ಕಲರ್ಸ್ ಕನ್ನಡದಲ್ಲಿ (Colors Kannada0 ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಾಯಕಿ ನಕ್ಷತ್ರಾ, ಭೂಪತಿಯನ್ನು ಮದುವೆ (Marriage) ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಈ ಎಲ್ಲಾ ಸಮಸ್ಯೆಗಳ ಮಧ್ಯೆ ನಕ್ಷತ್ರಾ ತಾಳಿ ಕಟ್ ಆಗಿದೆ. ಅದಕ್ಕೆ ಭೂಪತಿ ಮತ್ತೊಮ್ಮೆ ನಕ್ಷತ್ರಾಗೆ (Nakshatra) ಅರಿಶಿನ ದಾರ ಕಟ್ಟಿದ್ದಾನೆ.
ಕಟ್ ಆಗಿತ್ತು ನಕ್ಷತ್ರಾ ತಾಳಿ
ಭೂಪತಿ ಮನವೊಲಿಸಿಕೊಳ್ಳೋ ಪ್ರಯತ್ನದಲ್ಲಿದ್ದ ನಕ್ಷತ್ರಾಗೆ ಆತಂಕವೊಂದು ಎದುರಾಗಿತ್ತು. ಆಕೆಯ ಕತ್ತಿನಲ್ಲಿದ್ದ ತಾಳಿ ಕಟ್ ಆಗಿ ಬಿದ್ದಿತ್ತು. ಅದಕ್ಕೆ ಗಾಬರಿಗೊಂಡಿದ್ದಳು. ಏನಾದ್ರೂ ಅನಾಹುತ ಆಗುತ್ತಾ ಅಂತ ಭಯಗೊಂಡಿದ್ದಳು. ತಾಯಿ ಸಹಲೆಯಂತೆ ಅಕ್ಕೆ ಪೂಜೆ ಮಾಡಬೇಕು ಎನ್ನುವಷ್ಟರಲ್ಲಿ ಅದು ಕಳೆದು ಹೋಗಿರುತ್ತೆ.
ತಾಳಿ ಕದ್ದಿದ್ದ ಶ್ವೇತಾ
ನಕ್ಷತ್ರಾಳಿಗೆ ತೊಂದ್ರೆ ಕೊಡಬೇಕು ಎಂದು ಶ್ವೇತಾ ಆ ತಾಳಿಯನ್ನು ಕದ್ದಿರುತ್ತಾಳೆ. ಅದನ್ನು ಮಾರಿ ಹಣ ಕೂಡ ತೆಗೆದುಕೊಂಡಿರುತ್ತಾಳೆ. ಅಲ್ಲದೇ ನಕ್ಷತ್ರಾ ಮುಂದೆ ತಾನೇ ತಾಳಿ ಕದ್ದಿದ್ದು ಎಂದು ಒಪ್ಪಿಕೊಂಡಿರುತ್ತಾಳೆ. ನಿನ್ನ ಕೈಯಲ್ಲಿ ಏನೂ ಮಾಡಲು ಆಗಲ್ಲ ಎಂದು ಸವಾಲು ಹಾಕಿರುತ್ತಾಳೆ.
ಇದನ್ನೂ ಓದಿ: Bhagya Lakshmi: ವೈಷ್ಣವ್ ಜೊತೆ ಕೀರ್ತಿ ಮದುವೆ ಸಾಧ್ಯವಿಲ್ಲ ಎಂದ ಕುಸುಮಾ!
ಉಪವಾಸ ವ್ರತ ಮಾಡ್ತಿರೋ ನಕ್ಷತ್ರಾ
ತಾಳಿ ಕಳೆದು ಹೋಗಿದ್ದಕ್ಕೆ ನಕ್ಷತ್ರಾ ಕಂಗಾಲಾಗಿ ಹೋಗಿದ್ದಾಳೆ. ಅದು ಸಿಗಲೇ ಬೇಕು ಎಂದು ಉಪವಾಸ ವ್ರತ ಮಾಡ್ತಾ ಇದ್ದಾಳೆ. ಅಲ್ಲದೇ ಕೈ ಯಲ್ಲಿ ಕರ್ಪೂರ ಹಿಡಿದು ನಿಂತಿದ್ದಾಳೆ. ಅದನ್ನು ನೋಡಿದ ಭೂಪತಿ ಬೇಸರವಾಗಿದೆ. ಕರ್ಪೂರ್ ಕೈಯಿಂದ ಬೀಸಾಕಿ, ಆಕೆಯನ್ನು ದೇವರ ಮನೆ ಬಳಿ ಕರೆದುಕೊಂಡು ಹೋಗಿದ್ದಾನೆ.
ಎಲ್ಲದಕ್ಕೂ ಪರಿಹಾರ ಇದೆ ಎಂದ ಭೂಪತಿ
ನಿನಗೇನು ತಾಳಿ ಬೇಕು ಅಷ್ಟೇ ತಾನೇ ಖಾಲಿ ಕತ್ತು, ಕತ್ತಲ್ಲಿ ತಾಳಿ. ಅದಕ್ಕೆ ತಾನೇ ಇಷ್ಟೊಂದು ನೊಂದುಕೊಂಡಿರುವುದು. ಅದಕ್ಕೆ ತಾನೇ ಈ ಉಪವಾಸ ವ್ರತ. ಅದಕ್ಕೆ ತಾನೇ ಈ ಕರ್ಪೂರದ ಪೂಜೆ. ಎಲ್ಲದಕ್ಕೂ ಒಂದು ಪರಿಹಾರ ಇದೆ ಎಂದು ಭೂಪತಿ ದೇವರ ಮೇಲಿದ್ದ ಅರಿಶಿನ ದಾರವನ್ನು ತೆಗೆದುಕೊಂಡು ಬರುತ್ತಾನೆ.
ಅರಿಶಿನ ದಾರ ಕಟ್ಟಿದ ಭೂಪತಿ
ನಾನು ಎಲ್ಲರ ಸಮ್ಮುಖವಾಗಿ ನಿನಗೆ ಕಟ್ಟಿರೋ ಮಂಗಳಸೂತ್ರ ಕಳೆದುಕೊಂಡಿದ್ದೀಯಾ ಅಂತ ತಾನೇ, ಈ ಒದ್ದಾಟ, ಸಂಕಟ ಎಲ್ಲಾ. ನಿನ್ನನ್ನು ಈ ರೀತಿ ನೋಡೋಕೆ ಆಗ್ತಾ ಇಲ್ಲ ನಕ್ಷತ್ರಾ. ದೇವರ ಸಾಕ್ಷಿಯಾಗಿ, ನನ್ನ ಹೆತ್ತ ತಾಯಿ ಸಾಕ್ಷಿಯಾಗಿ, ನಾನು ಈ ಅರಿಶಿನ ದಾರವನ್ನು ನಿನಗೆ ಕಟ್ಟುತ್ತೇನೆ. ಅಲ್ಲಿಗೆ ಸರಿ ಹೋಗುತ್ತೆ ಅಲ್ವಾ ಎಂದು ಕೇಳುತ್ತಾನೆ. ನಕ್ಷತ್ರಾಗೆ ಕಟ್ಟುತ್ತಾನೆ. ಎಲ್ಲರ ಮುಂದೆ ಮತ್ತೊಮ್ಮೆ ನಕ್ಷತ್ರಾ-ಭೂಪತಿ ಮದುವೆ ಆಗಿದೆ.
ಇದನ್ನೂ ಓದಿ: BBK Grand Finale: ಶನಿವಾರ-ಭಾನುವಾರ ಅಲ್ಲ, ಶುಕ್ರವಾರ-ಶನಿವಾರ ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆ!
ಭೂಪತಿ-ನಕ್ಷತ್ರಾ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ. ಶ್ವೇತಾ ಕುತಂತ್ರದಿಂದ ಒಳ್ಳೆಯದೇ ಆಗಿದೆ. ಮುಂದೇನಾಗುತ್ತೆ ಅಂತ ನೊಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ