ಹಿಟ್ ಸೀರಿಯಲ್‍ಗಳನ್ನು ನೀಡುತ್ತಿರುವ ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ರಾತ್ರಿ 10.30ಕ್ಕೆ ಲಕ್ಷಣ (Lakshana) ಧಾರಾವಾಹಿ (Serial) ಪ್ರಸಾರವಾಗುತ್ತಿದೆ. ಈ ಧಾರಾವಾಹಿ ಮೊದಲು ರಾತ್ರಿ 9.30ಕ್ಕೆ ಪ್ರಸಾರವಾಗ್ತಿತ್ತು. ಬಿಗ್ ಬಾಸ್ ಸೀಸನ್ 09 ಶುರುವಾದಾಗ, ರಾತ್ರಿ 8.30ಕ್ಕೆ ಪ್ರಸಾರವಾಗಲು ಶುರುವಾಯ್ತು. ಲಕ್ಷಣ ಧಾರಾವಾಹಿ ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರಿಗೆ ಇಷ್ಟ ಆಗಿದೆ. ನಕ್ಷತ್ರಾ-ಭೂಪತಿ ಪ್ರೀತಿ. ಶ್ವೇತಾ ಕುತಂತ್ರ, ಡೆವಿಲ್ ಭಾರ್ಗವಿ ಆಟ ಎಲ್ಲವೂ ಅಭಿಮಾನಿಗಳನ್ನು ಹಿಡಿದಿಟ್ಟಿದೆ. ಈಗ ಲಕ್ಷಣ ಧಾರಾವಾಹಿ ರಾತ್ರಿ 10.30ಕ್ಕೆ ಪ್ರಸಾರವಾಗುತ್ತಿದೆ. ಹೊಸ ಧಾರಾವಾಹಿ (New Serial) ಅಂತರಪಟಗಾಗಿ ಲಕ್ಷಣ ಸೀರಿಯಲ್ ಎತ್ತಂಗಡಿ ಮಾಡಿದ್ದಾರೆ. ಸೀರಿಯಲ್‍ನಲ್ಲಿ ಮೌರ್ಯನೇ ಶ್ವೇತಾಗೆ ತಾಳಿ ಕಟ್ಟಿದ್ದಾನೆ.
ಮೊದಲ ದಿನವೇ ಮೌರ್ಯ-ಶ್ವೇತಾ ಕಿತ್ತಾಟ
ನನಗೆ ನಿನ್ನ ರೂಮ್ ಬೇಡ. ನಿನ್ನ ಜೊತೆ ಬದುಕೂ ಬೇಡ. ಹೇಳ್ದೆ, ಕೇಳ್ದೆ ನನಗೆ ತಾಳಿ ಕಟ್ಟಿದೆ ತಾನೇ. ಆಗ ಬುದ್ದಿ ಎಲ್ಲಿ ಹೋಗಿತ್ತು ನಿನಗೆ. ಏನಕ್ಕೆ ನನಗೆ ತಾಳಿ ಕಟ್ಟಿದೆ? ಏನಕ್ಕೆ ನನ್ನ ಜೀವನ ಹಾಳು ಮಾಡಿದೆ? ಎಂದು ಶ್ವೇತಾ ಮೌರ್ಯಳನ್ನು ಪ್ರಶ್ನೆ ಮಾಡ್ತಾ ಇದ್ದಾಳೆ. ಅದಕ್ಕೆ ಮೌರ್ಯ, ನಕ್ಷತ್ರಾ ಅತ್ತಿಗೆ ಜೀವನ ಹಾಳು ಮಾಡುವಾಗ ಎಲ್ಲಿ ಹೋಗಿತ್ತು ನಿನ್ನ ಬುದ್ಧಿ? ಅತ್ತಿಗೆ ಜೀವನ ಹಾಳು ಮಾಡೋಕೆ ಬಯಸಲಿಲ್ಲ ಅಂದ್ರೆ, ನಿನ್ನ ಜೀವನವೂ ಹಾಳಾಗುತ್ತಿರಲಿಲ್ಲ ನೀನು ಮಾಡಿದ ಕರ್ಮ, ನಿನ್ನನ್ನು ಕಾಡುತ್ತಿದೆ ಎಂದು ಹೇಳಿದ್ದಾನೆ.
ನಿನ್ನ ಕರ್ಮದ ಫಲ ಇದು
ನಾವು ಯಾರಿಗೆ ಏನು ಬಯಸುತ್ತೇವೆಯೋ, ನಮಗೆ ಅದು ಆಗುತ್ತೆ. ಈ ಮನೆಯಲ್ಲಿ ಏನೇ ಕೆಟ್ಟದುದ್ದ ಆದ್ರೂ ಅದು ನಿನ್ನಿಂದ ಅಂತ ನನಗೆ ಚೆನ್ನಾಗಿ ಗೊತ್ತು. ನೀನು ಸೇಫ್ ಆಗಿ ಇರಬೇಕು ಅಂದ್ರೆ ಯಾರಿಗೂ ಕೆಟ್ಟದ್ದು ಆಗದಂತೆ ಬದುಕು ಎಂದು ಮೌರ್ಯ ಹೇಳಿದ್ದಾನೆ. ಅದಕ್ಕೆ ಶ್ವೇತಾ ಕೋಪ ಮಾಡಿಕೊಂಡು, ನಾನೇ ಇದನ್ನು ಮಾಡಿದ್ದು ಅನ್ನುವುದಕ್ಕೆ ನಿನ್ನ ಬಳಿ ಸಾಕ್ಷಿ ಇದ್ಯಾ? ಏನ್ ಹೆದರಿಸುತ್ತಿದೀಯಾ?
ನಕ್ಷತ್ರಾ ಅತ್ತಿಗೆ ಒಳ್ಳೆಯವರು
ಅಣ್ಣ-ಅತ್ತಿಗೆ ಮುಂದೆ ಹೀರೋ ಆಗೋಕೆ ನನಗೆ ತಾಳಿ ಕಟ್ಟಿದ್ಯಾ? ನನಗೆ ತಾಳಿ ಕಟ್ಟಿದ ತಕ್ಷಣ ನಕ್ಷತ್ರಾ ಜೀವನ ಸರಿ ಹೋಗುತ್ತೆ ಅಂತ ಹೇಗೆ ಅಂದುಕೊಂಡೆ? ಭ್ರಮೆಯಲ್ಲಿದ್ದೀಯಾ? ಮುಂದೇನಾಗುತ್ತೆ ಅನ್ನೋದು ಯಾರಿಗೂ ಗೊತ್ತಿಲ್ಲ. ನಾನು ಸುಮ್ಮನೇ ಇರಲ್ಲ ಎಂದು ಶ್ವೇತಾ ಹೇಳಿದ್ದಾಳೆ. ಅದಕ್ಕೆ ಮೌರ್ಯ, ಮುಂದೇ ನೀನು ಏನಾದ್ರೂ ಮಾಡೋಕೆ ಹೊರಟ್ರೆ, ಅದನ್ನು ತಡೆಯುತ್ತೇನೆ. ನಕ್ಷತ್ರಾ ಅತ್ತಿಗೆ ನಿನ್ನ ಲೆವೆಲ್‍ಗೆ ಇಳಿಯಲ್ಲ. ತುಂಬಾ ಒಳ್ಳೆಯವರು ಅವರು.
ನಿನ್ನ, ಅತ್ತಿಗೆ ಮಧ್ಯೆ ಗೋಡೆ
ನಿನ್ನ ಅತ್ತಿಗೆ ಮಧ್ಯೆ ಗೋಡೆ ತರ ನಾನು ನಿಂತಿದ್ದೇನೆ. ನಕ್ಷತ್ರಾ ಅತ್ತಿಗೆ ಟಚ್ ಮಾಡಬೇಕು ಅಂದ್ರೆ, ನನ್ನ ದಾಟಿಕೊಂಡು ಹೋಗಬೇಕು. ನೀನು ಆಟವಾಡಿದ್ರೆ, ನಿನ್ನ ಬಾಲ ಕಟ್ ಮಾಡೋದು ನನಗೆ ಗೊತ್ತು. ಅತ್ತಿ-ಅಣ್ಣನ ತರ ಒಳ್ಳೆಯವನಲ್ಲ ನಾನು. ನಾನು ಬ್ಯಾಡ್. ವೆರಿ ಬ್ಯಾಡ್. ನನಗೆ ಒಳ್ಳೆಯದು, ಕೆಟ್ಟದ್ದು ಏನೂ ಗೊತ್ತಿಲ್ಲ. ತಲೆ ಕೆಟ್ರೆ ಯಾವ ಲೆವೆಲ್‍ಗೆ ಹೋಗ್ತೀನಿ ಅಂತ ಗೊತ್ತು ತಾನೇ? ಎಂದು ಶ್ವೇತಾಗೆ ಮೌರ್ಯ ವಾರ್ನ್ ಮಾಡಿದ್ದಾನೆ.
ಇದನ್ನೂ ಓದಿ: Puneeth Rajkumar: ಎಲೆಕ್ಷನ್ ಇದ್ರೂ ಎಲ್ಲೆಡೆ ಅಪ್ಪು ಪೋಸ್ಟರ್, ಒಂದೂವರೆ ವರ್ಷವಾದ್ರೂ ಮುಗಿದಿಲ್ಲ 'ರಾಜಕುಮಾರ'ನ ಜಾತ್ರೆ!
ಶ್ವೇತಾ ಈಗ ಏನ್ ಮಾಡ್ತಾಳೆ. ಡೆವಿಲ್ ಜೊತೆ ಸೇರಿ ನಕ್ಷತ್ರಾ ಜೀವನ ಹಾಳು ಮಾಡ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ