ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿ ಮದುವೆ ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ (Marriage) ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗುತ್ತಿರಲಿಲ್ಲ. ಆದ್ರೆ ಈಗ ನಕ್ಷತ್ರಾಳನ್ನು ಸೊಸೆ ಎಂದು ಶಕುಂತಲಾ ದೇವಿ ಒಪ್ಪಿಕೊಂಡಿದ್ದಾರೆ. ಭೂಪತಿಗೆ RJ ಸಖಿ ಶೋ (Show) ಇಷ್ಟ. ಅದನ್ನು ಶ್ವೇತಾ ನಡೆಸಿಕೊಡ್ತಾ ಇದ್ಲು ಎಂದು ತಪ್ಪು ತಿಳಿದುಕೊಂಡಿದ್ದಾನೆ.
ಭೂಪತಿ ಕಂಪನಿಯಲ್ಲಿ ಶ್ವೇತಾ ಕೆಲಸ
ಶಕುಂತಲಾ ದೇವಿ ಶ್ವೇತಾ ಜವಾಬ್ದಾರಿಯನ್ನು ನಾನು ನೋಡಿಕೊಳ್ತೇನೆ ಎಂದು ಹೇಳಿದ್ದಾಳೆ. ಅದಕ್ಕೆ ಅವರ ಕಂಪನಿಯಲ್ಲೇ ಒಂದು ಕೆಲಸ ಕೊಟ್ಟಿದ್ದರು. ಆದ್ರೆ ಅದನ್ನು ಶ್ವೇತಾ ಸರಿಯಾಗಿ ಮಾಡಿಲ್ಲ. ಅದಕ್ಕೆ ಎಲ್ಲರೂ ಶ್ವೇತಾ ಕೆಲಸನೇ ಮಾಡಲ್ಲ ಎಂದು ಹೇಳಿದ್ದರು. ಆಕೆಗೆ ಇಲ್ಲಿ ಕೆಲಸ ಮಾಡೋದು ಕಷ್ಟ ಎಂದು ದೂರು ಹೇಳಿದ್ರು.
ದೊಡ್ಡ ಕೆಲಸ ಕೊಡುವುದಾಗಿ ಹೇಳಿದ ಭೂಪತಿ
ಭೂಪತಿ ಆಗ ಅವರು ದೊಡ್ಡ FM ಕಂಪನಿ ನಡೆಸಿದವರು. ಇಲ್ಲಿ ಬೇರೆಯವರ ಕೆಳಗೆ ಕೆಲಸ ಮಾಡೋದು ಕಷ್ಟ ಆಗಬಹುದು. ಅದಕ್ಕೆ ಅವರಿಗೆ ಇಷ್ಟ ಆಗೋ ಕೆಲಸ ನಾಳೆ ಅವರಿಗೆ ಸಿಗುತ್ತೆ ಎಂದು ಹೇಳ್ತಾನೆ. ಶ್ವೇತಾ ಮತ್ತು ನಕ್ಷತ್ರಾಗೆ ಬೆಳಗ್ಗೆ ರೆಡಿ ಆಗಿರಿ ನಿಮಗೆ ಸರ್ಪ್ರೈಸ್ ಇದೆ ಎಂದು ಹೇಳಿ ಕರೆದುಕೊಂಡು ಹೋಗಿರುತ್ತಾನೆ.
FM ಸ್ಟೇಶನ್ ಗೆ ಬಂದ ಮೂವರು
ಶ್ವೇತಾ, ಭೂಪತಿ ಯಾವುದೋ ದೊಡ್ಡ ಕೆಲಸ ಕೊಡ್ತಾನೆ ಎಂದು ಖುಷಿಯಾಗಿ ಬಂದಿದ್ದಾಳೆ. ಆದ್ರೆ ಭೂಪತಿ ಅವರನ್ನು FM ಸ್ಟೇಶನ್‍ಗೆ ಕರೆದುಕೊಂಡು ಬಂದಿದ್ದಾನೆ. ಆಗ ಶ್ವೇತಾಗೆ ಗಾಬರಿ ಆಗಿದೆ. ಇಲ್ಲಿಗೆ ಯಾಕೆ ಬಂದ್ರಿ ಎಂದು ಕೇಳ್ತಾಳೆ. ಅದಕ್ಕೆ ನಿನಗೆ ಇಷ್ಟವಾದ RJ ಶೋ ಮಾಡು. ಎಲ್ಲರಿಗೂ ಇಷ್ಟ ಆಗುತ್ತೆ ಎಂದು ಹೇಳಿದ್ದಾನೆ. ಶ್ವೇತಾ ಶಾಕ್ ಆಗಿದ್ದಾಳೆ.
ಶ್ವೇತಾ RJ ಸಖಿ ಅಲ್ಲ ಎಂದು ಗೊತ್ತಾಗುತ್ತಾ?
RJ ಸಖಿ ಕಾರ್ಯಕ್ರಮ ನಡೆಸಿಕೊಡ್ತಾ ಇದ್ದದ್ದು ನಕ್ಷತ್ರಾ. ಆದ್ರೆ ಅದನ್ನು ತಾನೇ ನಡೆಸಿಕೊಡ್ತೇನೆ ಎಂದು ಶ್ವೇತಾ ಸುಳ್ಳು ಹೇಳಿದ್ದಳು. ಭೂಪತಿಗೆ ಆ ಕಾರ್ಯಕ್ರಮ ಅಂದ್ರೆ ತುಂಬಾ ಇಷ್ಟ. ಅದಕ್ಕೆ ಭೂಪತಿ ಮತ್ತೆ ಆ ಕಾರ್ಯಕ್ರಮ ಸ್ಟಾರ್ಟ್ ಮಾಡು ಎಂದು ಶ್ವೇತಾಗೆ ಹೇಳ್ತಾ ಇದ್ದಾನೆ. ಶ್ವೇತಾ ಸುಮ್ಮನೇ ಓಕೆ ಎನ್ನುತ್ತಿದ್ದಾಳೆ.
RJ ಶೋ ನಡೆಸಿಕೊಡ್ತಾಳಾ ನಕ್ಷತ್ರಾ?
ಶ್ವೇತಾ RJ ಅಲ್ಲ ಅಂದ್ರೆ, ಆ ಶೋ ನಡೆಸಿ ಕೊಡ್ತಾ ಇದ್ದವರು ಯಾರು ಎಂದು ಭೂಪತಿ ಹುಡುಕುತ್ತಾನೆ. ಆಗ ಅದು ನಕ್ಷತ್ರಾ ಎಂದು ಗೊತ್ತಾದ್ರೆ, ಮತ್ತೆ ಆ ಶೋ ಮಾಡಲು ಹೇಳ್ತಾನಾ? ಅದಕ್ಕೆ ನಕ್ಷತ್ರಾ ಒಪ್ತಾಳಾ ನೋಡಬೇಕು. ಭೂಪತಿ ಒಪ್ಪಿದ್ರೂ ಶಕುಂತಲಾ ದೇವಿ ಅದಕ್ಕೆ ಒಪ್ಪುತ್ತಾಳಾ ನೋಡಬೇಕು.
ಇದನ್ನೂ ಓದಿ: Ranjani Raghavan: ಗಣರಾಜ್ಯೋತ್ಸವಕ್ಕೆ ವಿಶ್ ಮಾಡಿರೋ ಈ ಪೋರಿ ಯಾರು ಗೊತ್ತಾ?
ಶ್ವೇತಾ ನಾಟಕ ಭೂಪತಿ ಮುಂದೆ ಬಯಲಾಗುತ್ತಾ? ಸುಳ್ಳು ಹೇಳಿ ವಂಚಿಸಿದ್ದು ತಿಳಿಯುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ