• Home
  • »
  • News
  • »
  • entertainment
  • »
  • Lakshana: ಮೌರ್ಯನಿಗೆ ಟಾಂಗ್ ಕೊಡಲು ಮಗಳನ್ನೇ ಕಿಡ್ನ್ಯಾಪ್ ಮಾಡಿದ ಚಂದ್ರಶೇಖರ್!

Lakshana: ಮೌರ್ಯನಿಗೆ ಟಾಂಗ್ ಕೊಡಲು ಮಗಳನ್ನೇ ಕಿಡ್ನ್ಯಾಪ್ ಮಾಡಿದ ಚಂದ್ರಶೇಖರ್!

ನಕ್ಷತ್ರಾ ಕಿಡ್ನ್ಯಾಪ್

ನಕ್ಷತ್ರಾ ಕಿಡ್ನ್ಯಾಪ್

ಮೌರ್ಯನೇ ನಮ್ಮ ಹಿಂದೆ ಬರಬೇಕು. ನೋಡ್ತಿರು ಅವನನ್ನು ಹೆಂಗೆ ಹಿಡಿಯುತ್ತೇನೆ ಅಂತ. ಅವನಾಗಿಯೇ ನಮ್ಮ ಗಾಳಕ್ಕೆ ಬಂದು ಬೀಳಬೇಕು ಎಂದು ಚಂದ್ರಶೇಖರ್ ಹೇಳ್ತಿದ್ದಾನೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ ಧಾರಾವಾಹಿಯೂ (Lakshana Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಈ ಧಾರಾವಾಹಿಯ ನಾಯಕಿ ನಕ್ಷತ್ರಾ. ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಅದರಲ್ಲೂ ಭೂಪತಿ ತಮ್ಮ ಮೌರ್ಯನಿಗೆ ನಕ್ಷತ್ರಾ, ಚಂದ್ರಶೇಖರ್ ಕಂಡ್ರೆ ಆಗಲ್ಲ. ಜೈಲಿನಿಂದ ತಪ್ಪಿಸಿಕೊಂಡು ಬಂದಿರುವ ಮೌರ್ಯ ನಕ್ಷತ್ರಾ ಕೊಲ್ಲಲು ಪ್ಲ್ಯಾನ್ ಮಾಡಿದ್ದಾನೆ. ಆದ್ರೆ ಚಂದ್ರಶೇಖರ್ ಕಥೆಗೆ ಟ್ವಿಸ್ಟ್ (Twist) ಕೊಟ್ಟಿದ್ದಾರೆ.


    ನಕ್ಷತ್ರಾ ಕೊಲ್ಲುವುದಾಗಿ ಮೌರ್ಯ ಸವಾಲ್
    ಜೈಲಿನಿಂದ ತಪ್ಪಿಸಿಕೊಂಡು ಬಂದ ಮೌರ್ಯ ಸೀದಾ ಮನೆಗೆ ಬಂದಿದ್ದನು. ಶ್ವೇತಾ ಕೊರಳಿಗೆ ಚಾರು ಹಿಡಿದು ಮನೆಯವರಿಗೆಲ್ಲಾ ಗಾಬರಿ ಹುಟ್ಟಿಸಿದ್ದ. ಶ್ವೇತಾಗೆ ತನಗೆ ಸಹಾಯ ಮಾಡುವಂತೆ ಬೆದರಿಕೆ ಹಾಕಿದ್ದ. ಇನ್ನು ಮನೆಯವರ ಮುಂದೆಯೇ, ನಕ್ಷತ್ರಾಳನ್ನು ನಾಳೆ ಕೊಂಡು ಬಿಡುತ್ತೇನೆ ಎಂದು ಸವಾಲ್ ಹಾಕಿದ್ದ. ಅದಕ್ಕೆ ಮನೆಯವರೆಲ್ಲಾ ಬೇಸರವಾಗಿದ್ದಾರೆ.


    ನಕ್ಷತ್ರಾಳನ್ನು ಮನೆಯಿಂದ ಹೊರ ಕರೆ ತಂದ ಶ್ವೇತಾ
    ಮೌರ್ಯ, ನಕ್ಷತ್ರಾಳನ್ನು ಮನೆಯಿಂದ ಹೊರ ಕರೆ ತರುವ ಜವಾಬ್ದಾರಿ ನಿನ್ನದು ಎಂದು ಹೇಳಿರುತ್ತಾನೆ. ಅದಕ್ಕೆ ಶ್ವೇತಾ ಏನೇನು ನಾಟಕ ಮಾಡಿ, ದೇವಸ್ಥಾನಕ್ಕೆ ಹೋಗೋಣ ಎಂದು ಕರೆದುಕೊಂಡು ಹೋಗುತ್ತಾಳೆ. ನಕ್ಷತ್ರಾ ಸಹ ಎಲ್ಲಾ ವಿಷಯ ಗೊತ್ತಿದ್ದೇ ಶ್ವೇತಾ ಜೊತೆ ಹೋಗ್ತಾಳೆ.


    ಇದನ್ನೂ ಓದಿ: Actress Ramya: ನನಗೆ ಸಂತೋಷ ಮುಖ್ಯ, ಮದುವೆ ಆಗಲ್ಲ ಎಂದು ಮೋಹಕ ತಾರೆ ರಮ್ಯಾ!


    ಚಂದ್ರಶೇಖರ್ ಗೆ ಕಾಲ್ ಮಾಡಿ ಬೆದರಿಕೆ
    ಮೌರ್ಯ, ಚಂದ್ರಶೇಖರ್ ಗೆ ಕಾಲ್ ಮಾಡಿ. ಇವತ್ತು ನಿನ್ನ ಮಗಳ ಕೊನೆಯ ದಿನ. ಅವಳನ್ನು ಕೊಲ್ಲುತ್ತೇನೆ. ನೀನು ಮಗಳ ಮನೆಗೆ ಹೋಗಿ ಬೇಕಾದ್ರೆ ನೋಡಿಕೊಂಡು ಬಾ, ಮುದ್ದಾಡಿ ಬಾ. ನಿನ್ನ ಮನೆಗೆ ಆಕೆಯ ಶವವನ್ನು ಕಳಿಸುತ್ತೇನೆ ಎನ್ನುತ್ತಾನೆ. ಅದಕ್ಕೆ ಚಂದ್ರಶೇಖರ್ ಈತನಿಗೆ ನನ್ನ ದಾರಿಯಲ್ಲೇ ಬುದ್ಧಿ ಕಲಿಸಬೇಕು ಎಂದು ಹೇಳ್ತಾನೆ.


    colors kannada serial, kannada serial, chandrashekar kidnap nakshatra, lakshana serial, serial today episode, ಲಕ್ಷಣ ಧಾರಾವಾಹಿ, ಮೌರ್ಯನಿಗೆ ಟಾಂಗ್ ಕೊಡಲು ಮಗಳನ್ನೇ ಕಿಡ್ನ್ಯಾಪ್ ಮಾಡಿದ ಚಂದ್ರಶೇಖರ್!, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಮೌರ್ಯ


    ಮೌರ್ಯನಿಗೆ ಸಿಗೋ ಮೊದಲೇ ನಕ್ಷತ್ರಾ ಕಿಡ್ನ್ಯಾಪ್
    ಮೌರ್ಯ ಬಳಿ ಶ್ವೇತಾ, ನಕ್ಷತ್ರಾಳನ್ನು ಕರೆದುಕೊಂಡು ಬರುತ್ತಾಳೆ. ಮೌರ್ಯ ನಕ್ಷತ್ರಾಳನ್ನು ನೋಡುವ ಮೊದಲೇ, ಆಕೆಯ ಕಿಡ್ನ್ಯಾಪ್ ಆಗಿದೆ. ನಕ್ಷತ್ರಾ ಶಾಕ್ ಆಗಿದ್ದಾಳೆ. ಅಲ್ಲದೇ ಮೌರ್ಯನೂ ಶಾಕ್ ಆಗಿದ್ದಾನೆ. ನಕ್ಷತ್ರಾಳನ್ನು ಕಿಡ್ನ್ಯಾಪ್ ಮಾಡಿದ್ದು ಚಂದ್ರಶೇಖರ್. ಯಾಕ್ ಅಪ್ಪ ನನ್ನನ್ನು ಕಿಡ್ನ್ಯಾಪ್ ಮಾಡಿದೆ ಎಂದು ಕೇಳಿದ್ದಾಳೆ.


    colors kannada serial, kannada serial, chandrashekar kidnap nakshatra, lakshana serial, serial today episode, ಲಕ್ಷಣ ಧಾರಾವಾಹಿ, ಮೌರ್ಯನಿಗೆ ಟಾಂಗ್ ಕೊಡಲು ಮಗಳನ್ನೇ ಕಿಡ್ನ್ಯಾಪ್ ಮಾಡಿದ ಚಂದ್ರಶೇಖರ್!, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ನಕ್ಷತ್ರಾ


    ನಾನು ಪುಟ್ಟ ನಿನ್ನ ಅಪ್ಪ. ಇವರೆಲ್ಲಾ ನಮ್ಮ ಹುಡುಗರು, ಭಯಪಡಬೇಡ ಎಂದು ಹೇಳ್ತಾರೆ. ಕ್ಷಮಿಸು ಪುಟ್ಟ, ಕಳೆದ ಬಾರಿ ಭೂಪತಿ ಒಂದು ಸಣ್ಣ ಮಿಸ್ಟೇಕ್ ಮಾಡಿ ಬಿಟ್ಟ. ಮೌರ್ಯ ನಿನ್ನ ಬಳಿ ಬರೋವರೆಗೂ ಕಾದು, ಆಮೇಲೆ ಅವನನ್ನು ಹಿಂಬಾಲಿಸಿದ. ಆದ್ರೆ ಈ ಸಲ ಆ ರೀತಿ ಆಗಲ್ಲ.


    ಮೌರ್ಯನೇ ನಮ್ಮ ಹಿಂದೆ ಬರಬೇಕು. ನೋಡ್ತಿರು ಅವನನ್ನು ಹೆಂಗೆ ಹಿಡಿಯುತ್ತೇನೆ ಅಂತ. ಅವನಾಗಿಯೇ ನಮ್ಮ ಗಾಳಕ್ಕೆ ಬಂದು ಬೀಳಬೇಕು ಎಂದು ಚಂದ್ರಶೇಖರ್ ಹೇಳ್ತಿದ್ದಾನೆ.


    colors kannada serial, kannada serial, chandrashekar kidnap nakshatra, lakshana serial, serial today episode, ಲಕ್ಷಣ ಧಾರಾವಾಹಿ, ಮೌರ್ಯನಿಗೆ ಟಾಂಗ್ ಕೊಡಲು ಮಗಳನ್ನೇ ಕಿಡ್ನ್ಯಾಪ್ ಮಾಡಿದ ಚಂದ್ರಶೇಖರ್!, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಚಂದ್ರಶೇಖರ್


    ಇದನ್ನೂ ಓದಿ: BBK Deepika Das: ದೀಪಿಕಾ ದಾಸ್‍ಗೆ ಅಣ್ಣನ ಮೇಲೆ ಕೋಪ, ಕಾರಣ ಗೊತ್ತಾದ್ರೆ ನಿಮಗೂ ಬೇಸರ ಆಗುತ್ತೆ!


    ನಕ್ಷತ್ರಾ ಕೊಲ್ಲಲು ಹೋಗಿ ಮೌರ್ಯನೇ ಟ್ರ್ಯಾಪ್ ಆದ್ನಾ? ಚಂದ್ರಶೇಖರ್ ಟ್ವಿಸ್ಟ್ ವರ್ಕ್ ಆಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.

    Published by:Savitha Savitha
    First published: