ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿಯೂ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಈ ಧಾರಾವಾಹಿಯ ನಾಯಕಿ ನಕ್ಷತ್ರಾ. ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಆದ್ರೆ ಈಗ ಭೂಪತಿ ತಮ್ಮ ಮೌರ್ಯನಿಗೆ ನಕ್ಷತ್ರಾ ಒಳ್ಳೆಯವಳು ಎಂದು ಗೊತ್ತಾಗಿದೆ. ಮೌರ್ಯ ನಕ್ಷತ್ರಾ ಬಗ್ಗೆ ಸತ್ಯ ಹೇಳಿದ್ದಾನೆ. ಅದನ್ನು ಕೇಳಿ ಭೂಪತಿ (Bhupathi) ಬದಲಾಗಿದ್ದಾನೆ. ನಕ್ಷತ್ರಾ ಬಳಿ ಕ್ಷಮೆ (Sorry) ಕೇಳಿದ್ದಾನೆ.
ನಕ್ಷತ್ರಾ ತಪ್ಪಿಲ್ಲ
ನಕ್ಷತ್ರಾಳನ್ನು ಭೂಪತಿ ಬಲವಂತವಾಗಿ ಚಂದ್ರಶೇಖರ್ ಮದುವೆ ಮಾಡಿಸಿರುತ್ತಾನೆ. ಅದರಲ್ಲಿ ನಕ್ಷತ್ರಾ ಪಾತ್ರ ಏನು ಇರುವುದಿಲ್ಲ. ಮೊದಲು ಮೌರ್ಯನು ತಪ್ಪು ತಿಳಿದುಕೊಂಡಿರುತ್ತಾನೆ. ಅದಕ್ಕೆ ನಕ್ಷತ್ರಾಳನ್ನು ಕೊಲ್ಲಲು ಓಡಾಡುತ್ತಿರುತ್ತಾನೆ. ನಂತರ ನಕ್ಷತ್ರಾ ಒಳ್ಳೆಯವರು ಎಂದು ಗೊತ್ತಾಗಿ. ಬದಲಾಗಿದ್ದಾನೆ. ತನ್ನ ತಪ್ಪು ತಿದ್ದಿಕೊಂಡು ಒಳ್ಳೆಯವನಾಗಿದ್ದಾನೆ. ನಕ್ಷತ್ರಾ ತಪ್ಪಿಲ್ಲ ಎಂದು ಮೌರ್ಯ ಭೂಪತಿ ಬಳಿ ಹೇಳಿದ್ದಾನೆ.
ನಕ್ಷತ್ರಾ ಬಳಿ ಕ್ಷಮೆ
ನಕ್ಷತ್ರಾ ದೇವಸ್ಥಾನಕ್ಕೆ ಹೋಗಿರುತ್ತಾಳೆ. ಅಲ್ಲಿಗೆ ಭೂಪತಿ ಬಂದಿದ್ದಾನೆ. ನಕ್ಷತ್ರಾ ನೀನು ಮಾಡದ ತಪ್ಪಿಗೆ ನಾನು ಇಷ್ಟು ದಿನ ಶಿಕ್ಷೆ ಕೊಟ್ಟೆ. ನನ್ನ ಮದುವೆಯಾಗುವುದರಲ್ಲಿ ನಿನ್ನ ಪಾತ್ರ ಇರಲಿಲ್ಲ ಎಂದು ಗೊತ್ತಾಯ್ತು. ಮದುವೆ ದಿನ ನಾನು ನಿನಗೆ ತುಂಬಾ ಬೈದೆ. ನೀನು ಮತ್ತು ನಿಮ್ಮ ತಂದೆ ಡ್ರಾಮಾ ಮಾಡ್ತೀರಿ ಎಂದುಕೊಂಡೆ. ಅವತ್ತಿನ ಪರಿಸ್ಥಿತಿಗೆ ನನಗೆ ಏನೂ ಗೊತ್ತಾಗಲಿಲ್ಲ.
ಮಂಡಿಯೂರಿ ಕ್ಷಮಿಸು ಎಂದ ಭೂಪತಿ
ಅದಕ್ಕೆ ಭೂಪತಿ ದೇವಸ್ಥಾನದಲ್ಲೇ ನಕ್ಷತ್ರಾ ಮುಂದೆ ಮಂಡಿಯೂರಿ ಕೂತು ಕ್ಷಮೆ ಕೇಳಿದ್ದಾನೆ. ನನ್ನನ್ನು ಕ್ಷಮಿಸು ನಕ್ಷತ್ರಾ. ನನ್ನಿಂದ ದೊಡ್ಡ ತಪ್ಪಾಯ್ತು ಎಂದು ಕೇಳಿಕೊಂಡಿದ್ದಾನೆ. ಅದಕ್ಕೆ ನಕ್ಷತ್ರಾ ಕೊನೆಗೆ ಸತ್ಯ ಗೊತ್ತಾಯ್ತು ಎಂದು ಖುಷಿ ಆಗಿದ್ದಾಳೆ. ನಕ್ಷತ್ರಾ ಮತ್ತು ಭೂಪತಿ ಆಗಿದ್ದನ್ನು ಮರೆತು, ಇನ್ಮುಂದೆ ಸಂತೋಷವಾಗಿ ಸಂಸಾರ ನಡೆಸುತ್ತಾರಾ ನೋಡಬೇಕು.
ಡೆವಿಲ್ ಮುಂದೆ ಶ್ವೇತಾ ಆಟ
ಶ್ವೇತಾಗೆ ಭಾರ್ಗವಿಯೇ ಡೆವಿಲ್ ಎಂದು ಗೊತ್ತಾಗಿ ಶಾಕ್ ಆಗಿದ್ದಾಳೆ. ಇಷ್ಟು ದಿನ ಈ ಡೆವಿಲ್ ಶ್ವೇತಾಳನ್ನು ಮುಂದಿಟ್ಟುಕೊಂಡು ತನ್ನ ಅಣ್ಣ-ಅತ್ತಿಗೆಗೆ ತೊಂದ್ರೆ ಕೊಟ್ಟಿದ್ದಾಳೆ. ಅದು ಶ್ವೇತಾಗೆ ಗೊತ್ತಾಗಿದೆ. ಅದಕ್ಕೆ ಇಷ್ಟು ದಿನ ನನ್ನ ದಾಳವಾಗಿ ಮಾಡಿಕೊಂಡಿದ್ದೆ. ಇನ್ಮುಂದೆ ನಾನು ನಿನ್ನನ್ನು ಆಟವಾಡಿಸುತ್ತೇನೆ ಎಂದಿದ್ದಾಳೆ. ಅದಕ್ಕೆ ಭಾರ್ಗವಿ ಮಾತನಾಡುವಾಗ ಅದನ್ನು ವಿಡಿಯೋ ಮಾಡಿಕೊಂಡಿದ್ದಾಳೆ.
ಎಲ್ಲಾ ಕಡೆ ಡೆವಿಲ್ ಸುತ್ತಾಟ
ಶ್ವೇತಾ ವಿಡಿಯೋ ಇಟ್ಟುಕೊಂಡು ಡೆವಿಲ್‍ಗೆ ಆಟವಾಡಿಸುತ್ತಿದ್ದಾಳೆ. ಬೇರೆ ಬೇರೆ ಲೋಕೇಶನ್ ಕಳಿಸಿ ಬಾ, ಬಾ ಎನ್ನುತ್ತಿದ್ದಾಳೆ. ಆಕೆ ಒಂದು ಸ್ಥಳಕ್ಕೆ ಹೋದ್ರೆ, ಅಲ್ಲಿಗೆ ಬೇಡ. ಬೇರೆ ಕಡೆ ಬಾ ಎನ್ನುತ್ತಿದ್ದಾಳೆ. ಇದರಿಂದ ಡೆವಿಲ್ ಭಾರ್ಗವಿಗೆ ಕೋಪ ಬಂದಿದೆ. ಇದೇ ರೀತಿ ಮಾಡಿದ್ರೆ ನಿನ್ನ ಸುಮ್ನೆ ಬಿಡಲ್ಲ. ನಿನ್ನ ಕಥೆ ಮುಗಿಸುತ್ತೇನೆ ಎನ್ನುತ್ತಿದ್ದಾಳೆ. ಆದ್ರೆ ಶ್ವೇತಾ ಯಾವುದಕ್ಕೂ ಭಯ ಪಡ್ತಾ ಇಲ್ಲ.
ಇದನ್ನೂ ಓದಿ: Meera Jasmine Birthday: 'ಮೌರ್ಯ' ಬೆಡಗಿ ಮೀರಾ ಜಾಸ್ಮಿನ್ ಬರ್ತ್ಡೇ
ನಕ್ಷತ್ರ-ಭೂಪತಿ ಸಂಸಾರ ಸರಿ ಹೋಗುತ್ತಾ? ಶ್ವೇತಾ ಆಟಕ್ಕೆ ಡೆವಿಲ್ ತತ್ತರಿಸಿ ಹೋಗ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ