ಹಿಟ್ ಸೀರಿಯಲ್‍ಗಳನ್ನು ನೀಡುತ್ತಿರುವ ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ರಾತ್ರಿ 10.30ಕ್ಕೆ ಲಕ್ಷಣ (Lakshana) ಧಾರಾವಾಹಿ (Serial) ಪ್ರಸಾರವಾಗುತ್ತಿದೆ. ಈ ಧಾರಾವಾಹಿ ಮೊದಲು ರಾತ್ರಿ 9.30ಕ್ಕೆ ಪ್ರಸಾರವಾಗ್ತಿತ್ತು. ಬಿಗ್ ಬಾಸ್ ಸೀಸನ್ 09 ಶುರುವಾದಾಗ, ರಾತ್ರಿ 8.30ಕ್ಕೆ ಪ್ರಸಾರವಾಗಲು ಶುರುವಾಯ್ತು. ಲಕ್ಷಣ ಧಾರಾವಾಹಿ ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರಿಗೆ ಇಷ್ಟ ಆಗಿದೆ. ನಕ್ಷತ್ರಾ-ಭೂಪತಿ ಪ್ರೀತಿ. ಶ್ವೇತಾ ಕುತಂತ್ರ, ಡೆವಿಲ್ ಭಾರ್ಗವಿ ಆಟ ಎಲ್ಲವೂ ಅಭಿಮಾನಿಗಳನ್ನು ಹಿಡಿದಿಟ್ಟಿದೆ. ಈಗ ಲಕ್ಷಣ ಧಾರಾವಾಹಿ ರಾತ್ರಿ 10.30ಕ್ಕೆ ಪ್ರಸಾರವಾಗುತ್ತಿದೆ. ಹೊಸ ಧಾರಾವಾಹಿ (New Serial) ಅಂತರಪಟಗಾಗಿ ಲಕ್ಷಣ ಸೀರಿಯಲ್ ಎತ್ತಂಗಡಿ ಮಾಡಿದ್ದಾರೆ. ಸೀರಿಯಲ್‍ನಲ್ಲಿ ಮೌರ್ಯನೇ ಶ್ವೇತಾಗೆ ತಾಳಿ ಕಟ್ಟಿದ್ದಾನೆ.
ಗಂಡನಿಗೆ ಬೇರೆ ಮದುವೆ ಮಾಡಲು ನಿರ್ಧಾರ
ಲಕ್ಷಣ ಧಾರಾವಾಹಿಯಲ್ಲಿ ನಕ್ಷತ್ರಾಗೆ ಡೆವಿಲ್ ಕಾಟ ಕೊಡ್ತಾ ಇದ್ದಾಳೆ. ನಿನ್ನ ಅತ್ತೆ ಶಕುಂತಲಾ ದೇವಿ ಬದುಕಬೇಕು ಎಂದ್ರೆ, ನೀನು ಭೂಪತಿಗೆ ಡಿವೋರ್ಸ್ ಕೊಡಿಸಬೇಕು. ಭೂಪತಿಯನ್ನು ಶ್ವೇತಾ ಜೊತೆ ಮದುವೆ ಮಾಡಿಸಬೇಕು ಎಂದು ಹೇಳಿರ್ತಾಳೆ. ಅದಕ್ಕೆ ಅತ್ತೆಗಾಗಿ ಶ್ವೇತಾ ಜೊತೆ ಭೂಪತಿಯನ್ನು ಮದುವೆ ಮಾಡಲು ನಿರ್ಧಾರ ಮಾಡ್ತಾಳೆ. ಅಲ್ಲದೇ ತಾಳಿ ಕಟ್ಟುವ ದೃಶ್ಯ ನೋಡಲಾಗದೇ, ಅಲ್ಲಿಂದ ಅಳುತ್ತಾ ಹೊರಟು ಹೋಗುತ್ತಾಳೆ.
ದೇವಸ್ಥಾನಕ್ಕೆ ಬಂದ ಶಕುಂತಲಾ ದೇವಿ
ಶಕುಂತಲಾ ದೇವಿಯನ್ನು ಮುಂದಿಟ್ಟುಕೊಂಡು ಭಾರ್ಗವಿ ಅಂದ್ರೆ ಡೆವಿಲ್ ಆಟವಾಡ್ತಾ ಇದ್ದಳು. ಡೆವಿಲ್ ಬಳಿ ಶಕುಂತಲಾ ದೇವಿ ಇದ್ದಾಳೆ ಎಂದು ಎಲ್ಲರೂ ಅಂದುಕೊಂಡಿದ್ರು. ಆದ್ರೆ ಭೂಪತಿ ಮದುವೆಯಾಗುತ್ತಿದ್ದ ಸ್ಥಳಕ್ಕೆ ಶಕುಂತಲಾ ದೇವಿ ಬಂದಿದ್ದಾಳೆ. ಆಕೆ, ಭೂಪತಿ ಜೊತೆ ಯಾಕೆ ಶ್ವೇತಾ ಮದುವೆ ಮಾಡಿಸುತ್ತಿದ್ದೀಯಾ ಎಂದು ಪ್ರಶ್ನೆ ಮಾಡ್ತಾ ಇದ್ದಾರೆ.
ಮೌರ್ಯನ ಬಳಿ ಬೇಡಿಕೊಂಡ ಸಿಎಸ್ ಮತ್ತು ಆರತಿ
ನಕ್ಷತ್ರಾ ಬದುಕು ಕಣ್ಣ ಮುಂದೆಯೇ ಹಾಳಾಗುತ್ತಿದೆ ಚಂದ್ರಶೇಖರ್ ಮತ್ತು ಆರತಿ ಅದನ್ನು ನೋಡಿಕೊಂಡು ಸುಮ್ಮನಿರಲು ಆಗುತ್ತಿಲ್ಲ. ಅದಕ್ಕೆ ಮೌರ್ಯನ ಬಳಿ ಬಂದಿದ್ದಾರೆ. ಸಮುದ್ರ ಹಾರೋಕು ಮುಂಚೆ ನಿಂತಿರುವ ಹನುಮಂತನ ರೀತಿ ಕಾಣ್ತಾ ಇದೀಯಾ. ನಿನ್ನ ಶಕ್ತಿ ಏನು ಅಂತ ನೀನೇ ನಂಬಿಕೆ ಕಳ್ಕೋಬೇಡ. ನನ್ನ ಮಗಳ ಜೀವನ ಸರಿ ಮಾಡೋ ಶಕ್ತಿ ಇರೋದು ನಿನಗೆ ಮಾತ್ರ. ನೀನೇ ಸುಮ್ನೆ ನಿಂತ್ರೆ ಈ ತಂದೆ ತಾಯಿಗೆ ಯಾರು ದಿಕ್ಕು. ಕೈ ಮುಗಿದು ಕೇಳಿಕೊಳ್ತೇನೆ ಮೌರ್ಯ, ನನ್ನ ಮಗಳ ಜೀವನ ಕಾಪಾಡು ಎಂದು ಸಿಎಸ್ ಬೇಡಿಕೊಂಡಿದ್ದಾನೆ.
ಶ್ವೇತಾಗೆ ತಾಳಿ ಕಟ್ಟಿದ ಮೌರ್ಯ
ಅತ್ತಿಗೆ ಮಾತು ಕೊಟ್ಟಿದ್ದೆ. ಒಂದು ಸಲ ಮಾತು ಕೊಟ್ರೆ ಮುಗೀತು. ಯಾವುದೇ ಕಾರಣಕ್ಕೂ ಅತ್ತಿಗೆ ಜೀವನ ಹಾಳಾಗೋಕೆ ಬಿಡಲ್ಲ. ಮೌರ್ಯ ಮಾತು ಕೊಟ್ಟ ಮೇಲೆ ಮುಗೀತು ಎಂದು ಹೇಳಿದ್ದ. ಅಂತೆಯೇ ಅಣ್ಣನ ಕೈನಲ್ಲಿರುವ ತಾಳಿಯನ್ನು ತೆಗೆದುಕೊಂಡು ಶ್ವೇತಾ ಕೊರಳಿಗೆ ಕಟ್ಟಿದ್ದಾನೆ. ಎಲ್ಲರೂ ಶಾಕ್ ಆಗಿ ನಿಂತಿದ್ದಾರೆ.
ಡೆವಿಲ್ ಈಗ ಏನ್ ಮಾಡ್ತಾಳೆ?
ಶ್ವೇತಾಗೆ ತಾಳಿ ಕಟ್ಟಿದ್ದು ನಾನು. ನಕ್ಷತ್ರಾ ಅತ್ತಿಗೆ ಜೀವನದಲ್ಲಿ ಆಲ್‍ರೆಡಿ ತುಂಬಾ ನೋವು ಅನುಭವಿಸಿದ್ದಾರೆ. ಅವರ ಜೀವನ ಒಂದು ಹಂತಕ್ಕೆ ಬರುವ ಟೈಮ್‍ನಲ್ಲಿ ಡೆವಿಲ್ ಗಂಟು ಬಿದ್ಲು. ಅತ್ತಿಗೆ ಜೀವನ ಉಳಿಸೋಕೆ ಕೊನೆ ತನಕ ಪ್ರಯತ್ನ ಪಟ್ಟೆ. ಆದ್ರೆ ಆ ಡೆವಿಲ್ ಎಲ್ಲಾ ಉಲ್ಟಾ ಪಲ್ಟಾ ಮಾಡಿದ್ಲು. ಶ್ವೇತಾಳನ್ನು ಅಣ್ಣನ ಜೊತೆ ಮದುವೆ ಮಾಡೋಕೆ ಪ್ಲ್ಯಾನ್ ಮಾಡಿದ್ಲು ಅದಕ್ಕೆ ನಾನು ಈ ರೀತಿ ಮಾಡಿದೆ ಎಂದು ಹೇಳ್ತಾನೆ.
ಇದನ್ನೂ ಓದಿ: Lakshana: ಡೆವಿಲ್‍ಗೆ ಶಾಕ್ ಕೊಟ್ಟ ಶ್ವೇತಾ! ಸಿಎಸ್-ಭೂಪತಿಗೆ ವಿಡಿಯೋ ಕಳಿಸಿ ಆಟ
ಡೆವಿಲ್‍ಗೆ ಶಾಕ್ ಕೊಟ್ಟ ಮೌರ್ಯ, ಈಗ ಶ್ವೇತಾ ಏನ್ ಪ್ಲ್ಯಾನ್ ಮಾಡ್ತಾಳೆ? ಡೆವಿಲ್ ಏನ್ ಮಾಡ್ತಾಳೆ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ