ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಾಯಕಿ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ನಕ್ಷತ್ರಾಗೆ ಮೊದಲಿನಿಂದಲೂ ಭೂಪತಿ ಮೇಲೆ ಪ್ರೀತಿ ಇತ್ತು. ಈಗ ಭೂಪತಿಗೆ ನಕ್ಷತ್ರಾ ಮೇಲೆ ಪ್ರೀತಿ ಆಗಿದೆ. ಅದನ್ನು ಹೇಳಿಕೊಳ್ಳೋ ವೇಳೆಯಲ್ಲೇ, ನಕ್ಷತ್ರಾ ಡಿವೋರ್ಸ್ (Divorce) ಬೇಕು ಎಂದು ಕೇಳಿದ್ದಾಳೆ. ಅದಕ್ಕೆ ಭೂಪತಿ ಸಹ ಒಪ್ಪಿದ್ದಾನೆ. ಇದೆಲ್ಲಾ ನಾಟಕವಂತೆ (Drama)
ಶ್ವೇತಾಗೂ-ಡೆವಿಲ್‍ಗೂ ಸಂಬಂಧ
ಶ್ವೇತಾಗೆ ಭಾರ್ಗವಿಯೇ ಡೆವಿಲ್ ಎಂದು ಗೊತ್ತಾಗಿದೆ. ಅದಕ್ಕೆ ನೀನು ನನಗೆ ಭೂಪತಿ ಜೊತೆ ಮದುವೆ ಮಾಡಿಸು. ಇಲ್ಲ ಅಂದ್ರೆ ನೀನೇ ಡೆವಿಲ್ ಎಂದು ಎಲ್ಲರ ಮುಂದೇ ಹೇಳ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡ್ತಾ ಇದ್ದಾಳೆ. ಅದಕ್ಕೆ ಭಾರ್ಗವಿ ಶ್ವೇತಾಗೆ ಸಹಾಯ ಮಾಡ್ತಾ ಇದ್ದಾಳೆ. ನಕ್ಷತ್ರಾಗೆ ಭೂಪತಿ ಡಿವೋರ್ಸ್ ಕೊಡು ಎಂದು ಹೇಳಿದ್ದಾಳೆ.
ಶ್ವೇತಾಳಿಂದಲೇ ನಮಗೆ ತೊಂದ್ರೆ
ಈ ಮನೆಯಲ್ಲಿ ನಡೆಯುವ ಎಲ್ಲಾ ವಿಚಾರವನ್ನೂ ಡೆವಿಲ್‍ಗೆ ಮುಟ್ಟಿಸುತ್ತಾ ಇರುವುದು ಶ್ವೇತಾ. ಡೆವಿಲ್ ನಮ್ಮಿಬ್ಬರ ಮಧ್ಯೆ ಬರಲು ಕಾರಣನೇ ಶ್ವೇತಾ. ಇದೆಲ್ಲದ ಹಿಂದೆ ಇರೋದೇ ಶ್ವೇತಾ ಎಂದು ಭೂಪತಿ ಹೇಳಿದ್ದಾರೆ. ಅದಕ್ಕೆ ನಕ್ಷತ್ರಾ ಇದು ಹೇಗೆ ಸಾಧ್ಯ? ಡೆವಿಲ್‍ಗೂ ಶ್ವೇತಾಗೂ ಏನ್ ಸಂಬಂಧ? ಇವಳಿಗೋಸ್ಕರ್ ಡೆವಿಲ್ ಯಾಕೆ ಸಹಾಯ ಮಾಡಬೇಕು ಎಂದು ನಕ್ಷತ್ರಾ ಕೇಳ್ತಾ ಇದ್ದಾಳೆ.
ಭೂಪತಿಯನ್ನು ತಡೆದ ನಕ್ಷತ್ರಾ
ಭೂಪತಿ ಎಲ್ಲಾ ಸತ್ಯವನ್ನು ಶ್ವೇತಾ ಬಳಿಯೇ ಕೇಳೋಣ ಎಂದು ಹೋಗ್ತಾ ಇರ್ತಾನೆ. ಆಗ ನಕ್ಷತ್ರಾ ತಡೆಯುತ್ತಾಳೆ. ನಮ್ಮ ಬಳಿ ಆಧಾರ ಇಲ್ಲ. ಅಲ್ಲದೇ ನಾವು ಅತ್ತೆ ಬಗ್ಗೆ ಯೋಚನೆ ಮಾಡಬೇಕು. ಇದು ಸರಿಯಾದ ಸಮಯವಲ್ಲ. ನಮ್ಮ ಜುಟ್ಟು ಡೆವಿಲ್ ಕೈನಲ್ಲಿದೆ. ಶ್ವೇತಾನಿಗೂ, ಡೆವಿಲ್‍ಗೂ ಸಂಬಂಧ ಇದೆ ಅಂತಾನೇ ಇಟ್ಕೊಳ್ಳೋಣ. ನೀನು ಶ್ವೇತಾ ಬಳಿ ಹೋಗಿ ಕೇಳಿದ್ರೆ, ಆಕೆ ಹೇಳ್ತಾಳಾ ಎಂದು ನಕ್ಷತ್ರಾ ಹೇಳ್ತಾಳೆ.
ಡೆವಿಲ್ ಗೆ ಬುದ್ಧಿ ಕಲಿಸುತ್ತೇನೆ
ನೀನು ಈಗ ದುಡಿಕಿ ಏನಾದ್ರೂ ಮಾಡಲು ಹೋದ್ರೆ, ನಾವು ನಾಟಕ ಮಾಡ್ತೀವಿ ಎಂದು ಗೊತ್ತಾಗುತ್ತೆ. ಆಗ ತೊಂದ್ರೆ ಆಗೋದು ಅತ್ತೆಗೆ ಎಂದು ನಕ್ಷತ್ರಾ ಹೇಳಿದ್ದಾಳೆ. ನನಗೂ ಎಲ್ಲಾ ಅರ್ಥ ಆಗ್ತಿದೆ ನಕ್ಷತ್ರಾ, ಶ್ವೇತಾ ಜೊತೆ ಮದುವೆ ಮಾಡಿಸಲು, ಡೆವಿಲ್ ನಮ್ಮಿಬ್ಬರಿಗೆ ಡಿವೋರ್ಸ್ ಕೊಡಿಸುತ್ತಾ ಇದ್ದಾಳೆ.
ಅದಕ್ಕೆ ಅಮ್ಮನ್ನ ಪಾನ್ ಆಗಿ ಯೂಸ್ ಮಾಡ್ತಾ ಇದ್ದಾಳೆ. ನಿನ್ನನ್ನು ಭುಪಡಿಸ್ತಾ ಇದ್ದಾಳೆ. ಆ ಡೆವಿಲ್ ಒಬ್ಳೆ ಬುದ್ಧಿವಂತೆ ಅನ್ಕೊಂಡಿದ್ದಾಳೆ. ಆದ್ರೆ ಎಲ್ಲೆಲ್ಲಿ ಯಾರಿಗೆ ಹೇಗೆ ಬುದ್ಧಿ ಕಲಿಸಬೇಕು ಎಂದು ನನಗೆ ಗೊತ್ತಿದೆ ಎಂದು ಭೂಪತಿ ಹೇಳಿದ್ದಾನೆ.
ಡೆವಿಲ್‍ಗೆ ಸ್ಕೆಚ್ ಹಾಕಿದ ಭೂಪತಿ
ನಕ್ಷತ್ರಾ ಇನ್ಮೇಲೆ ನೀನು ಏನೂ ತಲೆ ಕೆಡೆಸಿಕೊಳ್ಳಬೇಡ. ನಾನು ಡೆವಿಲ್ ನ ನೋಡಿಕೊಳ್ತೇನೆ. ಅವಳಿಗೆ ಪಾಠ ಕಲಿಸುತ್ತೇನೆ. ಅವಳಿಗೆ ನರಕ ದರ್ಶನ ಮಾಡಿಸುತ್ತೇನೆ. ನೀನು ಆರಾಮಾಗಿ ಇರು ಎಂದು ಹೇಳ್ತಾ ಇದ್ದಾನೆ. ನಕ್ಷತ್ರಾ ಅದನ್ನೇಲ್ಲಾ ಕೇಳಿ ಖುಷಿಯೂ ಆಗಿದ್ದಾಳೆ. ಭಯದಿಂದ ಆತಂಕಗೊಂಡಿದ್ದಾಳೆ.
ಇದನ್ನೂ ಓದಿ: Shrirasthu Shubhamasthu: ಮಾಧವನ ಸಹಾಯಕ್ಕೆ ಬಂದಾಯ್ತು ತುಳಸಿ, ಇನ್ನು ಗೆಲ್ಲುವುದೊಂದೇ ಸವಾಲು!
ಭೂಪತಿ ಪ್ಯ್ಲಾನ್ ವರ್ಕ್ ಆಗುತ್ತಾ? ನಕ್ಷತ್ರಾ ಏನ್ ಮಾಡ್ತಾಳೆ? ಶ್ವೇತಾ ಮದುವೆಯಾಗುವ ಕನಸು ನಿಜವಾಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ