ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಾಯಕಿ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ನಕ್ಷತ್ರಾಗೆ ಮೊದಲಿನಿಂದಲೂ ಭೂಪತಿ ಮೇಲೆ ಪ್ರೀತಿ ಇತ್ತು. ಈಗ ಭೂಪತಿಗೆ ನಕ್ಷತ್ರಾ ಮೇಲೆ ಪ್ರೀತಿ (Love) ಆಗಿದೆ. ಅದನ್ನು ಹೇಳಿಕೊಳ್ಳೋ ವೇಳೆಯಲ್ಲೇ, ನಕ್ಷತ್ರಾ ಡಿವೋರ್ಸ್ (Divorce) ಬೇಕು ಎಂದು ಕೇಳಿದ್ದಾಳೆ. ಅದಕ್ಕೆ ಭೂಪತಿ ಸಹ ಒಪ್ಪಿದ್ದಾನೆ.
ಡಿವೋರ್ಸ್ ಬೇಕು ನನಗೆ
ಭೂಪತಿ ತನ್ನ ಪ್ರೀತಿ ಹೇಳಿಕೊಳ್ಳೋಣ ಎಂದು ನಕ್ಷತ್ರಾಳನ್ನು ಆಚೆ ಕರೆದುಕೊಂಡು ಹೋಗಿರುತ್ತಾನೆ. ಆಗ ನಕ್ಷತ್ರಾ ತಾನು ಏನೋ ಹೇಳಬೇಕು ಅಂತಾಳೆ. ಅದಕ್ಕೆ ಭೂಪತಿ ಹೇಳು ಅಂತಾನೆ. ನೀನು ಇವತ್ತು ಏನೇ ಕೇಳಿದ್ರೂ ಓಕೆ ಎನ್ನುತ್ತೇನೆ ಎಂದು ಭೂಪತಿ ಹೇಳ್ತಾನೆ. ಅದಕ್ಕೆ ನಕ್ಷತ್ರಾ ನನಗೆ ಡಿವೋರ್ಸ್ ಬೇಕು ಎಂದು ಕೇಳ್ತಾಳೆ. ಅದನ್ನು ಕೇಳಿ ಭೂಪತಿ ಗಾಬರಿಯಾಗಿದ್ದಾನೆ. ನನಗೆ ನಿನ್ನ ಜೊತೆ ಇರಲು ಆಗಲ್ಲ ಡಿವೋರ್ಸ್ ಕೊಡು ಎಂದು ಕೇಳ್ತಾನೆ.
ನಿನ್ನ ಜೊತೆ ನಾನು ಇರ್ತೇನೆ ನಿಜ ಹೇಳು
ಭೂಪತಿ ನಕ್ಷತ್ರಾ ಡಿವೋರ್ಸ್ ಕೇಳಿದ್ದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಯಾಕ್ ನಕ್ಷತ್ರಾ ಇದ್ದಕ್ಕಿದ್ದ ಹಾಗೇ ಡಿವೋರ್ಸ್ ಕೇಳಿದೆ. ನಾನು, ನೀನು ದೂರ ಆಗುವುದು. ಪತ್ರದ ಮೇಲೆ ಸೈನ್ ಮಾಡುವುದು. ಕೋರ್ಟ್ ನಲ್ಲಿ ಹೋಗಿ ನಿಲ್ಲುವುದು ಎಂದು ಹೇಳಿದ್ದಾನೆ. ನಿನಗೆ ಯಾರಾದ್ರೂ ಈ ರೀತಿ ಹೇಳಿ ಕೊಟ್ಟಿದ್ದಾರಾ ಹೇಳು ಎಂದು ಕೇಳಿದ್ದಾನೆ. ನಕ್ಷತ್ರಾ ಏನೂ ಹೇಳಿಲ್ಲ.
ಇದು ಗಂಡ-ಹೆಂಡ್ತಿ ವಿಷಯ
ಮನೆಯವರೆಲ್ಲಾ ಇಬ್ಬರು ಡಿವೋರ್ಸ್ ತೆಗೆದುಕೊಳ್ತಾರೆ ಎಂಬ ವಿಷ್ಯ ಕೇಳಿ ಗಾಬರಿಯಾಗಿದ್ದಾರೆ. ಯಾಕ್ ಈ ರೀತಿ ಮಾಡ್ತಾ ಇದ್ದೀರಿ ಎಂದು ಕೇಳ್ತಾರೆ. ಅದಕ್ಕೆ ಭೂಪತಿ, ಇದು ಗಂಡ-ಹೆಂಡ್ತಿ ವಿಷ್ಯ. ನಮ್ಮಿಬ್ಬರ ಮಧ್ಯೆ ಯಾರು ಬರಬೇಡಿ. ನಾನು ನಕ್ಷತ್ರಾಗೆ ಡಿವೋರ್ಸ್ ಕೊಟ್ಟೆ ಕೊಡ್ತೀನಿ ಎಂದು ಹೇಳಿದ್ದಾನೆ. ಅದಕ್ಕೆ ಅವರ ಅಣ್ಣಂದಿರು ಕೋಪ ಮಾಡಿಕೊಂಡು ಹೋಗಿದ್ದಾರೆ. ಅತ್ತಿಗೆ ಸಹ ತುಂಬಾ ಬೇಸರ ಮಾಡಿಕೊಂಡಿದ್ದಾರೆ.
ನಾನು ಈ ರಹಸ್ಯ ಕಂಡು ಹಿಡಿಯುತ್ತೇನೆ
ಮೌರ್ಯ ಸಹ ನಕ್ಷತ್ರ ಬಳಿ ಏನು ಕಾರಣ ಹೇಳಿ ಅತ್ತಿಗೆ ಎಂದು ಕೇಳಿದ್ದಾನೆ. ಆದ್ರೆ ನಕ್ಷತ್ರಾ ಏನೂ ಹೇಳಿಲ್ಲ. ಕೆಲವೊಂದು ವಿಷಯ ತಿಳಿದುಕೊಳ್ಳದೇ ಇರುವುದು ಒಳ್ಳೆಯದು ಎಂದು ಹೇಳಿದ್ದಾಳೆ. ಅತ್ತಿಗೆ, ನಾನು ಸುಮ್ಮನೇ ಇರಲ್ಲ. ಇದರ ಹಿಂದೆ ಯಾರಿದ್ದಾರೆ ಎಂದು ನಾನು ಕಂಡು ಹಿಡಿಯುತ್ತೇನೆ ಎಂದು ಮೌರ್ಯ ಹೇಳಿದ್ದಾನೆ.
ಶ್ವೇತಾಗೆ ಖುಷಿಯೋ ಖುಷಿ
ಶ್ವೇತಾಗೆ ಭಾರ್ಗವಿಯೇ ಡೆವಿಲ್ ಎಂದು ಗೊತ್ತಾಗಿದೆ. ಅದಕ್ಕೆ ನೀನು ನನಗೆ ಭೂಪತಿ ಜೊತೆ ಮದುವೆ ಮಾಡಿಸು. ಇಲ್ಲ ಅಂದ್ರೆ ನೀನೇ ಡೆವಿಲ್ ಎಂದು ಎಲ್ಲರ ಮುಂದೇ ಹೇಳ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡ್ತಾ ಇದ್ದಾಳೆ. ಅದಕ್ಕೆ ಭಾರ್ಗವಿ ಈ ರೀತಿ ನಕ್ಷತ್ರಾ ಮತ್ತು ಭೂಪತಿಗೆ ಡಿವೋರ್ಸ್ ಕೊಡಿಸುತ್ತಿದ್ದಾಳೆ. ಶ್ವೇತಾಗೆ ತುಂಬಾ ಖುಷಿಯಾಗಿದೆ.
ಇದನ್ನೂ ಓದಿ: Sathya Serial: ಸತ್ಯ ಪರ ನಿಂತ ಕಾರ್ತಿಕ್, ಮನೆಯವರ ವಿರೋಧ ಕಟ್ಟಿಕೊಂಡ ದಂಪತಿ!
ಮೌರ್ಯ ಎಲ್ಲಾ ಸತ್ಯವನ್ನು ಕಂಡು ಹಿಡಿಯುತ್ತಾನಾ? ನಕ್ಷತ್ರಾ-ಭೂಪತಿ ದೂರ ಆಗ್ತಾರಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ