• Home
  • »
  • News
  • »
  • entertainment
  • »
  • Lakshana: ಕತ್ತಲೆ ಕೋಣೆಯಲ್ಲಿದೆ ದುರದೃಷ್ಟದ ಗುಟ್ಟು!

Lakshana: ಕತ್ತಲೆ ಕೋಣೆಯಲ್ಲಿದೆ ದುರದೃಷ್ಟದ ಗುಟ್ಟು!

ಕತ್ತಲೆ ಕೋಣೆ ಹುಡುಕುತ್ತಿರುವ ಚಂದ್ರಶೇಖರ್

ಕತ್ತಲೆ ಕೋಣೆ ಹುಡುಕುತ್ತಿರುವ ಚಂದ್ರಶೇಖರ್

ಸಿಎಸ್ ಯಾವುದೋ ಪೆಟ್ಟಿಗೆ ನೋಡಿ ಗಾಬರಿಗೊಂಡಿದ್ದಾರೆ. ಅಲ್ಲದೇ ಭಾರ್ಗವಿ ಸಹ ನೀವು ಹಿಂದೆ ಮಾಡಿದ್ದು, ಈಗ ಕಾಡ್ತಿದೆ ಎಂದು ಹೇಳ್ತಾ ಇದ್ದಾಳೆ. ಹಾಗಾದ್ರೆ ಚಂದ್ರಶೇಖರ್ 25 ವರ್ಷದ ಹಿಂದೆ ಏನ್ ಮಾಡಿದ್ರು ಎಂಬ ಅನುಮಾನಗಳು ಕಾಡ್ತಿವೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿಯೂ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಈ ಧಾರಾವಾಹಿಯ ನಾಯಕಿ ನಕ್ಷತ್ರಾ. ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ (Nakshatra) ಕಂಡ್ರೆ ಆಗಲ್ಲ. ಇನ್ನು ಧಾರಾವಾಹಿಗೆ ವಿಲನ್ ಎಂಟ್ರಿ ಆಗಿದೆ. ಆ ವಿಲನ್ ಬೇರೆ ಯಾರೂ ಅಲ್ಲ ಚಂದ್ರಶೇಖರ್ ತಂಗಿ ಭಾರ್ಗವಿ. ಚಂದ್ರಶೇಖರ್ ತನ್ನ ಮೇಲಿನ್ ಅಟ್ಯಾಕ್ (Attack) ಗೆ  ಕಾರಣ ಹುಡುಕುತ್ತಾ ಇದ್ದಾನೆ.


    ಕತ್ತಲೆ ಕೋಣೆ ಹುಡುಕುತ್ತಿರುವ ಚಂದ್ರಶೇಖರ್
    ಚಂದ್ರಶೇಖರ್ ಮೇಲೆ ಕೆಲ ದಿನಗಳಿಂದ ಯಾರೂ ದಾಳಿಯನ್ನು ಮಾಡುತ್ತಿದ್ದಾರೆ. ಅಲ್ಲದೇ ಫೋನ್ ಮಾಡಿ ನಿಮ್ಮ ಪಾಪಕ್ಕೆ ಇದೇ ಶಿಕ್ಷೆ ಎಂದು ಹೇಳುತ್ತಿದ್ದಾರೆ. ಅಲ್ಲದೇ ನಕ್ಷತ್ರಾಳಿಗೂ ತೊಂದ್ರೆ ಕೊಡ್ತಾರೆ ಅನ್ನೋ ಭಯ. ಅದಕ್ಕೆ ಚಂದ್ರಶೇಖರ್ ತಾನು ಹಿಂದೆ ಏನಾದ್ರೂ ತಪ್ಪು ಮಾಡಿದ್ನಾ? ಯಾರಿಗಾದ್ರೂ ಮೋಸ ಮಾಡಿದ್ನಾ ಅಂತ ಕತ್ತಲ ಕೋಣೆಯಲ್ಲಿ ಹುಡುಕಾಟ ನಡೆಸುತ್ತಿದ್ದಾನೆ.


    ಎಲ್ಲಾ ಪೆಟ್ಟಿಗೆಯಿಂದಲೇ ಆಗ್ತಿರೋ ಅನುಮಾನ
    ಕತ್ತಲೆ ಕೋಣೆಯಲ್ಲಿ ಹುಡುಕುತ್ತಿರುವ ಚಂದ್ರಶೇಖರ್ ನನ್ನು ಪತ್ನಿ ಏನ್ ಹುಡುಕುತ್ತಿದ್ದೀರಿ ಎಂದು ಕೇಳ್ತಾಳೆ. ಅದಕ್ಕೆ ನನಗೆ, ಎಲ್ಲಾ ಈ ಪೆಟ್ಟಿಗೆಯಿಂದ ಆಗ್ತಾ ಇದೆ ಎನ್ನಿಸುತ್ತಿದೆ ಎಂದು ಸಿಎಸ್ ಹೇಳ್ತಾನೆ. 25 ವರ್ಷದ ಹಿಂದೆ ನಡೆದ ಘಟನೆಗೂ ಈಗ ನಡೆಯುತ್ತಿರುವುದಕ್ಕೂ ಏನಾದ್ರೂ ಸಂಬಂಧ ಇದ್ಯಾ ಎಂದು ಚಂದ್ರಶೇಖರ್ ಆತಂಕಗೊಂಡಿದ್ದಾರೆ.


    ಇದನ್ನೂ ಓದಿ: BBK Season 9: ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಡ್ತಿದ್ದಾರೆ ಸೋನು ಗೌಡ! 


    ಸರಿಯಾಗಿ ಗೇಸ್ ಮಾಡಿದ್ದೀಯಾ ಅಣ್ಣ
    ಚಂದ್ರಶೇಖರ್ ಒಂದು ಪೆಟ್ಟಿಗೆ ಹಿಡಿದು ಈ ರೀತಿ ಆಗ್ತಿರೋದಕ್ಕೆ ಇದೇ ಕಾರಣ ಇರಬಹುದು ಎಂದು ಕೊಳ್ತಾನೆ. ಅದನ್ನೆಲ್ಲಾ ನೋಡ್ತಿದ್ದ ಭಾರ್ಗವಿ, ಸರಿಯಾಗಿ ಗೆಸ್ ಮಾಡಿದ್ದೀಯಾ ಅಣ್ಣ. ಭೂತ ಕಾಲದಲ್ಲಿ ಮಾಡಿದ್ದೆಲ್ಲಾ, ವರ್ತಮನದಲ್ಲಿ ಭೂತವಾಗಿ ಕಾಡ್ತಾ ಇದೆ. ಯಾವುದನ್ನು ನೋಡಿ ನಿನ್ನ ಎದೆ ನಡುಗುತ್ತಿದೆಯೋ, ಅದೇ ಇಷ್ಟಕ್ಕೆಲ್ಲಾ ಕಾರಣ ಎಂದು ಭಾರ್ಗವಿ ತನ್ನ ಪಾಡಿಗೆ ತಾನು ಹೇಳಿಕೊಳ್ತಾಳೆ.


    Colors Kannada serial, Kannada serial, Lakshana Serial, serial today episode, Chandrashekar searching in dark room, ಲಕ್ಷಣ ಧಾರಾವಾಹಿ, ಕತ್ತಲೆ ಕೋಣೆಯಲ್ಲಿ ದುರದೃಷ್ಟದ ಗುಟ್ಟು, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಭಾರ್ಗವಿ


    ಹಾಗಾದ್ರೆ 25 ವರ್ಷದ ಹಿಂದೆ ಸಿಎಸ್ ಏನ್ ಮಾಡಿದ್ರು?
    ಸಿಎಸ್ ಯಾವುದೋ ಪೆಟ್ಟಿಗೆ ನೋಡಿ ಗಾಬರಿಗೊಂಡಿದ್ದಾರೆ. ಇದರಿಂದ ಹೀಗೆ ಆಯ್ತಾ ಎಂದುಕೊಳ್ತಿದ್ದಾರೆ. ಅಲ್ಲದೇ ಭಾರ್ಗವಿ ಸಹ ನೀವು ಹಿಂದೆ ಮಾಡಿದ್ದು, ಈಗ ಕಾಡ್ತಿದೆ ಎಂದು ಹೇಳ್ತಾ ಇದ್ದಾಳೆ. ಹಾಗಾದ್ರೆ ಚಂದ್ರಶೇಖರ್ 25 ವರ್ಷದ ಹಿಂದೆ ಏನ್ ಮಾಡಿದ್ರು ಎಂಬ ಅನುಮಾನಗಳು ಕಾಡ್ತಿವೆ.


    ಇದನ್ನೂ ಓದಿ:Ramachari: ಮಗಳಿಗಾಗಿ ರಾಮಾಚಾರಿ ಮುಂದೆ ಕೈ ಮುಗಿದು ನಿಂತ ಮಾನ್ಯತಾ! ಚಾರು ಅಮ್ಮ ಗಡ ಗಡ 


    ನಕ್ಷತ್ರಾ ಜೀವನಕ್ಕೆ ಶ್ವೇತಾ
    ನಕ್ಷತ್ರಾ ತನ್ನ ಅಪ್ಪ-ಅಮ್ಮನ ಕಡೆ ಗಮನ ಕೊಡಬಾರದು ಎಂದು, ಭಾರ್ಗವಿ ಶ್ವೇತಾಳನ್ನು ನಕ್ಷತ್ರಾ ಜೀವನಕ್ಕೆ ಎಂಟ್ರಿ ಕೊಡಿಸುತ್ತಿದ್ದಾಳೆ. ಶ್ವೇತಾ, ಭೂಪತಿ ಮನೆಗೆ ಬಂದು, ಭೂಪತಿಯನ್ನು ತನ್ನೆಡೆ ಒಲೊಸಿಕೊಳ್ಳುವಂತೆ ಮಾಡ್ತಾಳಂತೆ. ಆಗ ನಕ್ಷತ್ರಾ ತನ್ನ ಗಂಡನನ್ನು ಉಳಿಸಿಕೊಳ್ಳುವ ಯೋಚನೆಯಲ್ಲಿ ಅಪ್ಪ-ಅಮ್ಮನನ್ನು ಮರೆಯುತ್ತಾಳೆ ಎನ್ನುವುದೇ ಭಾರ್ಗವಿ ಉದ್ದೇಶ.


    Colors Kannada serial, Kannada serial, Lakshana Serial, serial today episode, Chandrashekar searching in dark room, ಲಕ್ಷಣ ಧಾರಾವಾಹಿ, ಕತ್ತಲೆ ಕೋಣೆಯಲ್ಲಿ ದುರದೃಷ್ಟದ ಗುಟ್ಟು, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ನಕ್ಷತ್ರಾ


    ಹಾಗಾದ್ರೆ ಚಂದ್ರಶೇಖರ್ ಮಾಡಿದ ತಪ್ಪೇನು? ಅದು ಅವನು ಮತ್ತು ಅವಳ ಮಗಳು ನಕ್ಷತ್ರಾ ಜೀವನವನ್ನು ಕಾಡ್ತಾ ಇದೆ? ಭಾರ್ಗವಿಗೆ ಹಿಂದೆ ಏನಾದ್ರೂ ಮೋಸ ಮಾಡಿದ್ನಾ? ಅದಕ್ಕೆ ಭಾರ್ಗವಿ ಕಾಡ್ತಿದ್ದಾಳಾ? ಎಲ್ಲವನ್ನೂ ನೋಡಲು ಲಕ್ಷಣ ಧಾರಾವಾಹಿ ನೋಡಬೇಕು.

    Published by:Savitha Savitha
    First published: