Lakshana: ಎರಡನೇ ಮದುವೆ ಸಾಧ್ಯವೇ ಇಲ್ಲ ಎಂದ ಭೂಪತಿ; ನಾಗವಲ್ಲಿ ಅವತಾರ ತಾಳಿದ್ದಾಳೆ ಶ್ವೇತಾ..!

ಲಕ್ಷಣಾ ಸೀರಿಯಲ್‌ನಲ್ಲಿ ಕಳೆದ ವಾರದವರೆಗೂ ಭರ್ಜರಿ ಮದುವೆಯ ಎಪಿಸೋಡ್‌ಗಳಿದ್ದವು. ರೋಚಕ ಟ್ವಿಸ್ಟ್‌ನಲ್ಲಿ ನಕ್ಷತ್ರಾ ಕತ್ತಿಗೆ ಭೂಪತಿ ತಾಳಿ ಕಟ್ಟಿದ್ದಾನೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಲಕ್ಷಣಾ (Lakshana) ಸೀರಿಯಲ್‌ನಲ್ಲಿ ಕಳೆದ ವಾರದವರೆಗೂ ಭರ್ಜರಿ ಮದುವೆಯ ಎಪಿಸೋಡ್‌ಗಳಿದ್ದವು. ರೋಚಕ ಟ್ವಿಸ್ಟ್‌ನಲ್ಲಿ ನಕ್ಷತ್ರಾ (Nakshathra) ಕತ್ತಿಗೆ ಭೂಪತಿ ತಾಳಿ ಕಟ್ಟಿದ್ದಾನೆ.  ಕಪ್ಪು ಹುಡುಗಿ ನಕ್ಷತ್ರಾ ಇದರ ನಾಯಕಿ. ಬಣ್ಣದ ಕಾರಣಕ್ಕೆ ಚಿಕ್ಕ ವಯಸ್ಸಿಂದ ಮನೆಯವರ, ಸಮಾಜದ ಹೀಗಳಿಕೆಗೆ ತುತ್ತಾಗುತ್ತಾ ಬಂದವಳು, ಆದರೆ ಮಹಾನ್ ಧೈರ್ಯಶಾಲಿ. ಇದ್ಯಾವುದಕ್ಕೂ ತಲೆ ಕೆಡಿಸದೇ ಪ್ರಾಮಾಣಿಕವಾಗಿ ಬದುಕುತ್ತಿರುವ ಹುಡುಗಿ. ಅವಳ ಲೈಫಲ್ಲಿ ಇತ್ತೀಚೆಗೆ ತಿರುವಿನ ಮೇಲೆ ತಿರುವುಗಳಾಗುತ್ತಿವೆ. ಅಂಥಾ ತಿರುವುಗಳಲ್ಲೊಂದು ಅವಳ ಮದುವೆ. ತನ್ನ ಸ್ನೇಹಿತ ಭೂಪತಿ ( (Bhupathi) )ಜೊತೆಗೆ ಅವಳ ಮದುವೆ (Marriage) ಆಗಿದೆ. ಆದರೆ ಈ ಮದುವೆಗೆ ಅವಳ ತಂದೆ ಬಿಟ್ಟರೆ ಮತ್ಯಾರ ಮನಃಪೂರ್ವಕ ಒಪ್ಪಿಗೆಯೂ ಸಿಕ್ಕಿಲ್ಲ.

  ಶ್ವೇತಾ - ಭೂಪತಿ ಒಬ್ಬರುಗೊಬ್ಬರು ಪ್ರೀತಿಸುತ್ತಿದ್ದರು

  ಸಂಭ್ರಮದ ವಾತಾವರಣವಿದ್ದಾಗ ಸತ್ಯವೆಂಬುದು ಬಿರುಗಾಳಿಯಂತೆ ಅಪ್ಪಳಿಸಿತ್ತು. ನಕ್ಷತ್ರ ಧಾರಾವಾಹಿಯಲ್ಲಿ ಎಲ್ಲವೂ ಸರಿಯಾಗಿದ್ದ ದಿನಗಳವು. ಶ್ವೇತಾ - ಭೂಪತಿ ಒಬ್ಬರುಗೊಬ್ಬರು ಪ್ರೀತಿಸುತ್ತಿದ್ದರು. ಈ ಕಡೆ ಭೂಪತಿ ಎಂದರೆ ಒನ್ ವೇನಲ್ಲಿ ನಕ್ಷತ್ರ ಕೂಡ ಹರತದಯ ತುಂಬಿ ಪ್ರೀತಿಸುತ್ತಿದ್ದಳು. ಶ್ಚೇತಾ ಬಡವರ ಮನೆ ಹುಡುಗಿ ಆದರೆ ನಕ್ಷತ್ರಾಳ ಸ್ಥಾನದಲ್ಲಿ ಕುಳಿತು, ಸುಖದ ಸುಪ್ಪತ್ತಿಗೆಯಲ್ಲಿ ಬೆಳಯುತ್ತುದ್ದಳು. ಆದರೆ ನಕ್ಷತ್ರಾ ಇದ್ಯಾವುದರ ಅರಿವಿಲ್ಲದೆ ಬಡವರ ಸೂರಿನಲ್ಲಿ ಅಪ್ಪ ಎನ್ನಿಸಿಕೊಂಡವನ ತಿರಸ್ಕಾರದಲ್ಲಿ ಬದುಕಿದ್ದಳು. ಇದೆಲ್ಲವೂ ಬಯಲಾಗಿ ಈಗ ನಕ್ಷತ್ರಾ ಜೀವನವೆರ ಬದಲಾಗಿದೆ. ಪ್ರೀತಿಯ ಹುಡುಗ ಕೆಂಡಕಾರುತ್ತಿದ್ದಾನೆ.

  ಇದನ್ನೂ ಓದಿ: Niveditha Gowda: Mrs.India ಟ್ರೈನಿಂಗ್ ನಲ್ಲಿ ಕಿರುತೆರೆಯ ಗೊಂಬೆ ನಿವೇದಿತಾ ಗೌಡ

  ನಕ್ಷತ್ರಳ ಬದುಕಿಗೆ ಅತ್ತೆಯೆ ವಿಲನ್

  ಶ್ವೇತಾ- ಭೂಪತಿಯ ಮದುವೆ ಮುರಿದು ಹಾಕುವ ಪಣ ತೊಟ್ಟಿದ್ದಾಳೆ. ಭೂಪತಿ ಮನದಲ್ಲಿ ನಕ್ಷತ್ರಾ ಬಗ್ಗೆ ವಿಷ ತುಂಬುತ್ತಿದ್ದಾಳೆ. ಹೀಗಾಗಿ ಭೂಪತಿ ನಕ್ಷತ್ರಾ ಬಗ್ಗೆ ಮನಸು ಕೆಡಿಸಿಕೊಂಡಿದ್ದಾನೆ. ಅತ್ತ ಶಕುಂತಳಾ ದೇವಿಯೂ ನಕ್ಷತ್ರಾಳನ್ನು ಸೊಸೆ ಎಂದು ಒಪ್ಪಿಕೊಳ್ಳುತ್ತಿಲ್ಲ.

  ಈಗಾಗಲೆ ಮನೆಯಲ್ಲಿ ಸೊಸೆ ಇರುವಾಗ ಅವರ ಸಂಸಾರ ಸರಿ‌ ಮಾಡುವ ಬದಲು ಮಗನಿಗೆ ಮತ್ತೊಂದಯ ಮದುವೆ ಮಾಡಿಸುವ ದುಸ್ಸಾಹಸಕ್ಕೆ ಕೈ ಹಾಕಿದ್ದಾಳೆ. ಇಲ್ಲದ ಆಸೆಯನ್ನು ಶ್ವೇತಾ ಮನಸ್ಸಲ್ಲೂ ಚಿಗುರಿಸಿದ್ದಾಳೆ. ಭೂಪತಿ ತಾಯಿಗೆ ಶ್ವೇತಾ ಮೇಲೆ ಆಸೆ. ಹೀಗಾಗಿಯೇ ಶ್ವೇತಾಳನ್ನು ಮತ್ತೊಮ್ಮೆ ಮದುವೆ ಮಾಡಿಕೊಳ್ಳುವ ಸಾಹಸಕ್ಕೆ ಕೈ ಹಾಕಿದ್ದಾಳೆ.  ಎಲ್ಲವೂ ಸರಿಯಾಗಬಹುದು ಎಂದು ನಕ್ಷತ್ರಾ ಕಾಯುತ್ತಿದ್ದರೆ ಭೂಪತಿ ಮನಸ್ಸನ್ನು ಕದಡುವ ಕೆಲಸ ಅವರಮ್ಮನೆ ಮಾಡುತ್ತಿದ್ದಾರೆ.

  ಭೂಪತಿಗಾಗಿ ಶ್ಚೇತಾ ಕನವರಿಕೆ

  ನಕ್ಷತ್ರ ತನಗೆ ಭೂಪತಿ ಮೇಲೆ ಪ್ರೀತಿ ಇದ್ದರು ಅದನ್ನು ಹೇಳಿಕೊಂಡವಳಲ್ಲ. ಮನಸ್ಸಲ್ಲೇ ಆ ನೋವನ್ನು ಅದುಮಿಟ್ಟುಕೊಂಡು ಮದುವೆ ಮನೆಯಲ್ಲಿ ಸಂಭ್ರಮದಿಂದ ಓಡಾಡುತ್ತಿದ್ದಳು. ಶ್ವೇತಾ ಮತ್ತು ಭೂಪತಿ ಮದುವೆ ಅದ್ದೂರಿಯಾಗಿ ನಡೆಯುತ್ತಿತ್ತು.  ಆದರೆ ಹುಟ್ಟಿನ ಗುಟ್ಟು ರಟ್ಟಾದ ಬಳಿಕ ಶ್ವೇತಾ ಜೊತೆಗಿನ ಮದುವೆ ಕ್ಯಾನ್ಸಲ್ ಆಗಿ ಭೂಪತಿ ನಕ್ಷತ್ರಾ ಕೈ ಹಿಡಿಯಬೇಕಾಯಿತು. ಪರಿಸ್ಥಿತಿಯ ತೆಕ್ಕೆಗೆ ಬಿದ್ದು ಒಲ್ಲದ ಮನಸ್ಸಲ್ಲಿ ಭೂಪತಿ ಮತ್ತು ನಕ್ಷತ್ರಾ ಮದುವೆಯಾದರು.

  ಇದನ್ನೂ ಓದಿ: Kannadathi Serial: ಕೊನೆಗೂ ಭುವಿಗೆ ಮುತ್ತು ನೀಡಿದ ಹರ್ಷ, ಮದುವೆ ನಿಲ್ಲಿಸಲು ವರೂಧಿನಿ ಪ್ರಯತ್ನ!

  ಭೂಪತಿ ಎರಡನೇ ಮದುವೆಗೆ ಒಪ್ಪಲಿಲ್ಲ

  ಶ್ವೇತಾಳ ತಾಳಕ್ಕೆ ಕುಣಿಯುತ್ತಿರುವ ಭೂಪತಿ ತಾಯಿ ನೀನೇ ನನ್ನ ಸೊಸೆ ಎಂದಿದ್ದಾಳೆ.  ಭೂಪತಿ ಇನ್ನೇನು ನನ್ನನ್ನು ಮತ್ತೆ ಒಪ್ಪಿಕೊಳ್ಳುತ್ತಾನೆ. ಮತ್ತೆ ಕಂಡ ಕನಸುಗಳು ಸಕಾರಗೊಳ್ಳುತ್ತವೆ ಎಂದು ಶ್ಚೇತಾ ಹಗಲು ಕನಸು ಕಾಣುತ್ತಿದ್ದಾಳೆ. ಭೂಪತಿಯ ತಾಯಿಯನ್ನು ಮುಂದಿಟ್ಟುಕೊಂಡಯ ಗಾಳ ಉರುಳಿಸುತ್ತಿದ್ದಾಳೆ.

  ಆದರೆ ಭೂಪತಿ ಎರಡನೇ ಮದುವೆಗೆ ಒಪ್ಪಲಿಲ್ಲ ಎಂಬ ವಿಚಾರ ಶ್ವೇತಾಳ ಕೋಪವನ್ನು ಹೆಚ್ಚು ಮಾಡಿದೆ. ಎಷ್ಟೇ ಕೋಪ ಬಂದರು ತೋರಿಸಿಕೊಳ್ಳದ ಶ್ವೇತಾ ಅತ್ತೆಯ ಫೋನ್ ಕಟ್ ಆದಮೇಲೆ ನಾಗವಲ್ಲಿಯಂತೆ ಡೈಲಾಗ್ ಹೊಡೆದಿದ್ದಾಳೆ. ಭೂಪತಿ ನನ್ನ ನನ್ನ ಮದುವೆಯಾಗಲ್ಲವಾ ಎಂದು ಕಿರುಚಾಡಿದ್ದಾಳೆ.
  Published by:Swathi Nayak
  First published: