ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿ ಮದುವೆ ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು (Daughter) ನಕ್ಷತ್ರಾ ಕಂಡ್ರೆ ಆಗುತ್ತಿರಲಿಲ್ಲ. ಆದ್ರೆ ಈಗ ನಕ್ಷತ್ರಾಳನ್ನು ಸೊಸೆ ಎಂದು ಶಕುಂತಲಾ ದೇವಿ ಒಪ್ಪಿಕೊಂಡಿದ್ದಾರೆ. ಭೂಪತಿಗೆ RJ ಸಖಿ ಶೋ ಇಷ್ಟ. RJ ಸಖಿ ನಕ್ಷತ್ರಾ ಎಂದು ತಿಳಿದು ಭೂಪತಿ ಖುಷಿ ಆಗಿದ್ದಾನೆ. ಸುಳ್ಳು ಹೇಳಿದ್ದ ಶ್ವೇತಾಗೆ ಭೂಪತಿ ಚೆನ್ನಾಗಿ ಬೈದಿದ್ದಾನೆ.
ಶ್ವೇತಾ ಮೇಲೆ ಕೋಪ
ಶ್ವೇತಾ ತಾನೇ RJ ಜೆ ಸಖಿ ಎಂದು ಭೂಪತಿ ಬಳಿ ಸುಳ್ಳು ಹೇಳಿರುತ್ತಾಳೆ. ಅದಕ್ಕೆ ಭೂಪತಿ ಕೋಪಕೊಂಡಿದ್ದಾನೆ. ಟ್ಯಾಲೆಂಟ್ ನಕ್ಷತ್ರಾಳದ್ದು ಹೆಸರು ನಿಂದು. ಮುಖ ನಿಮ್ಮದು, ವಾಯ್ಸ್ ಇವಳದ್ದು. ವಾಟ್ ಎ ಪ್ಲ್ಯಾನ್ ಶ್ವೇತಾ? ನಿಮ್ಮ ಒಳ್ಳೆ ಮುಖದ ಹಿಂದೆ ಈ ರೀತಿಯ ಕೆಟ್ಟ ಮುಖ ಇದೆ ಎಂದು ಗೊತ್ತೇ ಇರಲಿಲ್ಲ. ನಾನು ನಿಮ್ಮನ್ನು ಕ್ಷಮಿಸಲ್ಲ ಎಂದು ಭೂಪತಿ ಹೇಳಿದ್ದಾನೆ.
ನನಗೆ ಮೋಸ ಮಾಡಿ ಬಿಟ್ಟೆ
ಎಷ್ಟು ಧೈರ್ಯ ಇದ್ರೆ ನನ್ನ ಜೊತೆ ಈ ರೀತಿ ಒಂದು ಆಟ ಆಡ್ತೀರಾ? ಏನ್ ಅಂದುಕೊಂಡಿದ್ದೀರಿ ನೀವು ನನ್ನ? ಮಾತನಾಡಬೇಡಿ ನೀವು, ನಿಮ್ಮ ನಾಟಕ ನನ್ನ ಮುಂದೆ ಇನ್ನು ನಡೆಯಲ್ಲ.
ನಾನು ಯಾರನ್ನು RJ ಸಖಿ ಎಂದುಕೊಂಡಿದ್ದೇನೋ ಅವರು, ಅಲ್ಲವೇ ಅಲ್ಲ. ನಿಜವಾದ ಸಖಿ ನಕ್ಷತ್ರಾ ಅಂತ ನಾನೇ ನನ್ನ ಕಣ್ಣಾರೇ ನೋಡಿದ್ದಾಯ್ತು. ಇದೇ ಕಿವಿಯಲ್ಲಿ ನಕ್ಷತ್ರಾ ನಡೆಸಿಕೊಟ್ಟ ಶೋನ ಕೇಳಿಸಿಕೊಂಡೆ. ಇಷ್ಟು ದೊಡ್ಡ ಮೋಸ ಮಾಡಿದೆ ನೀನು ಶ್ವೇತಾ ಎಂದು ಭೂಪತಿ ಕೇಳಿದ್ದಾನೆ.
ಬೆನ್ನಿಗೆ ಚೂರಿ ಹಾಕಿದ್ರಿ
ಎದೆಗೆ ಡೈರೆಕ್ಟ್ ಆಗಿ ಚೂರಿ ಹಾಕಿದ್ರೆ ಅದರಿಂದ ನೋವಾಗಲ್ಲ. ಈ ರೀತಿ ಬೆನ್ನಿಗೆ ಚೂರಿ ಹಾಕ್ತಾರೆ ನೋಡಿ ಅದೇ ತುಂಬಾ ನೋವಾಗುವುದು. ನಾಚಿಕೆ ಆಗಲ್ವಾ ನಿಮಗೆ? ಇನ್ನೊಬ್ಬರು ಮಾಡಿದ ಕೆಲಸವನ್ನು ನೀವು ಮಾಡಿದ್ರೆ ಎಂದು ಹೇಳಿಕೊಂಡು ಓಡಾಡೋಕೆ. ಅದೇ ನನ್ನ ನಕ್ಷತ್ರಾ ಸಖಿ ಕಾರ್ಯಕ್ರಮ ನನಗೆ ಎಷ್ಟು ಇಷ್ಟ ಅಂತ ಗೊತ್ತಿದ್ರೂ ಒಂದು ದಿನ ಕೂಡ ನಾನೇ ಸಖಿ ಎನ್ನಲಿಲ್ಲ. ಅದೇ ನಿನಗೆ ನಕ್ಷತ್ರಾಗೆ ಇರುವ ವ್ಯತ್ಯಾಸ ಎಂದು ಶ್ವೇತಾಗೆ ಭೂಪತಿ ಹೇಳಿದ್ದಾನೆ.
ಶ್ವೇತಾ ಬಳಿ ಉತ್ತರವಿಲ್ಲ
ನಾನು ಆಗ ನಿಮ್ಮನ್ನು ತುಂಬಾ ಪ್ರೀತಿ ಮಾಡ್ತಾ ಇದ್ದೆ. ಜೊತೆಗೆ ಮದುವೆ ಬೇರೆ ನಿಶ್ಚಯ ಆಗಿತ್ತು. ಅದಕ್ಕೆ ನನಗೆ ಸತ್ಯ ಹೇಳುವ ಧೈರ್ಯ ಇರಲಿಲ್ಲ. ನನಗೆ ನಿಮ್ಮನ್ನು ಕಳೆದುಕೊಳ್ಳುತ್ತೇನೆ ಎಂಬ ಭಯ ಇತ್ತು. ನಕ್ಷತ್ರನ್ನ ಮದುವೆ ಆದ ಮೇಲೆ ನಿಜ ಹೇಳಬಹುದಿತ್ತು ತಾನೇ, ಇಲ್ಲ FM ಸ್ಟೇಶನ್‍ಗೆ ಕರೆದುಕೊಂಡು ಹೋದಾಗಾದ್ರೂ ನಿಜ ಹೇಳಬಹುದಿತ್ತು ಅಲ್ವಾ ಎಂದು ಪ್ರಶ್ನೆ ಮಾಡಿದ್ದಾನೆ. ಆದ್ರೆ ಅವಕ್ಕೆಲ್ಲಾ ಶ್ವೇತಾ ಬಳಿ ಉತ್ತರ ಇಲ್ಲ.
ಇದನ್ನೂ ಓದಿ: Puttakkana Makkalu: ಇದುವರೆಗೂ ಯಾರೂ ಹೇಳದ ಮಾತನ್ನ ಬಂಗಾರಮ್ಮಗೆ ಹೇಳಿದ ಪುಟ್ಟಕ್ಕ!
ಭೂಪತಿ ಬಳಿ ಶ್ವೇತಾಗೆ ಕ್ಷಮೆ ಇಲ್ವಾ? ನಕ್ಷತ್ರಾ ಮೇಲೆ ಭೂಪತಿಗೆ ಲವ್ ಆಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ