• Home
  • »
  • News
  • »
  • entertainment
  • »
  • Lakshana: ಶ್ವೇತಾ ಕೊರಳಿಗೆ ಚಾಕು ಹಿಡಿದು ನಿಂತ ಮೌರ್ಯ! ಡಿಮ್ಯಾಂಡ್ ಏನು ಗೊತ್ತಾ?

Lakshana: ಶ್ವೇತಾ ಕೊರಳಿಗೆ ಚಾಕು ಹಿಡಿದು ನಿಂತ ಮೌರ್ಯ! ಡಿಮ್ಯಾಂಡ್ ಏನು ಗೊತ್ತಾ?

ಶ್ವೇತಾ ಕೊರಳಿಗೆ ಚಾಕು ಹಿಡಿದು ನಿಂತ ಮೌರ್ಯ!

ಶ್ವೇತಾ ಕೊರಳಿಗೆ ಚಾಕು ಹಿಡಿದು ನಿಂತ ಮೌರ್ಯ!

ಶ್ವೇತಾ ಕೊರಳಿಗೆ ಚಾಕು ಹಿಡಿದಿರುವ ಮೌರ್ಯ, ತನಗೆ ಸಹಾಯ ಮಾಡುವಂತೆ ಕೇಳುತ್ತಿದ್ದಾನೆ. ಇಲ್ಲದಿದ್ರೆ ನಿನ್ನ ಮೋಸವನ್ನು ಮನೆಯವರ ಮುಂದೆ ಹೇಳುತ್ತೇನೆ ಎನ್ನುತ್ತಿದ್ದಾನೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ ಧಾರಾವಾಹಿಯೂ (Lakshana Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಈ ಧಾರಾವಾಹಿಯ ನಾಯಕಿ ನಕ್ಷತ್ರಾ. ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಅದರಲ್ಲೂ ಭೂಪತಿ ತಮ್ಮ ಮೌರ್ಯನಿಗೆ (Maurya) ನಕ್ಷತ್ರಾ, ಚಂದ್ರಶೇಖರ್ ಕಂಡ್ರೆ ಆಗಲ್ಲ. ಅವರಿಬ್ಬರನ್ನು ಕೊಲ್ಲಲು ಹೋಗಿ ಜೈಲು ಸೇರಿದ್ದ. ಈಗ ಜೈಲಿನಿಂದ ಎಸ್ಕೇಪ್ ಆಗಿದ್ದಾನೆ. ಶ್ವೇತಾ ಕೊರಳಿಗೆ ಚಾಕು (Knife) ಹಿಡಿದಿದ್ದಾನೆ.


    ಜೈಲಿನಿಂದ ತಪ್ಪಿಸಿಕೊಂಡ ಮೌರ್ಯ
    ಮೌರ್ಯನಿಗೆ ನಕ್ಷತ್ರಾ ಮತ್ತು ಚಂದ್ರಶೇಖರ್ ಮೇಲೆ ಹಲವು ಬಾರಿ ಕೊಲೆ ಪ್ರಯತ್ನ ಮಾಡಿದ್ದಾನೆ. ಮೌರ್ಯ ಹೊರಗೆ ಇದ್ರೆ, ನಕ್ಷತ್ರಾ ಪ್ರಾಣಕ್ಕೆ ಅಪಾಯ ಎಂದು ಭೂಪತಿಯೇ ತಮ್ಮನನ್ನು ಜೈಲಿಗೆ ಕಳಿಸಿರುತ್ತಾನೆ. ಆದ್ರೆ ಮೌರ್ಯ ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡಿದ್ದಾನೆ. ಇದಕ್ಕೆಲ್ಲಾ ಡೆವಿಲ್ ಭಾರ್ಗವಿ ಸಹಾಯ ಮಾಡಿದ್ದಾಳೆ. ಇದರಿಂದ ಮೌರ್ಯನಿಗೆ ಗೊಂದಲ ಉಂಟಾಗಿದೆ.


    ಶ್ವೇತಾ ಕೊರಳಿಗೆ ಚಾಕು ಹಿಡಿದ ಮೌರ್ಯ
    ಮನೆಗೆ ಬಂದಿರುವ ಭೂಪತಿ ಶ್ವೇತಾಳ ಕೊರಳಿಗೆ ಚಾಕು ಹಿಡಿದಿದ್ದಾನೆ. ಮನೆಯವರನ್ನು ಸೇರಿಸಿದ್ದಾನೆ. ಮನೆಯವರೆಲ್ಲಾ ಗಾಬರಿ ಆಗಿದ್ದಾರೆ. ಅವಳನ್ನು ಬಿಡು ಎನ್ನುತ್ತಿದ್ದಾರೆ. ಶ್ವೇತಾ ಬಗ್ಗೆ ನಿಮಗೆ ಯಾರಿಗೂ ಸತ್ಯ ಗೊತ್ತಿಲ್ಲ. ಭೂಪತಿ ಅಣ್ಣನ ಬಳಿ ಶ್ವೇತಾ ಬಗ್ಗೆ ಮಾತನಾಡಬೇಕು ಎಂದಿದ್ದಾನೆ.


    ಇದನ್ನೂ ಓದಿ: Bigg Boss Kannada: ಕಾಡಾದ ಬಿಗ್ ಬಾಸ್ ಮನೆ, ಭರ್ಜರಿಯಾಗಿ ವೈಲ್ಡ್ ಕಾರ್ಡ್ ಎಂಟ್ರಿ! 


    ಶ್ವೇತಾಗೆ ಸಹಾಯ ಮಾಡು ಎಂದ ಮೌರ್ಯ
    ಶ್ವೇತಾ ಕೊರಳಿಗೆ ಚಾಕು ಹಿಡಿದಿರುವ ಮೌರ್ಯ, ತನಗೆ ಸಹಾಯ ಮಾಡುವಂತೆ ಕೇಳುತ್ತಿದ್ದಾನೆ. ಇಲ್ಲದಿದ್ರೆ ನಿನ್ನ ಮೋಸವನ್ನು ಮನೆಯವರ ಮುಂದೆ ಹೇಳುತ್ತೇನೆ ಎನ್ನುತ್ತಿದ್ದಾನೆ. ಈ ಹಿಂದೆ ಶ್ವೇತಾ, ನಕ್ಷತ್ರಾ, ಸಿಎಸ್ ಕೊಲ್ಲಲು ಮೌರ್ಯನಿಗೆ ಸಹಾಯ ಮಾಡ್ತಾ ಇದ್ದಳು. ಈಗ ಮೌರ್ಯ ಮತ್ತೆ ಸಹಾಯ ಕೇಳುತ್ತಿದ್ದಾನೆ.


    colors kannada serial, kannada serial, maurya come with knife, lakshana serial, serial today episode, ಲಕ್ಷಣ ಧಾರಾವಾಹಿ, ಶ್ವೇತಾ ಕೊರಳಿಗೆ ಚಾಕು ಹಿಡಿದು ನಿಂತ ಮೌರ್ಯ! ಡಿಮ್ಯಾಂಡ್ ಏನು ಗೊತ್ತಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಭೂಪತಿ


    ಎಷ್ಟೇ ಹೇಳಿದ್ರೂ ಮಾತು ಕೇಳದ ಭೂಪತಿ ತಮ್ಮ
    ಮನೆಯವರೆಲ್ಲಾ ಹೇಳುತ್ತಿದ್ದಾರೆ. ಶ್ವೇತಾಳನ್ನು ಬಿಡು ಎಂದು, ಆದ್ರೂ ಮೌರ್ಯ ಅವರ ಮಾತನ್ನು ಕೇಳುತ್ತಿಲ್ಲ. ನಕ್ಷತ್ರಾ ಹೇಳಿದ್ದಕ್ಕೆ. ನಿನ್ನಿಂದನೇ ಈ ರೀತಿ ಆಗ್ತಾ ಇರೋದು. ನಿನ್ನ ಮೊದಲು ಕೊಲ್ಲಬೇಕು ಎನ್ನುತ್ತಾನೆ. ಅಮ್ಮನಿಗೆ ಬೇಸರವಾಗುತ್ತೆ ಬಿಡು ಅಂತಾರೆ. ಅದಕ್ಕೆ ಮೌರ್ಯ, ಅಮ್ಮ ನನ್ನ ಎಂದೂ ಕ್ಷಮಿಸಲ್ಲ. ಅದಕ್ಕೆ ಇವರನ್ನು ಕೊಲ್ಲುತ್ತೇನೆ ಎಂದು ಹೇಳ್ತಾ ಇದ್ದಾನೆ.


    colors kannada serial, kannada serial, maurya come with knife, lakshana serial, serial today episode, ಲಕ್ಷಣ ಧಾರಾವಾಹಿ, ಶ್ವೇತಾ ಕೊರಳಿಗೆ ಚಾಕು ಹಿಡಿದು ನಿಂತ ಮೌರ್ಯ! ಡಿಮ್ಯಾಂಡ್ ಏನು ಗೊತ್ತಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ನಕ್ಷತ್ರಾ


    ಭಾರ್ಗವಿ ದಾಳವಾದ್ನಾ ಮೌರ್ಯ?
    ಭಾರ್ಗವಿ ಮೌರ್ಯನನ್ನು ಜೈಲಿನಿಂದ ಬಿಡಿಸಿದ್ಲು. ತಕ್ಷಣ ಅವರಣ್ಣ ಚಂದ್ರಶೇಖರ್ ನನ್ನು ಕಿಡ್ನ್ಯಾಪ್ ಮಾಡಿಸಿದ್ಲು. ಕಿಡ್ನ್ಯಾಪ್ ಕೇಸ್ ಮೌರ್ಯ ಮೇಲೆ ಹೋಗಲಿ ಎಂದು. ಅದಕ್ಕೆ ಮೌರ್ಯ, ನಾನು ಮಾಡಬೇಕಾದ ಕೆಲಸವನ್ನು ಆಕೆ ಮಾಡುತ್ತಿದ್ದಾಳೆ. ನನ್ನನ್ನು ಏಕೆ ಜೈಲಿನಿಂದ ಬಿಡಿಸಿದ್ಲು. ಇದರ ಹಿಂದೆ ಇರುವ ಉದ್ದೇಶವೇನು ಎಂದು ಮೌರ್ಯನಿಗೆ ಆತಂಕ ಶುರುವಾಗಿದೆ.


    ಇದನ್ನೂ ಓದಿ: Nivedita Gowda: ಸೋಲೋ ಟ್ರಿಪ್ ಹೊರಟ ನಿವಿ, ಚಂದನ್ ಎಲ್ಲಿ ಅಂತಿದ್ದಾರೆ ಅಭಿಮಾನಿಗಳು 


    ಮೌರ್ಯನಿಗೆ ಸಹಾಯ ಮಾಡಲು ಶ್ವೇತಾ ಒಪ್ತಾಳಾ? ಭೂಪತಿ ತನ್ನ ತಮ್ಮನನ್ನು ಹೇಗೆ ಕಾಪಾಡ್ತಾನೆ? ನಕ್ಷತ್ರಾಗೆ ಡೆವಿಲ್ ಬಗ್ಗೆ ಗೊತ್ತಾಗೋದು ಯಾವಾಗ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.

    Published by:Savitha Savitha
    First published: