ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ ಧಾರಾವಾಹಿ (LakshanaSerial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಈ ಧಾರಾವಾಹಿಯ ನಾಯಕಿ ನಕ್ಷತ್ರಾ. ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಅದರಲ್ಲೂ ಭೂಪತಿ ತಮ್ಮನಿಗೆ ಇನ್ನೂ ದೂರ. ಮೌರ್ಯನನ್ನು ಸಿಎಸ್ ಕೊಂದಿದ್ದಾನೆ (Murder). ನಕ್ಷತ್ರಾ ಅಪ್ಪನ (Father) ವಿರುದ್ಧ ಗರಂ ಆಗಿದ್ದಾಳೆ.
ಸಿಎಸ್ ಬಲೆಯಲ್ಲಿ ಮೌರ್ಯ
ಜೈಲಿನಿಂದ ತಪ್ಪಿಸಿಕೊಂಡ ಮೌರ್ಯ ನಕ್ಷತ್ರಾಳನ್ನು ಕೊಲ್ಲಲು ಪ್ಲ್ಯಾನ್ ಮಾಡಿದ್ದ. ಅದಕ್ಕೂ ಮೊದಲೇ ಸಿಎಸ್ ಪ್ಲ್ಯಾನ್ ಮಾಡಿ ಮೌರ್ಯನನ್ನು ಹಿಡಿಯುತ್ತಾನೆ. ಎಲ್ಲವೂ ಚಂದ್ರಶೇಖರ್ ಅಂದುಕೊಂಡಂತೆ ಆಗುತ್ತೆ. ಮೌರ್ಯನನ್ನು ಹಿಡಿದ ಚಂದ್ರಶೇಖರ್, ಆತನಿಗೆ ವಾರ್ನಿಂಗ್ ಕೊಡ್ತಾನೆ. ಆದ್ರೂ ಮೌರ್ಯ ಕೇಳಲ್ಲ.
ಮೌರ್ಯನ ಕೊಂದ ಚಂದ್ರಶೇಖರ್
ಚಂದ್ರಶೇಖರ್ ಮತ್ತು ನಕ್ಷತ್ರಾಗೆ ಮೌರ್ಯ ತುಂಬಾ ಕಾಟ ಕೊಟ್ಟಿದ್ದಾನೆ. ಎಷ್ಟೋ ಬಾರಿ ಕೊಲ್ಲಲು ಹೋಗಿದ್ದಾನೆ. ಸಿಎಸ್ ಮೊದಲೇ ಪ್ರಭಾವಿ ವ್ಯಕ್ತಿ. ಮೊದಲು ಇವನ್ನೆಲ್ಲಾ ಸಹಿಸಿಕೊಂಡಿದ್ದ. ಆದ್ರೆ ಈಗ ಆಗುತ್ತಿಲ್ಲ. ಅದಕ್ಕೆ ಮೌರ್ಯ ಕಥೆ ಮುಗಿಸಿ ಬಿಡೋಣ ಎಂದು ಪ್ಲ್ಯಾನ್ ಮಾಡಿದ್ದಾನೆ. ಗನ್ ನಿಂದ ಶೂಟ್ ಮಾಡಿದ್ದಾನೆ.
ನಿಮಗೆ ಮಾನವೀಯತೆ ಇಲ್ವಾ? ಕರುಣೆ ಇಲ್ವಾ?
ಮೌರ್ಯನನ್ನು ಕೊಂದಿದ್ದು ನೋಡಿದ ನಕ್ಷತ್ರಾ ಗಾಬರಿ ಆಗಿದ್ದಾಳೆ. ಯಾಕಪ್ಪ ಈ ರೀತಿ ಮಾಡಿದ್ರಿ ಎಂದು ಕೇಳ್ತಾಳೆ. ನನಗೆ ಬೇರೆ ದಾರಿ ಕಾಣಲಿಲ್ಲ. ನಾನು ಅವನನ್ನು ಸಾಯಿಸಿಲ್ಲ ಅಂದಿದ್ರೆ, ಅವನು ನಿನ್ನನ್ನು ಸಾಯಿಸುತ್ತಾನೆ. ಅದಕ್ಕೆ ಎಲ್ಲಾ ಮುಗಿಸಿ ಬಿಟ್ಟೆ ಎಂದು ಹೇಳ್ತಾನೆ.
ಅದಕ್ಕೆ ನಕ್ಷತ್ರಾ ಒಂದು ಕೊಲೆ ಮಾಡಿ ಎಷ್ಟು ಆರಾಮಾಗಿ ಮಾತನಾಡುತ್ತೀರಿ. ನಿಮಗೆ ಮಾನವೀಯತೆ ಇಲ್ವಾ? ಕರುಣೆ ಇಲ್ವಾ? ಎಂದು ಕೇಳ್ತಾಳೆ. ನಿನಿಗೋಸ್ಕರ ನಾನು ಏನ್ ಬೇಕಾದ್ರೂ ಮಾಡ್ತೀನಿ ಎಂದು ಹೇಳ್ತಾನೆ.
ಇದನ್ನೂ ಓದಿ: Actress Ramya Birthday: ಮೋಹಕ ತಾರೆ ರಮ್ಯಾ ಬರ್ತ್ಡೇ, ಅಭಿಮಾನಿಗಳಿಂದ ಶುಭಾಶಯ
ನಿಮಗೆ ಕ್ಷಮೆ ಇಲ್ಲ ಅಪ್ಪ
ಚಂದ್ರಶೇಖರ್ ಇದನ್ನೆಲ್ಲಾ ನಿನಗಾಗಿ ಮಾಡಿದೆ ಎನ್ನುತ್ತಾನೆ. ಅದಕ್ಕೆ ನಕ್ಷತ್ರಾ ಈ ರೀತಿ ಪ್ರೀತಿ ನನಗೆ ಬೇಡಪ್ಪ. ನನ್ನನ್ನು ನೀವು ಪ್ರೀತಿಸಲೇಬೇಡಿ. ಮೌರ್ಯ ಮಾಡೋಕೆ ಹೊರಟಿದ್ದು ತಪ್ಪು ಅಂದ ಮೇಲೆ ನೀವು ಮಾಡಿದ್ದು ತಪ್ಪೇ ಎನ್ನುತ್ತಾಳೆ. ಅದಕ್ಕೆ ಚಂದ್ರಶೇಖರ್ ಇದನ್ನು ಮುಚ್ಚಿ ಹಾಕ್ತೇನೆ. ನನ್ನ ಹೆಸರು ಉಳಿಸಿಕೊಳ್ಳಲು ನನಗೆ ಬೇರೆ ದಾರಿ ಇಲ್ಲ ಎನ್ನುತ್ತಾನೆ.
ನಿಮಗೆ ಶಿಕ್ಷೆ ಆಗಬೇಕು
ನಾನು ಆ ರೀತಿ ಆಗಲು ಬಿಡಲ್ಲ. ನಾನು ನಿಮ್ಮ ಜೊತೆ ಸೇರಿಕೊಂಡ್ರೆ, ನ್ಯಾಯವಾಗಿ ಬದುಕುತ್ತಿರುವ ನನ್ನ ಗಂಡ, ಅತ್ತೆಗೆ ಮೋಸ ಮಾಡಿದಂತೆ ಆಗುತ್ತೆ. ನಿಮಗೆ ಶಿಕ್ಷೆ ಆಗಲೇ ಬೇಕು ಅಪ್ಪ. ನೀವು ಈ ರೀತಿ ಮಾಡಬಾರದಿತ್ತು ಇದು ಮಹಾ ಅಪರಾಧ ಎಂದು ಹೇಳ್ತಾಳೆ.
ಇದನ್ನೂ ಓದಿ: Bigg Boss Kannada: ಬಿಗ್ ಬಾಸ್ ಮನೆಯಲ್ಲಿ ಭಾವುಕ ಕ್ಷಣ, ಮನೆಯವರನ್ನು ನೋಡಿ ಕಣ್ಣೀರು!
ಅಲ್ಲದೇ ಈ ವಿಷಯ ಭೂಪತಿ ಮನೆಯವರಿಗೆ ಗೊತ್ತಾಗಿ, ಎಲ್ಲರೂ ಕುಸಿದಿದ್ದಾರೆ. ಮೌರ್ಯ ತಾಯಿ ಎಚ್ಚರ ತಪ್ಪಿ ಬಿದ್ದಿದ್ದಾಳೆ. ಎಲ್ಲವೂ ಡೆವಿಲ್ ಅಂದುಕೊಂಡಂತೆ ಆಗಿದೆ. ಮುಂದೇನಾಗುತ್ತೆ ಅಂತ ನೊಡೋಕೆ ಲಕ್ಷಣ ಧಾರಾವಾಹಿ ನೊಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ