Lakshana: ಡೆವಿಲ್ ಜಾಡು ಹಿಡಿಯಲು ಶ್ವೇತಾ ಪ್ಲಾನ್, ಮಿಲ್ಲಿ ಮೂಲಕ ಸಿಗ್ತಾಳಾ ಭಾರ್ಗವಿ?

ಶ್ವೇತಾ ಪ್ಲಾನ್

ಶ್ವೇತಾ ಪ್ಲಾನ್

ಮಿಲ್ಲಿ ಡೆವಿಲ್‍ ಅವರಿರುವ ಜಾಗಕ್ಕೆ ಹೋಗ್ತಾ ಇದ್ದಾಳೆ. ಶ್ವೇತಾ ಆಕೆಯನ್ನು ಫಾಲೋ ಮಾಡ್ತಾ ಇದ್ದಾಳೆ. ಇವತ್ತು ಆಕೆ ಯಾರು ಎಂದು ಗೊತ್ತಾಗುತ್ತೆ ಎಂದು ಶ್ವೇತಾ ಹೇಳ್ತಿದ್ದಾಳೆ.

  • News18 Kannada
  • 5-MIN READ
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ. ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ (Marriage) ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಆದ್ರೆ ಇನ್ನೊಂದೆಡೆ ಸಿಎಸ್ ತಂಗಿ (Sister) ಭಾರ್ಗವಿ, ತನ್ನ ಅಣ್ಣ ಮತ್ತು ಅವನ ಮಗಳು ನಕ್ಷತ್ರಾಗೆ ಕಾಟ ಕೊಡುತ್ತಿದ್ದಾಳೆ. ಶ್ವೇತಾಗೆ ಡೆವಿಲ್ (Devil) ಯಾರು ಅಂತ ಗೊತ್ತಾಗುತ್ತಾ?


    ಡೆವಿಲ್ ಸಿಎಸ್ ತಂಗಿ ಭಾರ್ಗವಿ
    ಧಾರಾವಾಹಿಯಲ್ಲಿ ಚಂದ್ರಶೇಖರ್ ಗೆ ಗೊತ್ತಿಲ್ಲದೇ ಯಾರೂ ತೊಂದರೆ ಕೊಡುತ್ತಿದ್ದಾರೆ. ಅದು ಮೌರ್ಯ ಎಂದುಕೊಂಡಿದ್ದರು. ಮೌರ್ಯ ಬದಲಾಗಿದ್ದಾನೆ. ಹಾಗಾದ್ರೆ ತೊಂದ್ರೆ ಕೊಡ್ತೀರೋ ಹೆಂಗಸು ಯಾರು ಎನ್ನುವ ಪ್ರಶ್ನೆಗಳು ಎದ್ದಿವೆ. ಅದು ಬೇರೆ ಯಾರು ಅಲ್ಲ ಭಾರ್ಗವಿ. ಮನೆಯಲ್ಲಿದುಕೊಂಡೇ ತನ್ನ ಅಣ್ಣನ ವಿರುದ್ಧ ಕತ್ತಿ ಮಸೆಯುತ್ತಿದ್ದಾಳೆ.


    25 ವರ್ಷದ ಹಳೆಯ ಸೇಡು
    25 ವರ್ಷಗಳ ಹಿಂದೆ ಚಂದ್ರಶೇಖರ್  ಭಾರ್ಗವಿಗೆ ತೊಂದ್ರೆ ಕೊಟ್ಟಿದ್ದನಂತೆ. ಆದ್ರೆ ಅದು ಏನೆಂದು ಇನ್ನೂ ಹೇಳಿಲ್ಲ. ಅದಕ್ಕೆ ತನ್ನ ಅಣ್ಣನಿಗೆ ನಾನು ಬುದ್ಧಿ ಕಲಿಸುತ್ತೇನೆ ಎಂದು ಹೇಳಿಕೊಂಡು ಡೆವಿಲ್ ಅನ್ನೋ ಹೆಸರಿನಲ್ಲಿ ಆಟ ವಾಡಿಸುತ್ತಿದ್ದಾಳೆ. ಭಾರ್ಗವಿ ಮಗಳೇ ಮಿಲ್ಲಿ. ಈಕೆ ಸಿಎಸ್ ಮನೆಯಲ್ಲಿ ಪಿಎ ಕೆಲಸ ಮಾಡಿಕೊಂಡಿದ್ದಾಳೆ.


    ಮಿಲ್ಲಿಗೂ, ಡೆವಿಲ್‍ಗೂ ಸಂಬಂಧ
    ಮಿಲ್ಲಿ ನಕ್ಷತ್ರಾ ಬಳಿ ಸೈನ್ ಮಾಡಿಸಿಕೊಳ್ಳೋಣ ಎಂದು ಮನೆಗೆ ಬಂದಿರುತ್ತಾಳೆ. ಆಗ ಶ್ವೇತಾ ಬಳಿ ಮಾತನಾಡಿ ಫೋನ್ ಮರೆತು ಹೋಗಿರುತ್ತಾಳೆ. ಆಗ ಕಾಲ್ ಬರುತ್ತೆ. ಡೆವಿಲ್ ಮೀಟ್ ಮಾಡಬೇಕು ಇವತ್ತು ಎಂದು. ಅದನ್ನು ಕೇಳಿ ಶ್ವೇತಾ ಶಾಕ್ ಆಗಿದ್ದಾಳೆ. ಈ ಚಿಲ್ಲರೆ ಮಿಲ್ಲಿ ಡೆವಿಲ್ ಕಡೆಯವಳ ಎಂದು ಆತಂಕಗೊಂಡಿದ್ದಾಳೆ.




    ಡೆವಿಲ್ ಹಿಡಿಯುತ್ತೇನೆ
    ಮಿಲ್ಲಿ ಮತ್ತೆ  ಫೋನ್ ತೆಗೆದುಕೊಂಡು ಹೋಗಲು ಬರುತ್ತಾಳೆ. ಆಗ ಶ್ವೇತಾ ಮಿಲ್ಲಿ ನಾನು ಡೆವಿಲ್‍ನ ಹಿಡಿಯುತ್ತೇನೆ ಎನ್ನುತ್ತಾಳೆ. ಅದಕ್ಕೆ ಮಿಲ್ಲಿ ಅದೆಲ್ಲಾ ಆಗಲ್ಲ. ಅವರು ಅಷ್ಟು ಸುಲಭವಾಗಿ ಸಿಗಲ್ಲ ಎನ್ನುತ್ತಾಳೆ.


    ಭೂಪತಿ, ಸಿಎಸ್ ಒಳ್ಳೆಯವರು ಅವರಿಗೆ ಆಗಲ್ಲ. ನಾನು ಕೆಟ್ಟವಳು. ಇದನ್ನೇಲ್ಲಾ ಸುಲಭವಾಗಿ ಮಾಡ್ತೇನೆ. ಅವಳ ಫೋನ್ ನಂಬರ್ ಸಿಕ್ಕಿದೆ. ಟ್ರ್ಯಾಪ್ ಮಾಡ್ತೇನೆ ಎನ್ನುತ್ತಾಳೆ. ಮಿಲ್ಲಿ ಅಲ್ಲಿಂದ ಗಾಬರಿಯಾಗಿ ಹೋಗಿದ್ದಾಳೆ.


    ಡೆವಿಲ್


    ಮಿಲ್ಲಿ ಹಿಂಬಾಲಿಸಿದ ಶ್ವೇತಾ
    ಮಿಲ್ಲಿ ತನ್ನ ಅಮ್ಮನಿಗೆ ಕಾಲ್ ಮಾಡಿ, ನಿನ್ನ ನಂಬರ್ ಟ್ರ್ಯಾಪ್ ಆಗ್ತಿದೆ. ಜಾಸ್ತಿ ಯಾರ ಬಳಿಯೂ ಮಾತನಾಡಬೇಡ ಎನ್ನುತ್ತಾಳೆ. ಅಲ್ಲದೇ ಮಿಲ್ಲಿ ಡೆವಿಲ್‍ ಅವರಿರುವ ಜಾಗಕ್ಕೆ ಹೋಗ್ತಾ ಇದ್ದಾಳೆ. ಶ್ವೇತಾ ಆಕೆಯನ್ನು ಫಾಲೋ ಮಾಡ್ತಾ ಇದ್ದಾಳೆ. ಇವತ್ತು ಆಕೆ ಯಾರು ಎಂದು ಗೊತ್ತಾಗುತ್ತೆ ಎಂದು ಶ್ವೇತಾ ಹೇಳ್ತಿದ್ದಾಳೆ.


    ಮಿಲ್ಲಿ


    ಇದನ್ನೂ ಓದಿ: Kendasampige: ಸುಮನಾ-ತೀರ್ಥ ಮಧ್ಯೆ ಬರುತ್ತಿರುವ ನಿತ್ಯಾ! ಕಾರ್ಪೊರೇಟರ್​ಗೆ ಹೊಸ ಭಯ


    ಮಗಳೇ ಅಮ್ಮನ ಜಾಗವನ್ನು ತೋರಿಸುತ್ತಾಳಾ? ಶ್ವೇತಾಗೆ ಡೆವಿಲ್ ಯಾರೂ ಅನ್ನೋ ಸತ್ಯ ಗೊತ್ತಾಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.

    Published by:Savitha Savitha
    First published: