ಹಿಟ್ ಸೀರಿಯಲ್‍ಗಳನ್ನು ನೀಡುತ್ತಿರುವ ಕಲರ್ಸ್ ಕನ್ನಡದಲ್ಲಿ (Colors Kannada) ಸದ್ಯ ರಾತ್ರಿ 8.30ಕ್ಕೆ ಲಕ್ಷಣ (Lakshana) ಧಾರಾವಾಹಿ (Serial) ಪ್ರಸಾರವಾಗ್ತಿದೆ. ಈ ಧಾರಾವಾಹಿ ಮೊದಲು ರಾತ್ರಿ 9.30ಕ್ಕೆ ಪ್ರಸಾರವಾಗ್ತಿತ್ತು. ಬಿಗ್ ಬಾಸ್ (Bigg Boss) ಸೀಸನ್ 09 ಶುರುವಾದಾಗ, ರಾತ್ರಿ 8.30ಕ್ಕೆ ಪ್ರಸಾರವಾಗಲು ಶುರುವಾಯ್ತು.ಲಕ್ಷಣ ಧಾರಾವಾಹಿ ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರಿಗೆ ಇಷ್ಟ ಆಗಿದೆ. ನಕ್ಷತ್ರಾ-ಭೂಪತಿ ಪ್ರೀತಿ. ಶ್ವೇತಾ ಕುತಂತ್ರ, ಡೆವಿಲ್ ಭಾರ್ಗವಿ ಆಟ ಎಲ್ಲವೂ ಅಭಿಮಾನಿಗಳನ್ನು ಹಿಡಿದಿಟ್ಟಿದೆ. ಲಕ್ಷಣ ಧಾರಾವಾಹಿ ಏಪ್ರಿಲ್ 24ಕ್ಕೆ ರಾತ್ರಿ 10.30ಕ್ಕೆ ಪ್ರಸಾರವಾಗಲಿದೆ. ಹೊಸ ಧಾರಾವಾಹಿಗಾಗಿ ಲಕ್ಷಣ ಸೀರಿಯಲ್ ಎತ್ತಂಗಡಿ ಮಾಡಿದ್ದಾರೆ. ಧಾರಾವಾಹಿಯಲ್ಲಿ ಡೆವಿಲ್ ಹೇಳಿದಂತೆ ಶ್ವೇತಾ-ಭೂಪತಿ ಮದುವೆ (Marriage) ನಡೆಯುತ್ತಿದೆ. ಆದ್ರೆ ಶಾಸ್ತ್ರವೆಲ್ಲಾ ನಕ್ಷತ್ರಾ ಜೊತೆ ನಡೆಯುತ್ತಿದೆ.
ಶ್ವೇತಾ ಹೇಳಿದಂತೆ ಕೇಳುತ್ತಿರುವ ಡೆವಿಲ್
ಶ್ವೇತಾ ಭಾರ್ಗವಿಯನ್ನು ಭಾಗು ಎಂದು ಕರೆಯುತ್ತಾಳೆ. ತುಂಬಾ ಪ್ರೀತಿ ಮಾಡ್ತಾ ಇದ್ಲು. ನೋಡಿದ್ರೆ ಆಕೆಯೇ ಡೆವಿಲೆ ಎಂದು ಗೊತ್ತಾಗಿ ಶಾಕ್ ಆಗಿದ್ದಾಳೆ. ಅಲ್ಲದೇ ತಾನು ಹೇಳಿದಂತೆ ಕೇಳಬೇಕು. ಇಲ್ಲ ಅಂದ್ರೆ ನೀನೇ ಡೆವಿಲ್ ಎಂದು ಎಲ್ಲರ ಬಳಿ ಹೇಳ್ತೀನಿ ಎಂದು ಹೇಳಿದ್ದಾಳೆ. ಅದಕ್ಕೆ ಡೆವಿಲ್ ಭಯಪಟ್ಟು ಶ್ವೇತಾ ಹೇಳಿದಂತೆ ಕೇಳ್ತಾ ಇದ್ದಾಳೆ.
ಶ್ವೇತಾ-ಭೂಪತಿ ಮದುವೆಗೆ ಎಲ್ಲಾ ತಯಾರಿ
ಡೆವಿಲ್‍ಗೆ ಭಯಪಟ್ಟು ಭೂಪತಿ-ಶ್ವೇತಾ ಮದುವೆ ತಯಾರಿ ನಡೆಸುತ್ತಿದ್ದಾರೆ. ಶ್ವೇತಾ ನಾನು ನಿಮ್ಮ ಜೊತೆ ಸೇರಿ ಡ್ರಾಮಾ ಮಾಡ್ತೇನೆ ಎಂದು ಹೇಳಿದ್ದಾಳೆ. ಆದ್ರೆ ಭೂಪತಿಯನ್ನು ಮದುವೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದಾಳೆ. ಭೂಪತಿ ಮತ್ತು ನಕ್ಷತ್ರಾ ಸಹ ಶ್ವೇತಾ ನಾಟಕವನ್ನು ನಂಬಿದ್ದಾಳೆ.
ಶಾಸ್ತ್ರ ನಕ್ಷತ್ರಾ ಜೊತೆ, ಮದುವೆ ಶ್ವೇತಾ ಜೊತೆ!
ಶ್ವೇತಾ ಜೊತೆ ಭೂಪತಿ ಮದುವೆ ಆಗಬೇಕಿತ್ತು. ಆಗ ನಕ್ಷತ್ರಾ ಜೊತೆ ಮದುವೆ ಆಗುತ್ತೆ. ಅದಕ್ಕೆ ಶ್ವೇತಾ ಆ ಸೇಡನ್ನು ತೀರಿಸಿಕೊಳ್ತಾ ಇದ್ದಾಳೆ. ಶಾಸ್ತ್ರವನ್ನು ನಕ್ಷತ್ರಾ ಜೊತೆ ಮಾಡಿಸಿ, ಮದುವೆಯನ್ನು ತಾನು ಆಗಬೇಕು ಎಂದುಕೊಂಡಿದ್ದಾಳೆ. ಅದೇ ರೀತಿ ಎಲ್ಲಾ ಪ್ಲ್ಯಾನ್ ಮಾಡಿದ್ದಾಳೆ. ಆದ್ರೆ ಮೌರ್ಯನಿಗೆ ಶ್ವೇತಾ ಮೇಲೆ ಅನುಮಾನ ಹೆಚ್ಚಾಗಿದೆ.
ರಾತ್ರಿ 8.30ಕ್ಕೆ ಅಂತರಪಟ
ಏಪ್ರಿಲ್ 24ರಿಂದ ರಾತ್ರಿ 8.30ಕ್ಕೆ ಅಂತರಪಟ ಎನ್ನುವ ಹೊಸ ಧಾರಾವಾಹಿ ಪ್ರಸಾರವಾಗಲಿದೆ. ಅದಕ್ಕೆ ಲಕ್ಷಣ ಸೀರಿಯಲ್ ಇನ್ಮುಂದೆ ರಾತ್ರಿ 10.30 ಕ್ಕೆ ಪ್ರಸಾರವಾಗಲಿದೆ. ಶ್ವೇತಾ, ಭೂಪತಿ ಮತ್ತು ನಕ್ಷತ್ರಾಗೆ ಸಹಾಯ ಮಾಡ್ತೀನಿ ಎಂದು ಹೇಳಿ ನಾಟಕವಾಡ್ತಾ ಇದ್ದಾಳೆ. ಭೂಪತಿಯನ್ನು ಮದುವೆಯಾಗುವ ಪ್ಲ್ಯಾನ್ ಮಾಡಿದ್ದಾಳೆ. ಆದ್ರೂ ಸೀರಿಯಲ್ ಟೈಮ್ ಚೇಂಜ್ ಆಗಿದ್ದಕ್ಕೆ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. 8.30ಕ್ಕೆ ಚೆನ್ನಾಗಿತ್ತು, ಬದಲಾಯಿಸಬಾರದಿತ್ತು ಎಂದು ಹೇಳಿದ್ದಾರೆ.
ಡೆವಿಲ್ ನಡೆ ಏನು?
ಡೆವಿಲ್‍ಗೆ ಅಲ್ಲಿ ನಡೆಯುತ್ತಿರುವುದು ನಾಟಕ ಎಂದು ಗೊತ್ತಾಗಿದೆ. ಆದ್ರೂ ಏನೂ ಮಾಡೋಕೆ ಆಗ್ತಿಲ್ಲ. ಯಾಕಂದ್ರೆ ಇದೆಲ್ಲಾ ಶ್ವೇತಾ ಪ್ಲ್ಯಾನ್. ಶ್ವೇತಾನೇ ಡೆವಿಲ್‍ಗೆ ಹೇಳಿದ್ದಾಳೆ. ಎಲ್ಲಾ ಶಾಸ್ತ್ರ ನನ್ನ ಜೊತೆ ಆಗಿ ನಕ್ಷತ್ರಾ ಜೊತೆ ಮದುವೆ ಆಯ್ತು. ಅದೇ ರೀತಿ ಈಗ ಎಲ್ಲಾ ಶಾಸ್ತ್ರ ನಕ್ಷತ್ರಾ ಜೊತೆ ಆಗಿ, ನನ್ನ ಜೊತೆ ಮದುವೆ ಆಗಬೇಕು ಎಂದು ಹೇಳಿದ್ದಾಳೆ. ಅದಕ್ಕೆ ಡೆವಿಲ್ ಸುಮ್ಮನೇ ಇದ್ದಾಳೆ.
ಇದನ್ನೂ ಓದಿ: Neha Gowda: ಬ್ಲ್ಯಾಕ್ ಡ್ರೆಸ್‍ನಲ್ಲಿ ಬ್ಯೂಟಿಫುಲ್ ನೇಹಾ ಗೌಡ, ನೀವು ಮುದ್ದಾದ ಗೊಂಬೆ ಎಂದ ಫ್ಯಾನ್ಸ್!
ಹಾಗಾದ್ರೆ ಭೂಪತಿ ಶ್ವೇತಾ ಮದುವೆ ಆಗುತ್ತಾ? ಅದನ್ನು ಮೌರ್ಯ ತಡೆಯುತ್ತಾನಾ? ನಕ್ಷತ್ರಾ ಏನ್ ಮಾಡ್ತಾಳೆ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ