Lakshana: ಅತ್ತೆ ಭಾರ್ಗವಿಯೇ ಡೆವಿಲ್, ಸತ್ಯ ಗೊತ್ತಾಗಿ ಶಾಕ್ ಆದ ಶ್ವೇತಾ!

ಅತ್ತೆ ಭಾರ್ಗವಿಯೇ ಡೆವಿಲ್

ಅತ್ತೆ ಭಾರ್ಗವಿಯೇ ಡೆವಿಲ್

ಶ್ವೇತಾ ಭಾರ್ಗವಿಯನ್ನು ಭಾಗು ಎಂದು ಕರೆಯುತ್ತಾಳೆ. ತುಂಬಾ ಪ್ರೀತಿ ಮಾಡ್ತಾ ಇದ್ಲು. ನೋಡಿದ್ರೆ ಆಕೆಯೇ ಡೆವಿಲ್ ಎಂದು ಗೊತ್ತಾಗಿ ಶಾಕ್ ಆಗಿದ್ದಾಳೆ. ನಾನು ನೋಡ್ತಿರೋದು ಏನು? ಇವಳೇ ಡೆವಿಲ್.

  • News18 Kannada
  • 2-MIN READ
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ. ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಆದ್ರೆ ಇನ್ನೊಂದೆಡೆ ಸಿಎಸ್ ತಂಗಿ ಭಾರ್ಗವಿ, ತನ್ನ ಅಣ್ಣ ಮತ್ತು ಅವನ ಮಗಳು (Daughter) ನಕ್ಷತ್ರಾಗೆ ಕಾಟ ಕೊಡುತ್ತಿದ್ದಾಳೆ. ಶ್ವೇತಾಗೆ ಭಾರ್ಗವಿಯೇ ಡೆವಿಲ್ ಎಂದು ಗೊತ್ತಾಗಿದೆ.


    ಚಂದ್ರಶೇಖರ್ ಮನೆ ಬಳಿ ಹೋದ ಕಾರು
    ಶ್ವೇತಾ ಡೆವಿಲ್ ಕಾರು ಫಾಲೋ ಮಾಡಿಕೊಂಡು ಹೋದ್ರೆ, ಅದು ಸೀದಾ ಸಿಎಸ್ ಮನೆ ಮುಂದೆ ಹೋಗಿ ನಿಂತಿದೆ. ಡೆವಿಲ್ ಇಳಿದು ಮನೆ ಒಳಗೆ ಹೋಗಿದ್ದಾಳೆ. ಅದನ್ನು ನೋಡಿ ಶ್ವೇತಾ ಶಾಕ್ ಆಗಿದ್ದಾಳೆ. ಅದಕ್ಕೆ ಸಿಎಸ್ ಮನೆಗೆ ಶ್ವೇತಾ ಹೋಗಿದ್ದಾಳೆ. ನಾನು ಡೆವಿಲ್ ಒಳಗೆ ಬಂದಿದ್ದನ್ನು ನೋಡಿದ್ದೇನೆ. ದಯವಿಟ್ಟು ನನ್ನ ಮಾತು ನಂಬಿ ಎನ್ನುತ್ತಾಳೆ.


    ಶ್ವೇತಾಳನ್ನು ದಬ್ಬಿದ ಆರತಿ
    ಶ್ವೇತಾ ಎಷ್ಟೇ ಹೇಳಿದ್ರೂ, ಚಂದ್ರಶೇಖರ್ ಮತ್ತು ಆರತಿ ಆ ಮಾತನ್ನು ನಂಬಿಲ್ಲ. ಈಕೆಗೆ ದುಡ್ಡು ಬೇಕು. ಅದಕ್ಕೆ ಇಲ್ಲಿಗೆ ಬಂದಿದ್ದಾಳೆ. ಇವಳ ಸುಳ್ಳು ನಂಬೋಕೆ ಆಗಲ್ಲ ಎಂದು ಆರತಿ ಕೋಪ ಮಾಡಿಕೊಂಡಿದ್ದಾಳೆ. ಆಗ ಭಾರ್ಗವಿ ಬಂದು ಆಕೆಯನ್ನು ತಳ್ಳಿ ಎಂದು ಹೇಳುತ್ತಾಳೆ.  ಶ್ವೇತಾಳನ್ನು ಆರತಿ ಹೊರದಬ್ಬಿದ್ದಾಳೆ.


    ಮನೆ ಮುಂದೆ ಇರುವ ಕಾರು
    ಶ್ವೇತಾಳನ್ನು ಮನೆಯಿಂದ ಆಚೆ ತಬ್ಬಿದ್ರೂ, ಅವಳು ಸತ್ಯ ಹೇಳೋವರೆಗೂ ಹೋಗಲ್ಲ ಎನ್ನುತ್ತಿದ್ದಾಳೆ. ನೋಡಿದ್ರೆ ಮನೆ ಹೊರಗೆ ಕಾರು ಇದೆ. ಅದಕ್ಕೆ ಶ್ವೇತಾ ಹಿಂದಿನ ಬಾಗಿಲಿನಿಂದ ಹೋಗಿದ್ದಾಳೆ. ತಾನು ಇವತ್ತು ಡೆವಿಲ್‍ನ ಹಿಡಿಯಲೇಬೇಕು ಎಂದುಕೊಂಡಿದ್ದಾಳೆ. ಆದ್ರೆ ಅಲ್ಲಿ ಶ್ವೇತಾಗೆ ಶಾಕ್ ಆಗಿದೆ. ಯಾಕಂದ್ರೆ ಭಾರ್ಗವಿ ಮಾತನಾಡುವುದನ್ನು ಕೇಳಿಸಿಕೊಳ್ತಿದ್ದಾಳೆ.




    ಭಾರ್ಗವಿ ಮಾತು
    ಭಾರ್ಗವಿ ತನ್ನ ಮಗಳು ಮಿಲಿಗೆ ಕಾಲ್ ಮಾಡಿ ಮಾತನಾಡುತ್ತಿದ್ದಾಳೆ. ಶ್ವೇತಾ ನಾನು ಏನ್​ ಕೊಟ್ಟರೂ ಕುಡಿದು ಬೆಳೆದವಳು. ಈಗ ನನ್ನ ರಹಸ್ಯ ಕಂಡು ಹಿಡಿಯಲು ಬಿಡ್ತೀನಾ? ಆಕೆಗೆ ಚಂದ್ರಶೇಖರ್ ಮೇಲೆ ದ್ವೇಷ ಬರುವಂತೆ ಮಾಡಿದವಳೇ ನಾನು. ಚಂದ್ರಶೇಖರ್​​ಗೆ ಕಾಟ ಕೊಟ್ಟಿದ್ದೇನೆ. ಈಗ ಏನೋ ನಮ್ಮ ಅಣ್ಣ ನಕ್ಷತ್ರಾ ಬಂದ ಮೇಲೆ ಖುಷಿಯಾಗಿದ್ದಾನೆ.


    colors kannada serial, kannada serial, shwetha know about devil is bhargavi, lakshana serial, serial today episode, ಲಕ್ಷಣ ಧಾರಾವಾಹಿ, ಅತ್ತೆ ಭಾರ್ಗವಿಯೇ ಡೆವಿಲ್, ಸತ್ಯ ಗೊತ್ತಾಗಿ ಶಾಕ್ ಆದ ಶ್ವೇತಾ!, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಮಿಲ್ಲಿ


    ಭಾಗು ಡೆವಿಲ್
    ಶ್ವೇತಾ ಭಾರ್ಗವಿಯನ್ನು ಭಾಗು ಎಂದು ಕರೆಯುತ್ತಾಳೆ. ತುಂಬಾ ಪ್ರೀತಿ ಮಾಡ್ತಾ ಇದ್ಲು. ನೋಡಿದ್ರೆ ಆಕೆಯೇ ಡೆವಿಲ್ ಎಂದು ಗೊತ್ತಾಗಿ ಶಾಕ್ ಆಗಿದ್ದಾಳೆ. ನಾನು ನೋಡ್ತಿರೋದು ಏನು? ಇವಳೇ ಡೆವಿಲ್. ಹಾಗಾದ್ರೆ ಮನೆಯಲ್ಲಿದುಕೊಂಡೆ ಎಲ್ಲರನ್ನು ಯಾಮಾರಿಸುತ್ತಿದ್ದಾರೆ ಎಂದುಕೊಳ್ತಾ ಇದ್ದಾಳೆ. ಶ್ವೇತಾಗೆ ಈ ವಿಚಾರವನ್ನು ಅರಗಿಸಿಕೊಳ್ಳಲು ಆಗ್ತಾ ಇಲ್ಲ.


    colors kannada serial, kannada serial, shwetha know about devil is bhargavi, lakshana serial, serial today episode, ಲಕ್ಷಣ ಧಾರಾವಾಹಿ, ಅತ್ತೆ ಭಾರ್ಗವಿಯೇ ಡೆವಿಲ್, ಸತ್ಯ ಗೊತ್ತಾಗಿ ಶಾಕ್ ಆದ ಶ್ವೇತಾ!, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಶ್ವೇತಾ


    ಇದನ್ನೂ ಓದಿ: Amrutha Ramamurthy: ಬ್ಯಾಗ್‍ನಲ್ಲಿ ಚಾಕು, ಪೆಪ್ಪರ್ ಸ್ಪ್ರೇ ಇರಬೇಕು, ಹೀಗೆ ಅಂದಿದ್ಯಾರು? 


    ಶ್ವೇತಾ ಈ ವಿಚಾರವನ್ನು ಎಲ್ಲರಿಗೂ ಹೇಳ್ತಾಳಾ? ಭಾರ್ಗವಿ ಸತ್ಯ ಎಲ್ಲರ ಮುಂದೆ ಬಯಲಾಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.

    Published by:Savitha Savitha
    First published: