ಹಿಟ್ ಸೀರಿಯಲ್‍ಗಳನ್ನು ನೀಡುತ್ತಿರುವ ಕಲರ್ಸ್ ಕನ್ನಡದಲ್ಲಿ (Colors Kannada) ಸದ್ಯ ರಾತ್ರಿ 8.30ಕ್ಕೆ ಲಕ್ಷಣ (Lakshana) ಧಾರಾವಾಹಿ (Serial) ಪ್ರಸಾರವಾಗ್ತಿದೆ. ಸೋಮಾವಾರದಿಂದ ಲಕ್ಷಣ ಧಾರಾವಾಹಿ ರಾತ್ರಿ 10.30ಕ್ಕೆ ಪ್ರಸಾರವಾಗಲಿದೆ. ಈ ಧಾರಾವಾಹಿ ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರಿಗೆ ಇಷ್ಟ ಆಗಿದೆ. ನಕ್ಷತ್ರಾ-ಭೂಪತಿ ಪ್ರೀತಿ. ಶ್ವೇತಾ ಕುತಂತ್ರ, ಡೆವಿಲ್ ಭಾರ್ಗವಿ ಆಟ ಎಲ್ಲವೂ ಅಭಿಮಾನಿಗಳನ್ನು ಹಿಡಿದಿಟ್ಟಿದೆ. ಧಾರಾವಾಹಿಯಲ್ಲಿ ಡೆವಿಲ್ ಹೇಳಿದಂತೆ ಶ್ವೇತಾ-ಭೂಪತಿ ಮದುವೆ ನಡೆಯುತ್ತಿದೆ. ಮೊದಲು ನಕ್ಷತ್ರಾ-ಭೂಪತಿ ನಾಟಕ ಮಾಡಿ ಡಿವೋರ್ಸ್ ಕೊಡ್ತೇವೆ ಎಂದು ಹೇಳಿದ್ರು. ಆದ್ರೆ ಪ್ಲ್ಯಾನ್ ಶ್ವೇತಾಗೆ ಗೊತ್ತಾಗಿ ಎಲ್ಲಾ ಉಲ್ಟಾ ಆಗಿದೆ. ಶಕುಂತಲಾ ದೇವಿಯನ್ನು ಉಳಿಸಿಕೊಳ್ಳಲು ಶ್ವೇತಾಳನ್ನು ಮದುವೆಯಾಗುವಂತೆ ನಕ್ಷತ್ರಾ ಭೂಪತಿ ಮೇಲೆ ಒತ್ತಡ ಹಾಕುತ್ತಿದ್ದಾರೆ.
ಶ್ವೇತಾಗೆ ತಾಳಿ ಕಟ್ಟು
ನಕ್ಷತ್ರಾ ಶ್ವೇತಾಳನ್ನು ಮದುವೆಯಾಗುವಂತೆ ಭೂಪತಿಗೆ ಹೇಳ್ತಾ ಇದ್ದಾಳೆ. ಆದ್ರೆ ಭೂಪತಿ ಒಪ್ಪುತ್ತಿಲ್ಲ. ಅದು ಆಗದೇ ಇರುವ ಮಾತು. ನನಗೆ ಆ ರೀತಿ ಹೇಳಬೇಡ ಎನ್ನುತ್ತಿದ್ದಾನೆ. ನನಗೂ ಇದು ಸುಲಭ ಅಲ್ಲ. ನನ್ನ ಜೀವ ಹೋಗ್ತಾ ಇದೆ. ಆದ್ರೆ ಈಗ ಶ್ವೇತಾ ಕುತ್ತಿಗೆಗೆ ತಾಳಿ ಕಟ್ಟದೇ ಇದ್ರೆ, ಏನ್ ಕಳ್ಕೋತೀವಿ ಯೋಚ್ನೆ ಮಾಡು ಎಂದು ನಕ್ಷತ್ರಾ ಹೇಳ್ತಾ ಇದ್ದಾಳೆ.
ಅಮ್ಮ ಇಲ್ಲ ಅಂದ್ರೆ ಇರ್ತಿಯಾ?
ಶ್ವೇತಾಳನ್ನು ಮದುವೆಯಾದ್ರೆ, ನಾನು ನಿನ್ನನ್ನು ಕಳ್ಕೋತೀನಿ. ನಿನ್ನ ಎಲ್ಲಾ ಸಮಸ್ಯೆಯಲ್ಲಿ ನಿನ್ನ ಜೊತೆಯಾಗಿ ನಿಲ್ತೇನೆ ಎಂದು ಮಾತು ಕೊಟ್ಟಿದ್ದೇನೆ. ನೀನು ಇಲ್ಲದೇ ನಾನು ಹೇಗೆ ಇರಲಿ ಎಂದು ಭೂಪತಿ ಕೇಳುತ್ತಿದ್ದಾನೆ. ಹಾಗಾದ್ರೆ ಅಮ್ಮ ಇಲ್ಲ ಅಂದ್ರೆ ಇರ್ತಿಯಾ ಮಿಸ್ಟ್ರಿ ಎಂದು ನಕ್ಷತ್ರಾ ಕೇಳ್ತಾ ಇದ್ದಾಳೆ. ಭೂಪತಿ ಶಾಕ್ ಆಗಿ ನಿಂತಿದ್ದಾನೆ.
ಮಕ್ಕಳಿಗಾಗಿ ಶಕುಂತಲಾ ದೇವಿ ತ್ಯಾಗ
ಅಮ್ಮನಿಗಾಗಿ ಏನೆಲ್ಲಾ ತ್ಯಾಗ ಮಾಡೋ ಮಕ್ಕಳಿದ್ದಾರೆ. ಅಮ್ಮ ಮಕ್ಕಳಿಗಾಗಿ ಎಲ್ಲಾ ತ್ಯಾಗ ಮಾಡಿ ಬೆಳೆಸಿರುತ್ತಾರೆ. ಅಮ್ಮನ ಋಣ ತೀರಿಸೋಕೆ ಆಗುತ್ತಾ ಮಿಸ್ಟ್ರಿ? ನಿಮ್ಮ ಅಮ್ಮನ ಬಗ್ಗೆ ನಿನಗೆ ಹೆಚ್ಚು ಗೊತ್ತು. ಈ ಎಂಪಿಆರ್ ಸಾಮ್ರಾಜ್ಯನಾ ಅತ್ತೆ ಎಷ್ಟು ಕಷ್ಟಪಟ್ಟು ಬೆಳೆಸಿದ್ದಾರೆ ಎಂದು ಒಮ್ಮೆ ನೆನೆಪು ಮಾಡ್ಕೋ.
ಒಂದು ಕಡೆ ಬೆಳೆಯುವ ಮಕ್ಕಳು. ಇನ್ನೊಂದು ಕಡೆ ದುಡಿಯದೇ ಇದ್ರೆ ಉಪವಾಸ ಇರಬೇಕಾದ ಮಕ್ಕಳು. ತಮ್ಮ ಎಲ್ಲಾ ಸುಖ, ಶಾಂತಿ ಬಲಿ ಕೊಟ್ಟು, ನಿಮ್ಮನ್ನು ಬೆಳೆಸಿದ್ರು. ಈಗ ನಿನ್ನ ಕಷ್ಟ-ಸುಖದಲ್ಲಿ ಪ್ರಾಮಿಸ್ ಮಾಡಿದ್ದೀನಿ ಅಂತ ಹೇಳ್ತೀಯಲ್ಲಾ, ಇದರಲ್ಲಿ ಯಾವ ಸಂಬಂಧ, ಅಮ್ಮ ಮಾಡಿರೋ ತ್ಯಾಗಕ್ಕೆ ಸಮ ಮಿಸ್ಟ್ರಿ ಎಂದು ನಕ್ಷತ್ರಾ ಕೇಳ್ತಾ ಇದ್ದಾಳೆ.
ಶಕುಂತಲಾ ದೇವಿ ಕೊಲ್ಲವುದಾಗಿ ಬೆದರಿಕೆ
ಡೆವಿಲ್ ಭಾರ್ಗವಿ ಶ್ವೇತಾ ಹೇಳಿದ ಹಾಗೇ ಕೇಳ್ತಾ ಇದ್ದಾಳೆ. ನಕ್ಷತ್ರಾ ಮತ್ತು ಭೂಪತಿಯನ್ನು ದೂರ ಮಾಡಲು ಶಕುಂತಲಾ ದೇವಿಯನ್ನು ಡೆವಿಲ್ ದಾಳವಾಗಿ ಬಳಸಿಕೊಳ್ತಾ ಇದ್ದಾಳೆ. ನೀನು ಭೂಪತಿಗೆ ಡಿವೋಸ್ ಕೊಟ್ಟ, ಶ್ವೇತಾ ಜೊತೆ ಮದುವೆ ಮಾಡಿಸು. ಇಲ್ಲ ಅಂದ್ರೆ ನಿನ್ನ ಅತ್ತೆ ಶಕುಂತಲಾ ದೇವಿ ಕತೆ ಮುಗಿಸುತ್ತೇನೆ ಎಂದು ಡೆವಿಲ್ ಭಾರ್ಗವಿ ನಕ್ಷತ್ರಾಗೆ ವಾರ್ನ್ ಮಾಡಿದ್ದಾಳೆ. ಅದಕ್ಕೆ ನಕ್ಷತ್ರಾ ಅತ್ತೆ ಪ್ರಾಣ ಉಳಿಸಲು ಗಂಡನ ಮದುವೆ ಮಾಡಿಸುತ್ತಿದ್ದಾಳೆ.
ಇದನ್ನೂ ಓದಿ: Vijay Suriya: ತೆಲುಗಿನಲ್ಲಿ ಮಿಂಚುತ್ತಿದ್ದಾರೆ ಅಗ್ನಿಸಾಕ್ಷಿ ಹೀರೋ! ವಿಜಯ್ ಸೂರ್ಯ ಸಖತ್ ಲುಕ್
ಶ್ವೇತಾ-ಭೂಪತಿ ಮದುವೆ ಆಗುತ್ತಾ? ಇದನ್ನು ಮೌರ್ಯ ತಡೆಯುತ್ತಾನಾ? ಡೆವಿಲ್ ಈ ಆಟದಲ್ಲಿ ಗೆಲ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ