ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಾಯಕಿ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಈಗ ಎಲ್ಲಾ ಸಮಸ್ಯೆ (Problem) ಬಗೆಹರಿದಿದೆ. ಭೂಪತಿಗೆ ನಕ್ಷತ್ರಾ ಮೇಲೆ ಪ್ರೀತಿ ಆಗುತ್ತಿದೆ. ಅದಕ್ಕೆ ಡೆವಿಲ್ (Devil) ಇಬ್ಬರನ್ನು ದೂರ ಮಾಡಲು ಆಟವಾಡ್ತಿದ್ದಾಳೆ
ನಕ್ಷತ್ರಾ ಮೇಲೆ ಒಲವು
ನಕ್ಷತ್ರಾ ಬಲವಂತವಾಗಿ ತನ್ನನ್ನು ಮದುವೆ ಆಗಿದ್ದಳು ಎಂದು ಭೂಪತಿಗೆ ಕೋಪ ಇರುತ್ತೆ. ನಂತರ ಮೌರ್ಯ, ನಕ್ಷತ್ರಾ ತಪ್ಪಿಲ್ಲ. ಇದೆಲ್ಲ ಅವರ ಅಪ್ಪ ಮಾಡಿದ್ದು ಎಂದು ಸತ್ಯ ಹೇಳ್ತಾನೆ. ಅದು ಗೊತ್ತಾದಾಗಿನಿಂದ ಭೂಪತಿ ತುಂಬಾ ಬೇಸರ ಮಾಡಿಕೊಂಡು, ನಾನು ನಕ್ಷತ್ರಾಳನ್ನು ತಪ್ಪು ತಿಳಿದುಕೊಂಡಿದ್ದೆ. ಇನ್ಮೇಲೆ ಚೆನ್ನಾಗಿ ಅವಳನ್ನು ನೋಡಿಕೊಳ್ಳಬೇಕು ಎಂದುಕೊಂಡಿದ್ದಾನೆ. ಅದಕ್ಕೆ ಇಬ್ಬರನ್ನು ದೂರ ಮಾಡು ಎಂದು ಶ್ವೇತಾ ಡೆವಿಲ್‍ಗೆ ಹೇಳಿದ್ದಾಳೆ.
ಅನಾಮಿಕರಿಂದ ಮೆಸೇಜ್
'ಇವತ್ತು ನೀನು ತುಂಬಾ ಖುಷಿಯಾಗಿದೀಯಾ ಅಲ್ವಾ? ಈ ಖುಷಿ ತುಂಬಾ ದಿನ ಇರಲ್ಲ. ಖುಷಿಯಾಗಿರಬೇಕು ಅಂದ್ರೆ ನಾನು ಹೇಳುವ ಕೆಲಸ ಮಾಡಬೇಕು'. ಈ ರೀತಿ ನಕ್ಷತ್ರಾಗೆ ಯಾರೂ ಮೆಸೇಜ್ ಕಳಿಸಿದ್ದಾರೆ. ಇದು ನಿಜವಾಗ್ಲೂ ನನಗೆ ಬಂದಿರೋ ಮೆಸೇಜಾ? ಅಥವಾ ಬೇರೆ ಯಾರಿಗೂ ಕಳಿಸೋ ಸಂದೇಶ ನನಗೆ ಬಂತಾ ಎಂದು ನಕ್ಷತ್ರಾ ತಲೆ ಕಡೆಸಿಕೊಂಡಿದ್ದಾಳೆ. ಅದಕ್ಕೆ ಆ ನಂಬರ್‍ಗೆ ಕಾಲ್ ಮಾಡಿದ್ದಾಳೆ. ಕಾಲ್ ಕನೆಕ್ಟ್ ಆಗಿಲ್ಲ.
ಮತ್ತೊಂದು ಸಂದೇಶ
ನೀನು ಫೋನ್ ಮಾಡ್ತೀಯಾ ಅಂತ ನನಗೆ ಗೊತ್ತು. ಫೋನ್ ಮಾಡೋದು ಟೈ ವೇಸ್ಟ್. ಯಾರು ಕಿಚನ್ ಸ್ಟವ್ ಮೇಲೆ ಹಾಲಿಟ್ಟಿದ್ದಾರೆ. ಹೋಗಿ ಸ್ಟವ್ ಆಫ್ ಮಾಡ್ತೀಯಾ ಅಥವಾ ಹಾಲು ಉಕ್ಕಿ ಹರಿಯಲಾ ಎಂದು ಮೆಸೇಜ್ ಕಳಿಸಿದ್ದಾರೆ. ಅದಕ್ಕೆ ನಕ್ಷತ್ರಾ ಹೋಗಿ ನೋಡಿದ್ರೆ ಹಾಲು ಉಕ್ಕಿ ಹರಿಯುತ್ತಿತ್ತು. ಇಲ್ಲಿ ಏನ್ ಆಗ್ತಿದೆ. ಒಂದು ಗೆತ್ತಾಗ್ತಾ ಇಲ್ಲ. ಇವರಿಗೆ ನಮ್ಮ ಮನೆಯ ವಿಷ್ಯ ಹೇಗೆ ಗೊತ್ತಾಗ್ತಿದೆ ಎಂದು ಆತಂಕಗೊಂಡಿದ್ದಾಳೆ.
ಭೂಪತಿ ಜೊತೆ ಮದುವೆ ಮಾಡಿಸು
ಶ್ವೇತಾಗೆ ಭಾರ್ಗವಿಯೇ ಡೆವಿಲ್ ಎಂದು ಗೊತ್ತಾಗಿದೆ. ಅದಕ್ಕೆ ನೀನು ನನಗೆ ಭೂಪತಿ ಜೊತೆ ಮದುವೆ ಮಾಡಿಸು. ಇಲ್ಲ ಅಂದ್ರೆ ನೀನೇ ಡೆವಿಲ್ ಎಂದು ಎಲ್ಲರ ಮುಂದೇ ಹೇಳ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡ್ತಾ ಇದ್ದಾಳೆ. ಅದಕ್ಕೆ ಭಾರ್ಗವಿ ಸಹ ಸರಿ ಎಂದಿದ್ದಾಳೆ. ಆದ್ರೆ ಈಗ ತಾನೇ ನಕ್ಷತ್ರಾ-ಭೂಪತಿ ಹತ್ತಿರವಾಗ್ತಿದ್ದಾರೆ. ಅವರನ್ನು ಮೊದಲು ದೂರ ಮಡಬೇಕಿದೆ.
ಡೆವಿಲ್ ಆಟನಾ?
ನಕ್ಷತ್ರಾಗೆ ಈ ರೀತಿ ಮೆಸೇಜ್ ಕಳ್ತಿರೋದು ಡೆವಿಲ್ ಇರಬಹುದು ಎಂದು ಅನುಮಾನಗಳು ಶುರುವಾಗಿವೆ. ಶ್ವೇತಾ ಮತ್ತು ಭೂಪತಿ ಮದುವೆ ಮಾಡಿಸಲು ಈ ರಣತಂತ್ರ ಮಾಡ್ತಾ ಇದ್ದಾಳೆ. ನಕ್ಷತ್ರಾ ಭೂಪತಿ ಕಡೆ ಹೆಚ್ಚು ಗಮನ ಕೊಡಬಾರದು. ಆಕೆಗೆ ಟೆನ್ಶನ್ ಆಗಲಿ ಎಂದು ಈ ರೀತಿ ಡ್ರಾಮಾ ಮಾಡ್ತಾ ಇರಬಹುದು. ಇದಕ್ಕೆಲ್ಲಾ ನಕ್ಷತ್ರಾ ಸಿಕ್ಕಿಹಾಕಿಕೊಳ್ತಾಳಾ ನೋಡಬೇಕು.
ಇದನ್ನೂ ಓದಿ: Bhagya Lakshmi: ಕಾಲುಂಗುರದ ಮಹತ್ವ ತಿಳಿಸಿದ ಕುಸುಮಾ, ಕೀರ್ತಿ ಸತ್ಯ ಲಕ್ಷ್ಮಿಗೆ ತಿಳಿಯುತ್ತಾ?
ನಕ್ಷತ್ರಾ ಮುಂದೆ ಡೆವಿಲ್ ಆಟ ನಡೆಯಲ್ವಾ? ಭೂಪತಿ ಮೇಲೆ ಅನುಮಾನ ಬರುವಂತೆ ಮಾಡ್ತಾಳಾ? ಶ್ವೇತಾ-ಭೂಪತಿ ಮದುವೆ ಮಾಡಿಸೋ ಡ್ರಾಮಾನಾ ಇದೆಲ್ಲಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ