ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಈ ಮಧ್ಯೆ ಶುಕುಂತಲಾ ದೇವಿ ನಕ್ಷತ್ರಾಳನ್ನು ಕೀಳಾಗಿ ಕಾಣುತ್ತಿದ್ದಾಳೆ. ಶ್ವೇತಾಳಿಗೆ ಹೆಚ್ಚು ಬೆಲೆ ಕೊಡ್ತಾ ಇದ್ದಾಳೆ. ಅದಕ್ಕೆ ಚಂದ್ರಶೇಖರ್ (Chandrashekhar) ನಕ್ಷತ್ರಾ ಮತ್ತು ಶ್ವೇತಾ ಒಂದು ಟಾಸ್ಕ್ (Task) ನೀಡಿದ್ದಾರೆ.
ಶ್ವೇತಾ ಕೇರ್ ಆಫ್ ಶಕುಂತಲಾ ದೇವಿ
ಶ್ವೇತಾ ಡಾಟರ್ ಆಫ್ ತುಕಾರಾಂ ಅಲ್ಲ. ಶ್ವೇತಾ ಕೇರ್ ಆಫ್ ಶಕುಂತಲಾ ದೇವಿ. ಇವತ್ತಿಂದ ಶ್ವೇತಾಳ ಸಂಪೂರ್ಣ ಜವಾಬ್ದಾರಿ ನನ್ನದು. ಇವತ್ತು ಕೆಲಸ ಕೊಟ್ಟಿದ್ದೀನಿ. ನಾಳೆ ನಾನೇ ಮುಂದೆ ನಿಂತು ಮದುವೆ ಮಾಡ್ತೇನೆ. ನಾನು ಒಂದು ಸಲ ಮಾತು ಕೊಟ್ಟ ಮೇಲೆ ಮುಗೀತು ಎಂದು ಶಕುಂತಲಾ ದೇವಿ ಹೇಳಿದ್ದಾಳೆ. ಬ್ಯುಸಿನೆಸ್ ನಲ್ಲೂ ಹಕ್ಕಿದೆ ಎಂದು ಹೇಳಿದ್ದಾಳೆ. ಅದಕ್ಕೆ ಸಿಎಸ್ ಗೆ ಬೇಸರ ಆಗಿದೆ.
ನಕ್ಷತ್ರಾಳನ್ನು ಕೀಳಾಗಿ ಕಾಣುವ ಶಕುಂತಲಾ ದೇವಿ
ನಕ್ಷತ್ರಾ ಭೂಪತಿಯನ್ನು ಮದುವೆ ಆಗಿ ಆ ಮನೆ ಸೊಸೆ ಆಗಿದ್ದರೂ, ಶಕುಂತಲಾ ದೇವಿ ಆಕೆಯನ್ನು ಕೀಳಾಗಿ ಕಾಣ್ತಾಳೆ. ಈ ಮನೆಗೆ ತಕ್ಕ ಸೊಸೆ ಅಲ್ಲ ಎಂತಿದ್ದಾಳೆ. ಅವಮಾನ ಮಾಡುತ್ತಲೇ ಇರುತ್ತಾಳೆ. ನಕ್ಷತ್ರಾ ಕಣ್ಣೀರಿಡುತ್ತಲೇ ಇದ್ದಾಳೆ. ಅದಕ್ಕೆ ಚಂದ್ರಶೇಖರ್ ಮಗಳ ಜೀವನ ಸರಿ ಮಾಡಬೇಕು ಎಂದುಕೊಂಡಿದ್ದಾನೆ.
ಇದನ್ನೂ ಓದಿ: Bigg Boss Kannada: ಆರ್ಯವರ್ಧನ್ ಗುರೂಜಿ ಮನೆಗೆ ರೂಪೇಶ್ ಶೆಟ್ಟಿ ಭೇಟಿ, ಇದು ಅಪ್ಪ-ಮಗನ ಬಾಂಧವ್ಯ!
ಶ್ವೇತಾ-ನಕ್ಷತ್ರಾ ಮಧ್ಯೆ ಚಾಲೆಂಜ್
ಚಂದ್ರಶೇಖರ್ ಗೆ ತನ್ನ ಮಗಳ ಮೇಲೆ ತುಂಬಾನೇ ಭ್ರಮೆ ಇದೆ. ತನ್ನ ಮಗಳು ಎಲ್ಲದಕ್ಕಿಂತ ಹೆಚ್ಚು ತಿಳಿದುಕೊಂಡಿದ್ದಾಳೆ. ಜಾಣೆ ಅನ್ನುವ ಭ್ರಮೆ. ಅದನ್ನು ಕಳೆಯೋಕೆ ಶ್ವೇತಾ ಮತ್ತು ನಕ್ಷತ್ರಾ ಮಧ್ಯೆ ಒಂದು ಟಾಸ್ಕ್ ಇರುತ್ತೆ.
ಅವರ ಮಗಳು ಈ ಮನಗೆ ತಕ್ಕ ಸೊಸೆ ಅಂತ ಅವರ ತಲೆಯಲ್ಲಿ ಚೆನ್ನಾಗಿ ಕೂತಿದೆ. ಆರತಿನೂ ಅಷ್ಟೇ, ನಕ್ಷತ್ರಾ ಮುಂದೆ ಶ್ವೇತಾ ಏನೂ ಅಲ್ಲ ಅಂತಿದಾರೆ. ಗೊತ್ತಾಗಲಿ ಯಾರು ಹೆಚ್ಚು, ಯಾರು ಕಮ್ಮಿ ಅಂತ ನೋಡೇ ಬಿಡೋಣ ಎಂದು ಶಕುಂತಲಾ ದೇವಿ ಹೇಳಿದ್ದಾಳೆ.
ನಿನ್ನ ಬೆಲೆ ಗೊತ್ತಾಗಬೇಕು
ನನ್ನ ಮಗಳು ಬಂಗಾರ. ಬೇರೆಯವರಿಗೂ ಗೊತ್ತಾಗಬೇಕು. ನಿನ್ನ ಬೆಲೆ ಏನೂ ಅಂತ ಗೊತ್ತಿಲ್ಲದೇ, ನಿನ್ನನ್ನು ಕೆವಲವಾಗಿ ನೋಡುವುದನ್ನು ನಿಲ್ಲಿಸಬೇಕು ಅಂದ್ರೆ, ನೀನು ಏನು ಅಂತ ಸಾಬೀತಗಬೇಕು. ನೀನು ಇದನ್ನು ಗೆಲ್ಲಬೇಕು ಎಂದು ಚಂದ್ರಶೇಖರ್ ನಕ್ಷತ್ರಾಗೆ ಹೇಳ್ತಾರೆ.
ಶ್ವೇತಾ-ನಕ್ಷತ್ರಾಗೆ 500 ರೂಪಾಯಿ ಸವಾಲು
ನಾನು ನಿನಗೆ, ಶ್ವೇತಾಗೆ 500, 500 ರೂಪಾಯಿ ಕೊಡ್ತೀನಿ. ನಾಳೆ ಮನೆಯನ್ನು ನಿಮಗೆ ತಿಳದಿರುವ ರೀತಿಯಲ್ಲಿ ಈ ದುಡ್ಡಲ್ಲಿ ನಡೆಸಬೇಕು. ಮನೆಯ ಸಂಪೂರ್ಣ ಖರ್ಚು, ವೆಚ್ಚ ಈ ದುಡ್ಡಲ್ಲಿ ಮಾಡಬೇಕು.
ಮನೆಯ ಪ್ರತಿಯೊಬ್ಬರಿಗೂ ಊಟ, ತಿಂಡಿ ಕೊಟ್ಟು ದಿನದ ಕೊನೆಯಲ್ಲಿ ಯಾರ ಬಳಿ ಹೆಚ್ಚು ದುಡ್ಡು ಇರುತ್ತೋ ಅವರಿಗೆ ಗೆಲುವು ಎಂದು ಚಂದ್ರಶೇಖರ್ ಹೇಳ್ತಾರೆ. ಯಾರ ಬಳಿಯೂ ಸಾಲ ಮಾಡಬಾರದು. ಸಾಲ ಮಾಡಿದ್ರೆ ಸೋತಂತೆ ಎಂದು ಆರತಿ ಹೇಳ್ತಾಳೆ.
ಇದನ್ನೂ ಓದಿ: Shrirasthu Shubhamasthu: ಕಹಿ ನೆನಪು ಮರೆತು, ಸೊಸೆ ಪೂರ್ಣಿಯನ್ನು ಕಾಪಾಡ್ತಾನಾ ಮಾಧವ?
500 ರೂಪಾಯಿ ಟಾಸ್ಕ್ ನಲ್ಲಿ ಗೆಲ್ಲೋದು ಯಾರು? ಶ್ವೇತಾಗೆ ಬಿಸಿ ತುಪ್ಪವಾದ ಚಾಲೆಂಜ್, ನಕ್ಷತ್ರಾ ತನ್ನನ್ನು ತಾನು ಸಾಬೀತು ಮಾಡಿಕೊಳ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ