ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ. ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ (Father) ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಆದ್ರೆ ಇನ್ನೊಂದೆಡೆ ಸಿಎಸ್ ತಂಗಿ ಭಾರ್ಗವಿ, ತನ್ನ ಅಣ್ಣ ಮತ್ತು ಅವನ ಮಗಳು ನಕ್ಷತ್ರಾಗೆ ಕಾಟ ಕೊಡುತ್ತಿದ್ದಾಳೆ. ಶ್ವೇತಾಗೆ ಡೆವಿಲ್ (Devil) ಯಾರು ಅಂತ ಗೊತ್ತಾಗುತ್ತಾ? ಡೆವಿಲ್ ಹಿಂಬಾಲಿಸಿ ಶ್ವೇತಾ ಸಿಎಸ್ ಮನೆಗೆ ಬಂದಿದ್ದಾಳೆ.
ಮಿಲ್ಲಿ ಜಾಡು ಹಿಡಿದ ಶ್ವೇತಾ
ಶ್ವೇತಾ ತನಗೆ ಡೆವಿಲ್ ನಂಬರ್ ಸಿಕ್ಕಿದೆ ಎಂದು ಹೇಳಿರುತ್ತಾಳೆ. ಮಿಲ್ಲಿ ತನ್ನ ಅಮ್ಮನಿಗೆ ಕಾಲ್ ಮಾಡಿ, ನಿನ್ನ ನಂಬರ್ ಟ್ರ್ಯಾಪ್ ಆಗ್ತಿದೆ. ಜಾಸ್ತಿ ಯಾರ ಬಳಿಯೂ ಮಾತನಾಡಬೇಡ ಎನ್ನುತ್ತಾಳೆ. ಅಲ್ಲದೇ ಮಿಲ್ಲಿ ಡೆವಿಲ್ ಇರುವ ಜಾಗಕ್ಕೆ ಹೋಗ್ತಾ ಇದ್ದಳು. ಶ್ವೇತಾ ಆಕೆಯನ್ನು ಫಾಲೋ ಮಾಡಿಕೊಂಡು ಹೋಗಿದ್ದಾಳೆ. ಶ್ವೇತಾಗೆ ಡೆವಿಲ್ ಯಾರು ಅನ್ನುವ ಸತ್ಯ ತಿಳಿದಿಕೊಳ್ಳಲು ಹೋಗಿದ್ದಾಳೆ.
ಡೆವಿಲ್ ಮಗಳು ಮಿಲ್ಲಿ
ಮಿಲ್ಲಿ ತನ್ನ ಅಮ್ಮ ಭಾರ್ಗವಿ ಅಂದ್ರೆ ಡೆವಿಲ್ ನನ್ನು ಭೇಟಿಯಾಗಿದ್ದಾಳೆ. ಅಲ್ಲಿ ಅವರಿಬ್ಬರು ಮಾತನಾಡುವುದನ್ನು ಶ್ವೇತಾ ಕೇಳಿಸಿಕೊಂಡಿದ್ದಾಳೆ. ಮಿಲ್ಲಿ ಅಮ್ಮ, ಅಮ್ಮ ಎನ್ನುತ್ತಿದ್ದಾಳೆ. ಅದನ್ನು ಕೇಳಿ ಶ್ವೇತಾ ಶಾಕ್ ಆಗಿದ್ದಾಳೆ. ಇಷ್ಟು ದಿನ ನಮ್ಮ ಜೊತೆ ಇದ್ದ ಮಿಲ್ಲಿ ಡೆವಿಲ್ ಮಗಳಾ? ನಾವು ಯಾಮಾರಿ ಬಿಟ್ಟೆವು ಎಂದುಕೊಳ್ತಾ ಇದ್ದಾಳೆ.
ಕೈಗೆ ಸಿಗಲಿಲ್ಲ ಡೆವಿಲ್
ಡೆವಿಲ್ ಕಾರು ಹತ್ತಿ ಹೋಗಬೇಕು. ಅಷ್ಟರಲ್ಲಿ ಶ್ವೇತಾ ಆಕೆಯ ಕೈ ಹಿಡಿದುಕೊಳ್ತಾಳೆ. ಇನ್ನೇನು ಮುಖ ನೋಡಬೇಕು ಎನ್ನುವಷ್ಟರಲ್ಲಿ. ಭಾರ್ಗವಿ ಆಕೆಯನ್ನು ತಳ್ಳಿ ಹೊರಟು ಹೋಗುತ್ತಾಳೆ. ಆದ್ರೂ ಶ್ವೇತಾ ಬಿಡದೇ ಆಕೆಯನ್ನು ಫಾಲೋ ಮಾಡಿಕೊಂಡು ಹೋಗಿದ್ದಾಳೆ. ಕೈಗೆ ಬಂದು ತುತ್ತು ಬಾಯಿಗೆ ಬರಲಿಲ್ಲ ಎಂದುಕೊಳ್ತಾ ಇದ್ದಾಳೆ.
ಚಂದ್ರಶೇಖರ್ ಮನೆ ಬಳಿ ಹೋದ ಕಾರು
ಶ್ವೇತಾ ಡೆವಿಲ್ ಕಾರು ಫಾಲೋ ಮಾಡಿಕೊಂಡು ಹೋದ್ರೆ, ಅದು ಸೀದಾ ಸಿಎಸ್ ಮನೆ ಮುಂದೆ ಹೋಗಿ ನಿಂತಿದೆ. ಡೆವಿಲ್ ಇಳಿದು ಮನೆ ಒಳಗೆ ಹೋಗಿದ್ದಾಳೆ. ಅದನ್ನು ನೋಡಿ ಶ್ವೇತಾ ಶಾಕ್ ಆಗಿದ್ದಾಳೆ. ಇದೇನಿದು ಡೆವಿಲ್ ಇವರ ಮನೆಗೆ ಹೋಗ್ತಾಳೆ ಎಂದು ಆತಂಕಗೊಂಡಿದ್ದಾಳೆ. ಇಲ್ಲಿ ಏನಾಗ್ತಿದೆ. ನಾನು ಏನ್ ನೋಡ್ತಾ ಇದೀನಿ ಶ್ವೇತಾನೇ ಗೊಂದಲದಲ್ಲಿದ್ದಾಳೆ.
ಸಿಎಸ್ ಮನೆಗೆ ಹೋದ ಶ್ವೇತಾ
ಶ್ವೇತಾ ಡೆವಿಲ್ ಕಂಡುಹಿಡಿಯಲು ಸಿಎಸ್ ಮನೆಗೆ ಹೋಗಿದ್ದಾಳೆ. ಆಗ ಸಿಎಸ್ ಹೆಂಡ್ತಿ ಆರತಿ ಬೈಯ್ತಾಳೆ. ಯಾಕೆ ಬಂದೆ ಹೊರಗೆ ಹೋಗು ಎಂದು. ಅದಕ್ಕೆ ಶ್ವೇತಾ, ನಾನು ಈ ಮನೆಯಲ್ಲಿ ಏನೂ ಕದಿಯಲು ಬಂದಿಲ್ಲ. ನಾನು ಡೆವಿಲ್ ಫಾಲೋ ಮಾಡಿಕೊಂಡು ಬಂದೆ. ಅವಳು ನಿಮ್ಮ ಮನೆ ಒಳಗೆ ಬಂದಳು ಎಂದು ಹೇಳ್ತಾಳೆ. ಅದನ್ನು ಕೇಳಿ ಆರತಿ ಮತ್ತು ಚಂದ್ರಶೇಖರ್ ಶಾಕ್ ಆಗಿದ್ದಾರೆ.
ಇದನ್ನೂ ಓದಿ: Olavina Nildana: ತಾರಿಣಿ ಮೇಲೆ ಸೇಡು ತೀರಿಸಿಕೊಳ್ತೇನೆ ಎಂದ ಧೀರಜ್, ಸುಮತಿಗೆ ಉಮಾ ಕ್ಲಾಸ್!
ಭಾರ್ಗವಿನೇ ಡೆವಿಲ್ ಅನ್ನೋದು ಗೊತ್ತಾಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ