ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ ಧಾರಾವಾಹಿ ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ. ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಆದ್ರೆ ಇನ್ನೊಂದೆಡೆ ಸಿಎಸ್ ತಂಗಿ ಭಾರ್ಗವಿ, ತನ್ನ ಅಣ್ಣ ಮತ್ತು ಅವನ ಮಗಳು ನಕ್ಷತ್ರಾಗೆ ಕಾಟ ಕೊಡುತ್ತಿದ್ದಾಳೆ. ಶ್ವೇತಾಗೆ ಭಾರ್ಗವಿಯೇ ಡೆವಿಲ್ ಎಂದು ಗೊತ್ತಾಗಿದೆ. ಶ್ವೇತಾ ಆಕೆಯನ್ನು ಆಟವಾಡಿಸಲು ಮುಂದಾಗಿದ್ದಾಳೆ
ಭಾರ್ಗವಿಯೇ ಡೆವಿಲ್
ಶ್ವೇತಾ ಭಾರ್ಗವಿಯನ್ನು ಭಾಗು ಎಂದು ಕರೆಯುತ್ತಾಳೆ. ತುಂಬಾ ಪ್ರೀತಿ ಮಾಡ್ತಾ ಇದ್ಲು. ನೋಡಿದ್ರೆ ಆಕೆಯೇ ಡೆವಿಲ್ ಎಂದು ಗೊತ್ತಾಗಿ ಶಾಕ್ ಆಗಿದ್ದಾಳೆ. ನಾನು ನೋಡ್ತಿರೋದು ಏನು? ಇವಳೇ ಡೆವಿಲ್. ಹಾಗಾದ್ರೆ ಮನೆಯಲ್ಲಿದುಕೊಂಡೆ ಎಲ್ಲರನ್ನು ಯಾಮಾರಿಸುತ್ತಿದ್ದಾರೆ ಎಂದುಕೊಳ್ತಾ ಇದ್ದಾಳೆ. ಶ್ವೇತಾಗೆ ಈ ವಿಚಾರವನ್ನು ಅರಗಿಸಿಕೊಳ್ಳಲು ಆಗ್ತಾ ಇಲ್ಲ.
ವಿಡಿಯೋ ಮಾಡಿದ ಶ್ವೇತಾ
ಇಷ್ಟು ದಿನ ಈ ಡೆವಿಲ್ ಶ್ವೇತಾಳನ್ನು ಮುಂದಿಟ್ಟುಕೊಂಡು ತನ್ನ ಅಣ್ಣ-ಅತ್ತಿಗೆಗೆ ತೊಂದ್ರೆ ಕೊಟ್ಟಿದ್ದಾಳೆ. ಅದು ಶ್ವೇತಾಗೆ ಗೊತ್ತಾಗಿದೆ. ಅದಕ್ಕೆ ಇಷ್ಟು ದಿನ ನನ್ನ ದಾಳವಾಗಿ ಮಾಡಿಕೊಂಡಿದ್ದೆ. ಇನ್ಮುಂದೆ ನಾನು ನಿನ್ನನ್ನು ಆಟವಾಡಿಸುತ್ತೇನೆ ಎಂದಿದ್ದಾಳೆ. ಅದಕ್ಕೆ ಭಾರ್ಗವಿ ಮಾತನಾಡುವಾಗ ಅದನ್ನು ವಿಡಿಯೋ ಮಾಡಿಕೊಂಡಿದ್ದಾಳೆ.
ಭಾರ್ಗವಿ ಶಾಕ್
ಎಲ್ಲಾ ವಿಡಿಯೋ ಮಾಡಿಕೊಂಡು ಭಾರ್ಗವಿ ಮುಂದೆ ಬಂದು ನಿಂತಿದ್ದಾಳೆ. ಆಕೆ ನೀನು ಯಾಕ್ ಬಂದೆ ಹೋಗು. ನೀನು ಕೆಟ್ಟವಳು. ನನ್ನ ಅಣ್ಣ-ಅತ್ತಿಗೆಯನ್ನೇ ಕೊಲ್ಲೋಕೆ ಬಂದಿದ್ದೆ ಎಂದು ಹೇಳ್ತಾಳೆ. ಅಯ್ಯೋ ಭಾಗು, ಅಯ್ಯೋ ಭಾಗು ಎನ್ನುತ್ತಾ, ಅಯ್ಯೋ ಡೆವಿಲ್ ಎನ್ನುತ್ತಾಳೆ. ಅದನ್ನು ಕೇಳಿ ಭಾರ್ಗವಿ ಶಾಕ್ ಆಗಿದ್ದಾಳೆ. ನನಗೆ ಎಲ್ಲಾ ಸತ್ಯ ಗೊತ್ತಾಗಿದೆ ಎಂದು ಹೇಳಿದ್ದಾಳೆ.
ಸತ್ಯ ಹೇಳ್ತೇನೆ ಎಂದ ಶ್ವೇತಾ
ಶ್ವೇತಾ ತನಗೆ ಎಲ್ಲಾಸತ್ಯ ಗೊತ್ತಾಗಿದೆ. ಸಾಕ್ಷಿಗಾಗಿ ವಿಡಿಯೋ ಮಾಡಿಕೊಂಡಿದ್ದೇನೆ. ಅದನ್ನು ಎಲ್ಲರ ಮುಂದೆ ಹೇಳ್ತೇನೆ. ನನಗೆ ತೊಂದ್ರೆ ಕೊಟ್ಟಿದ್ದೆ. ನಿನ್ನ ಮಾತ್ರ ಸುಮ್ಮನೇ ಬಿಡಲ್ಲ ಎಂದು ಶ್ವೇತಾ ಹೇಳ್ತಿದ್ದಾಳೆ. ಅದನ್ನು ಕೇಳಿ ಭಾರ್ಗವಿ ಗಾಬರಿಯಾಗಿದ್ದಾಳೆ. ಅಲ್ಲದೇ ಯಾರಿಗೂ ಹೇಳಬೇಡ. ನಿನ್ನನ್ನು ಕೊಲ್ಲುತ್ತೇನೆ ಎಂದು ಭಯಪಡಿಸುತ್ತಿದ್ದಾಳೆ. ಆದ್ರೆ ಶ್ವೇತಾ ಹೆದರಿಕೊಂಡಿಲ್ಲ.
ಸಿಎಸ್‍ಗೆ ಸತ್ಯ ಗೊತ್ತಾಗುತ್ತಾ?
ಶ್ವೇತಾ ಸಾಕ್ಷಿ ಸಮೇತ ಸಿಎಸ್ ಮತ್ತು ಆರತಿ ಮುಂದೆ ಬಂದಿದ್ದಾಳೆ. ನಿಮ್ಮ ಬಳಿ ಒಂದು ಸತ್ಯ ಹೇಳಬೇಕು ಎನ್ನುತ್ತಿದ್ದಾಳೆ. ಏನದು ಎಂದು ಅವರು ಕೇಳುತ್ತಿದ್ದಾರೆ. ಆಕೆ ಹೇಳುತ್ತೇನೆ ಅಂತಾಳೆ. ಅಷ್ಟರಲ್ಲಿ ಭಾರ್ಗವಿ ಬಂದು ತಡೆದಿದ್ದಾಳೆ. ಆಕೆಯನ್ನೂ ಮೀರಿ ಶ್ವೇತಾ ಸತ್ಯ ಹೇಳ್ತಾಳಾ ಅನ್ನುವುದೇ ಕುತೂಹಲವಾಗಿದೆ.
ಇದನ್ನೂ ಓದಿ: South Indian Actors: ಸಿರಿವಂತೆಯರಿಗೆ ಹಾರ್ಟ್ ಕೊಟ್ಟ ಸೌತ್ ಇಂಡಿಯಾ ನಟರು! ಲಿಸ್ಟ್‌ನಲ್ಲಿ ಯಾರಿದ್ದಾರೆ ನೋಡಿ
ಶ್ವೇತಾ ಸತ್ಯಾ ಹೇಳ್ತಾಳಾ? ಭಾರ್ಗವಿ ತಡೆಯುತ್ತಾಳಾ?, ಸಿಎಸ್‍ಗೆ ನಿಜ ಗೊತ್ತಾದ್ರೆ ಏನ್ ಆಗುತ್ತೆ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ