ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ನಕ್ಷತ್ರಾ, ಚಂದ್ರಶೇಖರ್ ಮೇಲೆ ಸೇಡು ತೀರಿಸಿಕೊಳ್ಳಲು ಮೌರ್ಯ ಕಾಯ್ತಾ ಇದ್ದ. ಈಗ ನಕ್ಷತ್ರಾ ಒಳ್ಳೆತನ ನೋಡಿ ಕೊಲ್ಲುವ (Murder) ನಿರ್ಧಾರದಿಂದ ಮೌರ್ಯ (Maurya) ಹಿಂದೆ ಸರಿದಿದ್ದಾನೆ.
ನಕ್ಷತ್ರಾ ಪ್ರಾಣ ತೆಗೆಯಲು ಬಂದಿದದ್ದ ಮೌರ್ಯ
ನಕ್ಷತ್ರಾ ನನ್ನ ಪ್ರಾಣ ಉಳಿಸುವಷ್ಟು ಒಳ್ಳೆಯವಳ. ನಕ್ಷತ್ರ ನನ್ನ ಪ್ರಾಣ ಉಳಿಸಿದರೆ ಏನಂತೆ ನಾನು ಅವಳ ಜೀವ ತೆಗಿತೀನಿ. ನನ್ನ ಸೇಡನ್ನು ತೀರಿಸಿಕೊಳ್ಳುತ್ತೇನೆ ಎಂದು ನಕ್ಷತ್ರ ಮನೆಗೆ ಹೋಗುತ್ತಾನೆ. ಅವರ ಮನೆಯ ಸೆಕ್ಯುರಿಟಿ ಗಾರ್ಡ್ಗೆ ಹೊಡೆದು ಪ್ರಜ್ಞೆ ತಪ್ಪಿಸಿ ಮನೆ ಗೋಡೆ ಹಾರಿ ಬಾಲ್ಕನಿಗೆ ಹೋಗುತ್ತಾನೆ. ಅಲ್ಲಿ ನಕ್ಷತ್ರಾ ಮಾತು ಕೇಳಿ ಶಾಕ್ ಆಗಿದ್ದಾನೆ.
ಮೌರ್ಯನ ಪರ ಮಾತನಾಡಿದ ನಕ್ಷತ್ರ
ಚಂದ್ರಶೇಖರ್ ಮಂಬೈ ಹಿಟ್ ಆ್ಯಂ ಡ್ ರನ್ ಕೇಸನ್ನು ಮೌರ್ಯನ ತಲೆಗೆ ಕಟ್ಟಿ ಅವನನ್ನು ಪರ್ಮನೆಂಟ್ ಆಗಿ ಜೈಲಲ್ಲಿ ಕೊಳೆಯುವಂತೆ ಮಾಡಬೇಕು. ಆಗಲಾದರೂ ಅವನಿಂದ ನಿನಗೆ ತೊಂದರೆಯಾಗುವುದು ತಪ್ಪುತ್ತೆ ಎಂದು ಹೇಳುತ್ತಾರೆ. ಅದಕ್ಕೆ ನಕ್ಷತ್ರಾ ಬೇಡ ಅಪ್ಪ, ಅವರಿಗೆ ಕಾನೂನಿನ ಮೂಲಕ ಶಿಕ್ಷೆ ಆಗಲಿ. ನೀವು ಬೇರೆ ಕೇಸ್ ಹಾಕಬೇಡಿ ಎನ್ನುತ್ತಾಳೆ.
ಇದನ್ನೂ ಓದಿ: Kannadathi: ಸಂಭ್ರಮದಲ್ಲಿದ್ದ ಹರ್ಷನ ಕೈಯಲ್ಲಿ ಡಿವೋರ್ಸ್ ಪೇಪರ್, ಮುಂದಿದೆಯಾ ಬಿಗ್ ಟ್ವಿಸ್ಟ್?
ಆರತಿ ಹೇಳಿದ್ದೇನು?
ಮಗಳು ಇಷ್ಟಪಟ್ಟದ್ದೆಲ್ಲ ಸಿಗಬೇಕೆಂಬ ಕಾರಣಕ್ಕೆ ಮೌರ್ಯನನ್ನು ದಾಳವಾಗಿ ಬಳಸಿಕೊಂಡು ಭೂಪತಿಗೂ ನಕ್ಷತ್ರಳಿಗೂ ಮದುವೆ ಮಾಡಿದ್ರಿ ಅಲ್ವ. ನೀವು ಅವತ್ತು ಮಾಡಿರುವ ತಪ್ಪಿಗೆ ಇವತ್ತು ನಮ್ಮ ಮಗಳು ನೋವು ಅನುಭವಿಸುತ್ತಿದ್ದಾಳೆ ಎಂದು ಆರತಿ ಚಂದ್ರಶೇಖರ್ಗೆ ಹೇಳಿದ್ದಾಳೆ. ನಕ್ಷತ್ರಾ ಅದಕ್ಕೆ ಕಣ್ಣೀರು ಹಾಕಿದ್ದಾಳೆ.
ಬದಲಾದ ಮೌರ್ಯ, ಕೊಲ್ಲುವ ನಿರ್ಧಾರದಿಂದ ಹಿಂದಕ್ಕೆ
ಆರತಿ ಮಾತು ಕೇಳಸಿಕೊಂಡ ಮೌರ್ಯ ಬದಲಾಗಿದ್ದಾನೆ. ನಕ್ಷತ್ರಾಗೂ ಈ ಮದುವೆಗೂ ಯಾವುದೇ ಸಂಬಂಧ ಇಲ್ವಾ? ಹಾಗಾದ್ರೆ ನನ್ನ ಸೇಡಿಗೆ ಏನು ಅರ್ಥ. ನಾನು ಅವಳನ್ನು ಕೊಂದು ಸಾಧಿಸುವುದಾದ್ರೂ ಏನು? ಎಂದು ಕೊಲ್ಲುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ತಾನು ತಂದ ಚಾಕುವನ್ನು ಅಲ್ಲೇ ಬಿಟ್ಟು, ಸೆಕ್ಯುರಿಟಿ ಗಾರ್ಡ್ ಕ್ಷಮೆ ಕೇಳಿ ಹೋಗಿದ್ದಾನೆ.
ನಕ್ಷತ್ರಾಳನ್ನು ಕಾಪಾಡಿದ ಮೌರ್ಯ
ಭಾರ್ಗವಿಯೇ ನಕ್ಷತ್ರಾಳನ್ನು ಕೊಂದು ಬಿಡೋಣ. ಅದನ್ನು ಮೌರ್ಯನ ಮೇಲೆ ಹಾಕೋಣ ಎಂದು ಕೊಂಡಿರುತ್ತಾಳೆ. ಅದೇ ರೀತಿ ನಕ್ಷತ್ರಾ ಕೊಲ್ಲಲು ರೌಡಿಗಳನ್ನು ಕಳಿಸಿದ್ದಾಳೆ. ಆಗ ನಕ್ಷತ್ರಾಳನ್ನು ಮೌರ್ಯನೇ ಕಾಪಾಡಿದ್ದಾನೆ. ಅದನ್ನು ನೋಡಿ ನಕ್ಷತ್ರಾ ಖುಷಿಯಾಗಿದ್ದಾಳೆ. ಅಲ್ಲದೇ ಮೌರ್ಯ ನಕ್ಷತ್ರಾಳನ್ನು ಅತ್ತಿಗೆ ಎಂದು ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ: Sanjana Galrani: ನಿಕ್ಕಿ ಗಲ್ರಾನಿ ಮದುವೆಗೆ ಸಂಜನಾ ಹೋಗಿರಲಿಲ್ವಂತೆ, ತಂಗಿ ಮೇಲೆ ಮುನಿಸಿತ್ತಾ?
ಮೌರ್ಯ ನಿಜವಾಗ್ಲೂ ಬದಲಾದ್ನಾ? ಡೆವಿಲ್ ಮೌರ್ಯನಿಗೆ ತೊಂದ್ರೆ ಮಾಡ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ