ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ರಾತ್ರಿ 10.30ಕ್ಕೆ ಲಕ್ಷಣ (Lakshana) ಧಾರಾವಾಹಿ (Serial) ಪ್ರಸಾರವಾಗುತ್ತಿದೆ. ಈ ಧಾರಾವಾಹಿ ಮೊದಲು ರಾತ್ರಿ 8.30ಕ್ಕೆ ಪ್ರಸಾರವಾಗಲು ಶುರುವಾಯ್ತು. ಲಕ್ಷಣ ಧಾರಾವಾಹಿ ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರಿಗೆ ಇಷ್ಟ ಆಗಿದೆ. ನಕ್ಷತ್ರಾ-ಭೂಪತಿ ಪ್ರೀತಿ (Love). ಶ್ವೇತಾ ಕುತಂತ್ರ, ಡೆವಿಲ್ ಭಾರ್ಗವಿ ಆಟ ಎಲ್ಲವೂ ಅಭಿಮಾನಿಗಳನ್ನು ಹಿಡಿದಿಟ್ಟಿದೆ. ಈಗ ಲಕ್ಷಣ ಧಾರಾವಾಹಿ ರಾತ್ರಿ 10.30ಕ್ಕೆ ಪ್ರಸಾರವಾಗುತ್ತಿದೆ. ಹೊಸ ಧಾರಾವಾಹಿ ಅಂತರಪಟಗಾಗಿ ಲಕ್ಷಣ ಸೀರಿಯಲ್ ಎತ್ತಂಗಡಿ ಮಾಡಿದ್ದಾರೆ. ಸೀರಿಯಲ್‍ನಲ್ಲಿ ಮೌರ್ಯನೇ ಶ್ವೇತಾಗೆ ತಾಳಿ ಕಟ್ಟಿದ್ದಾನೆ. ಈಗ ಶ್ವೇತಾ ಮನೆ ಒಡೆಯಲು ಮುಂದಾಗಿದ್ದಾಳೆ
ಶಕುಂತಲಾಳೇ ಶ್ವೇತಾ ದಾಳ
ಶ್ವೇತಾ ಏನೇ ಮಾಡಿದ್ರೂ ಶಕುಂತಲಾ ದೇವಿಗೆ ಇಷ್ಟ. ಯಾವಾಗಲು ಡಿಯರ್, ಡಿಯರ್ ಎಂದು ಕರೆಯುತ್ತಿರುತ್ತಾಳೆ. ಮೌರ್ಯ ಈಗ ಶ್ವೇತಾಗೆ ಹೇಳದೇ, ಕೇಳದೇ ತಾಳಿ ಕಟ್ಟಿದ್ದರಿಂದ, ಶಕುಂತಲಾ ದೇವಿಗೆ ಇನ್ನೂ ಶ್ವೇತಾ ಮೇಲೆ ಪ್ರೀತಿ ಜಾಸ್ತಿಯಾಗಿದೆ. ನಮ್ಮ ಮನೆಯಿಂದ ನಿನಗೆ ಅನ್ಯಾಯ ಆಗಿದೆ ಎಂದು ಹೇಳ್ತಾ ಇರ್ತಾಳೆ. ಅದಕ್ಕೆ ಶಕುಂತಲಾ ದೇವಿಯೇ ನನ್ನ ದಾಳ ಎಂದು ಶ್ವೇತಾ ಹೇಳ್ತಾ ಇದ್ದಾಳೆ.
ನಿನ್ನಿಂದ ನನ್ನ ಜೀವ ಹಾಳಾಯ್ತು
ಶ್ವೇತಾ, ನಕ್ಷತ್ರಾ ಬಳಿ ಬಂದು ಜಗಳವಾಡ್ತಾ ಇದ್ದಾಳೆ. ನಿನ್ನಿಂದ ನನ್ನ ಜೀವನ ಹಾಳಾಯ್ತು. ನಿನ್ನ ಲೈಫ್ ಕಾಪಾಡಲು ಹೋಗಿ ನನ್ನ ಜೀವನ ಹಾಲಾಯ್ತು. ಆ ಮೌರ್ಯ ನನಗೆ ತಾಳಿ ಕಟ್ಟಿದ ಎಂದು ಶ್ವೇತ ಹೇಳ್ತಾ ಇದ್ದಾಳೆ. ನೀನು ಬೇರೆಯವರಿಗೆ ಕೆಟ್ಟದ್ದು ಮಾಡಲು ಹೊರಟೇ, ನಿನಗೆ ಅದು ಬಂದು ತಾಕೀದೆ ಎಂದು ನಕ್ಷತ್ರಾ ಹೇಳಿದ್ದಾಳೆ.
ಮನೆ ಒಡೆಯಲು ಶ್ವೇತಾ ಸಿದ್ಧ
ನಕ್ಷತ್ರಾ ಬಳಿ ಶ್ವೇತಾ, ನೋಡ್ತಾ ಇರು ಈ ಮನೆಯವರ ನೆಮ್ಮದಿಯನ್ನು ಹೇಗೆ ಹಾಳು ಮಾಡ್ತೇನೆ ಎಂದು ಹೇಳಿದ್ದಾಳೆ. ಅದಕ್ಕೆ ನಕ್ಷತ್ರಾ, ಅದು ನಾನು ಇರೋವರೆಗೂ ಆಗಲಲ್ ಶ್ವೇತಾ. ನೀನು ಏನೇ ಮಾಡಬೇಕು ಅಂದ್ರೂ ನನ್ನ ದಾಟಿಕೊಂಡು ಹೋಗಬೇಕು. ಈ ಮನೆಗೆ ನಾನು ಕಾವಲು ರೀತಿ ಇರ್ತೇನೆ. ನಿನ್ನ ಕೈನಲ್ಲಿ ಏನೂ ಮಾಡೋಕೆ ಆಗಲ್ಲ ಎಂದು ಹೇಳಿದ್ದಾಳೆ.
ಯಾವಾಗಲೂ ಸತ್ಯ ಗೆದ್ದಿದೆ
ನೀನು ಈ ಮನೆಗೆ ತುಂಬಾ ಸಲ ಕೆಟ್ಟದ್ದನ್ನು ಮಾಡಲು ಬಂದಿದ್ದೀಯಾ, ಆಗ ನಾನು ತಡೆದಿದ್ದೇನೆ. ಅದು ನಿನಗೆ ಗೊತ್ತು. ನೀನು ಸೋತಿದ್ದೀಯಾ. ನಾನು ಗೆದ್ದಿದ್ದೇನೆ. ಅಂದ್ರೆ ಸತ್ಯ ಗೆದ್ದಿದೆ. ನಾನು ಯಾವಾಗಲೂ ಸತ್ಯದ ಪರ. ನಾನು ಇರೋ ತನಕ ಈ ಮನೆ ನೆಮ್ಮದಿ ಹಾಳು ಮಾಡೋದು ಅಷ್ಟು ಸುಲಭ ಅಲ್ಲ ಎಂದು ವಾರ್ನ್ ಮಾಡಿದ್ದಾಳೆ. ಶ್ವೇತಾ ಶಾಕ್ ಆಗಿದ್ದಾಳೆ.
ಶ್ವೇತಾ ಸಹ ಎಚ್ಚರಿಕೆ
ನೋಡು ನಕ್ಷತ್ರಾ ನಾನು ಇಷ್ಟು ದಿನ ಸೋತಿರಬಹುದು. ಆಗ ಹೊರಗಿನವಳು ಆಗಿದ್ದೆ. ಆದ್ರೆ ಈಗ ನಾನು ಈ ಮನೆ ಸೊಸೆ. ನಾನು ಒಂದು ಸಲ ಗೆದ್ರೆ ಮುಗೀತು, ಈ ಸಂಸಾರ ಛಿದ್ರ ಛಿದ್ರ ಆಗುತ್ತೆ ಎಂದು ಎಚ್ಚರಿಕೆ ನೀಡಿದ್ದಾಳೆ. ಅದನ್ನು ಕೇಳಿ ನಕ್ಷತ್ರಾ ಆತಂಕಗೊಂಡಿದ್ದಾಳೆ. ಇನ್ನು ಮನೆಯನ್ನು ಕಾಪಾಡುವ ಜವಾಬ್ದಾರಿ ನಕ್ಷತ್ರಾ ಮೇಲಿದೆ.
ಇದನ್ನೂ ಓದಿ: Lakshana: ಡೆವಿಲ್ ಬಳಿ ಬಂಧಿಯಾದ ಶ್ವೇತಾ, ತುಕಾರಾಂಗೆ ಕ್ಲಾಸ್ ತೆಗೆದುಕೊಂಡ ಭೂಪತಿ!
ಶ್ವೇತಾಳಿಂದ ಮನೆಯನ್ನು ರಕ್ಷಣೆ ಮಾಡ್ತಾಳಾ ನಕ್ಷತ್ರಾ? ಡೆವಿಲ್ ಮತ್ತೆ ಕುತಂತ್ರ ಬುದ್ಧಿ ತೋರ್ತಾಳಾ? ಮಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ