ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿಯೂ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಈ ಧಾರಾವಾಹಿಯ ನಾಯಕಿ ನಕ್ಷತ್ರಾ. ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಆದ್ರೆ ಈಗ ಭೂಪತಿ ತಮ್ಮ ಮೌರ್ಯನಿಗೆ ನಕ್ಷತ್ರಾ ಒಳ್ಳೆಯವಳು ಎಂದು ಗೊತ್ತಾಗಿದೆ. ಮೌರ್ಯ ನಕ್ಷತ್ರಾ ಬಗ್ಗೆ ಸತ್ಯ ಹೇಳಿದ್ದಾನೆ. ಅದನ್ನು ಕೇಳಿ ಭೂಪತಿ ಬದಲಾಗಿದ್ದಾನೆ. ನಕ್ಷತ್ರಾ ಬಳಿ ಕ್ಷಮೆ (Sorry) ಕೇಳಿದ್ದಾನೆ.
ಡೆವಿಲ್ ಮುಂದೆ ಶ್ವೇತಾ ಆಟ
ಶ್ವೇತಾಗೆ ಭಾರ್ಗವಿಯೇ ಡೆವಿಲ್ ಎಂದು ಗೊತ್ತಾಗಿ ಶಾಕ್ ಆಗಿದ್ದಾಳೆ. ಇಷ್ಟು ದಿನ ಈ ಡೆವಿಲ್ ಶ್ವೇತಾಳನ್ನು ಮುಂದಿಟ್ಟುಕೊಂಡು ತನ್ನ ಅಣ್ಣ-ಅತ್ತಿಗೆಗೆ ತೊಂದ್ರೆ ಕೊಟ್ಟಿದ್ದಾಳೆ. ಅದು ಶ್ವೇತಾಗೆ ಗೊತ್ತಾಗಿದೆ. ಅದಕ್ಕೆ ಇಷ್ಟು ದಿನ ನನ್ನ ದಾಳವಾಗಿ ಮಾಡಿಕೊಂಡಿದ್ದೆ. ಇನ್ಮುಂದೆ ನಾನು ನಿನ್ನನ್ನು ಆಟವಾಡಿಸುತ್ತೇನೆ ಎಂದಿದ್ದಾಳೆ. ಅದಕ್ಕೆ ಭಾರ್ಗವಿ ಮಾತನಾಡುವಾಗ ಅದನ್ನು ವಿಡಿಯೋ ಮಾಡಿಕೊಂಡು ಭಾರ್ಗವಿಯನ್ನು ಆಟವಾಡಿಸುತ್ತಿದ್ದಾಳೆ.
ನನ್ನ ಸ್ನೇಹಿತರ ಬಳಿ ವಿಡಿಯೋ
ಡೆವಿಲ್ ಭಾರ್ಗವಿ ಶ್ವೇತಾಳನ್ನು ಭೇಟಿಯಾಗಲು ಬಂದಿದ್ದಾಳೆ. ರೌಡಿಗಳ ಜೊತೆ ಬಂದಿರುವ ಆಕೆ, ಶ್ವೇತಾಳನ್ನು ಕೊಲೆ ಮಾಡುವುದಾಗಿ ಹೇಳುತ್ತಾಳೆ. ಅದಕ್ಕೆ ಶ್ವೇತಾ ನಗುತ್ತಾ, ನಿನ್ನ ಬಳಿ ಬರುವುದಕ್ಕೂ ಮುಂಚೆ ಎಲ್ಲಾ ತಯಾರಿ ಮಾಡಿಕೊಂಡು ಬಂದಿದ್ದೇನೆ. ಈ ವಿಡಿಯೋ ನನ್ನ ಸ್ನೇಹಿತೆಯರಿಗೆ ಕಳಿಸಿದ್ದೇನೆ. ನಾನು ಕಾಲ್ ಮಾಡೋದು ಲೇಟ್ ಆದ್ರೆ, ಈ ವಿಡಿಯೋ ಭೂಪತಿ, ಸಿಎಸ್‍ಗೆ ತಲುಪುತ್ತೆ ಎಂದು ಹೇಳಿದ್ದಾರೆ.
ನಾನು ಹೇಳಿದ ಕೆಲಸ ಮಾಡಬೇಕು ನೀನು
ಭಾರ್ಗವಿ ತಾನೇ ಡೆವಿಲ್ ಎನ್ನುವ ವಿಡಿಯೋವನ್ನು ಶ್ವೇತಾ ರೆಕಾರ್ಡ್ ಮಾಡಿಕೊಂಡು ಆಟವಾಡಿಸುತ್ತಿದ್ದಾಳೆ. ನಾನು ಹೇಳಿದ ಹಾಗೇ ನೀನು ಕೇಳಲೇ ಬೇಕು ಇಲ್ಲ ಅಂದ್ರೆ, ನಾನು ಈ ವಿಡಿಯೋವನ್ನು ಎಲ್ಲರಿಗೂ ಕಳಿಸುತ್ತೇನೆ ಎಂದು ಎದುರಿಸುತ್ತಿದ್ದಾಳೆ. ಅದಕ್ಕೆ ಡೆವಿಲ್, ಈಗ ನಿನ್ನ ಟೈಂ ಅದಕ್ಕೆ ಈ ರೀತಿ ಮಾಡ್ತಾ ಇದ್ದೀಯಾ, ನನ್ನ ಟೈಮ್ ಬರಲಿ, ಆಗ ನಾನು ಏನು ಅಂತ ತೋರಿಸುತ್ತೇನೆ ಎಂದು ಹೇಳ್ತಾ ಇದ್ದಾಳೆ.
ಭೂಪತಿ ಜೊತೆ ಮದುವೆ ಮಾಡಿಸಿ
ಶ್ವೇತಾ ಡೆವಿಲ್ ಜೊತೆ ಡೀಲ್‍ಗೆ ಇಳಿದಿದ್ದಾಳೆ. ನೀನು ಏನ್ ಮಾಡ್ತೀಯೋ ನನಗೆ ಗೊತ್ತಿಲ್ಲ. ಭೂಪತಿ ಜೊತೆ ನನ್ನ ಮದುವೆ ಮಾಡಿಸು ಎಂದು ಕೇಳ್ತಾ ಇದ್ದಾಳೆ. ಅದಕ್ಕೆ ಡೆವಿಲ್ ಅದು ಹೇಗೆ ಸಾಧ್ಯ? ಅವನಿಗೆ ಮದುವೆ ಆಗಿದೆ. ನಕ್ಷತ್ರಾ ಇದ್ದಾಳೆ. ಅದು ನನಗೆ ಆಗಲ್ಲ. ನನ್ನ ಕೈಯಲ್ಲಿ ಆಗೋ ಕೆಲಸ ಹೇಳು ಅಂತಾಳೆ. ಅದಕ್ಕೆ ಶ್ವೇತಾ ಪಟ್ಟು ಬಿಡುತ್ತಿಲ್ಲ.
ಖುಷಿಯಲ್ಲಿ ಭೂಪತಿ-ನಕ್ಷತ್ರಾ
ಭೂಪತಿಯನ್ನು ಮದುವೆ ಆಗಿದ್ದರಲ್ಲಿ ನಕ್ಷತ್ರಾ ತಪ್ಪಿಲ್ಲ ಎಂದು ಗೊತ್ತಾಗಿದೆ. ಅದಕ್ಕೆ ಭೂಪತಿ ನಕ್ಷತ್ರಾ ಬಳಿ ಕ್ಷಮೆ ಕೇಳಿದ್ದಾನೆ. ಇನ್ಮುಂದೆ ಚೆನ್ನಾಗಿರೋಣ ಎಂದು ಹೇಳಿದ್ದಾನೆ. ನಕ್ಷತ್ರಾ ಸಹ ಖುಷಿಯಾಗಿದ್ದಾಳೆ. ಈಗ ಶ್ವೇತಾ ನನಗೆ ಭೂಪತಿ ಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಇದಕ್ಕೆಲ್ಲಾ ಭೂಪತಿ ಒಪ್ಪಿಗೆ ಸಿಗುತ್ತಾ? ಡೆವಿಲ್ ಏನಾದ್ರೂ ಕುತಂತ್ರ ಮಾಡ್ತಾಳಾ ನೋಡಬೇಕು.
ಇದನ್ನೂ ಓದಿ: Bhagyalakshmi: ಸಿಂಪಲ್ ಆಗಿ ಸ್ಟಾರ್ ಸಿಂಗರ್ ಮದುವೆ, ಕುಲದೇವರ ಮುಂದೆ ವೈಷ್ಣವ್-ಲಕ್ಷ್ಮಿ ವಿವಾಹ!
ಶ್ವೇತಾ ಭೂಪತಿಯನ್ನು ಮದುವೆ ಆಗ್ತಾಳಾ? ಡೆವಿಲ್ ಮುಂದಿನ ಕುತಂತ್ರವೇನು? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ