ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿಯೂ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಈ ಧಾರಾವಾಹಿಯನಾಯಕಿ ನಕ್ಷತ್ರಾ. ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ (Marriage) ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಆದ್ರೆ ಈಗ ಭೂಪತಿ ತಮ್ಮ ಮೌರ್ಯನಿಗೆ ನಕ್ಷತ್ರಾ ಒಳ್ಳೆಯವಳು ಎಂದು ಗೊತ್ತಾಗಿದೆ. ಅದನ್ನು ಭೂಪತಿ ಬಳಿ ಕಥೆ (Story) ಮೂಲಕ ಹೇಳ್ತಾನೆ.
ನಕ್ಷತ್ರಾ ತಪ್ಪಿಲ್ಲ
ನಕ್ಷತ್ರಾಳನ್ನು ಭೂಪತಿಗೆ ಬಲವಂತವಾಗಿ ಚಂದ್ರಶೇಖರ್ ಮದುವೆ ಮಾಡಿಸಿರುತ್ತಾನೆ. ಅದರಲ್ಲಿ ನಕ್ಷತ್ರಾ ಪಾತ್ರ ಏನು ಇರುವುದಿಲ್ಲ. ಮೊದಲು ಮೌರ್ಯನು ತಪ್ಪು ತಿಳಿದುಕೊಂಡಿರುತ್ತಾನೆ. ಅದಕ್ಕೆ ನಕ್ಷತ್ರಾಳನ್ನು ಕೊಲ್ಲಲು ಓಡಾಡುತ್ತಿರುತ್ತಾನೆ. ನಂತರ ನಕ್ಷತ್ರಾ ಒಳ್ಳೆಯವರು ಎಂದು ಗೊತ್ತಾಗಿ. ಬದಲಾಗಿದ್ದಾನೆ. ತನ್ನ ತಪ್ಪು ತಿದ್ದಿಕೊಂಡು ಒಳ್ಳೆಯವನಾಗಿದ್ದಾನೆ.
ಸತ್ಯ ಹೇಳಲು ಸಿಕ್ಕಿಲ್ಲ ಅವಕಾಶ
ಮೌರ್ಯ, ಒಮ್ಮೆ ಮನೆಗೆ ಬಂದು ನಕ್ಷತ್ರಾ ತಪ್ಪಿಲ್ಲ ಎಂದು ಹೇಳೋಕೆ ಬಂದಿದ್ದ. ಆದ್ರೆ ಶಕುಂತಲಾ ದೇವಿ, ಭೂಪತಿ ಅವನ ಮಾತು ಕೇಳಿಸಿಕೊಳ್ಳದೇ ಆಚೆ ದಬ್ಬಿದ್ದರು. ಅವತ್ತು ಮೌರ್ಯ ನಾನು ಸತ್ಯ ಹೇಳೋವರೆಗೂ ಸುಮ್ಮನಿರಲ್ಲ ಎಂದು ಹೇಳಿದ್ದ. ಅದಕ್ಕೆ ಭೂಪತಿ ಜೊತೆ ಮಾತನಾಡಬೇಕು ಎಂದು ಕಾಯುತ್ತಿದ್ದ.
ಭೂಪತಿ ಬಳಿ ಕಥೆ ಹೇಳಿದ ಮೌರ್ಯ
'ಒಬ್ಳು ಹುಡುಗಿ ಇರ್ತಾಳೆ. ರಾಜಕುಮಾರನನ್ನು ಲವ್ ಮಾಡ್ತಾಳೆ. ರಾಜಕುಮಾರ ಯಾರು, ಎಷ್ಟು ದುಡ್ಡಿದೆ ಯಾವುದು ಆಕೆಗೆ ಗೊತ್ತಿರಲ್ಲ. ಆದ್ರೂ ಲವ್ ಮಾಡ್ತಾ ಇರ್ತಾಳೆ. ಒಂದು ದಿನ ರಾಜಕುಮಾರನ ಬಗ್ಗೆ ಎಲ್ಲಾ ಗೊತ್ತಾಗುತ್ತೆ. ಅವಳ ಬಾಯಿ ಕಟ್ಟಿ ಹಾಕಿದ ಹಾಗೆ ಆಗುತ್ತೆ. ತನ್ನ ಪ್ರೀತಿ ಹೇಳಿಕೊಳ್ಳಲು ಹಿಂಜರಿಯುತ್ತಾಳೆ. ಅಲ್ಲದೇ ರಾಜಕುಮಾರ ಬೇರೆ ಯಾರನ್ನೂ ಪ್ರೀತಿ ಮಾಡ್ತಾನೆ ಎಂದು ಅರ್ಥ ಆಗುತ್ತೆ. ಅವಳ ಮನಸ್ಸೇ ಒಡೆದು ಹೋಗುತ್ತೆ.
ತನ್ನ ಹುಡುಗ ಖುಷಿ ಆಗಿರಲಿ ಎಂದು ತನ್ನ ಪ್ರೀತಿಯನ್ನೇ ತ್ಯಾಗ ಮಾಡ್ತಾಳೆ. ಹುಡುಗನಿಗೆ ಮದುವೆ ಸೆಟ್ ಆಗುತ್ತೆ. ಮದುವೆ ದಿನ ಹುಡಗನಿಗೆ ಆಕೆ ತನ್ನನ್ನು ಲವ್ ಮಾಡ್ತೀರೋ ವಿಚಾರ ಗೊತ್ತಾಗುತ್ತೆ. ಅವನಿಗೆ ಬೇಜಾರು ಸಹ ಆಗುತ್ತೆ. ಆದ್ರೆ ಆಕೆ ನನಗೆ ಈಗ ಆ ರೀತಿ ಭಾವನೆ ಇಲ್ಲ. ಮದುವೆ ಆಗಿ ಎಂದು ಹೇಳ್ತಾಳೆ. ಹುಡುಗನಿಗೂ ಸಮಾಧಾನ ಆಗಿ ಓಕೆ ಎನ್ನುತ್ತಾನೆ.
ಆ ಹುಡುಗಿಯ ಅಪ್ಪ ಅವನಿಗೆಲ್ಲಾ ಗೊತ್ತಿರುತ್ತೆ. ಮಗಳಿಗೆ ಏನೂ ಬೇಕಾದ್ರೂ ಮಾಡ್ತಾನೆ. ಯಾಕಂದ್ರೆ ಹುಡುಗಿ ಚಿಕ್ಕ ವಯಸ್ಸಿಂದ ತುಂಬಾ ಕಷ್ಟಪಟ್ಟಿರುತ್ತಾಳೆ. ಏನು ಆಸೆ ಇದೆಯೋ, ಯಾವುದೂ ಸಿಕ್ಕಿರಲ್ಲ. ತಾನು ಇಷ್ಟ ಪಟ್ಟು ಹುಡುಗ ಬೇರೆಯವರನ್ನು ಮದುವೆ ಆಗ್ತಾ ಇರ್ತಾನೆ. ಮಗಳ ಸಂಕಟ ನೋಡಲಾಗದೇ ಅಪ್ಪನಿಗೆ ಹೊಟ್ಟೆ ಉರಿಯುತ್ತೆ. ಮಗಳು ಇಷ್ಟ ಪಟ್ಟ ಹುಡುಗನ ಜೊತೆ ಮದುವೆ ಮಾಡಿಸುತ್ತೇನೆ ಎಂದು ಮುಂದೆ ಹೋಗ್ತಾನೆ.
ಆ ಹುಡುಗಿ ಬಳಿ ಆಣೆ, ಪ್ರಮಾಣ ಮಾಡಿಸಿಕೊಂಡು ರಾಜಕುಮಾರನನ್ನು ಮದುವೆ ಆಗುವಂತೆ ಹೇಳ್ತಾನೆ. ಅದಕ್ಕೆ ಆಕೆಯೂ ಒಪ್ತಾಳೆ. ಅಲ್ಲಿ ಆಕೆ ತಪ್ಪಿರಲ್ಲ. ಆದ್ರೆ ಹುಡುಗ ಮತ್ತು ಹುಡುಗನ ಯಾತಿ ಆ ಹುಡುಗಿ ಮೇಲೆ ಕೋಪ ಮಾಡಿಕೊಂಡಿದ್ದಾರೆ. ಮಾಡದ ತಪ್ಪಿಗೆ ಹುಡುಗಿ ಶಿಕ್ಷೆ ಅನುಭವಿಸುತ್ತಿದ್ದಾಳೆ.' ಎಂದು ಮೌರ್ಯ ಕಥೆ ಮುಗಿಸುತ್ತಾನೆ.
ಇದನ್ನೂ ಓದಿ: Olavina Nildana: ತಾರಿಣಿಗೆ ಒಲವಿನ ಪತ್ರ, ಸಿದ್ದು ಲವ್ ಲೆಟರ್ ಕೊಟ್ಟಿದ್ದು ನಿಜನಾ?
ನಕ್ಷತ್ರಾ ತಪ್ಪಿಲ್ಲ ಎಂದು ಭೂಪತಿ ಗೊತ್ತಾಗುತ್ತಾ?, ಮೌರ್ಯನ ಕಥೆಯ ಸತ್ಯ ಗೊತ್ತಾಯ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ