಇರ್ತಾಳಾ ಎನ್ನುವುದೇ ಎಲ್ಲರ ಪ್ರಶ್ನೆ. ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ