ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿಯೂ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಈ ಧಾರಾವಾಹಿಯ ನಾಯಕಿ ನಕ್ಷತ್ರಾ. ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಅದರಲ್ಲೂ ಭೂಪತಿ ತಮ್ಮ ಮೌರ್ಯನಿಗೆ ನಕ್ಷತ್ರಾ, ಚಂದ್ರಶೇಖರ್ ಕಂಡ್ರೆ ಆಗಲ್ಲ. ಜೈಲಿನಿಂದ ತಪ್ಪಿಸಿಕೊಂಡು ಬಂದಿರುವ ಮೌರ್ಯ ನಕ್ಷತ್ರಾ ಕೊಲ್ಲಲು (Murder) ಪ್ಲ್ಯಾನ್ ಮಾಡಿದ್ದಾನೆ. ಆದ್ರೆ ಚಂದ್ರಶೇಖರ್ ಮೌರ್ಯನನ್ನು ಕೊಂದಿದ್ದಾನಾ?
ಮಗಳನ್ನೇ ಕಿಡ್ನ್ಯಾಪ್ ಮಾಡಿದ ಚಂದ್ರಶೇಖರ್
ಮೌರ್ಯ ಬಳಿ ಶ್ವೇತಾ ನಕ್ಷತ್ರಾಳನ್ನು ಕರೆದುಕೊಂಡು ಬರುತ್ತಾಳೆ. ಮೌರ್ಯ ನಕ್ಷತ್ರಾಳನ್ನು ನೋಡುವ ಮೊದಲೇ, ಆಕೆಯ ಕಿಡ್ನ್ಯಾಪ್ ಆಗಿದೆ. ನಕ್ಷತ್ರಾ ಶಾಕ್ ಆಗಿದ್ದಾಳೆ. ಅಲ್ಲದೇ ಮೌರ್ಯನೂ ಶಾಕ್ ಆಗಿದ್ದಾನೆ. ನಕ್ಷತ್ರಾಳನ್ನು ಕಿಡ್ನ್ಯಾಪ್ ಮಾಡಿದ್ದು ಚಂದ್ರಶೇಖರ್. ಯಾಕ್ ಅಪ್ಪ ನನ್ನನ್ನು ಕಿಡ್ನ್ಯಾಪ್ ಮಾಡಿದೆ ಎಂದು ಕೇಳಿದ್ದಾಳೆ.
ಮೌರ್ಯನನ್ನು ಟ್ರ್ಯಾಪ್ ಮಾಡಿದ ಸಿಎಸ್
ಮೌರ್ಯ ನಮ್ಮನ್ನು ಆಟ ಆಡಿಸುವುದ ಅಲ್ಲ. ನಾವೇ ಮೌರ್ಯನನ್ನು ಆಡವಾಡಿಸಬೇಕು ಎಂದು ಚಂದ್ರಶೇಖರ್ ನಕ್ಷತ್ರಾಳನ್ನು ಕಿಡ್ನ್ಯಾಪ್ ಮಾಡಿಸಿರುತ್ತಾನೆ. ಸಿಎಸ್ ಪ್ಲ್ಯಾನ್ ವರ್ಕ್ ಆಗುತ್ತೆ. ಮೌರ್ಯ ಚಂದ್ರಶೇಖರ್ ಕಾರುನ್ನು ಹಿಂಬಾಲಿಸಿಕೊಂಡು ಬರುತ್ತಾನೆ. ಆಗ ಮೌರ್ಯನನ್ನು ಎಲ್ಲ ಕಡೆಯಿಂದ ಲಾಕ್ ಮಾಡುತ್ತಾರೆ.
ಇದನ್ನೂ ಓದಿ: Kannadathi: 5 ವರ್ಷದವರೆಗೆ ಭುವಿ ಆಸ್ತಿ ವರ್ಗಾಯಿಸುವಂತಿಲ್ಲ! ರತ್ನಮಾಲಾ ಪ್ರೀತಿಯ ಹುಡುಗಿಗೆ ಇದೆಂಥಾ ಫಜೀತಿ?
ಸಿಎಸ್ ಬಲೆಯಲ್ಲಿ ಮೌರ್ಯ
ಎಲ್ಲವೂ ಚಂದ್ರಶೇಖರ್ ಅಂದುಕೊಂಡಂತೆ ಆಗುತ್ತೆ. ಮೌರ್ಯನನ್ನು ಹಿಡಿದ ಚಂದ್ರಶೇಖರ್, ಆತನಿಗೆ ವಾರ್ನಿಂಗ್ ಕೊಟ್ಟಿದ್ದಾನೆ. ನನ್ನ ಮಗಳ ಸುದ್ದಿಗೆ ಬರ್ತಿಯಾ? ನಾನು ನಿನ್ನನ್ನು ಕ್ಷಮಿಸಿದಷ್ಟು ಮತ್ಯಾರನ್ನು ಕ್ಷಮಿಸಿಲ್ಲ. ನಿನ್ನ ವಯಸ್ಸಿನಲ್ಲಿ ನಾನು ಇದಕ್ಕಿಂತ ಹೆಚ್ಚು ಆಟ ಆಡಿದ್ದೇನೆ. ನಿನ್ನನ್ನು ಪೊಲೀಸರಿಗೆ ಒಪ್ಪಿಸಲ್ಲ ಎಂದು ಹೇಳ್ತಾನೆ.
ಮೌರ್ಯನ ಕಥೆ ಮುಗಿಯುತ್ತಾ?
ಚಂದ್ರಶೇಖರ್ ಮತ್ತು ನಕ್ಷತ್ರಾಗೆ ಮೌರ್ಯ ತುಂಬಾ ಕಾಟ ಕೊಟ್ಟಿದ್ದಾನೆ. ಎಷ್ಟೋ ಬಾರಿ ಕೊಲ್ಲಲ್ಲು ಹೋಗಿದ್ದಾನೆ. ಸಿಎಸ್ ಮೊದಲೇ ಪ್ರಭಾವಿ ವ್ಯಕ್ತಿ. ಮೊದಲು ಇವನ್ನೆಲ್ಲಾ ಸಹಿಸಿಕೊಂಡಿದ್ದ. ಆದ್ರೆ ಈಗ ಆಗುತ್ತಿಲ್ಲ. ಅದಕ್ಕೆ ಮೌರ್ಯ ಕಥೆ ಮುಗಿಸಿ ಬಿಡೋಣ ಎಂದು ಪ್ಲ್ಯಾನ್ ಮಾಡಿದ್ದಾನೆ. ಗನ್ ಹಿಡಿದು ನಿಂತಿದ್ದಾನೆ. ಮುಂದಿನ ಸಂಚಿಕೆಯಲ್ಲಿ, ಶೂಟ್ ಮಾಡ್ತಾನೆ. ಶೂಟ್ ಮಾಡಿದ ಸೌಂಡ್ ಸಹ ಬಂದಿದೆ.
ನಕ್ಷತ್ರಾಳೇ ಅಪ್ಪನ ವಿರುದ್ಧ ಸಾಕ್ಷಿ ಹೇಳ್ತಾಳಾ?
ಚಂದ್ರಶೇಖರ್ ಮೌರ್ಯನನ್ನು ಶೂಟ್ ಮಾಡುವ ಸಮಯಕ್ಕೆ ಅಲ್ಲಿಗೆ ನಕ್ಷತ್ರಾ ಬರುತ್ತಾಳೆ. ಅಪ್ಪ ಮೌರ್ಯನನ್ನು ಕೊಲ್ಲುವುದನ್ನು ನೋಡ್ತಾಳೆ. ಹಾಗಾದ್ರೆ ಚಂದ್ರಶೇಖರ್ ಈಗ ಕೊಲೆಗಾರನಾ? ಅಪ್ಪನ ವಿರುದ್ಧ ಕೋರ್ಟ್ನಲ್ಲಿ ಮಗಳೇ ಸಾಕ್ಷಿ ಹೇಳ್ತಾಳಾ? ಮಗಳಿಗಾಗಿ ಮೌರ್ಯನನ್ನು ಮುಗಿಸಿ ಬಿಟ್ನಾ ಚಂದ್ರಶೇಖರ್. ಹಲವು ಅನುಮಾನಗಳು ಕಾಡ್ತಾ ಇವೆ.
ಇದನ್ನೂ ಓದಿ: Niveditha Gowda: ನನ್ನ ದುಡ್ಡಲ್ಲಿ ಎಂಜಾಯ್ ಮಾಡ್ತಾ ಇದ್ದೇನೆ, ಕೆಟ್ಟದಾಗಿ ಕಾಮೆಂಟ್ ಹಾಕಿದವರಿಗೆ ನಿವಿ ಟಾಂಗ್!
ಮೌರ್ಯ ಸತ್ತು ಹೋದ್ನಾ? ಚಂದ್ರಶೇಖರ್ ಜೈಲು ಸೇರ್ತಾನಾ? ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್. ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ