ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಾಯಕಿ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಈ ಎಲ್ಲಾ ಸಮಸ್ಯೆಗಳ ಮಧ್ಯೆ ನಕ್ಷತ್ರಾ ತಾಳಿ ಕಟ್ ಆಗಿದೆ. ಅದಕ್ಕೆ ಭೂಪತಿ ಮತ್ತೊಮ್ಮೆ ನಕ್ಷತ್ರಾಗೆ (Nakshatra) ಅರಿಶಿನ ದಾರ ಕಟ್ಟಿದ್ದಾನೆ. ಭೂಪತಿ ಪ್ರೀತಿಯನ್ನು (Love) ಅವರ ಅತ್ತಿಗೆ ಅರ್ಥ ಮಾಡಿಸುತ್ತಿದ್ದಾಳೆ.
ತಾಳಿ ಕಟ್ಟಿ ಸಮಾಧಾನ ಮಾಡಿದ ಭೂಪತಿ
ನಕ್ಷತ್ರಾ ತಾಳಿ ಕಳೆದು ಕಂಗಾಲಾಗಿದ್ದಾಗ, ಭೂಪತಿ ಸಮಾಧಾನ ಮಾಡುತ್ತಾನೆ. ನಾನು ಎಲ್ಲರ ಸಮ್ಮುಖವಾಗಿ ನಿನಗೆ ಕಟ್ಟಿರೋ ಮಂಗಳಸೂತ್ರ ಕಳೆದುಕೊಂಡಿದ್ದೀಯಾ ಅಂತ ತಾನೇ, ಈ ಒದ್ದಾಟ, ಸಂಕಟ ಎಲ್ಲಾ.
ನಿನ್ನನ್ನು ಈ ರೀತಿ ನೋಡೋಕೆ ಆಗ್ತಾ ಇಲ್ಲ ನಕ್ಷತ್ರಾ. ದೇವರ ಸಾಕ್ಷಿಯಾಗಿ, ನನ್ನ ಹೆತ್ತ ತಾಯಿ ಸಾಕ್ಷಿಯಾಗಿ, ನಾನು ಈ ಅರಿಶಿನ ದಾರವನ್ನು ನಿನಗೆ ಕಟ್ಟುತ್ತೇನೆ. ಅಲ್ಲಿಗೆ ಸರಿ ಹೋಗುತ್ತೆ ಅಲ್ವಾ ಎಂದು ಕೇಳುತ್ತಾನೆ. ನಕ್ಷತ್ರಾಗೆ ಕಟ್ಟುತ್ತಾನೆ. ಎಲ್ಲರ ಮುಂದೆ ಮತ್ತೊಮ್ಮೆ ನಕ್ಷತ್ರಾ-ಭೂಪತಿ ಮದುವೆ ಆಗಿದೆ.
ನಕ್ಷತ್ರಾಗೆ ಊಟ ಮಾಡಿಸಿದ ಭೂಪತಿ
ನಕ್ಷತ್ರಾ ತಾಳಿ ಕಳೆದು ಹೋದಾಗಿನಿಂದ ಉಪವಾಸ ಇದ್ಲು. ಅದಕ್ಕೆ ಭೂಪತಿ ಅರಿಶಿನ ದಾರ ಕಟ್ಟಿ, ಆಕೆಗೆ ಸಮಾಧಾನ ಮಾಡಿ ಊಟ ಮಾಡಿಸಿದ್ದಾನೆ. ನಕ್ಷತ್ರಾಗೆ ತುಂಬಾ ಖುಷಿ ಆಗಿದೆ. ಅಲ್ಲದೇ ನಕ್ಷತ್ರಾ ತಂದೆ-ತಾಯಿ ಆರತಿ, ಚಂದ್ರಶೇಖರ್ ಸಹ ಖುಷಿಯಾಗಿದ್ದಾರೆ. ಮಗಳು-ಅಳಿಯ ಚೆನ್ನಾಗಿ ಇದ್ದಾರೆ ಎಂದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ: Bhagya Lakshmi: ತಂಗಿ ಲಕ್ಷ್ಮಿಗಾಗಿ ನಿತಿನ್ ಕಾಲು ಹಿಡಿಯುತ್ತಾಳಾ ಭಾಗ್ಯ?
ಪ್ರೀತಿ ಎಂದರೇನು ಎಂದು ಕೇಳಿದ ಭೂಪತಿ ಅತ್ತಿಗೆ
ಪ್ರೀತಿ ಅಂದ್ರೆ ಒಬ್ಬಬ್ಬರಿಗೆ ಒಂದೊಂದು ರೀತಿ ಇರುತ್ತೆ ಅತ್ತಿಗೆ. ನಿಮಗೆ ಬೇರೆ, ನನಗೆ ಬೇರೆ. ಪ್ರೀತಿ ಅಂದ್ರೆ ವಿಶ್ವಾಸ-ನಂಬಿಕೆ ಎಂದು ಭೂಪತಿ ಹೇಳ್ತಾನೆ. ಅದಕ್ಕೆ ಅವರ ಅತ್ತಿಗೆ ಅಲ್ಲ. ನಕ್ಷತ್ರಾ ತಾಳಿ ಕಳೆದುಕೊಂಡು ಉಪವಾಸ ಮಾಡುವಾಗ ನೀನು ಒದ್ದಾಡ್ತಾ ಇದ್ದೆಲ್ಲಾ ಅದು ಪ್ರೀತಿ ಎಂದು ಅತ್ತಿಗೆ ಹೇಳಿದ್ದಾರೆ.
ಭೂಪತಿಗೆ ಪ್ರೀತಿಯ ತಿಳುವಳಿಕೆ
ಅವಳು ಊಟ ಮಾಡ್ತಿಲ್ಲ ಅಂತ, ನೀನು ಸರಿಯಾದ ಟೈಮ್ ಗೆ ಊಟ ಮಾಡದೇ ಎದ್ದು ಹೋಗ್ತಿದ್ದೆ ನೋಡು, ಅದು ಪ್ರೀತಿ. ಕೈಯಲ್ಲಿ ಕರ್ಪೂರ ಹಚ್ಚಿಕೊಂಡಾಗ, ನಿನಗೆ ನೋವಾದ ರೀತಿ ಅದನ್ನು ಬಂದು ತಡೆದೆಲ್ಲಾ ಅದೇ ಪ್ರೀತಿ.
ನಕ್ಷತ್ರಾಗೆ ಮತ್ತೆ ತಾಳಿ ಕಟ್ಟಿದ್ರೆ, ಅತ್ತೆಗೆ ಅದು ಇಷ್ಟ ಆಗಲ್ಲ ಅಂತ ಗೊತ್ತಿತ್ತು. ಅವರಿಗೆ ಎದುರಾಗಿ, ಅವರ ಎದುರೇ ಮತ್ತೆ ತಾಳಿ ಕಟ್ಟಿದೆಲ್ಲಾ ಅದು ಪ್ರೀತಿ. ನಿನ್ನ ಕೈಯಿಂದ ಊಟ ಮಾಡಿಸಿದೆಲ್ಲಾ ಅದೇ ಪ್ರೀತಿ ಎಂದು ಭೂಪತಿಗೆ ಅವರ ಅತ್ತಿಗೆ ಅರ್ಥ ಮಾಡಿಸುತ್ತಿದ್ದಾಳೆ.
ನಿನಗೆ ಮೋಸ ಮಾಡಿಕೊಳ್ಳಬೇಡ
ನೀನು ನಕ್ಷತ್ರಾಗಾಗಿ ಮಾಡಿರೋ ಒಂದೊಂದು ಕೆಲಸದಲ್ಲೂ ಕಾಳಜಿಗಿಂತ ಪ್ರೀತಿಯೇ ಕಾಣುತ್ತೆ. ಆದ್ರೆ ನೀನು ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ನೀನು ಇವಳನ್ನು ಪ್ರೀತಿ ಮಾಡ್ತಾ ಇದೀಯೋ, ಇಲ್ವೋ ನಮಗೆ ಗೊತ್ತಿಲ್ಲದೇ ಇರಬಹುದು. ಆದ್ರೆ ನಿನಗೆ, ನಿನ್ನ ಮನಸ್ಸಿಗೆ ಗೊತ್ತಿರುತ್ತೆ ಅಲ್ವಾ. ಕೊನೆ ಪಕ್ಷ ನಿನಗೆ ನೀನು ಮೋಸ ಮಾಡಿಕೊಳ್ಳಬೇಡ ಎಂದು ಅತ್ತಿಗೆ ಭೂಪತಿಗೆ ಬುದ್ಧಿವಾದ ಹೇಳ್ತಾಳೆ.
ಶ್ವೇತಾಗೆ ಕೋಪ
ಭೂಪತಿ-ನಕ್ಷತ್ರಾಳನ್ನು ದೂರ ಮಾಡಿ, ತಾನು ಭೂಪತಿಯನ್ನು ಮದುವೆ ಆಗಬೇಕೆಂದು ಶ್ವೇತಾ ಅಂದುಕೊಂಡಿದ್ದಾಳೆ. ಅದಕ್ಕೆ ತಾಳಿ ಕದ್ದು ಆಟ ಆಡಿಸಿದ್ಲು. ಆದ್ರೆ ಭೂಪತಿ ಮತ್ತೆ ತಾಳಿ ಕಟ್ಟಿ ನಕ್ಷತ್ರಾಗೆ ಹತ್ತಿರ ಆಗಿದ್ದಾನೆ. ಅದಕ್ಕೆ ಶ್ವೇತಾ ಸಿಡಿ, ಸಿಡಿ ಎಂತಿದ್ದಾಳೆ. ಬೇಗ ನಕ್ಷತ್ರಾಳನ್ನು ಮನೆಯಿಂದ ಓಡಿಸಬೇಕು ಎಂದುಕೊಳ್ತಾ ಇದ್ದಾಳೆ.
ಇದನ್ನೂ ಓದಿ: Bigg Boss Kannada: ಬಿಗ್ ಬಾಸ್ ಮನೆಯಲ್ಲಿ ಆಸೆ ನೂರು ಆಸೆ! ಯಾರ ಕನಸು ಏನು ಅಂತ ನೀವೇ ತಿಳಿದುಕೊಳ್ಳಿ
ಭೂಪತಿಗೆ ತನ್ನ ಪ್ರೀತಿಯ ಅರಿವಾಗುತ್ತಾ? ನಕ್ಷತ್ರಾ ಬಳಿ ಪ್ರೀತಿ ಹೇಳಿಕೊಳ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ