ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ. ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ನಕ್ಷತ್ರಾ, ಚಂದ್ರಶೇಖರ್ ಮೇಲೆ ಸೇಡು ತೀರಿಸಿಕೊಳ್ಳಲು ಬಂದ ಮೌರ್ಯ ಚಂದ್ರಶೇಖರ್ ಬಳಿ ಬಂಧಿಯಾಗಿದ್ದಾನೆ. ಮೌರ್ಯನ ಸಹಾಯದಿಂದ ಡೆವಿಲ್ ಸತ್ಯ ಆಚೆ ಬರಲಿದೆ. ತನ್ನ ತಂಗಿಯೇ (Sister) ಡೆವಿಲ್ ಎಂಬ ಸತ್ಯ (Truth) ಸಿಎಸ್ ಗೆ ಗೊತ್ತಾಗಿದೆ.
ಮೌರ್ಯನ ಕೊಲ್ಲುವ ನಾಟಕ
ಚಂದ್ರಶೇಖರ್ ಮತ್ತು ನಕ್ಷತ್ರಾಗೆ ಮೌರ್ಯ ತುಂಬಾ ಕಾಟ ಕೊಟ್ಟಿದ್ದಾನೆ. ಎಷ್ಟೋ ಬಾರಿ ಕೊಲ್ಲಲು ಹೋಗಿದ್ದಾನೆ. ಸಿಎಸ್ ಮೊದಲೇ ಪ್ರಭಾವಿ ವ್ಯಕ್ತಿ. ಮೊದಲು ಇವನ್ನೆಲ್ಲಾ ಸಹಿಸಿಕೊಂಡಿದ್ದ. ಆದ್ರೆ ಈಗ ಆಗುತ್ತಿಲ್ಲ. ಇವನನ್ನು ಬಿಟ್ರೆ, ನನ್ನ ಮಗಳಿಗೆ ತೊಂದ್ರೆ ಎಂದು ಮೌರ್ಯನನ್ನು ಕೊಂದು ಬಿಟ್ಟಿದ್ದಾನೆ. ಈ ರೀತಿ ಎಲ್ಲಾ ಕಡೆ ಸುದ್ದಿ ಆಗಿದೆ. ಆದ್ರೆ ಅವನು ಸತ್ತಿಲ್ಲ. ಕೊಂದಿರುವುದಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.
ನಕ್ಷತ್ರಾ ಮತ್ತು ಚಂದ್ರಶೇಖರ್ ಪ್ಲ್ಯಾನ್ ಸಕ್ಸಸ್
ಚಂದ್ರಶೇಖರ್ ಮತ್ತು ನಕ್ಷತ್ರಾ ಸೇರಿ ಈ ಪ್ಲ್ಯಾನ್ ಮಾಡಿದ್ದಾರೆ. ಮೌರ್ಯನನ್ನು ಕೊಲ್ಲುವ ನಾಟಕ ಮಾಡಿದ್ದಾರೆ. ಆಗ ಡೆವಿಲ್ ಯಾರು ಅಂತ ಗೊತ್ತಾಗುತ್ತೆ ಎಂಬುದು ಅವರ ಐಡಿಯಾ. ಅದೇ ರೀತಿ ಮೌರ್ಯನನ್ನು ಬೇರೆ ಕಡೆ ಇಟ್ಟು, ಅವನು ಸತ್ತಿದ್ದಾನೆ ಎಂದು ಎಲ್ಲಾ ಕಡೆ ಹಬ್ಬಿಸಿದ್ದಾರೆ. ನಕ್ಷತ್ರಾ, ಚಂದ್ರಶೇಖರ್ ಅಂದುಕೊಂಡಂತೆ ಆಗಿದೆ.
ಇದನ್ನೂ ಓದಿ: BBK Arun Sagar: ಗಲೀಜಿನ ಮೇಲೆ ಕಾಲಿಡಬಾರದು, ಗುರೂಜಿ ಮೇಲೆ ಅರುಣ್ ಸಾಗರ್ ಗರಂ!
ಪತ್ರಕರ್ತನ ಮೂಲಕ ಸಿಕ್ತು ಸುಳಿವು
ಯಾವುದೇ ಪತ್ರಿಕೆಯಲ್ಲಿ ಮೌರ್ಯನ ಕೊಲೆ ಬಗ್ಗೆ ಬರೆದಿರಲಿಲ್ಲ. ಆದ್ರೆ ಒಂದೇ ಒಂದು ಪತ್ರಿಕೆಯಲ್ಲಿ ಮಾತ್ರ ಸುದ್ದಿ ಬಂದಿತ್ತು. ಅದರ ಮೂಲಕ ನಕ್ಷತ್ರಾ ಡೆವಿಲ್ ಜಾಡು ಹಿಡಿದಿದ್ದಾಳೆ. ಪತ್ರಕರ್ತನನ್ನು ಹಿಡಿದ್ರೆ ಡೆವಿಲ್ ಯಾರು ಎಂದು ತಿಳಿಯುತ್ತೆ. ಅದಕ್ಕೆ ನಕ್ಷತ್ರಾ, ಭೂಪತಿ ಪೊಲೀಸರಿಗೆ ಈ ವಿಷ್ಯ ತಿಳಿಸಿ ಪತ್ರಕರ್ತನ ಬಳಿ ಬಂದಿದ್ದಾರೆ.
ಡೆವಿಲ್ ಗೆ ಕಾಲ್ ಮಾಡಿದ ಪತ್ರಕರ್ತ
ನಕ್ಷತ್ರಾ, ಭೂಪತಿ ಪತ್ರಕರ್ತನಿಗೆ ಬೆದರಿಸಿ, ಡೆವಿಲ್ ಳನ್ನು ಕರೆಸುವಂತೆ ಹೇಳಿದ್ದಾರೆ. ಆತ ಕಾಲ್ ಮಾಡಿ ಈ ಸುದ್ದಿಯನ್ನು ಟಿವಿಯಲ್ಲಿ ಹಾಕುಲು ಹಣ ಬೇಕು ಎಂದು ಕೇಳುತ್ತಾನೆ. ಅದಕ್ಕೆ ಭಾರ್ಗವಿ ತಾನೇ ಬಂದು ಹಣ ಕೊಡುವುದಾಗಿ ಹೇಳ್ತಾಳೆ. ಅಲ್ಲಿಗೆ ಸಿಎಸ್, ನಕ್ಷತ್ರಾ ಪ್ಲ್ಯಾನ್ ವರ್ಕ್ ಆಗುತ್ತೆ.
ಭಾರ್ಗವಿಯೇ ಡೆವಿಲ್ ಅನ್ನೋ ಸತ್ಯ ಬಯಲು
ಎಲ್ಲ ಸಮಯದಲ್ಲೂ ಎಚ್ಚರಿಕೆಯಿಂದ ಇರ್ತಿದ್ದ ಭಾರ್ಗವಿ, ಈ ಬಾರಿ ಯಾಮಾರಿದ್ದಾಳೆ. ಗೊತ್ತಿಲ್ಲದೇ ಪತ್ರಕರ್ತನನ್ನು ಭೇಟಿಯಾಗಲು ಭಾರ್ಗವಿ ಬಂದಿದ್ದಾಳೆ. ಚಂದ್ರಶೇಖರ್ ತನ್ನ ತಂಗಿಯನ್ನು ಆ ಜಾಗದಲ್ಲಿ ನೋಡಿ ಶಾಕ್ ಆಗಿದ್ದಾನೆ. ಭಾರ್ಗವಿಯೇ ಡೆವಿಲ್. ನಮ್ಮ ಮನೆಯಲ್ಲೇ ಇದ್ದುಕೊಂಡು, ನಮ್ಮ ವಿರುದ್ಧವೇ ಕತ್ತಿ ಮಸೆಯುತ್ತಿದ್ದಾಳೆ ಎಂದುಕೊಂಡಿದ್ದಾರೆ. ನಕ್ಷತ್ರಾ ಸಹ ತನ್ನ ಅತ್ತೆಯನ್ನು ನೋಡಿ ಗಾಬರಿಯಾಗಿದ್ದಾಳೆ.
ಇದನ್ನೂ ಓದಿ: Hero Anirudh: 2022 ನಟ ಅನಿರುದ್ಧ್ ಅವರಿಗೆ ಅನ್ ಲಕ್ ಇಯರ್ ಆಯ್ತಾ?
ಸಿಎಸ್ ತನ್ನ ತಂಗಿಗೆ ಯಾವ ಶಿಕ್ಷೆ ನೀಡ್ತಾನೆ. ಭಾರ್ಗವಿ ಆಟ ಇಲ್ಲಿಗೆ ಮುಗಿಯಿತಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ