ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂಡು ತಿರುವುಗಳನ್ನು ಪಡೆದುಕೊಳ್ತಿದೆ. ಭೂಪತಿಗೆ ಈಗ ತಾನೇ ತನಗೆ ನಕ್ಷತ್ರಾ ಮೇಲೆ ಪ್ರೀತಿ (Love) ಇದೆ ಎಂದು ಗೊತ್ತಾಗಿದೆ. ಅದನ್ನು ಹೇಳಿಕೊಳ್ಳಬೇಕು ಎಂದುಕೊಂಡಾಗಲೇ ದೊಡ್ಡ ಆಘಾತ ಕಾದಿತ್ತು. ನಕ್ಷತ್ರಾ ಡಿವೋರ್ಸ್ ಕೊಡ ಎಂದು ಕೇಳಿ ಬಿಡ್ತಾಳೆ. ಆಗ ಭೂಪತಿ ಏನಾಯ್ತು ಎಂದು ಕೇಳಿದ್ದಕ್ಕೆ ಡೆವಿಲ್ ಬಗ್ಗೆ ಹೇಳ್ತಾಳೆ. ಅದಕ್ಕೆ ಭೂಪತಿ ಮತ್ತು ನಕ್ಷತ್ರಾ ಸೇರಿಕೊಂಡು ಡೆವಿಲ್‍ಗೆ ಚಳ್ಳೆಹಣ್ಣು ತಿನ್ನಿಸಬೇಕು ಎಂದು ನಾಟಕವಾಡ್ತಾ (Drama) ಇದ್ದಾರೆ. ಇಬ್ಬರು ನಾಟಕವಾಡ್ತಾ ಇರೋದು ಮೌರ್ಯನಿಗೆ ಗೊತ್ತು ಅದಕ್ಕೆ ಅವನ ಸಹಾಯ ಮಾಡ್ತಾ ಇದ್ದಾರೆ. ಈ ವಿಷ್ಯ ಈಗ ಶ್ವೇತಾಗೆ ತಿಳಿಯುತ್ತಿದೆ.
ಡೆವಿಲ್‍ಗಾಗಿ ಡ್ರಾಮಾ
ಭಾರ್ಗವಿಯೇ ಡೆವಿಲ್ ಎಂದು ಶ್ವೇತಾಗೆ ಗೊತ್ತು. ಅದಕ್ಕೆ ಡೆವಿಲ್ ಶ್ವೇತಾ ಹೇಳಿದಂತೆ ಕೇಳುತ್ತಿದ್ದಾಳೆ. ಭೂಪತಿಯನ್ನು ನನ್ನ ಜೊತೆ ಮದುವೆ ಮಾಡಿಸು ಎಂದು ಶ್ವೇತಾ ಹೇಳಿದ್ದಾಳೆ. ಅದಕ್ಕೆ ನಕ್ಷತ್ರಾಗೆ ಭೂಪತಿಗೆ ಡಿವೋರ್ಸ್ ಕೊಡು ಎಂದು ಡೆವಿಲ್ ಹೇಳಿದ್ದಾಳೆ. ಅದಕ್ಕೆಭೂಪತಿ-ನಕ್ಷತ್ರಾ ನಾಟಕವಾಡ್ತಾ ಇದ್ದಾರೆ. ಡಿವೋರ್ಸ್ ಕೊಡುವುದಾಗಿ ಭೂಪತಿ ಸುಳ್ಳು ಹೇಳಿದ್ದಾನೆ.
ಭೂಪತಿ ಮದುವೆಯಾಗಲ್ಲ ಎಂದ ಶ್ವೇತಾ
ನಕ್ಷತ್ರಾ ಶ್ವೇತಾ ಬಳಿ ಬಂದು, ಶ್ವೇತಾ ನೀನು ಭೂಪತಿಯನ್ನು ಮದುವೆ ಆಗು ಎಂದು ಕೇಳಿಕೊಳ್ತಾ ಇದ್ದಾಳೆ. ಶ್ವೇತಾ ಸಹ ಖುಷಿಯಿಂದ ಒಪ್ಪಿಕೊಳ್ಳಬಹುದು ಎಂದು ಎಲ್ಲರೂ ಅಂದುಕೊಂಡಿದ್ರು. ಆದ್ರೆ ಆ ರೀತಿ ಆಗಿಲ್ಲ. ಶ್ವೇತಾ ನಾನು ಭೂಪತಿಯನ್ನು ಮದುವೆ ಆಗಲ್ಲ ಎಂದು ಹೇಳಿದ್ದಾಳೆ. ಅದು ಸಹ ನಕ್ಷತ್ರಾಳನ್ನು ಕಾಡಿಸಬೇಕು ಎಂದು. ನಕ್ಷತ್ರಾ ಭೂಪತಿಯನ್ನು ಮದುವೆ ಆಗು ಎಂದು ಕಾಲು ಹಿಡಿದುಕೊಂಡು ಬೇಡಿಕೊಳ್ಳಬೇಕು ಎನ್ನುವುದು ಅವಳ ಪ್ಲ್ಯಾನ್.
ಅಮ್ಮನ ಪ್ರಾಣಕ್ಕೆ ಅಪಾಯ
ಡೆವಿಲ್‍ಗೆ ಬುದ್ಧಿ ಕಲಿಸಲು ಮೌರ್ಯ ಭೂಪತಿಗೆ ಸಹಾಯ ಮಾಡ್ತಾ ಇದ್ದಾನೆ. ಅಣ್ಣ, ನಾನು ಹೇಗಿದ್ರೂ ಮನೆಯಿಂದ ಆಚೆ ಇರೋದು ತಾನೆ. ಆ ಡೆವಿಲ್‍ಗೆ ಹೇಗಿದ್ರೂ ನನ್ನ ಮೇಲೆ ಡೌಟ್ ಬರಲ್ಲ.ಅದಕ್ಕೆ ಒಂದು ಪ್ಲ್ಯಾನ್ ಮಾಡಿದ್ದೇನೆ. ಪೊಲೀಸರನ್ನು ಕರೆದುಕೊಂಡು ಹೋಗ್ತೀನಿ.
ಅಮ್ಮನ ಪೊಲೀಸರ ಜೊತೆ ಮನೆಗೆ ಕರೆದುಕೊಂಡು ಬರ್ತೇನೆ ಎಂದು ಮೌರ್ಯ ಹೇಳ್ತಾನೆ. ಅದಕ್ಕೆ ಭೂಪತಿ ಇದೆಲ್ಲಾ ನನಗೂ ಮಾಡೋಕೆ ಬರುತ್ತೆ. ಆದ್ರೆ ಈ ವಿಷ್ಯ ಡೆವಿಲ್‍ಗೆ ಗೊತ್ತಾದ್ರೆ, ಅಮ್ಮನ ಪ್ರಾಣಕ್ಕೆ ಅಪಾಯ ಆಗುತ್ತೆ ಎಂದು ಹೇಳಿದ್ದಾನೆ.
ಡೆವಿಲ್‍ಗೆ ಡೌಟ್ ಬರಲ್ಲ
ಪೊಲೀಸರನ್ನು ಕರೆದುಕೊಂಡು ಹೋಗುವುದು ಬೇಡ. ಈಗ ಮಾಡ್ತಿರೋ ನಾಟಕ ಮುಂದುವರೆಸೋಣ. ಅತ್ತೆ ಜೀವಕ್ಕೆ ಅಪಾಯ ತರೋದು ಬೇಕಿಲ್ಲ ಎಂದು ನಕ್ಷತ್ರಾ ಹೇಳ್ತಾಳೆ. ಅದಕ್ಕೆ ಮೌರ್ಯ ನಾನು ಪೊಲೀಸ್ ಕರೆದುಕೊಂಡು ಹೋದ್ರೆ ಡೆವಿಲ್‍ಗೆ ಡೌಟ್ ಬರಲ್ಲ. ಯಾಕಂದ್ರೆ ಅವಳಿಗೆ ನಾನು ಈ ಮನೆಗೆ ಬಂದು ಹೋಗುವುದು ಗೊತ್ತಾಗ್ತಿಲ್ಲ ಎಂದು ಹೇಳ್ತಿದ್ದಾನೆ
ಶ್ವೇತಾ ಕಣ್ಣಿಗೆ ಬಿದ್ದ ಮೌರ್ಯ
ಮೌರ್ಯ ಭೂಪತಿ ಮನೆಗೆ ಆಗಾಗ ಕದ್ದು ಮುಚ್ಚಿ ಬರ್ತಾನೆ. ಯಾರಿಗೂ ಕಾಣದಂತೆ ಓಡಾಡುತ್ತಾನೆ. ಈಗ ಮೌರ್ಯ ಭೂಪತಿ-ನಕ್ಷತ್ರಾ ಬಳಿ ಮಾಡನಾಡಿಕೊಂಡು ಬಂದಿದ್ದನ್ನು ಶ್ವೇತಾ ನೋಡಿದ್ದಾಳೆ. ಈ ಸತ್ಯವನ್ನು ಡೆವಿಲ್ ಗೆ ಹೇಳಿದ್ರೆ, ಎಲ್ಲರ ನಾಟಕ ಬಯಲಾಗುವುದು ಪಕ್ಕಾ. ಶ್ವೇತಾ-ಮೌರ್ಯ ಏನು ಮಾತನಾಡ್ತಾರೆ ಅನ್ನೋದೇ ಕುತೂಹಲ.
ಇದನ್ನೂ ಓದಿ: Anita Bhat: ಅನಿತಾ ಭಟ್ ಸಹೋದರ ನಿಧನ, ಅಣ್ಣನ ನೆನಪಲ್ಲಿ ನಟಿ ಭಾವುಕ ಸಂದೇಶ
ಭೂಪತಿ-ನಕ್ಷತ್ರಾ ನಾಟಕ ಬಯಲಾಗುತ್ತಾ? ಶ್ವೇತಾಗೆ ಎಲ್ಲಾ ಸತ್ಯ ತಿಳಿಯಿತಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ