ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಾಯಕಿ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ (Marriage) ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಈಗ ಎಲ್ಲಾ ಸಮಸ್ಯೆ ಬಗೆಹರಿದಿದೆ. ಭೂಪತಿಗೆ ನಕ್ಷತ್ರಾ ಮೇಲೆ ಪ್ರೀತಿ ಆಗುತ್ತಿದೆ. ಅದಕ್ಕೆ ಡೆವಿಲ್ (Devil) ಇಬ್ಬರನ್ನು ದೂರ ಮಾಡಲು ಆಟವಾಡ್ತಿದ್ದಾಳೆ
ಭೂಪತಿ ಜೊತೆ ಮದುವೆ ಮಾಡಿಸು
ಶ್ವೇತಾಗೆ ಭಾರ್ಗವಿಯೇ ಡೆವಿಲ್ ಎಂದು ಗೊತ್ತಾಗಿದೆ. ಅದಕ್ಕೆ ನೀನು ನನಗೆ ಭೂಪತಿ ಜೊತೆ ಮದುವೆ ಮಾಡಿಸು. ಇಲ್ಲ ಅಂದ್ರೆ ನೀನೇ ಡೆವಿಲ್ ಎಂದು ಎಲ್ಲರ ಮುಂದೇ ಹೇಳ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡ್ತಾ ಇದ್ದಾಳೆ. ಅದಕ್ಕೆ ಭಾರ್ಗವಿ ಸಹ ಸರಿ ಎಂದಿದ್ದಾಳೆ. ಆದ್ರೆ ಈಗ ತಾನೇ ನಕ್ಷತ್ರಾ-ಭೂಪತಿ ಹತ್ತಿರವಾಗ್ತಿದ್ದಾರೆ. ಅವರನ್ನು ಮೊದಲು ದೂರ ಮಾಡಬೇಕಿದೆ. ಅದಕ್ಕೆ ಡೆವಿಲ್ ತನ್ನ ಆಟ ಶುರು ಮಾಡಿದ್ದಾಳೆ.
ನಕ್ಷತ್ರಾಗೆ ಭಯ
ಡೆವಿಲ್ ಭಾರ್ಗವಿ ನಕ್ಷತ್ರಾಳನ್ನು ಹೇಗಾದ್ರೂ ಭೂಪತಿಯಿಂದ ದೂರ ಮಾಡಬೇಕಿದೆ. ಅದಕ್ಕೆ ತನ್ನ ಕುತಂತ್ರ ಬುದ್ಧಿ ತೋರುತ್ತಿದ್ದಾಳೆ. ಮನೆಯಲ್ಲಿರುವ ಮಗುವಿಗೆ ತೊಂದ್ರೆ. ಭೂಪತಿ ಅಣ್ಣನ ಮಗಳ ಗೊಂಬೆ ಕಿತ್ತಾಕಿ, ನೀನು ಆ ಮಗುವನ್ನು ಮಾತನಾಡಿಸಿದ್ರೆ ಆ ಮಗುಗೆ ತೊಂದ್ರೆ ಕೊಡ್ತಿನಿ ಎಂದು ಹೇಳ್ತಾಳೆ. ಅಲ್ಲದೇ ಮಯೂರಿ ಕಾಫಿಯಲ್ಲಿ ಏನೋ ಬೆರೆಸಿ, ಫುಡ್ ಪಾಯಿಸನ್ ಆಗೋ ರೀತಿ ಮಾಡ್ತಾಳೆ. ಆಕೆಯ ಜೊತೆಯೂ ಮಾತನಾಡದಂತೆ ನಕ್ಷತ್ರಾಗೆ ಹೇಳಿದ್ದಾಳೆ.
ಭೂಪತಿಗೆ ಅಪಘಾತ
ಅಲ್ಲದೇ ಭೂಪತಿ ಆಫೀಸ್ ನಿಂದ ಮನೆಗೆ ಬರುವಾಗ ಚಿಕ್ಕದಾಗಿ ಅಪಘಾತ ಮಾಡಿಸಿದ್ದಾಳೆ. ಹಣೆ ಮೇಲೆ ಸಣ್ಣ ಗಾಯವಾಗಿದೆ. ಅದು ನಾನೇ ಮಾಡಿಸಿದ್ದು, ಮುಂದಿನ ಬಾರಿ ಲಾರಿಯಿಂದ ನಿನ್ನ ಗಂಡಿನಿಗೆ ಗುದ್ದಿಸುತ್ತೇನೆ ಎಂದು ಡೆವಿಲ್ ಹೇಳಿದ್ದಾಳೆ. ಅದನ್ನು ನೋಡಿ ನಕ್ಷತ್ರಾ ಗಾಬರಿಯಾಗಿದ್ದಾಳೆ. ಡೆವಿಲ್ ಇನನೇನು ತೊಂದ್ರೆ ಮಾಡ್ತಾಳೋ ಅಂತ ಗಾಬರಿಯಾಗಿದ್ದಾಳೆ.
ಮನೆಯಲ್ಲೇ ಭೂಪತಿ
ಭೂಪತಿ ರೆಡಿಯಾಗಿ ಆಫೀಸ್‍ಗೆ ಹೊರಟಿರುತ್ತಾನೆ. ಅದನ್ನು ನಕ್ಷತ್ರಾ ತಡೆದಿದ್ದಾಳೆ. ನೀನು ಇವತ್ತು ವರ್ಕ್ ಫ್ರಮ್ ಹೋಮ್ ಮಾಡು. ಇಲ್ಲಿಂದಲೇ ಎಲ್ಲಾ ಮೀಟಿಂಗ್ ಅಟೆಂಡ್ ಮಾಡು ಎನ್ನುತ್ತಿದ್ದಾಳೆ. ಯಾಕೆ ಎಂದು ಕೇಳಿದ್ರೆ ನಕ್ಷತ್ರಾ ಹೇಳ್ತಾ ಇಲ್ಲ. ಭೂಪತಿ ನಕ್ಷತ್ರಾ ಯಾಕೆ ಈ ರೀತಿ ಮಾಡ್ತಾ ಇದ್ದಾಳೆ ಎಂದು ಆತಂಕವಾಗ್ತಿದೆ.
ಇದನ್ನು ಸರಿ ಮಾಡುವವರು ಯಾರು?
ನಕ್ಷತ್ರಾ, ಡೆವಿಲ್ ಈ ರೀತಿ ಮಾಡ್ತಾ ಇದ್ದಾಳೆ ಎಂದು ಹೇಳೋಕೆ ಆಗದೇ ಕಷ್ಟ ಪಡ್ತಾ ಇದ್ದಾಳೆ. ಹೇಳಿದ್ರೆ ಎಲ್ಲಿ ಮತ್ತೆ ಭೂಪತಿಗೆ ತೊಂದ್ರೆ ಮಾಡ್ತಾಳೋ ಅನ್ನೋ ಚಿಂತೆ. ಹಾಗಾದ್ರೆ ಇದನ್ನು ಮೌರ್ಯನೇ ಸರಿ ಮಾಡಬೇಕಾಗುತ್ತೆ. ಇಲ್ಲ ನಕ್ಷತ್ರ ತನ್ನ ಕಷ್ಟವನ್ನು ಅಪ್ಪ ಸಿಎಸ್ ಬಳಿ ಹೇಳಿಕೊಳ್ತಾಳಾ ನೋಡಬೇಕು. ಇಲ್ಲ ಎಲ್ಲವನ್ನೂ ತಾನೇ ನಿಭಾಯಿಸಿಕೊಂಡು ತನ್ನ ಮನೆ ಉಳಿಸಿಕೊಳ್ತಾಳಾ ನೋಡಬೇಕು.
ಇದನ್ನೂ ಓದಿ: Shrirasthu Shubhamasthu: ಶೀರಸ್ತು ಶುಭಮಸ್ತು ಧಾರಾವಾಹಿಗೆ 100 ದಿನಗಳ ಸಂಭ್ರಮ! ಖುಷಿಯಲ್ಲಿ ಸೀರಿಯಲ್ ಟೀಂ
ನಕ್ಷತ್ರಾಗೆ ಬಂದ ಕಷ್ಟ ದೂರವಾಗುತ್ತಾ? ಡೆವಿಲ್ ಇನ್ನಷ್ಟು ಕಾಟ ಕೊಡ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ