ಹಿಟ್ ಸೀರಿಯಲ್‍ಗಳನ್ನು ನೀಡುತ್ತಿರುವ ಕಲರ್ಸ್ ಕನ್ನಡದಲ್ಲಿ (Colors Kannada) ಇವತ್ತಿನಿಂದ ರಾತ್ರಿ 10.30ಕ್ಕೆ ಲಕ್ಷಣ (Lakshana) ಧಾರಾವಾಹಿ (Serial) ಪ್ರಸಾರವಾಗುತ್ತೆ. ಈ ಧಾರಾವಾಹಿ ಮೊದಲು ರಾತ್ರಿ 9.30ಕ್ಕೆ ಪ್ರಸಾರವಾಗ್ತಿತ್ತು. ಬಿಗ್ ಬಾಸ್ (Bigg Boss) ಸೀಸನ್ 09 ಶುರುವಾದಾಗ, ರಾತ್ರಿ 8.30ಕ್ಕೆ ಪ್ರಸಾರವಾಗಲು ಶುರುವಾಯ್ತು. ಲಕ್ಷಣ ಧಾರಾವಾಹಿ ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರಿಗೆ ಇಷ್ಟ ಆಗಿದೆ. ನಕ್ಷತ್ರಾ-ಭೂಪತಿ ಪ್ರೀತಿ. ಶ್ವೇತಾ ಕುತಂತ್ರ, ಡೆವಿಲ್ ಭಾರ್ಗವಿ ಆಟ ಎಲ್ಲವೂ ಅಭಿಮಾನಿಗಳನ್ನು ಹಿಡಿದಿಟ್ಟಿದೆ. ಲಕ್ಷಣ ಧಾರಾವಾಹಿ ಇಂದಿನಿಂದ ರಾತ್ರಿ 10.30ಕ್ಕೆ ಪ್ರಸಾರವಾಗಲಿದೆ. ಹೊಸ ಧಾರಾವಾಹಿ ಅಂತರಪಟಗಾಗಿ ಲಕ್ಷಣ ಸೀರಿಯಲ್ ಎತ್ತಂಗಡಿ ಮಾಡಿದ್ದಾರೆ. ಸೀರಿಯಲ್‍ನಲ್ಲಿ ಶ್ವೇತಾ ಮೌರ್ಯನಿಗೆ ಸವಾಲ್ (Challenge) ಹಾಕಿದ್ದಾಳೆ. ಏನದು ನೋಡಿ.
ಶ್ವೇತಾ ಹೇಳಿದಂತೆ ಕೇಳುತ್ತಿರುವ ಡೆವಿಲ್
ಶ್ವೇತಾ ಭಾರ್ಗವಿಯನ್ನು ಭಾಗು ಎಂದು ಕರೆಯುತ್ತಾಳೆ. ತುಂಬಾ ಪ್ರೀತಿ ಮಾಡ್ತಾ ಇದ್ಲು. ನೋಡಿದ್ರೆ ಆಕೆಯೇ ಡೆವಿಲೆ ಎಂದು ಗೊತ್ತಾಗಿ ಶಾಕ್ ಆಗಿದ್ದಾಳೆ. ಅಲ್ಲದೇ ತಾನು ಹೇಳಿದಂತೆ ಕೇಳಬೇಕು. ಇಲ್ಲ ಅಂದ್ರೆ ನೀನೇ ಡೆವಿಲ್ ಎಂದು ಎಲ್ಲರ ಬಳಿ ಹೇಳ್ತೀನಿ ಎಂದು ಹೇಳಿದ್ದಾಳೆ. ಅದಕ್ಕೆ ಡೆವಿಲ್ ಭಯಪಟ್ಟು ಶ್ವೇತಾ ಹೇಳಿದಂತೆ ಕೇಳ್ತಾ ಇದ್ದಾಳೆ. ಶ್ವೇತಾ ಅಣತೆಯಂತೆ ಭೂಪತಿ ಮತ್ತು ಶ್ವೇತಾ ಮದುವೆ ಮಾಡಿಸುತ್ತಿದ್ದಾಳೆ.
ಎಲ್ಲಾ ಶ್ವೇತಾ ಡ್ರಾಮಾ
ಶ್ವೇತಾ ಭೂಪತಿಯನ್ನು ಮದುವೆಯಾಗಬೇಕು ಎಂದು ಮೊದಲಿನಿಂದಲೂ ಅಂದುಕೊಂಡಿದ್ಲು. ಈಗ ಆಕೆ ಅಂದುಕೊಂಡಂತೆ ಆಗುತ್ತಿದೆ. ಶಾಸ್ತ್ರವನ್ನು ನಕ್ಷತ್ರಾ ಜೊತೆ ಮಾಡಿಸಿ, ತಾಳಿಯನ್ನು ತಾನು ಕಟ್ಟಿಸಿಕೊಳ್ತಾ ಇದ್ದಾಳೆ. ಒಳಗೊಳಗೆ ಖುಷಿ ಪಟ್ಟು, ಸುಮ್ಮನೇ ಡ್ರಾಮಾ ಮಾಡ್ತಾ ಇದ್ದಾಳೆ. ಅದು ಮೌರ್ಯನಿಗೆ ಗೊತ್ತಾಗಿದೆ. ಅದಕ್ಕೆ ಶ್ವೇತಾ ಡೆವಿಲ್ ಯಾರು ಎಂದು ಕಂಡು ಹಿಡಿದು ಅವಳ ಮೇಲೆ ನಿನ್ನ ಪೌರುಷ ತೋರಿಸು ಎಂದು ಹೇಳ್ತಾ ಇದ್ದಾಳೆ.
ಕೈ ಮುಗಿದು ಬೇಡಿದ ಮೌರ್ಯ
ನೋಡು ಶ್ವೇತಾ, ನಾವು ಎಷ್ಟೇ ಸ್ಟ್ರಾಂಗ್ ಅಂದುಕೊಂಡುರು ಪರಿಸ್ಥಿತಿ ನಮ್ಮನ್ನು ಕಟ್ಟಿ ಹಾಕುತ್ತೆ. ಡೆವಿಲ್ ಅಮ್ಮನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಲಿಲ್ಲ ಅಂದ್ರೆ ಪರಿಸ್ಥಿತಿ ಬೇರೆನೇ ಆಗಿರ್ತಿತ್ತು. ಅಣ್ಣ ಮತ್ತು ನಾನು ಏನು ಮಾಡಲಾಗದ ಪರಿಸ್ಥಿಯಲ್ಲಿದ್ದೇವೆ. ನನ್ನ ಅಣ್ಣ-ಅತ್ತಿಗೆ ಜೀವನ ಹಾಳು ಮಾಡಬೇಡ ಎಂದು ಮೌರ್ಯ ಶ್ವೇತಾ ಬಳಿ ಕೈ ಮುಗಿದು ಬೇಡಿಕೊಳ್ತಾ ಇದ್ದಾನೆ.
ಭೂಪತಿಯನ್ನು ಬಿಟ್ಟು ಬಿಡು
ಡೆವಿಲ್‍ಗಿಂತ ಜಾಸ್ತಿ ಆಟವಾಡಿರುವವನು ಈ ಮೌರ್ಯ. ಯಾರು ಆಗಲ್ಲ ಅನ್ನುವುದನ್ನು ಸಾಧಿಸಿರುವವನು ಈ ಮೌರ್ಯ. ಅಂತವನು ನಿನ್ನ ಮುಂದೆ ಕೈ ಜೋಡಿಸಿ ಬೇಡಿಕೊಳ್ತಾನೆ ಅಂದ್ರೆ, ಅದಕ್ಕೆ ಕಾರಣ ಅಮ್ಮ ಮತ್ತು ಅತ್ತಿಗೆ. ದಯವಿಟ್ಟು ಇದೊಂದು ಉಪಕಾರ ಮಾಡು. ನಕ್ಷತ್ರಾ ಅತ್ತಿಗೆಗೆ ಭೂಪತಿಯನ್ನು ಬಿಟ್ಟುಕೊಡು. ಆಮೇಲೆ ನೀನು ಏನ್ ಕೆಲಸ ಹೇಳಿದ್ರು ಮಾಡ್ತೇನೆ ಎಂದು ಮೌರ್ಯ ಹೇಳ್ತಾ ಇದ್ದಾನೆ.
ಮೌರ್ಯನಿಗೆ ಸವಾಲು ಹಾಕಿದ ಶ್ವೇತಾ
ನೀನು ನಕ್ಷತ್ರಾಗೋಸ್ಕರ ಏನ್ ಬೇಕಾದ್ರೂ ಮಾಡ್ತೀಯಾ ಅಲ್ವಾ? ಪ್ರಾಣ ಕೊಡ್ತೀನಿ ಅಂದೆ. ನಿನ್ನ ಕೈನಲ್ಲಿ ಆಗ್ದೇ ಇರೋದು ಏನಿದೆ. ಯೋಚ್ನೆ ಮಾಡು. ಏನ್ ಬೇಕಾದ್ರೂ ಮಾಡು. ನೀನು ಏನ್ ಬೇಕಾದ್ರೂ ಮಾಡು, ನಿನಗೆ ತಾಕತ್ ಇದ್ರೆ, ಈ ಮದುವೆಯನ್ನು ನಿಲ್ಲಿಸು ನೋಡೋಣ ಎಂದು ಸವಾಲು ಹಾಕಿದ್ದಾಳೆ.
ಇದನ್ನೂ ಓದಿ: Ramachari: ನನಗೆ ಯಾವ ಸಮಾರಂಭವೂ ಬೇಡ, ನನ್ನ ಪಾಡಿಗೆ ನನ್ನ ಬಿಟ್ಟು ಬಿಡಿ ಎಂದ ಚಾರು!
ಇಂದಿನಿಂದ 8.30ಕ್ಕೆ ಅಂತರಪಟ ಎನ್ನುವ ಹೊಸ ಧಾರಾವಾಹಿ ಪ್ರಸಾರವಾಗಲಿದೆ. ಅದಕ್ಕೆ ಲಕ್ಷಣ ಸೀರಿಯಲ್ ಇನ್ಮುಂದೆ ರಾತ್ರಿ 10.30 ಕ್ಕೆ ಪ್ರಸಾರವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ