ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಚಂದ್ರಶೇಖರ್ ಎಷ್ಟೇ ಕ್ಷಮೆ (Sorry) ಕೇಳಿದ್ರೂ ಶಕುಂತಲಾ ದೇವಿ ಕ್ಷಮಿಸುತ್ತಿಲ್ಲ. ಇತ್ತ ಮೌರ್ಯ ಅಮ್ಮ (Mother) ಮೆಚ್ಚುವ ರೀತಿ ಬದಲಾಗುತ್ತಾನಂತೆ.
ಮಗ ಮೌರ್ಯನನ್ನು ಕ್ಷಮಿಸದ ಶಕುಂತಲಾ ದೇವಿ
ಮೌರ್ಯ ತನ್ನ ಅಮ್ಮನ ಕಾಲು ಹಿಡಿದು ಕ್ಷಮೆ ಕೇಳಿದ್ದಾನೆ. ಆದ್ರೆ ಶಕುಂತಲಾ ದೇವಿ ಕ್ಷಮಿಸಿಲ್ಲ. ನೀನು ಮಾಡಿದ್ದು ತಪ್ಪೇ. ನನ್ನ ಮಗನಾಗಿ ಈ ರೀತಿ ಮಾಡಿರೋದ್ರಿಂದ ಯಾವುತ್ತೂ ಕ್ಷಮೆ ಇಲ್ಲ. ನನ್ನ ಕುಟುಂಬಕ್ಕೆ ನೀನು ಮಸಿ ಬಳಿದಿದ್ದೀಯಾ ಎಂದು ಹೇಳಿ ಮೌರ್ಯನಿಗೆ ಬೈದಿದ್ದಾಳೆ.
ಅಮ್ಮ ಮೆಚ್ಚುವ ಮಗನಾಗ್ತಾನಂತೆ
ಯಾವಾಗ ತನ್ನ ಅಮ್ಮ ಕ್ಷಮಿಸಲಿಲ್ವೋ, ಆಗಲೇ ಮೌರ್ಯ ಪಣ ತೊಟ್ಟಿದ್ದಾನೆ. ಅಮ್ಮ ಮೆಚ್ಚುವ ಮಗ ಆಗ್ತೀನಿ ಎಂದು ಹೇಳಿದ್ದಾನೆ. ಅತ್ತಿಗೆ ನಕ್ಷತ್ರಾ ಬಳಿ ಈ ವಿಷಯ ಹೇಳಿಕೊಂಡಿದ್ದಾನೆ. ನೋಡಿ ಅತ್ತಿಗೆ, ನಮ್ಮ ಅಮ್ಮ ಮೆಚ್ಚುವ ರೀತಿ ಬದುಕಿ ತೋರಿಸುತ್ತೇನೆ. ಅವರೇ ಬಂದು ನನ್ನನ್ನು ಮಗ ಎಂದು ಒಪ್ಪಿಕೊಳ್ಳಬೇಕು ಆ ರೀತಿ ಮಾಡ್ತೀನಿ ಎಂದಿದ್ದಾನೆ.
ಇದನ್ನೂ ಓದಿ: Bigg Boss Kannada: ಮತ್ತೆ ಹೋಟೆಲ್ ಆರಂಭಿಸಿದ ಆರ್ಯವರ್ಧನ್ ಗುರೂಜಿ, ತಮ್ಮ ಕೆಲಸಗಾರರ ಬಗ್ಗೆ ಹೇಳಿದ್ದೇನು?
ಮೌರ್ಯನ ಮೇಲಿನ ಕೇಸ್ ವಾಪಸ್
ಚಂದ್ರಶೇಖರ್ ಮೌರ್ಯನ ಮೇಲೆ ಹಾಕಿದ್ದ ಕೇಸ್ಗಳನ್ನು ವಾಪಸ್ ಪಡೆದಿದ್ದಾರೆ. ಇದರಿಂದ ಮೌರ್ಯ ಜೈಲಿಗೆ ಹೋಗುವುದು ತಪ್ಪಿದೆ. ಮೌರ್ಯ ಈಗ ಆರಾಮಾಗಿ ಓಡಾಡಿಕೊಂಡು ಇರಬಹುದು. ಆದ್ರೆ ಅಮ್ಮನ ಕ್ಷಮೆ ಸಿಕ್ಕಿಲ್ಲ ಎಂದು ಬೇಸರ ಮಾಡಿಕೊಂಡಿದ್ದಾನೆ.
ಸಿಎಸ್ ಮೇಲೆ ಶಕುಂತಲಾ ದೇವಿ ಕೋಪ
ನೀವು ಮೌರ್ಯನಿಗೆ ಬೇಲ್ ಕೊಡಿಸಿದ ಮಾತ್ರಕ್ಕೆ ಯಾವುದು ಬದಲಾಗಲ್ಲ ಚಂದ್ರಶೇಖರ್ ಎಂದು ಶಕುಂತಲಾ ಹೇಳಿದ್ದಾರೆ. ಅದಕ್ಕೆ ಸಿಎಸ್, ಯಾಕೆ ಶಕುಂತಲಾ ದೇವಿ ಅವರೇ, ಇನ್ನೂ ನನ್ನ ಮೇಲೆ ಸಿಟ್ಟಾ? ಮಗನನ್ನು ಬಿಡಿಸಿದ್ದು ಖುಷಿ ಇಲ್ವಾ ಎಂದು ಕೇಳ್ತಾನೆ.
ಖುಷಿ ಸತ್ತು ಹೋಗಿ ಯುಗಗಳೇ ಆಗಿ ಹೋಗಿದೆ. ನೀವು ಯಾವತ್ತು ಮೌರ್ಯನನ್ನು ಮುಂದಿಟ್ಟುಕೊಂಡು, ಭೂಪತಿಗೆ ನಿಮ್ಮ ಮಗಳನ್ನು ಮದುವೆ ಮಾಡಿಸಿದ್ರೋ, ಅವತ್ತೇ ಎಲ್ಲಾ ಖುಷಿ ಸತ್ತು ಹೋಯ್ತು ಎಂದು ಹೇಳಿದ್ದಾರೆ.
ಶಕುಂತಲಾ ದೇವಿ ಮನಸ್ಸು ಕರಗಿಲ್ಲ
ಮೌರ್ಯನಿಗೆ ಇನ್ನೂ ಚಿಕ್ಕ ವಯಸ್ಸು. ಬಾಳಿ ಬದುಕುವ ಹುಡುಗ. ಅವನನ್ನು ಜೈಲಿಗೆ ಕಳಿಸಿ, ಅವನ ಭವಿಷ್ಯ ಹಾಳು ಮಾಡಬಾರದು ಅನ್ನಿಸ್ತು. ಅದಕ್ಕೆ ಮೌರ್ಯನನ್ನು ಬಿಡಿಸಿದೆ ಎಂದು ಎಂದು ಸಿಎಸ್ ಹೇಳ್ತಾರೆ. ಹಳೆದನ್ನು ಮರೆತು, 2 ಕುಟುಂಬಗಳು ಸಂತೋಷವಾಗಿ ಬದುಕೋಣ ಎಂದು ಸಿಎಸ್ ಪರಿ ಪರಿಯಾಗಿ ಕೇಳಿಕೊಂಡ್ರೂ ಶಕುಂತಲಾ ದೇವಿ ಮನಸ್ಸು ಕರಗಿಲ್ಲ.
ಇದನ್ನೂ ಓದಿ: Ramachari: ರಾಮಾಚಾರಿ ಪ್ರೀತಿ ಪಡೆಯಲು ಬದಲಾದ ಚಾರು, ಟೆಡಿಷನಲ್ ಲುಕ್ ಓಕೆನಾ?
ಮೌರ್ಯ ಅಮ್ಮ ಮೆಚ್ಚುವ ಮಗನಾಗ್ತಾನಾ? ಸಿಎಸ್ಗೆ ಶಕುಂತಲಾ ದೇವಿ ಬಳಿ ಕ್ಷಮೆ ಸಿಗಲ್ವಾ? ಮುಂದೇನಾಗುತ್ತೆ ಅಂತ ನೊಡೋಕೆ ಲಕ್ಷಣ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ