• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Lakshana: ಮೌರ್ಯನ ಮೇಲಿನ ಕೋಪಕ್ಕೆ ತಾಳಿ ಕಿತ್ತ ಶ್ವೇತಾ! ಶಕುಂತಲಾ ದೇವಿಗೆ ಏನ್ ಉತ್ತರ ಹೇಳ್ತಾಳೆ?

Lakshana: ಮೌರ್ಯನ ಮೇಲಿನ ಕೋಪಕ್ಕೆ ತಾಳಿ ಕಿತ್ತ ಶ್ವೇತಾ! ಶಕುಂತಲಾ ದೇವಿಗೆ ಏನ್ ಉತ್ತರ ಹೇಳ್ತಾಳೆ?

 ತಾಳಿ ಕಿತ್ತ ಶ್ವೇತಾ

ತಾಳಿ ಕಿತ್ತ ಶ್ವೇತಾ

ಮೌರ್ಯನಿಂದಲೇ ಇದು ಆಗ್ತಾ ಇರೋದು ಎಂದು ತಾಳಿ ಕಿತ್ತಿದ್ದಾಳೆ. ಅದನ್ನು ಕೈನಲ್ಲಿ ಹಿಡಿದಿದ್ದಾಳೆ.ಶ್ವೇತಾ ತಾಳಿ ಕೈನಲ್ಲಿ ಹಿಡಿದಿರುವುದನ್ನು ನೋಡಿ ಶಕುಂತಲಾ ದೇವಿ ಕೋಪ ಮಾಡಿಕೊಂಡಿದ್ದಾಳೆ.

 • News18 Kannada
 • 5-MIN READ
 • Last Updated :
 • Karnataka, India
 • Share this:

ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ರಾತ್ರಿ 10.30ಕ್ಕೆ ಲಕ್ಷಣ (Lakshana) ಧಾರಾವಾಹಿ (Serial) ಪ್ರಸಾರವಾಗುತ್ತಿದೆ. ಈ ಧಾರಾವಾಹಿ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿದೆ. ಲಕ್ಷಣ ಧಾರಾವಾಹಿ ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರಿಗೆ ಇಷ್ಟ ಆಗಿದೆ. ನಕ್ಷತ್ರಾ-ಭೂಪತಿ ಪ್ರೀತಿ. ಶ್ವೇತಾ ಕುತಂತ್ರ, ಡೆವಿಲ್ ಭಾರ್ಗವಿ ಆಟ ಎಲ್ಲವೂ ಅಭಿಮಾನಿಗಳನ್ನು ಹಿಡಿದಿಟ್ಟಿದೆ. ಈಗ ಲಕ್ಷಣ ಧಾರಾವಾಹಿ ರಾತ್ರಿ 10.30ಕ್ಕೆ ಪ್ರಸಾರವಾಗುತ್ತಿದೆ. ಹೊಸ ಧಾರಾವಾಹಿ ಅಂತರಪಟಗಾಗಿ ಲಕ್ಷಣ ಸೀರಿಯಲ್ ಎತ್ತಂಗಡಿ ಮಾಡಿದ್ದಾರೆ. ಸೀರಿಯಲ್‍ನಲ್ಲಿ ಮೌರ್ಯನೇ ಶ್ವೇತಾಗೆ ತಾಳಿ ಕಟ್ಟಿದ್ದಾನೆ. ಮೌರ್ಯನ ಮೇಲಿನ ಕೋಪಕ್ಕೆ  (Angry) ಶ್ವೇತಾ ತಾಳಿ ಕಿತ್ತಿದ್ದಾಳೆ.


ಮೌರ್ಯನ ಮೇಲೆ ಕೋಪ
ಶ್ವೇತಾಗೆ ಮೌರ್ಯನ ಮೇಲೆ ಕೋಪ ಇದೆ. ಹೇಳದೇ, ಕೇಳದೇ ತಾಳಿ ಕಟ್ಟಿ ಬಿಟ್ಟ. ನನ್ನ ಜೀವನ ಹಾಳು ಮಾಡಿದ ಎಂದು ಸಿಡಿಯುತ್ತಿದ್ದಾಳೆ. ನಾನು ಭೂಪತಿಯನ್ನು ಮದುವೆಯಾಗಿ ಆರಾಮಾಗಿರಬೇಕು ಎಂದುಕೊಂಡಿದ್ದೆ. ಈಗ ನೋಡಿದ್ರೆ ಏನೇನೋ ಆಗ್ತಾ ಇದೆ ಎಂದು ಮೌರ್ಯನ ಮೇಲೆ ಕೆಂಡಕಾರುತ್ತಿದ್ದಾಳೆ.


ಮನೆ ಒಡೆಯಲು ಶ್ವೇತಾ ಸಿದ್ಧ
ನಕ್ಷತ್ರಾ ಬಳಿ ಶ್ವೇತಾ, ನೋಡ್ತಾ ಇರು ಈ ಮನೆಯವರ ನೆಮ್ಮದಿಯನ್ನು ಹೇಗೆ ಹಾಳು ಮಾಡ್ತೇನೆ ಎಂದು ಹೇಳಿದ್ದಾಳೆ. ಅದಕ್ಕೆ ನಕ್ಷತ್ರಾ, ಅದು ನಾನು ಇರೋವರೆಗೂ ಆಗಲ್ಲ ಶ್ವೇತಾ. ನೀನು ಏನೇ ಮಾಡಬೇಕು ಅಂದ್ರೂ ನನ್ನ ದಾಟಿಕೊಂಡು ಹೋಗಬೇಕು. ಈ ಮನೆಗೆ ನಾನು ಕಾವಲು ರೀತಿ ಇರ್ತೇನೆ. ನಿನ್ನ ಕೈನಲ್ಲಿ ಏನೂ ಮಾಡೋಕೆ ಆಗಲ್ಲ ಎಂದು ಹೇಳಿದ್ದಾಳೆ.
ತಾಳಿ ಕಿತ್ತ ಶ್ವೇತಾ
ಶ್ವೇತಾ ಏನೇನೋ ಕಿತಾಪತಿ ಮಾಡುತ್ತಿದ್ದಾಳೆ. ಭೂಪತಿ-ನಕ್ಷತ್ರಾ ದೂರವಾಗುವಂತೆ ಪ್ರಯತ್ನ ಮಾಡ್ತಾ ಇದ್ದಾಳೆ. ಆದ್ರೆ ಶ್ವೇತಾ ಮಾಡುವು ಕುತಂತ್ರವೇ ನಕ್ಷತ್ರಾಗೆ ಒಳ್ಳೆಯದಾಗ್ತಿದೆ. ಭೂಪತಿ-ನಕ್ಷತ್ರಾ ಹತ್ತಿರವಾಗುವಂತೆ ಮಾಡ್ತಾ ಇದೆ. ಅದನ್ನು ನೋಡಿ ಇನ್ನಷ್ಟು ಉರಿದುಕೊಳ್ತಾ ಇದ್ದಾಳೆ. ಅದಕ್ಕೆ ಮೌರ್ಯನಿಂದಲೇ ಇದು ಆಗ್ತಾ ಇರೋದು ಎಂದು ತಾಳಿ ಕಿತ್ತಿದ್ದಾಳೆ. ಅದನ್ನು ಕೈನಲ್ಲಿ ಹಿಡಿದಿದ್ದಾಳೆ.


ಮೌರ್ಯ


ಶಕುಂತಲಾ ದೇವಿ ಪ್ರಶ್ನೆ
ಶ್ವೇತಾ ತಾಳಿ ಕೈನಲ್ಲಿ ಹಿಡಿದಿರುವುದನ್ನು ನೋಡಿ ಶಕುಂತಲಾ ದೇವಿ ಕೋಪ ಮಾಡಿಕೊಂಡಿದ್ದಾಳೆ. ಮೌರ್ಯ ಈಗ ಶ್ವೇತಾಗೆ ಹೇಳದೇ, ಕೇಳದೇ ತಾಳಿ ಕಟ್ಟಿದ್ದರಿಂದ, ಶಕುಂತಲಾ ದೇವಿಗೆ ಇನ್ನೂ ಶ್ವೇತಾ ಮೇಲೆ ಪ್ರೀತಿ ಜಾಸ್ತಿಯಾಗಿದೆ. ಏನಿದು ಶ್ವೇತಾ ತಾಳಿ ಕಿತ್ತು ಕೈನಲ್ಲಿಡಿದುಕೊಂಡಿದ್ದೀಯಾ? ಯಾಕೆ ಏನಾಯ್ತು ಎಂದು ಕೇಳಿದ್ದಾಳೆ. ನಕ್ಷತ್ರಾ ಸಹ ಮದುವೆ ಆಗಿದೆ. ನಿನಗೆ ತಾಳಿ ಬೆಲೆ ಗೊತ್ತಾಗಲ್ವಾ? ಏನಿದು ಹುಡುಗಾಟ ಎಂದು ನಕ್ಷತ್ರಾ ಕೇಳಿದ್ದಾಳೆ. ಶ್ವೇತಾ ಏನೂ ಉತ್ತರ ಕೊಡದೇ ಸುಮ್ಮನಿದ್ದಾಳೆ.


ಶಕುಂತಲಾ ದೇವಿ


ಅತ್ತೆಗೆ ಸತ್ಯ ಹೇಳ್ತಾಳಾ ಶ್ವೇತಾ?
ಶ್ವೇತಾ ಏನೇ ಮಾಡಿದ್ರೂ ಶಕುಂತಲಾ ದೇವಿಗೆ ಇಷ್ಟ. ಯಾವಾಗಲು ಡಿಯರ್, ಡಿಯರ್ ಎಂದು ಕರೆಯುತ್ತಿರುತ್ತಾಳೆ. ಶ್ವೇತಾ ಸಹ ಅವರ ಮುಂದೆ ನಾಟಕ ಮಾಡ್ತಾಳೆ. ಈಗ ತಾಳಿ ಕೈಲಿಡಿದು ಸಿಕ್ಕಿ ಬಿದ್ದಿದ್ದಾಳೆ. ಈಗ ಯಾವ ಸುಳ್ಳು ಹೇಳ್ತಾಳೋ ನೋಡಬೇಕು. ಮತ್ತೆ ಶ್ವೇತಾ ಮಾತಿಗೆ ಶಕುಂತಲಾ ದೇವಿ ಮರುಳಾಗ್ತಾಳಾ ಅಂತ ಅಭಿಮಾನಿಗಳಿಗೆ ಬೇಸರವಾಗಿದೆ.


ಇದನ್ನೂ ಓದಿ: Manvita Kamath: ಯೆಲ್ಲೋ ಡ್ರೆಸ್‍ನಲ್ಲಿ ಮಿಂಚಿದ ಟಗರು ಪುಟ್ಟಿ ಮಾನ್ವಿತಾ, ನೀವು ಸ್ಟ್ರಾಂಗ್ ಆಗಿ ಇರಿ ಎಂದ ಫ್ಯಾನ್ಸ್!


ಶ್ವೇತಾ ಪ್ಲ್ಯಾನ್ ಮತ್ತೆ ವರ್ಕ್ ಆಗುತ್ತಾ? ಶಕುಂತಲಾ ದೇವಿಗೆ ಶ್ವೇತಾ ಮೋಸ ತಿಳಿಯುತ್ತಾ? ನಕ್ಷತ್ರಾ ಎಲ್ಲಾ ಸತ್ಯವನ್ನು ಬಯಲು ಮಾಡ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.

top videos
  First published: