ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ. ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಆದ್ರೆ ಇನ್ನೊಂದೆಡೆ ಸಿಎಸ್ ತಂಗಿ ಭಾರ್ಗವಿ, ತನ್ನ ಅಣ್ಣ (Brother) ಮತ್ತು ಅವನ ಮಗಳು ನಕ್ಷತ್ರಾಗೆ ಕಾಟ ಕೊಡುತ್ತಿದ್ದಾಳೆ. ಶ್ವೇತಾಗೆ ಭಾರ್ಗವಿಯೇ ಡೆವಿಲ್ ಎಂದು ಗೊತ್ತಾಗಿದೆ. ಡೆವಿಲ್ ವಿಡಿಯೋ (Video) ಕಳಿಸಿ ಶ್ವೇತಾ ಆಟವಾಡುತ್ತಿದ್ದಾಳೆ.
ಸಿಎಸ್ ತಂಗಿಯೇ ಡೆವಿಲ್
ಭಾರ್ಗವಿಯೇ ಡೆವಿಲ್ ಎಂದು ಗೊತ್ತಾಗಿ ಶ್ವೇತಾಗೆ ಶಾಕ್ ಆಗಿದ್ದಳು. ಇಷ್ಟು ದಿನ ಈ ಡೆವಿಲ್ ನನ್ನನ್ನು ಮುಂದಿಟ್ಟುಕೊಂಡು ತನ್ನ ಅಣ್ಣ-ಅತ್ತಿಗೆಗೆ ತೊಂದ್ರೆ ಕೊಟ್ಟಿದ್ದಾಳೆ. ಅದಕ್ಕೆ ಇಷ್ಟು ದಿನ ನನ್ನನ್ನು ದಾಳವಾಗಿ ಮಾಡಿಕೊಂಡಿದ್ದಳು. ಇನ್ಮುಂದೆ ನಾನು ನಿನ್ನನ್ನು ಆಟವಾಡಿಸುತ್ತೇನೆ ಎಂದಿದ್ದಾಳೆ. ಅದಕ್ಕೆ ಭಾರ್ಗವಿ ಮಾತನಾಡುವಾಗ ಅದನ್ನು ವಿಡಿಯೋ ಮಾಡಿಕೊಂಡಿದ್ದಾಳೆ.
ಪೆನ್‍ಡ್ರೈವ್ ಮೂಲಕ ಶ್ವೇತಾ ಆಟ
ಡೆವಿಲ್ ಮಾತಾಡಿದ್ದ ವಿಡಿಯೋವನ್ನು ಶ್ವೇತಾ ಸಿಎಸ್ ಮನೆಗೆ ಪೋಸ್ಟ್ ಮಾಡಿದ್ದಾಳೆ. ಅವರು ಅದನ್ನು ತೆಗೆದಾಗ ಡೆವಿಲ್ ಅಂತ ಪೆನ್‍ಡ್ರೈವ್ ಮೇಲೆ ಬರೆದಿರುತ್ತೆ. ಅದಕ್ಕೆ ಅದನ್ನು ನೋಡಿ CS, ಭೂಪತಿ, ಆರತಿ, ನಕ್ಷತ್ರಾ ಎಲ್ಲ ಗಾಬರಿಯಾಗಿದ್ದಾರೆ. ಅದರಲ್ಲಿ ಏನಿದೆ ನೋಡಬೇಕು ಎಂದು ಎಲ್ಲರು ಕಾತರರಾಗಿದ್ದಾರೆ.
ಆಡಿಯೋ ಮಾತ್ರ ಇದೆ
ಶ್ವೇತಾ ಕಳಿಸಿದ ಪೆನ್ ಡ್ರೈವ್‍ನಲ್ಲಿ ಆಡಿಯೋ ಮಾತ್ರ ಇದೆ. ವಿಡಿಯೋ ಇಲ್ಲ. ಅದನ್ನು ಕೇಳಿದ ಭೂಪತಿ, ನಕ್ಷತ್ರಾ ಈ ಮೂಲಕ ನಮಗೆ ಏನೋ ಸೂಚನೆ ಕೊಡ್ತಾ ಇದ್ದಾರೆ. ಇದರಲ್ಲಿರುವ ಆಡಿಯೋ ಡೆವಿಲ್ ದು ಇರಬಹುದು ಎಂದು ಎಲ್ಲರೂ ಮಾತನಾಡಿಕೊಳ್ತಾ ಇದ್ದಾರೆ. ಮನೆಯವರೆಲ್ಲಾ ಗಾಬರಿಯಾಗಿದ್ದಾರೆ.
ಡೆವಿಲ್ ಭೇಟಿ ಮಾಡಲು ಬಂದ ಶ್ವೇತಾ
ಡೆವಿಲ್ ಗೆ ಕಾಲ್ ಮಾಡಿದ ಶ್ವೇತಾ, ಹೇಗಿದೀರಾ ಡೆವಿಲ್ ಮೇಡಂ ಭಯಕ್ಕೆ ಉಸಿರು ಸಿಕ್ಕಿಹಾಕಿಕೊಂಡಿಲ್ಲ ತಾನೇ. ಅತಿಯಾಗಿ ಮಾಡ್ತಾ ಇದೀಯಾ ಶ್ವೇತಾ, ಪರಿಸ್ಥಿತಿ ನನ್ನ ಕೈಗೆ ಬಂದ ಮೇಲೆ, ಇದಕ್ಕೆ ನೀನು ತುಂಬಾ ಪಶ್ಚತ್ತಾಪ ಪಡಬೇಕಾಗುತ್ತೆ ಎಂದು ಡೆವಿಲ್ ಶ್ವೇತಾಗೆ ವಾರ್ನಿಂಗ್ ಕೊಡ್ತಾ ಇದ್ದಾಳೆ. ಅದಕ್ಕೆಲ್ಲಾ ಶ್ವೇತಾ ತಲೆಕೆಡಿಸಿಕೊಳ್ಳದೇ, ನಾನು ನಿನ್ನನ್ನು ಭೇಟಿಯಾಗಲು ಬರುತ್ತಿದ್ದೇನೆ, ಆಚೆ ಬಾ ಎನ್ನುತ್ತಾಳೆ.
ಶಾಕ್ ಕೊಟ್ಟ ತುಕಾರಾಂ
ಸಿಎಸ್ ಮತ್ತು ಭೂಪತಿ ಪೆನ್ ಡ್ರೈವ್ ಬಗ್ಗೆ ಮಾತನಾಡುವಾಗ, ಶ್ವೇತಾ ತಂದೆ ತುಕಾರಾಂ ಶಾಕ್ ಕೊಟ್ಟಿದ್ದಾರೆ. ಈ ಪೆನ್ ಡ್ರೈವ್ ಬಗ್ಗೆ ಭಾರ್ಗವಿ ಅವರಿಗೆ ಗೊತ್ತು. ನೀವು ಅವರನ್ನೇ ಕೇಳಿ. ಅವರು ಆಗ ನನ್ನ ಬಳಿ ಇದರ ಬಗ್ಗೆ ಕೇಳ್ತಾ ಇದ್ರು ಎಂದು ಹೇಳಿದ್ದಾನೆ. ಅದನ್ನು ಕೇಳಿ ಚಂದ್ರಶೇಖರ್ ಗೆ ಶಾಕ್ ಆಗಿದೆ. ಇದರ ಬಗ್ಗೆ ಭಾರ್ಗವಿಗೆ ಗೊತ್ತಾ ಎಂದಿದ್ದಾರೆ.
ಇದನ್ನೂ ಓದಿ: Pooja Gandhi: 'ಮುಂಗಾರು ಮಳೆ' ಪೂಜಾ ಗಾಂಧಿ ಹ್ಯಾಂಡ್ ರೈಟಿಂಗ್ ವೈರಲ್, ಕನ್ನಡ ಪ್ರೇಮಕ್ಕೆ ಜೈ ಎಂದ ಫ್ಯಾನ್ಸ್
ಶ್ವೇತಾ ಆಟಕ್ಕೆ ತತ್ತರಿಸುತ್ತಿರುವ ಭಾರ್ಗವಿ. ಶ್ವೇತಾ ಹೇಳಿದ ಡೀಲ್‍ಗೆ ಒಪ್ಪಿಕೊಳ್ತಾಳಾ? ಭೂಪತಿ ಜೊತೆ ಶ್ವೇತಾ ಮದುವೆ ಮಾಡಿಸ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ