• Home
  • »
  • News
  • »
  • entertainment
  • »
  • Lakshana: ಅಪ್ಪನನ್ನು ಕಾಪಾಡಿದ ನಕ್ಷತ್ರಾ, ಭೂಪತಿ ಪತ್ನಿ ಕೊಲ್ಲಲು ಬಂದ ತಮ್ಮ ಮೌರ್ಯ!

Lakshana: ಅಪ್ಪನನ್ನು ಕಾಪಾಡಿದ ನಕ್ಷತ್ರಾ, ಭೂಪತಿ ಪತ್ನಿ ಕೊಲ್ಲಲು ಬಂದ ತಮ್ಮ ಮೌರ್ಯ!

ನಕ್ಷತ್ರಾ ಕೊಲ್ಲಲು ಬಂದ  ಮೌರ್ಯ!

ನಕ್ಷತ್ರಾ ಕೊಲ್ಲಲು ಬಂದ ಮೌರ್ಯ!

ಜೈಲಿನಿಂದ ತಪ್ಪಿಸಿಕೊಂಡಿರೋ ಮೌರ್ಯನ ಟಾರ್ಗೆಟ್ ನಕ್ಷತ್ರಾ ಮತ್ತು ಅವರಪ್ಪ ಚಂದ್ರಶೇಖರ್. ಇಬ್ಬರನ್ನು ಹೇಗಾದ್ರೂ ಮಾಡಿ ಕೊಂಡು ಬಿಡಬೇಕು ಎಂದುಕೊಂಡಿದ್ದಾನೆ. ಅದಕ್ಕೆ ಸೀದಾ ಮನೆಗೆ ಚಾಕು ಹಿಡಿದು ಬಂದಿದ್ದಾನೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ ಧಾರಾವಾಹಿಯೂ (Lakshana serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಈ ಧಾರಾವಾಹಿಯ ನಾಯಕಿ ನಕ್ಷತ್ರಾ. ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಅದರಲ್ಲೂ ಭೂಪತಿ ತಮ್ಮ ಮೌರ್ಯನಿಗೆ ನಕ್ಷತ್ರಾ, ಚಂದ್ರಶೇಖರ್ ಕಂಡ್ರೆ ಆಗಲ್ಲ. ಅವರಿಬ್ಬರನ್ನು ಕೊಲ್ಲಲು ಹೋಗಿ ಜೈಲ ಸೇರಿದ್ದ. ಈಗ ಜೈಲಿನಿಂದ ಎಸ್ಕೇಪ್ (Escape) ಆಗಿದ್ದಾನೆ. ನಕ್ಷತ್ರಾ ಕೊಲ್ಲಲು  (Murder) ಚಾಕು ಹಿಡಿದು ಬಂದಿದ್ದಾನೆ.


    ಜೈಲಿನಿಂದ ತಪ್ಪಿಸಿಕೊಂಡ ಮೌರ್ಯನಿಗೆ ಗೊಂದಲ
    ಮೌರ್ಯನಿಗೆ ನಕ್ಷತ್ರಾ ಮತ್ತು ಚಂದ್ರಶೇಖರ್ ಮೇಲೆ ಹಲವು ಬಾರಿ ಕೊಲೆ ಪ್ರಯತ್ನ ಮಾಡಿದ್ದಾನೆ. ಮೌರ್ಯ ಹೊರಗೆ ಇದ್ರೆ, ನಕ್ಷತ್ರಾ ಪ್ರಾಣಕ್ಕೆ ಅಪಾಯ ಎಂದು ಭೂಪತಿಯೇ ತಮ್ಮನನ್ನು ಜೈಲಿಗೆ ಕಳಿಸಿರುತ್ತಾನೆ. ಆದ್ರೆ ಮೌರ್ಯ ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡಿದ್ದಾನೆ. ಇದಕ್ಕೆಲ್ಲಾ ಡೆವಿಲ್ ಭಾರ್ಗವಿ ಸಹಾಯ ಮಾಡಿದ್ದಾಳೆ. ಇದರಿಂದ ಮೌರ್ಯನಿಗೆ ಗೊಂದಲ ಉಂಟಾಗಿದೆ.


    ಭಾರ್ಗವಿ ದಾಳವಾದ್ನಾ ಮೌರ್ಯ?
    ಭಾರ್ಗವಿ ಮೌರ್ಯನನ್ನು ಜೈಲಿನಿಂದ ಬಿಡಿಸಿದ್ಲು. ತಕ್ಷಣ ಅವರಣ್ಣ ಚಂದ್ರಶೇಖರ್ ನನ್ನು ಕಿಡ್ನ್ಯಾಪ್ ಮಾಡಿಸಿದ್ಲು. ಕಿಡ್ನ್ಯಾಪ್ ಕೇಸ್ ಮೌರ್ಯ ಮೇಲೆ ಹೋಗಲಿ ಎಂದು. ಅದಕ್ಕೆ ಮೌರ್ಯ, ನಾನು ಮಾಡಬೇಕಾದ ಕೆಲಸವನ್ನು ಆಕೆ ಮಾಡುತ್ತಿದ್ದಾಳೆ. ನನ್ನನ್ನು ಏಕೆ ಜೈಲಿನಿಂದ ಬಿಡಿಸಿದ್ಲು. ಇದರ ಹಿಂದೆ ಇರುವ ಉದ್ದೇಶವೇನು ಎಂದು ಮೌರ್ಯನಿಗೆ ಆತಂಕ ಶುರುವಾಗಿದೆ.


    ಇದನ್ನೂ ಓದಿ: Ramachari: ರಾಮಾಚಾರಿ ಸಿಗಲ್ಲ ಎಂಬ ನೋವು, ಸಾಯೋಕೆ ಹೊರಟ ಚಾರು! 


    ಚಂದ್ರಶೇಖರ್ ಕಾಪಾಡಿದ ನಕ್ಷತ್ರಾ-ಭೂಪತಿ
    ಚಂದ್ರಶೇಖರ್ ನನ್ನು ಕಿಡ್ಯ್ನಾಪ್ ಮಾಡಿ, ಮರಕ್ಕೆ ಕಟ್ಟಿ ಹಾಕಿ ಪಟಾಕಿ ಹಚ್ಚಿದ್ದರು. ನಕ್ಷತ್ರಾ-ಭೂಪತಿ ಆ ಸ್ಥಳಕ್ಕೆ ಬರುತ್ತಿದ್ದಂತೆ, ಪಟಾಕಿ ಹಚ್ಚಿಬಿಟ್ಟರು. ಆಗ ಭೂಪತಿ, ನಕ್ಷತ್ರಾ ಓಡಿ ಹೋಗಿ, ಅವರನ್ನು ಕಾಪಾಡ್ತಾರೆ. ಅದಕ್ಕೆ ಚಂದ್ರಶೇಖರ್ ಬದುಕುತ್ತಾನೆ. ನಕ್ಷತ್ರಾಳಿಗೂ ಸಮಾಧಾನ ಆಗುತ್ತೆ.


    ಭೂಪತಿ


    ಮನೆಗೆ ಚಾಕು ಹಿಡಿದು ಬಂದ ಮೌರ್ಯ
    ಜೈಲಿನಿಂದ ತಪ್ಪಿಸಿಕೊಂಡಿರೋ ಮೌರ್ಯನ ಟಾರ್ಗೆಟ್ ನಕ್ಷತ್ರಾ ಮತ್ತು ಅವರಪ್ಪ ಚಂದ್ರಶೇಖರ್. ಇಬ್ಬರನ್ನು ಹೇಗಾದ್ರೂ ಮಾಡಿ ಕೊಂಡು ಬಿಡಬೇಕು ಎಂದುಕೊಂಡಿದ್ದಾನೆ. ಅದಕ್ಕೆ ಸೀದಾ ಮನೆಗೆ ಚಾಕು ಹಿಡಿದು ಬಂದಿದ್ದಾನೆ. ನಕ್ಷತ್ರಾ ರೂಮ್ ಗೆ ಬರುತ್ತಿದ್ದಂತೆ, ರೂಮ್ ಬಾಗಿಲು ಹಾಕಿ, ಚಾಕು ಹಿಡಿದು, ನೀನು ತುಂಬಾ ಒಳ್ಳೆಯವಳು. ಈ ಭೂಮಿ ಮೇಲೆ ತುಂಬಾ ದಿನ ಇರಬಾರದು ಎಂದು ಹೇಳುತ್ತಿದ್ದಾನೆ.


    ಮೌರ್ಯ


    ಪತ್ನಿ ಕಾಪಾಡ್ತಾನಾ ಭೂಪತಿ
    ಮೌರ್ಯ ಈ ಹಿಂದೆ ಕೂಡ, ನಕ್ಷತ್ರಾಗೆ ತುಂಬಾ ತೊಂದ್ರೆ ಕೊಟ್ಟಿದ್ದಾನೆ. ಸಾಯಿಸೋ ಲೆವೆಲ್ ಗೆ ಹೋಗಿದ್ದಾನೆ. ಆಗ ಭೂಪತಿ ತನ್ನ ಪ್ರಾಣ ಒತ್ತೆ ಇಟ್ಟು ಹೆಂಡತಿಯನ್ನು ಕಾಪಾಡಿದ್ದಾನೆ. ಅಲ್ಲದೇ ಈ ಎಲ್ಲಾ ತೊಂದ್ರೆ ತನ್ನ ತಮ್ಮನಿಂದಲೇ ಅಂತ ಗೊತ್ತಾಗೆ ಬೇಸರಗೊಂಡಿದ್ದಾನೆ. ಈಗ ಮತ್ತೆ ನಕ್ಷತ್ರಾ ಪ್ರಾಣ ಅಪಾಯದಲ್ಲಿ ಇದೆ. ಈಗಲೂ ಭೂಪತಿಯೇ ನಕ್ಷತ್ರಾಳನ್ನು ಕಾಪಾಡಬೇಕಿದೆ.


    ಇದನ್ನೂ ಓದಿ: Actress Vaishnavi Gowda: 16ನೇ ವಯಸ್ಸಿಗೆ ನಟನೆ ಶುರು ಮಾಡಿದ್ದ ಕಿರುತೆರೆ ನಟಿ ಈಕೆ! ಹಾಗಿದ್ರೆ ಇವ್ರು ಯಾರು ಹೇಳಿ ನೋಡೋಣ 


    ನಕ್ಷತ್ರಾಗೆ ಚಾಕು ಹಾಕ್ತಾನಾ ಮೌರ್ಯ? ಭೂಪತಿ ನಕ್ಷತ್ರಾಳನ್ನು ಕಾಪಾಡ್ತಾನಾ? ಡೆವಿಲ್ ಆಟ ಬಯಲಿಗೆ ಬರೋದು ಯಾವಾಗ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಸೀರಿಯಲ್ ನೋಡಬೇಕು.

    Published by:Savitha Savitha
    First published: