ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿ ಮದುವೆ (Marriage) ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗುತ್ತಿರಲಿಲ್ಲ. ಆದ್ರೆ ಈಗ ನಕ್ಷತ್ರಾಳನ್ನು ಸೊಸೆ ಎಂದು ಶಕುಂತಲಾ ದೇವಿ ಒಪ್ಪಿಕೊಂಡಿದ್ದಾರೆ. ಮೌರ್ಯ ಸಹ ಕೆಟ್ಟವನಿಂದ ಒಳ್ಳೆಯವನಾಗಿದ್ದಾನೆ. ನಕ್ಷತ್ರಾ ಬಗ್ಗೆ ಸತ್ಯ (Truth) ಹೇಳೋಕೆ ಮೌರ್ಯನಿಗೆ ಅವಕಾಶ ಸಿಗ್ತಿಲ್ಲ.
ಮೊದಲು ರೌಡಿಯಾಗಿದ್ದ ಮೌರ್ಯ
ಮೌರ್ಯ ಈ ಮೊದಲು ಕೆಟ್ಟವನಾಗಿರುತ್ತಾನೆ. ಚಂದ್ರಶೇಖರ್ ಬಲವಂತವಾಗಿ ಭೂಪತಿ ಮತ್ತು ನಕ್ಷತ್ರಾ ಮದುವೆ ಮಾಡಿಸಿದ್ದಕ್ಕೆ, ಸೇಡು ತೀರಿಸಿಕೊಳ್ಳಬೇಕು ಎಂದು ಕಾಯುತ್ತಿದ್ದ. ಹಲವು ಬಾರಿ ಸಿಎಸ್ ಮತ್ತು ನಕ್ಷತ್ರಾಳನ್ನು ಕಿಡ್ನ್ಯಾಪ್ ಮಾಡಿ, ಕೊಲ್ಲಲ್ಲು ಪ್ರಯತ್ನ ಪಟ್ಟಿದ್ದ. ಆದ್ರೆ ನಕ್ಷತ್ರಾ ಯಾವುದೇ ಕೇಸ್ ಮಾಡದೇ ಅವನ್ನು ಬಚಾವ್ ಮಾಡಿದ್ದಳು.
ಅತ್ತಿಗೆ ಒಳ್ಳೆಯವರು
ಭೂಪತಿಯನ್ನು ಬಲವಂತವಾಗಿ ಮದುವೆ ಮಾಡಿದ್ದರಲ್ಲಿ ನಕ್ಷತ್ರಾ ತಪ್ಪು ಏನಿಲ್ಲ. ಸಿಎಸ್ ಈ ಮದುವೆ ಮಾಡಿಸಿದ್ದು ಎಂದು ಮೌರ್ಯನಿಗೆ ಗೊತ್ತಾಗಿದೆ. ಅಂದಿನಿಂದ ಅವನು ಬದಲಾಗಿದ್ದಾನೆ. ಕೊಲ್ಲುವ ನಿರ್ಧಾರದಿಂದ ಹಿಂದೆ ಸರಿದಿದ್ದಾನೆ. ತನ್ನ ಅತ್ತಿಗೆ ಒಳ್ಳೆಯವರು. ಅವರನ್ನು ಸುಮ್ಮನೇ ಕೊಂದು ಬಿಡುತ್ತಿದ್ದೆ ಎಂದು ಬೇಸರ ಮಾಡಿಕೊಂಡಿದ್ದ.
ಮನೆಗ ಬಂದ ಮೌರ್ಯ
ಮೌರ್ಯ ಕಿಡ್ನ್ಯಾಪ್, ಕೊಲೆ ಯತ್ನ ಮಾಡಿದ್ದ ಎಂದು ಶಕುಂತಲಾ ದೇವಿಗೆ ಕೋಪ. ಅದಕ್ಕೆ ಅವನನ್ನು ಮನೆಯಿಂದ ಆಚೆ ಇಟ್ಟಿದ್ದಾಳೆ. ನೀನು ಯಾವತ್ತೂ ಮುಖ ತೋರಿಸಬೇಡ ಎಂದಿದ್ದಾಳೆ. ಆದ್ರೆ ಈಗ ಮೌರ್ಯ ಅಮ್ಮನ ಮಾತು ಮೀರಿ ಕಾಪೌಂಡ್ ಹಾರಿ ಮನೆಗೆ ನುಗ್ಗಿದ್ದಾನೆ. ನಾನು ನಕ್ಷತ್ರಾ ಬಗ್ಗೆ ಸತ್ಯ ಹೇಳಬೇಕು ಎನ್ನುತ್ತಿದ್ದಾನೆ.
ಶ್ವೇತಾ ಕೊಲೆ ಯತ್ನ
ನಾನು ಸಿಎಸ್ ಮತ್ತು ಅವರ ಮಗಳ ಬಗ್ಗೆ ಯಾವುದನ್ನೂ ಕೇಳಲು ರೆಡಿ ಇಲ್ಲ ಎಂದು ಶಕುಂತಲಾ ದೇವಿ ಹೇಳಿದ್ದಾಳೆ. ಅದಕ್ಕೆ ಶ್ವೇತಾ ಅತ್ತಿಗೆ ಮತ್ತೆ ಯಾಕೆ ತೊಂದ್ರೆ ಕೊಡ್ತೀಯಾ ಅಂತಾಳೆ. ಅದಕ್ಕೆ ಮೌರ್ಯ ಆಕೆಯನ್ನು ಮತ್ತೆ ಕೊಲ್ಲುವ ಪ್ರಯತ್ನ ಮಾಡ್ತಾನೆ. ನಾನು ಹೇಳುವುದನ್ನು ಕೇಳಿಸಿಕೊಳ್ಳಿ. ಇಲ್ಲ ಅಂದ್ರೆ ಇವಳನ್ನು ಸುಮ್ಮನೇ ಬಿಡಲ್ಲ ಎನ್ನುತ್ತಾನೆ. ಆಗ ಭೂಪತಿ ಬಂದು ಆತನನ್ನು ತಡೆದು ಹೊರಗೆ ತಳ್ಳಿದ್ದಾನೆ.
ಅತ್ತಿಗೆಯನ್ನು ಕಾಪಾಡುತ್ತೇನೆ
ನಕ್ಷತ್ರಾ ಈ ಮನೆಯನ್ನು ಬೆಳಗುವ ದೀಪ. ಆಕೆಗೆ ತೊಂದರೆ ಆಗಲು ನಾನು ಬಿಡಲ್ಲ. ಸತ್ಯ ಹೇಳೋಕೆ ಯಾರೂ ಅವಕಾಶ ಕೊಡ್ತಾ ಇಲ್ಲ. ಆದ್ರೂ ನಾನು ಸುಮ್ಮನಿರಲ್ಲ. ಯಾರು ಏನೇ ಹೇಳಿ, ಯಾರಾದ್ರೂ ತಡೆಯಿರಿ, ಅತ್ತಿಗೆಯನ್ನು ಕಾಪಾಡುತ್ತೇನೆ ಎಂದು ಹೇಳಿ ಬೇಸರ ಮಾಡಿಕೊಂಡು ಹೋಗಿದ್ದಾನೆ. ಭೂಪತಿ ಇವನು ಏನು ನಕ್ಷತ್ರಾ ಬಗ್ಗೆ ಸತ್ಯ ಹೇಳಬೇಕು ಎಂದುಕೊಂಡಿದ್ದಾನೆ ಎಂದು ಚಿಂತೆ ಮಾಡ್ತಾ ಇದ್ದಾನೆ.
ಇದನ್ನೂ ಓದಿ: Roopesh Shetty: ದುಬೈಗೆ ಹಾರಿದ ಬಿಗ್ಬಾಸ್ ವಿನ್ನರ್ ರೂಪೇಶ್ ಶೆಟ್ಟಿ, ಯಾಕೆ ಗೊತ್ತಾ?
ಮೌರ್ಯ ಮತ್ತೆ ಕೆಟ್ಟವನಾಗ್ತಾನಾ? ಮೌರ್ಯನ ಮಾತು ಕೇಳಿ ಭೂಪತಿಗೆ ಶಾಕ್ ಆಗಿದೆ. ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ